ಮಹಿಳೆಯನ್ನು ಇಂದಿಗೂ ಕೀಳಾಗಿ ಕಾಣಲಾಗುತ್ತಿದೆ: ವಿಷಾದ
Team Udayavani, Jun 25, 2017, 2:25 PM IST
ಹುಬ್ಬಳ್ಳಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಕಾರ್ಯನಿರ್ವಹಿಸಲು ಸಮರ್ಥರಾಗಿದ್ದರೂ ಅವರನ್ನು ಇಂದಿಗೂ ಕೀಳಾಗಿಯೇ ಕಾಣಲಾಗುತ್ತಿದೆ ಎಂದು ಧಾರವಾಡ ಕೃಷಿ ವಿವಿಯ ವಿಸ್ತರಣೆ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಡಾ| ಶೋಭಾ ನಾಗನೂರ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ದಲ್ಲಿ ಅಖೀಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ ಶನಿವಾರ ಆಯೋಜಿಸಿದ್ದ 10ನೇ ತ್ತೈವಾರ್ಷಿಕ ಮಹಾಧಿವೇಶನದ ಮಹಿಳಾ ಉದ್ಯೋಗಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಯಾವುದೇ ಫಲಾಪೇಕ್ಷೆ, ಸಂಬಳವಿಲ್ಲದೆ ಮನೆಗೆಲಸ ಮಾಡುತ್ತಾಳೆ.
ಅಲ್ಲಿಂದಲೇ ಅವಳ ಪ್ರಾಥಮಿಕ ಕೆಲಸ ಆರಂಭವಾಗುತ್ತದೆ. ಅವಳು ಎಂತಹ ಹುದ್ದೆ, ಸ್ಥಾನಮಾನ ಹೊಂದಿದ್ದರೂ ಮನೆಗೆಲಸ ಮಾಡುತ್ತಾಳೆ. ತನಗೆ ವಹಿಸಿದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. ಪುರುಷರಿಗಿಂತ ಹೆಚ್ಚಿನ ಬದ್ಧತೆ ಹೊಂದಿದ್ದಾಳೆ. ಮಹಿಳೆಯರು ತಮಗಿಂತಲೂ ಉತ್ತಮ ಕಾರ್ಯಮಾಡಬಲ್ಲರು ಎಂಬುದನ್ನು ಪುರುಷರು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ ಅವಳಿಗೆ ಅವಕಾಶ ಕೊಡುವುದಿಲ್ಲ.
ಭಾರತ ಮಾತ್ರವಲ್ಲ ಅಮೆರಿಕೆಯಂತಹ ಮುಂದುವರಿದ ದೇಶಗಳಲ್ಲೂ ಮಹಿಳೆಗೆ ದುಡಿಮೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ. ಅವಳಿಗೆ ಹೆಚ್ಚಿನ ಜವಾಬ್ದಾರಿ, ಸ್ಥಾನಮಾನ ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ ಎಂದರು. ಭಾರತೀಯ ಜೀವವಿಮಾ ನಿಗಮದ ಕಾರ್ಮಿಕ ಸಂಘಟನೆಯ ಬೆಂಗಳೂರಿನ ವಿಭಾಗೀಯ ಕಾರ್ಯದರ್ಶಿ ಎಸ್.ಕೆ. ಗೀತಾ ಮಾತನಾಡಿ, ಮಹಿಳೆಯರಿಗೆ ದುಡಿಮೆ ಜೊತೆ ಅವರನ್ನು ಗುರುತಿಸುವಂತಾದಾಗ ಮಾತ್ರ ಅವರಿಗೆ ಗೌರವ ಸಿಗುತ್ತದೆ.
ಮಹಿಳೆ ಮತ್ತು ಪುರುಷರ ನಡುವಿನ ಭೇದ ಜೈವಿಕವಾಗಿ ಅಲ್ಲ. ಸಾಮಾಜಿಕವಾಗಿಯೂ ಇದೆ. ಮಹಿಳೆಯರ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಗಣಿಸಲಾಗುತ್ತಿದೆ ವಿನಃ ಸಮುದಾಯವಾಗಿ ಕಾಣುತ್ತಿಲ್ಲ. ಉದಾರೀಕರಣದ ನಂತರ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಆಯಿತು. ಜೊತೆಗೆ ಅವಳು ಉದ್ಯೋಗ ಮಾಡದಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ ಎಂದರು.
ಮಹಿಳೆಯ ಸೌಂದರ್ಯವನ್ನೆ ಪ್ರಧಾನವಾಗಿಟ್ಟುಕೊಂಡು ಮಾರುಕಟ್ಟೆ ಶಕ್ತಿಗಳು ಅವಳ ಬೌದ್ಧಿಕ ಚಿಂತನೆ ಕಡೆಗಣಿಸುತ್ತಿವೆ. ಮಾರುಕಟ್ಟೆಗಳು ನಮ್ಮನ್ನು ಗ್ರಾಹಕರನ್ನಾಗಿ ಮಾತ್ರ ಮಾಡಿವೆ ವಿನಃ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸಲು ಬಿಡುತ್ತಿಲ್ಲ. ಮಹಿಳೆಯರು ಸಾಮರಸ್ಯವಾಗಿ ಇಲ್ಲ, ವ್ಯಕ್ತಿತ್ವ ಹೊಂದಿಲ್ಲವೆಂದು ಬಿಂಬಿಸಲಾಗುತ್ತಿದೆ.
ಗರ್ಭಿಣಿ ಸಹೋದ್ಯೋಗಿಗಳನ್ನು ಪುರುಷರು ಬಲು ತಾತ್ಸಾರದಿಂದ ನೋಡುತ್ತಾರೆ. ಹೆಣ್ಣಿನ ತಾಯ್ತನವೇ ಮುಂದಿನ ಪೀಳಿಗೆ, ಸಮಾಜ ಸೃಷ್ಟಿಸುವುದಾಗಿದೆ ಎಂಬುದನ್ನು ಸಮಾಜ ಏಕೆ ತಿಳಿದುಕೊಳ್ಳುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಎಕೆಜಿಬಿಇಎಫ್ ಅಧ್ಯಕ್ಷ ಎಚ್. ನಾಗಭೂಷಣರಾವ್ ಅಧ್ಯಕ್ಷತೆ ವಹಿಸಿದ್ದರು.
ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಎಐಆರ್‌ಆರ್‌ಬಿಇಎ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಯೀದ್ ಖಾನ್, ಎನ್‌ಎಫ್‌ಆರ್‌ಆರ್‌ಬಿಓಎ ಅಧ್ಯಕ್ಷ ಶಗುನ್ ಶುಕ್ಲಾ, ಸ್ವಾಗತ ಸಮಿತಿ ಸಂಚಾಲಕ ವಸಂತ ಬನ್ನಿಗೋಳ, ಎಕೆಜಿಬಿಇಎಫ್ ಪ್ರಧಾನ ಕಾರ್ಯದರ್ಶಿ ಗಣಪತಿ ಹೆಗಡೆ ಮೊದಲಾದವರಿದ್ದರು. ಕೆವಿಜಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕಿ ಎಸ್.ಎಸ್. ಮಣ್ಣೂರ ಸ್ವಾಗತಿಸಿದರು. ಮಂಜುಳಾ ಡಿ. ಪ್ರಾರ್ಥಿಸಿದರು. ಅಶ್ವಿನಿ ಬಡಿಗೇರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.