ಹಂಸ ಲೋಕದಿಂದ ಬಂದ… ಪ್ರೇಮದ ಸಂಗೀತ
Team Udayavani, Jun 23, 2017, 12:55 PM IST
“ಇನ್ನು ನಮ್ಮ ಅಜಯ್ ಸಾರ್ ಬಗ್ಗೆ ಹೇಳ್ಳೋದು ಮರೆತ್ತಿದೆ. ಯಾಕೋ ಫುಲ್ ಟೆನ್ಶನ್ ಆಗ್ತಿದೆ …’ ಹಾಗಂತ ಗೌರಿಶಿಖರ್ ಹೇಳುತ್ತಿದ್ದಂತೆ, ಹೇಳ್ಳೋದನ್ನ ಮರೆತಿಲ್ಲ ಎಂದು ಅಜೇಯ್ ರಾವ್ ನೆನಪಿಸಿದರು. ಒಂದಂತೂ ಸತ್ಯ. ಗೌರಿಶಿಖರ್ ಟೆನ್ಶನ್‌ನಲ್ಲಿದ್ದಿದ್ದಂತೂ ಹೌದು. ಪಂಚೆ ಉಟ್ಟು, “ರಾಜ-ಹಂಸ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬರಮಾಡಿಕೊಳ್ಳುವುದರಿಂದ, ಬಂದವರು ವೆಲ್‌ಕಮ್ ಡ್ರಿಂಕ್ ಕುಡಿದರಾ? ಅವರಿಗೆ ಸೀಟ್ ಸಿಕ್ಕಿದೆಯಾ? ಹಾಡುಗಳ ಪ್ರದರ್ಶನ ಸುಗಮವಾಗಿ ಸಾಗಿದೆಯಾ? ಎಂದೆಲ್ಲಾ ನೋಡಿಕೊಳ್ಳುವ ಮೂಲಕ ಇಡೀ ಸಮಾರಂಭದ ಉಸ್ತುವಾರಿಯನ್ನು ವಹಿಸಿದ್ದರು ಗೌರಿಶಿಖರ್. ಅದರಿಂದಲೇ ಟೆನ್ಶನ್ ಮತ್ತು ಆ ಟೆನ್ಶನ್‌ನಲ್ಲಿ ಹೆಸರು ಹೇಳಿದ್ದರೂ, ಅದನ್ನು ಮರೆತು ಕ್ಷಮೆ ಕೇಳಿದರು.
“ರಾಜ-ಹಂಸ’ ಚಿತ್ರದ ಒಂದು ಹಾಡನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಎರಡನೆಯ ಹಾಡನ್ನು ಸಂತೋಷ್ ಆನಂದ್‌ರಾಮ್ ಬಿಡುಗಡೆ ಮಾಡಿದ್ದರು. ಈಗ ಎಲ್ಲಾ ಹಾಡುಗಳನ್ನು ಅಜೇಯ್ ರಾವ್ ಅವರಿಂದ ಇತ್ತೀಚೆಗೆ ಬಿಡುಗಡೆ ಮಾಡಿಸಲಾಯಿತು. ಅಂದು ಗೌರಿಶಿಖರ್ ಜೊತೆಗೆ, ನಿರ್ದೇಶಕ ಜಡೇಶ್, ನಾಯಕಿ ರಂಜನಿ ರಾಘವನ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬಿ.ಸಿ. ಪಾಟೀಲ್, ಯಮುನಾ ಮುಂತಾದ ಹಲವರು ಇದ್ದರು. ಸರಳವಾಗಿ ಹೇಳಬೇಕೆಂದರೆ, ಚಿತ್ರದ ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರನ್ನು ಹೊರತುಪಡಿಸಿ, ಮಿಕ್ಕಂತೆ
ಎಲ್ಲರೂ ಇದ್ದರು. ದೇಶದಲ್ಲಿಲ್ಲದ ಕಾರಣ ಜೋಶ್ವಾ ಬಂದಿರಲಿಲ್ಲ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಯೇ ಚಿತ್ರದ ಬಗ್ಗೆ ಮಾತಾಡಬೇಕು ಎಂದು ಗೌರಿಶಿಖರ್
ತೀರ್ಮಾನಿಸಿದ್ದರಂತೆ. ಅದರಂತೆ ಚಿತ್ರದ ಕೆಲಸಗಳನ್ನೆಲ್ಲಾ ಮುಗಿಸಿ, ಈಗ ಮಾತಾಡುವುದಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಹಾಡುಗಳ ಬಿಡುಗಡೆ ಮುಗಿದಿದ್ದು, ಆಗಸ್ಟ್ ಎರಡನೆಯ ಅಥವಾ ಮೂರನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. “ಚಿತ್ರಕ್ಕೆ ಹಣ ಹಾಕಿದವರು ಒಬ್ಬಿಬ್ಬರಲ್ಲ. ಹತ್ತಾರು ಸ್ನೇಹಿತರು.
ಜನರು ಮನಸ್ಫೂರ್ವಕವಾಗಿ ಚಿತ್ರ ಮಾಡುವುದಕ್ಕೆ ಮುಂದಾಗಿರುವುದರಿಂದ ಜನಮನ ಸಿನಿಮಾಸ್ ಎಂಬ ಬ್ಯಾನರ್ ಹುಟ್ಟುಹಾಕಿ, ಈ ಚಿತ್ರ ಮಾಡಿದ್ದೇವೆ’ ಎಂದರು ಗೌರಿಶಿಖರ್. ನಂತರ ಬಿ.ಸಿ. ಪಾಟೀಲ್, ಯಮುನಾ, ಅಜೇಯ್ ರಾವ್ ಮುಂತಾದವರೆಲ್ಲಾ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಚಿತ್ರ ಗೆಲ್ಲಲಿ ಎಂದು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.