ಈಶಾನ್ಯ ರಾಜ್ಯಗಳ ಟೈಂ ಬದಲು?
Team Udayavani, Jun 23, 2017, 3:45 AM IST
ನವದೆಹಲಿ: ಭಾರತದಲ್ಲಿರುವ ಟೈಮ್ಝೋನ್ಗೆ ಒಗ್ಗಿಕೊಳ್ಳಲು ಕೆಲವು ರಾಜ್ಯಗಳು ಇನ್ನೂ ಕಷ್ಟಪಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತದಲ್ಲಿ ಬೇರೆ ಬೇರೆ ಟೈಮ್ಝೋನ್ ಮಾಡಲು ಚಿಂತನೆ ನಡೆಸಿದ್ದು, ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದೆ.
ಈಗಾಗಲೇ ಅಧ್ಯಯನ ನಡೆಸುತ್ತಿದ್ದು, ವೈಜ್ಞಾನಿಕ ಸಲಹೆಗಳನ್ನು ಸ್ವೀಕರಿಸಲು ನೋಡುತ್ತಿದ್ದೇವೆ ಎಂದು ಇಲಾಖೆಯ ಕಾರ್ಯದರ್ಶಿ ಅಶುತೋಶ್ ಶರ್ಮಾ ಹೇಳಿ ದ್ದಾರೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು, ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಟೈಮ್ಝೋನ್ ನೀಡು ವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವಂತೆ ಸೂಚಿಸಲಾಗಿದ್ದು, ಈ ವರದಿ ಬಂದ ಮೇಲೆ 2 ಟೈಮ್ಝೋನ್ ಮಾಡುವ ಬಗ್ಗೆ ನಿರ್ಧ ರಿಸಲಾಗುವುದು ಎಂದಿದ್ದಾರೆ ಶರ್ಮಾ.
ಈಶಾನ್ಯ ರಾಜ್ಯಗಳಿಗೂ, ಉಳಿದ ರಾಜ್ಯಗಳಿಗೂ ಭಾರಿ ವ್ಯತ್ಯಾಸವಿದೆ. ಈ ಭಾಗದಲ್ಲಿ ಸೂರ್ಯ ಬೇಗ ಮೂಡುತ್ತಾನೆ, ಹಾಗೆಯೇ ಬೇಗನೆ ಮುಳುಗುತ್ತಾನೆ. ಆದರೆ, ಭಾರತದ ಉಳಿದ ಸಮಯದಂತೆಯೇ ಇಲ್ಲೂ ಕಚೇರಿ, ಶಾಲೆ ಎಲ್ಲವೂ ಆರಂಭವಾ ಗುತ್ತವೆ. ಹೀಗಾಗಿ ಅವರು ಮಧ್ಯಾಹ್ನ ಶಾಲೆ ಅಥವಾ ಕಚೇರಿಗೆ ಬಂದು, ತಡರಾತ್ರಿ ಮನೆಗೆ ಹೋದಂತೆ ಆಗುತ್ತದೆ. ಸೂರ್ಯ ಮುಳು ಗಿದ ಮೇಲೂ ಕಚೇರಿ, ಶಾಲಾ ಕಾಲೇಜುಗಳು ಸೇರಿ ಇನ್ನಿತರೆ ಚಟುವಟಿಕೆಗಳು ಇರುವುದ ರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಶಾನ್ಯ ರಾಜ್ಯಗಳಿಗೇ ಬೇರೊಂದು ಟೈಮ್ಝೋನ್ ಕೊಟ್ಟರೆ ಸಮಯ, ವಿದ್ಯುತ್ ಉಳಿತಾಯವಾಗುತ್ತದೆ ಎಂದು ಈ ರಾಜ್ಯಗಳ ನಾಯಕರು ಹೇಳಿದ್ದಾರೆ. ಇದಷ್ಟೇ ಅಲ್ಲ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲೂ ಸೂರ್ಯ ಹುಟ್ಟುವ ಮತ್ತು ಮುಳುಗುವ ಸಮಯ ಬೇರೆ ಬೇರೆಯಾಗಿಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.