ಕಾರವಾರ: ಸೀಬರ್ಡ್ ನೌಕಾನೆಲೆಗೆ ನುಸುಳಿದ ಶಂಕಿತರು?
Team Udayavani, Jun 23, 2017, 9:46 AM IST
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆ ಪ್ರದೇಶಕ್ಕೆ ಶಂಕಿತರು ನುಸುಳಿದ್ದಾರೆಂಬ ಸುದ್ದಿ ಗುರುವಾರ ಬೆಳಗ್ಗಿನಿಂದ ಹಬ್ಬಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ನೌಕಾನೆಲೆಯ ಮುಖ್ಯದ್ವಾರ ಸಮೀಪದ ಬಿಣಗಾ ಮತ್ತು ಅರಗಾ ಗ್ರಾಮಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ನೌಕಾನೆಲೆಯ ಆವರಣ ಗೋಡೆ ಹೆದ್ದಾರಿಗೆ ಹೊಂದಿಕೊಂಡಿದೆ. ಆವರಣದ ಗೋಡೆಯನ್ನು ಕೆಲವು ಕಡೆ ಕಲ್ಲಿನಿಂದ ನಿರ್ಮಿಸಲಾಗಿದೆ. ಆಳ ಮತ್ತು ತಗ್ಗು ಪ್ರದೇಶ ಇರುವಲ್ಲಿ, ಸಮುದ್ರಕ್ಕೆ ಹೊಂದಿಕೊಂಡ ಪ್ರದೇಶಕ್ಕೆ ತಗಡಿನ ಆವರಣ ಹಾಕಲಾಗಿದೆ. ಮಳೆ ನೀರು ಹರಿಯಲು ಕಲ್ಲಿನ ಗೋಡೆಗೆ ಅಲ್ಲಲ್ಲಿ ರಂಧ್ರ ಬಿಟ್ಟಿದ್ದು, ಇದೇ ರಂಧ್ರವೊಂದರ ಮೂಲಕ ಶಂಕಿತರು ನೌಕಾನೆಲೆ ಒಳಗೆ ನುಸುಳಿದ್ದಾರೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.
ಗುರುವಾರ ಮುಂಜಾನೆ ಕದಂಬ ನೌಕಾನೆಲೆಯೊಳಗೆ ಮೂವರು ಶಂಕಿತರು ಕಾಣಿಸಿ ಕೊಂಡಿರುವುದನ್ನು ನೌಕಾನೆಲೆಯ ಭದ್ರತಾ ಸಿಬಂದಿ ಖಚಿತಪಡಿಸಿದ್ದಾರೆ. ಕೂಡಲೆ, ಕಾರವಾರ ನಗರ ಪೊಲೀಸರಿಗೆ ತಿಳಿಸಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ನಾಕಾಬಂದಿ ಮಾಡಿ ಗಸ್ತು ತಿರುಗುತ್ತಿದ್ದಾರೆ. ಇನ್ನೊಂದೆಡೆ ನೌಕಾನೆಲೆಯ ಆವರಣ ಗೋಡೆ ಕೊರೆದಿರುವುದು ಕಂಡು ಬಂದಿದ್ದು, ಈ ಕಿಂಡಿಯನ್ನು ತತ್‌ಕ್ಷಣ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ. ನುಸುಳುಕೋರರು ಇದೇ ಕಿಂಡಿ ಮೂಲಕ ನೌಕಾನೆಲೆ ಪ್ರವೇಶಿಸಿರುವುದು ನೌಕಾನೆಲೆ ಸಿಬಂದಿಗೆ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನೌಕಾನೆಲೆಯ ಸಿಬಂದಿ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ನೌಕಾನೆಲೆ ಸಿಬಂದಿಯನ್ನು ಹೆಚ್ಚು ಜಾಗೃತ ಸ್ಥಿತಿಯಲ್ಲಿ ಇಡಲಾಗಿದ್ದು, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆಗಳು ಗಸ್ತು ಹೆಚ್ಚಿಸಿವೆ. ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಹೆಚ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.