ಪಾಕ್‌ ಗೆಲುವಿಗಿಂತ ಭಾರತದ ಸೋಲು ಸ್ವೀಕಾರಾರ್ಹವಲ್ಲ!


Team Udayavani, Jun 24, 2017, 4:59 PM IST

20.jpg

ಪಾಕಿಸ್ತಾನದ ಬೌಲಿಂಗ್‌ ಕೋಚ್‌ ಅಜರ್‌ ಮಹಮೂದ್‌ ಒಂದು ಮಾತನ್ನು ಹಲವು ಬಾರಿ ಹೇಳಿದ್ದಾರೆ, ಬ್ಯಾಟ್ಸ್‌ಮನ್‌ಗಳು ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ. ಆದರೆ ಬೌಲರ್‌ಗಳು ಟ್ರೋಫಿಗಳ ಜಯಭೇರಿಗೆ ಕಾರಣರಾಗುತ್ತಾರೆ. ಭಾರತದ ಮಟ್ಟಿಗೆ ಇಂಗ್ಲೆಂಡ್‌ನ‌ಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಇವೆರಡೂ ಸುಳ್ಳೇ ಆಗಿ ಹೊರಹೊಮ್ಮಲು ಕಾರಣಗಳೇನು?

 321 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಿಗಿಟ್ಟುಕೊಂಡಿದ್ದರೂ, ಭಾರತ ತಂಡ ಶ್ರೀಲಂಕಾ ಎದುರು ನಿರಾಯಾಸವಾಗಿ ಸೋತು ಬೌಲರ್‌ಗಳ ಮೇಲೆ ಆರೋಪ ಹಾಕುತ್ತದೆಂದಾದರೆ. ಫೈನಲ್‌ನಲ್ಲಿ ಪಾಕ್‌ ಎದುರು ಅಂತಹುದೇ ಮೊತ್ತವನ್ನು ದಾಟಲು ಏಕದಿನ ದ್ವಿಶತಕದ ದಾಖಲೆ, ವೇಗದ 8 ಸಾವಿರ ತರಹದ ವಿವಿಧ ದಾಖಲೆಗಳನ್ನೆಲ್ಲ ಹೊಂದಿರುವ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಏಕೆ ಸಾಧ್ಯವಾಗಲಿಲ್ಲ? 

ಪಿಚ್‌ ಎಂಬ ವಿಲನ್‌!
ಇತ್ತೀಚಿನ ದಿನಗಳಲ್ಲಿ ಬ್ಯಾಟ್ಸ್‌ಮನ್‌ ಪರವಾದ ಪಿಚ್‌ಗಳೇ ನಿರ್ಮಾಣವಾಗುತ್ತಿವೆ. ಹಾಗಂತ ಮೊದಲು ಭಾರತೀಯ ಪಿಚ್‌ಗಳ ಬಗ್ಗೆ ದೂರಲಾಗುತ್ತಿತ್ತು. ಇವತ್ತು ನ್ಯೂಜಿಲೆಂಡ್‌ ಹೊರತುಪಡಿಸಿದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಪಿಚ್‌ಗಳು ಕೂಡ ಬ್ಯಾಟ್ಸ್‌ಮನ್‌ಗಳ ಸ್ವರ್ಗವೆ ಆಗಿವೆ. ಇಂಗ್ಲೆಂಡ್‌ ಪಿಚ್‌ಗಳ ಹಣೆಬರಹವೂ ಇದೇ. ಅಜರ್‌ ಮಹಮೂದ್‌ರ ಮಾತನ್ನು ಇಲ್ಲಿ ಮತ್ತೂಮ್ಮೆ ನೆನಪಿಸಿಕೊಳ್ಳಬೇಕು. 50 ಓವರ್‌ಗಳ ಒಂದು ಕಂತಿನಲ್ಲಿ ಬ್ಯಾಟ್ಸ್‌ಮನ್‌ಗಳು ಒತ್ತಡವನ್ನು ಬಿಸಾಕಿ ಆಡಿಬಿಟ್ಟರೆ 300 ಪ್ಲಸ್‌ ಗುರಿಯನ್ನು ಕೂಡ ಸುಲಭವಾಗಿ ಹಿಂದೆ ಹಾಕಬಹುದು!

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈ ಮಾತು ಹಲವು ಬಾರಿ ಸತ್ಯವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ಗಳಿಸಿದ 305 ರನ್ನುಗಳನ್ನು ಇಂಗ್ಲೆಂಡ್‌ ದಾಟಿತ್ತು. ಭಾರತ ಪೇರಿಸಿದ 321 ರನ್‌ ಶ್ರೀಲಂಕಾಗೆ ಸವಾಲಾಗಿರಲಿಲ್ಲ. ಒಂದೆಡೆ ಬೌಂಡರಿ ಗೆರೆಗಳ ಗಿರಿಯನ್ನು ಹತ್ತಿರಗೊಳಿಸಿ ಬ್ಯಾಟ್ಸ್‌ಮನ್‌ಗಳ ಹಿತ ಕಾಯುವ ಕೆಲಸವನ್ನು ಐಸಿಸಿ ಮಾಡಿದ್ದು ಅಸಹನೀಯ. ಹಲವು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಮೂಟೆ ಕಟ್ಟಿದ್ದು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕಂಡರೂ ಅದು ಎದುರಾಳಿ ಬೌಲರ್‌ಗಳ ಸಾಧನೆಗಿಂತ ಬ್ಯಾಟ್ಸ್‌ಮನ್‌ಗಳು ತಾವೇ ತಲೆ ಮೇಲೆ ಹೊತ್ತುಕೊಂಡ ಒತ್ತಡ ಕಾರಣವಾಗಿತ್ತು. ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತೀರಾ ನಿಯಂತ್ರಿತ ಬೌಲಿಂಗ್‌ ಮಾಡಿದ್ದರಿಂದ ಆ ತಂಡ ರನ್‌ಔಟ್‌ ಬಲೆಗೆ ಸಿಕ್ಕಿ ಕಳಪೆ ಸ್ಕೋರ್‌ಗೆ ಔಟಾದುದನ್ನು ನೆನಪಿಸಿಕೊಳ್ಳಬಹುದು.
ಬೌಲರ್‌ಗೆ ಒಂದಿಷ್ಟೂ ನೆರವು ನೀಡದ ಪಿಚ್‌ ನಿರ್ಮಿಸಿದರೆ ಪಂದ್ಯಗಳ ರೋಚಕತೆಗೆ ತಡೆಯಾಗುತ್ತದೆ. ಕುತೂಹಲಕಾರಿ ಅಂತಿಮ ಘಟ್ಟ ಎಂಬ ಸೆಗೆ¾ಂಟ್‌ ಪಂದ್ಯಗಳಲ್ಲಿಯೇ ಇರುವುದಿಲ್ಲ. ಅಕ್ಷರಶಃ ಏಕಪಕ್ಷೀಯ, 8 ಚೆಂಡುಗಳಿರುವಾಗ ಭಾರತದ ವಿರುದ್ಧ ಜಯ ಪಡೆದ ಶ್ರೀಲಂಕಾ ಪಂದ್ಯ ಹೊರತುಪಡಿಸಿ ಉಳಿದದ್ದೆಲ್ಲ (ಭಾರತ-ದಕ್ಷಿಣ ಆಫ್ರಿಕಾ 72 ಚೆಂಡು, ಪಾಕ್‌ ಇಂಗ್ಲೆಂಡ್‌ 77 ಬಾಲ್‌, ಭಾರತ-ಬಾಂಗ್ಲಾ 59 ಎಸೆತ) 10ಕ್ಕಿಂತ ಹೆಚ್ಚು ಎಸೆತ ಬಾಕಿ ಇದ್ದಾಗಲೇ ಫ‌ಲಿತಾಂಶ ನಿರ್ಧಾರವಾಗಿತ್ತು. ಈ ಬಾರಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಒಂದು ಪಂದ್ಯವೂ ಕನಿಷ್ಠ ಕೊನೆಯ ಓವರ್‌ ಫಿನಿಷ್‌ ಕಾಣಲಿಲ್ಲ!

 ಮಳೆಯೇ ಸರಣಿ ಆಟಗಾರ!
ಫೈನಲ್‌ ಸೇರಿದಂತೆ ಒಂದೆರಡು ಪಂದ್ಯ ಬಿಟ್ಟರೆ ಉಳಿದೆಲ್ಲವೂ ಮಳೆಯ ಭಯದಲ್ಲಿಯೇ ನಡೆದಿವೆ. 5 ಪಂದ್ಯಗಳ ಫ‌ಲಿತಾಂಶದ ಮೇಲೆ ತನ್ನ ಪ್ರಭಾವ ಬೀರಿದೆ. “ಪರದೇಶಿ ಆಸ್ಟ್ರೇಲಿಯಾದ ಎರಡು ಲೀಗ್‌ ಪಂದ್ಯಗಳು ಮಳೆಗೆ ಆಹುತಿಯಾದುದರಿಂದ ಬಾಂಗ್ಲಾ ಸೆಮಿ ಫೈನಲ್‌ಗೆ ಬರುವಂತಾಯಿತು. ಫೇವರಿಟ್‌ಗಳಲ್ಲಿ ಇಂಗ್ಲೆಂಡ್‌ಗೆ ಸೆಮಿಫೈನಲ್‌ ದರ್ಶನವಾದರೆ, ದಕ್ಷಿಣ ಆಫ್ರಿಕಾ, ಡಾರ್ಕ್‌ ಹಾರ್ಸ್‌ ನ್ಯೂಜಿಲೆಂಡ್‌ ಮುಖಭಂಗ ಅನುಭವಿಸಿದವು. ಆ ಮಟ್ಟಿಗೆ ಹಾಲಿ ಚಾಂಪಿಯನ್‌ ಆಗಿ ಭಾರತ ಫೈನಲ್‌ವರೆಗೆ ಮುನ್ನಡೆಯಿತು.
ಈ ಮುನ್ನ ರನ್‌ ಸುರಿಮಳೆಯಾಗುವ ಪಿಚ್‌ನಲ್ಲಿ ಯಾರು ಬೇಕಾದರೂ ಬೌಲ್‌ ಮಾಡಬಹುದು, ಬ್ಯಾಟಿಂಗ್‌ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂಬ ತಂತ್ರವಿತ್ತು. ಚಾಂಪಿಯನ್ಸ್‌ ಟ್ರೋಫಿಯ ನಂತರ ಈ ಅಭಿಪ್ರಾಯ ಬದಲಾಗಬಹುದು. ತಂಡಗಳು ಬೃಹತ್‌ ಮೊತ್ತ ಪೇರಿಸಿದಾಗ ಅಥವಾ ಹಿಂಬಾಲಿಸಿದಾಗ ಟಾಪ್‌ 4 ರಿಂದ 5 ಆಟಗಾರರೇ ಆ ರನ್‌ ಸಂಗ್ರಹಿಸಿದ್ದಾರೆ. ಭಾರತದ ವಿಚಾರದಲ್ಲಿಯೇ ಮಾತನಾಡುವುದಾದರೆ, ಧೋನಿ, ಕೇದಾರ್‌ ಜಾಧವ್‌, ಪಾಂಡ್ಯ ತಂಡವನ್ನು ಆಧರಿಸಿದ್ದಿಲ್ಲ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕೆಲವು ಸಂದರ್ಭದಲ್ಲಿ ಸ್ಲಾಗ್‌ ಓವರ್‌ನಲ್ಲಿ ಕ್ಷಿಪ್ರ ರನ್‌ ಸಂಪಾದಿಸಿದ ಉದಾಹರಣೆಯಿದೆ. ಸೋತ ಪಂದ್ಯಗಳತ್ತ ನೋಡಿದಾಗ, ಬೌಲಿಂಗ್‌ ಶಕ್ತಿ ಇನ್ನಷ್ಟು ಕುದುರಿದ್ದರೆ ಪೈಪೋಟಿ ಸಾಧ್ಯ ಎನ್ನಬಹುದಿತ್ತೇನೋ.

ಕೊಹ್ಲಿ ನಾಯಕತ್ವದಲ್ಲಿ ಹಲವು ಬಿರುಕು!
ಸಾಂಪ್ರದಾಯಿಕ ನಾಯಕತ್ವ ಸುಲಭ. ಗೆಲುವಿನ ಪಥದಲ್ಲಿದ್ದಾಗ ದೋಷಗಳು ಕಾಣುವುದಿಲ್ಲ. ಅವತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕೇದಾರ್‌ ಜಾಧವ್‌ರ ಸ್ಪಿನ್‌ ಬೌಲಿಂಗ್‌ನ್ನು ಮಧ್ಯದ ಓವರ್‌ಗಳಲ್ಲಿ ಹಾಕಿ ಪಂದ್ಯದ ದಿಕ್ಕು ಬದಲಿಸಿದ ಯೋಚನೆ ಮಹೇಂದ್ರಸಿಂಗ್‌ ಧೋನಿಯವರದಾಗಿತ್ತೇ ವಿನಃ ಕೊಹ್ಲಿಯದಾಗಿರಲಿಲ್ಲ ಎಂಬ ಸುದ್ದಿ ಬಹಿರಂಗಗೊಂಡಿದೆ. ಫೈನಲ್‌ನಲ್ಲೂ ಎರಡು ಸಂದರ್ಭಗಳಲ್ಲಿ ಕೊಹ್ಲಿ ತಮ್ಮ “ಛಾಪು ತೋರಿಸಲಿಲ್ಲ. ಪಾಕ್‌ನ ಮೊದಲ ವಿಕೆಟ್‌ ಬಿದ್ದ ಸಂದರ್ಭದಲ್ಲಿ ಅವತ್ತಿನ ಪ್ರಭಾವಿ ಬೌಲರ್‌ ಭುವನೇಶ್ವರ್‌ ಕುಮಾರ್‌ರಿಂದ ಒಂದೆರಡು ಓವರ್‌ಗಳ ಪುಟ್ಟ ಸ್ಪೆಲ್‌ ಹಾಕಿಸಬೇಕಿತ್ತು. ಆತ್ಮವಿಶ್ವಾಸವೇ ಇರದಿದ್ದ ರವಿಚಂದ್ರನ್‌ ಅಶ್ವಿ‌ನ್‌ರ ಕೋಟಾ ಮುಗಿಸುವುದಷ್ಟೇ ಕೊಹ್ಲಿ ಇರಾದೆಯಾಗಿತ್ತು. ಅತ್ತ 30 ರಿಂದ 40 ಓವರ್‌ಗಳ ಮಧ್ಯೆ ಕೇದಾರ್‌ ಜಾಧವ್‌ ಬೌಲ್‌ ಮಾಡಿದ್ದರೆ ಮತ್ತು ಪರಿಣಾಮಕಾರಿಯಾಗಿದ್ದರೆ ದುಬಾರಿ ಬುಮ್ರಾ ಕೋಟಾದಲ್ಲಷ್ಟೇ ಕಡಿತವಾಗುತ್ತಿತ್ತು. ಪಾಕ್‌ ರನ್‌ ಕಡಿಮೆಯಾದಷ್ಟೂ ಭಾರತೀಯರ ಆತ್ಮವಿಶ್ವಾಸ ಹೆಚ್ಚುತ್ತಿತ್ತು.

ರೋಹಿತ್‌ ಶರ್ಮ ಹತ್ತು ಪಂದ್ಯಗಳಲ್ಲಿ ವಿಫ‌ಲರಾಗಬಹುದು, ಪಾಕ್‌ ವಿರುದ್ಧದ ಫೈನಲ್‌ನ ಶೂನ್ಯದಂತೆ! ಆದರೆ ಈ ಮನುಷ್ಯ 11ನೇ ಪಂದ್ಯವನ್ನು ತನ್ನ ಏಕೈಕ ದಾಡ್ಯತೆಯಿಂದ ಗೆಲ್ಲಿಸಿಬಿಡಬಲ್ಲ. ಈ ಹಿನ್ನೆಲೆಯಲ್ಲಿಯೇ ರವೀಂದ್ರ ಜಡೇಜಾ ಮಾದರಿಯ ಆಟಗಾರರ ಉಪಸ್ಥಿತಿ ಪ್ರಶ್ನಾರ್ಥಕವಾಗುತ್ತದೆ. ಜಡೇಜಾರ ಪಂದ್ಯ ಗೆಲ್ಲಿಸುವ ಒಂದು ಪ್ರದರ್ಶನ ಸಿಕ್ಕಿದ್ದು 4 ವರ್ಷಗಳಷ್ಟು ಹಿಂದೆ! ಈಗಲೂ ಅದ್ಭುತ ಫೀಲ್ಡಿಂಗ್‌ ಹೊಂದಿರುವ, ಸ್ಪಿನ್‌ ಬೌಲರ್‌ ಆಗಿಯೂ ಸ್ಪಿನ್‌ ಮಾಡದ, ಆಕಸ್ಮಿಕವಾಗಿಯಷ್ಟೇ ಕ್ಲಿಕ್‌ ಆಗುವ ಬ್ಯಾಟಿಂಗ್‌ ಹೊಂದಿರುವ ಜಡೇಜಾ ಹಾಗೂ ಅಶ್ವಿ‌ನ್‌ ಇತ್ತೀಚಿನ ದಿನಗಳಲ್ಲಿ ಏಕದಿನ ಮಾದರಿಯಲ್ಲಿ ಪ್ರಭಾವಿಗಳಾಗಿಲ್ಲ ಎಂದೇ ತಜ್ಞರು ವಿಶ್ಲೇಷಿಸುತ್ತಾರೆ. ಅಮಿತ್‌ ಮಿಶ್ರಾ, ಯಜ್ವೇಂದರ್‌ ಚಾಹಲ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಕೃಣಾಲ್‌ ಪಾಂಡ್ಯ…2019ರ ವಿಶ್ವಕಪ್‌ ಕೂಡ ಭಾರತದ ತಲೆಯಲ್ಲಿದ್ದರೆ ಪ್ರಯೋಗಗಳು ಅನಿವಾರ್ಯ.

ಫೈನಲ್‌ನ 21 ರನ್‌ ಹೊರತುಪಡಿಸಿದರೆ ಶಿಖರ್‌ ಧವನ್‌ ಸಫ‌ಲ, ರೋಹಿತ್‌ ಕೂಡ ಅಪರೂಪಕ್ಕೆ ಕನ್ಸಿಸ್ಟೆಂಟ್‌. ನಾಯಕ ವಿರಾಟ್‌ ಕೊಹ್ಲಿ ಭಾರತ ಗೆದ್ದ ಪಂದ್ಯಗಳಲ್ಲಿ ಅಜೇಯವಾದ 81, 76, 96 ರನ್‌ ಗಳಿಸಿದ್ದಾರೆ. ಅವರು ವಿಫ‌ಲವಾದ ಎರಡು ಪಂದ್ಯದಲ್ಲಿ ಭಾರತ ಗೆದ್ದಿದೆ. ಹಿರಿಯರಾದ ಎಂ.ಎಸ್‌.ಧೋನಿ ಹಾಗೂ ಯುವರಾಜ್‌ಸಿಂಗ್‌ “ಉಳಿದವರು ಪೆವಿಲಿಯನ್‌ ಸೇರಿದಂತೆ ತಾವೂ ಅವಸರ ಮಾಡಿದರೆ ತಂಡ ಹೇಗೆ ಟೂರ್ನಿಗಳನ್ನು ಗೆಲ್ಲಲು ಸಾಧ್ಯ? ಇತ್ತೀಚಿನ ದಿನಗಳಲ್ಲಿ ಮಧ್ಯಮ ಕ್ರಮಾಂಕ ತನ್ನದೇ ನೆಲೆಯಲ್ಲಿ ಪಂದ್ಯ ಗೆಲ್ಲಿಸಿಕೊಟ್ಟಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕೊಹ್ಲಿ ತರದವರು ಇನಿಂಗ್ಸ್‌ನ್ನು ಆಧರಿಸಿದ್ದಿದೆ. ಯುವರಾಜ್‌, ಧೋನಿ, ಜಾಧವ್‌ ಇಂತದೊಂದು ಇನ್ನಿಂಗ್ಸ್‌ನ ಫೈನಲ್‌ನಲ್ಲಷ್ಟೇ ಆಡಿದ್ದರೂ ಸಾಕಿತ್ತು. ಪಾಕ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಒಂದಷ್ಟು ಹೊತ್ತು ಕ್ರೀಸ್‌ನಲ್ಲಿ ಸಮಯ ಕಳೆಯಲು ಕೂಡ ಮನಸ್ಸು ಮಾಡದಿದ್ದುದು ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವುದೇ ಕ್ಷೇಮ ಎನ್ನಿಸುವಂತೆ ಮಾಡಿದ್ದು ಸುಳ್ಳಲ್ಲ.

ಬುಮ್ರಾ ಹೊಡೆದ್ರು ರನ್‌!
ಭಾರತದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಈವರೆಗೆ 40 ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿಗದಿತ ಓವರ್‌ಗಳ ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಮೊನ್ನೆ ಪಾಕಿಸ್ತಾನದ ವಿರುದ್ಧದ ಫೈನಲ್‌ನಲ್ಲಿ ಭಾರತ ಸೋಲಿನ ಅಂಚಿನಲ್ಲಿದ್ದಾಗಲೂ ಗಳಿಸಿದ ಒಂದು ರನ್‌ಗೆ ಶತಕದ ಸಂಭ್ರಮ ಆಚರಿಸಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಈ 40 ಪಂದ್ಯಗಳಲ್ಲಿ ಅದು ಅವರು ಗಳಿಸಿದ ಚೊಚ್ಚಲ ರನ್‌! ಬ್ಯಾಟ್‌ ಹಿಡಿದು ಕ್ರೀಸ್‌ಗಿಳಿದ ಈ ಹಿಂದಿನ ಆರು ಸಂದರ್ಭಗಳಲ್ಲೂ ರನ್‌ ಮಾತ್ರ ಬಂದಿರಲಿಲ್ಲ!!

ಪಾಕ್‌ ಪರಾಕ್ರಮಕ್ಕೆ ಹ್ಯಾಟ್ಸ್‌ಅಪ್‌!
ವಿಶ್ವ ರ್ಯಾಕಿಂಗ್‌ನಲ್ಲಿ 8ನೇ ಸ್ಥಾನ, ಮುಂದಿನ ವಿಶ್ವಕಪ್‌ನ ಅರ್ಹತಾ ಸುತ್ತಲ್ಲಿ ಆಡಬೇಕಾಗಬಹುದಾದ ಒತ್ತಡ, ಭಾರತದ ವಿರುದ್ಧ ಲೀಗ್‌ ಪಂದ್ಯದ ಹೀನಾಯ ಸೋಲಿನ ನಂತರ ಪಾಕ್‌ ಒಂದರ್ಥದಲ್ಲಿ ನಿರಾಳವಾಗಿಬಿಟ್ಟಿತು. ಅದಕ್ಕೆ ಅರ್ಥವಾಗಿತ್ತು. ಇನ್ನು ಕಳೆದುಕೊಳ್ಳುವುದು ಏನೂ ಇಲ್ಲ! ದ.ಆಫ್ರಿಕಾ ಹಾಗೂ ಶ್ರೀಲಂಕಾ ಎದುರು ಅವರ ಬೌಲಿಂಗ್‌ ಸಾಮರ್ಥ್ಯ ಅವರನ್ನು ಸುಲಭವಾಗಿ ಗೆಲ್ಲಿಸಿತು. ಸೆಮಿಫೈನಲ್‌, ಫೈನಲ್‌ನಲ್ಲೂ ಹೆಚ್ಚು ಕಡಿಮೆ ಅದೇ ಕಥೆ. ಅಜರ್‌ ಮಹಮೂದ್‌ ಎಂಬ ಮಾಜಿ ಬೌಲರ್‌ ಹೇಳಿದ್ದೇ ಅದು, ಟ್ರೋಫಿಗಳನ್ನು ಬೌಲರ್‌ಗಳು ಗೆಲ್ಲಿಸಿಕೊಡುತ್ತಾರೆ!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.