ತನಿಷ್ಕ್ 214ನೇ ಹೊಸ ಮಳಿಗೆ ಪ್ರಾರಂಭ
Team Udayavani, Jun 24, 2017, 3:03 PM IST
ಕಲಬುರಗಿ: ಟಾಟಾ ಉತ್ಪನ್ನಗಳಾದ ಹಿಂದಿನ ಗೋಲ್ಡ್ಪ್ಲಸ್ ಈದೀಗ ಬದಲಾಗಿ ತನಿಷ್ಕ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಕಾಲಿಟ್ಟಿದೆ. ಇಲ್ಲಿ ಭಾರತದ ಅತ್ಯದ್ಭುತವಾದ ವಿನ್ಯಾಸದ ಆಭರಣಗಳು ಸಿಗುತ್ತವೆ ಎಂದು ಹೆಡ್ ಕಸ್ಟಮರ್ ಸರ್ವಿಸ್ ಮತ್ತು ಲೀನ್ ಮಳಿಗೆ ಗ್ರೂಪ್ ಮ್ಯಾನೇಜರ್ ಅಲಗಪ್ಪನ್ ಹೇಳಿದರು.
ಶುಕ್ರವಾರ ನಗರದ ಏಷಿಯನ್ ಟವರ್ ಮಳಿಗೆಯಲ್ಲಿ ನೂತನವಾಗಿ ಸ್ಥಾಪಿಸಿರುವ ತನಿಷ್ಕ್ ಹೊಸ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ತನಿಷ್ಕ್ ದೇಶದ ಏಕೈಕ ರಾಷ್ಟ್ರಮಟ್ಟದ ಆಭರಣ ಮಳಿಗೆ, ಉತ್ಕೃಷ್ಟ ಕಸೂತಿ, ವಿಭಿನ್ನ ವಿನ್ಯಾಸ ಮತ್ತು ಗುಣಮಟ್ಟದ ಖಚತತೆ ಹೊಂದಿರುವ ಉತ್ಪನ್ನಗಳೊಂದಿಗೆ ಗುರುತಿಸಿಕೊಂಡಿದೆ.
ದೇಶದ ಗ್ರಾಹಕರ ಆದ್ಯತೆಗಳನ್ನು ಮನಗಂಡಿರುವ ಏಕೈಕ ಆಭರಣ ಬ್ರಾಂಡ್ ಆಗಿದೆ ಎಂದರು. ತನಿಷ್ಕ್ 18 ಕ್ಯಾರೆಟ್ ಚಿನ್ನಾಭರಣ ಸೇವೆ ನೀಡುತ್ತಿದೆ. 5000ಕ್ಕೂ ಹೆಚ್ಚು ಸಾಂಪ್ರದಾಯಿಕ, ಪಾಶ್ಚಾತ್ಯ ಆಧುನಿಕ ಸಂಗ್ರಹಗಳನ್ನು ಹೊಂದಿದೆ. ನಾವು ಈಗಾಗಲೇ ಗೋಲ್ಡ್ ಪ್ಲಸ್ ಮಾರುಕಟ್ಟೆಯಲ್ಲಿನ ಗ್ರಾಹಕರ ಆದ್ಯತೆಯನ್ನು ಗಮನಿಸಿದಾಗ ಗಣನೀಯ ಬದಲಾವಣೆಯೂ ಗಮನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿಯಲ್ಲಿನ ಬದಲಾವಣೆ ತಕ್ಕಂತೆ ಆಭರಣಗಳನ್ನು ತನಿಷ್ಕ್ನಲ್ಲಿ ಒದಗಿಸಲು ಇರುವುದಾಗಿ ಘೋಷಿಸಿದರು. ಗೋಲ್ಡ್ ಪ್ಲಸ್ ಗ್ರಾಹಕರನ್ನು ತನಿಷ್ಕ್ ಮಳಿಗೆಯತ್ತ ಕೊಂಡೊಯ್ಯಲು ಮತ್ತು ಅವರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಶ್ರೇಷ್ಠ ಮಟ್ಟದ ವಿನ್ಯಾಸ ಮತ್ತು ಶುದ್ಧ ಚಿನ್ನದ ಆಭರಣಗಳೊಂದಿಗೆ ಅತ್ಯುತ್ಕೃಷ್ಟ ರಿಟೇಲ್ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು.
ಮಳಿಗೆಯು ಇತ್ತೀಚಿನ ಆಕರ್ಷಕವಾದ ಆಭರಣಗಳ ಸಂಗ್ರಹಗಳನ್ನು ಒಳಗೊಂಡಿದೆ. ಅದರಲ್ಲಿ ಭಾರತೀಯ ದೇವಾಲಯಗಳನ್ನು ಪ್ರತಿಬಿಂಬಿಸುವ ಶುಭಂ ಪ್ರಮುಖವಾಗಿದೆ. ಮಳಿಗೆಯಲ್ಲಿ ಜೂನ್ 25ರವರೆಗೆ ಖರೀದಿಸುವ ಪ್ರತಿಯೊಂದು ಆಭರಣದ ಜೊತೆಗೆ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ಮೆಚ್ಚಿಗೆಯಾಗುವ ವಿಶೇಷವಾದ ಆಭರಣಗಳ ಖನಿಜ ಮಳಿಗೆಯಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ನಾಲ್ವರು ರೂಪದರ್ಶಿಯರು ಚಿನ್ನಾಭರಣಗಳ ಮೂಲಕ ಕ್ಯಾಟ್ವಾಕ್ ನಡೆಸುವ ಮೂಲಕ ಗಮನಸೆಳೆದರು. ಕಾರ್ಯಕ್ರಮದಲ್ಲಿ ಪ್ರಾಂಚೈಸ್ ಪಾರ್ಟನರ್ಗಳಾದ ಆನಂದ ಶಹಾ, ವಿನೋದ ಕುಲಕರ್ಣಿ, ಸಚಿನ್ ಮೆಹತಾ, ಓಮಿನಿ ಚಾನೆಲ್ ರಿಟೇಲ್ನ ಮ್ಯಾನೇಜರ ಉದಯಕುಮಾರ, ಪೂಜಾ, ಕೇತಕಿ ಸಚಿನ್ ಮೆಹತಾ, ಉದಯಾ, ಸಂಪದಾ ಆನಂದ ಶಹಾ, ವೈಶಾಲಿ ವಿನೋದ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.