ಅಕ್ರಮ ಕಸಾಯಿಖಾನೆಗೆದಾಳಿ: ಮೂವರಿಗೆ ಗಾಯ
Team Udayavani, Jun 26, 2017, 3:45 AM IST
ಉಳ್ಳಾಲ: ಬಂಟ್ವಾಳ ತಾಲೂಕಿನ ಪಜೀರು ಅಡ್ಕದ ಮನೆಯೊಂದರ ಅಕ್ರಮ ಕಸಾಯಿಖಾನೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ದನ ಕಡಿಯುತ್ತಿದ್ದ ಐವರಲ್ಲಿ ಮೂವರು ಗಾಯಗೊಂಡರೆ ಇನ್ನಿಬ್ಬರು ಪರಾರಿಯಾಗಿದ್ದು, ಪೊಲೀಸರ ಮದ್ಯ ಪ್ರವೇಶದಿಂದ ಗುಂಪು ಘರ್ಷಣೆಯೊಂದು ತಪ್ಪಿದಂತಾಗಿದೆ.
ಅಂಬ್ಲಿಮೊಗರು ಗ್ರಾಮದ ಎಲಿಯಾರ್ ನಿವಾಸಿ ಅಬ್ದುಲ್ ಸಲಾಂ(38), ಪಾವೂರು ಮಲಾರ್ ಅರಸ್ತಾನ ನಿವಾಸಿಗಳಾದ ಮನ್ಸೂರು ಯಾನೆ ಸದ್ದಾಂ ಮತ್ತು ಇರ್ಷಾದ್(17) ಗಾಯಗೊಂಡವರಉ. ನಾಟೆಕಲ್‌ನ ಹಂಝ ಮತ್ತು ಇಕ್ಬಾಲ್ ಪರಾರಿಯಾಗಿದ್ದಾರೆ.
ಘಟನೆಯ ವಿವರ : ಪಜೀರು ಅಡ್ಕದ ಕೃಷಿಕರಾಗಿರುವ ಜೋಕಿಂ ಡಿ.ಸೋಜಾ ಅವರು ತಮ್ಮ ಮನೆಯಲ್ಲಿದ್ದ ಮೂರು ದನಗಳನ್ನು ಜಾನುವಾರು ಮಾರಾಟಗಾರರಾಗಿರುವ ಮದ್ಯವರ್ತಿಗಳಿಗೆ ವಾರದ ಹಿಂದೆ ಮಾರಾಟ ಮಾಡಿದ್ದರು. ಮದ್ಯವರ್ತಿಗಳು ದನವನ್ನು ಜೋಕಿಂ ಮನೆಯಲ್ಲಿ ಉಳಿಸಿಕೊಂಡು ಅದನ್ನು ನಾಟೆಕಲ್‌ನ ಹಂಝ ಅವರಿಗೆ ಮಾರಾಟ ಮಾಡಿದ್ದರು. ಹಂಝ ದನವನ್ನು ಜೀವಂತ ಸಾಗಿಸಿದರೆ ತೊಂದರೆಯಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಜೋಕ್ಕಿಂ ಅವರ ಮನೆಯಲ್ಲೇ ಮಾಂಸ ಮಾಡಿ ಒಯ್ಯಲು ನಿಧಹರಿಸಿದ್ದರು. ದಕ್ಕೆಯಲ್ಲಿ ಮೀನಿನ ಕೆಲಸ ಮಾಡುವ ಸಲಾಂ ಸಹಿತ ನಾಲ್ವರನ್ನು ಕರೆದುಕೊಂಡು ಹೋಗಿ ರಾತ್ರಿ ವೇಳೆ ಜೋಕಿಂ ಮನೆಯ ಬಳಿ ಅಕ್ರಮವಾಗಿ ಕಸಾಯಿಖಾನೆನಿರ್ಮಿಸಿದ್ದರು ಎನ್ನಲಾಗಿದೆ. ಮೂರು ಜಾನುವಾರುಗಳಲ್ಲಿ ಒಂದನ್ನು ಕೊಂದು ಮಾಂಸ ಮಾಡಿದರೆ ಇನ್ನೊಂದರ ಚರ್ಮ ಸುಲಿದು ರಿಕ್ಷಾದಲ್ಲಿ ಹಾಕಿ ಸಾಗಾಟಕ್ಕೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ರಸ್ತೆ ರಿಪೇರಿ ಮಾಡುತ್ತಿದ್ದ ಯುವಕರನ್ನು ನೋಡಿ ಎರಡೆರಡು ಬಾರಿ ರಿಕ್ಷಾ ತಿರುಗಿಸಿದರು. ಆಗ ಸಂಶಯಗೊಂಡ ಯುವಕರು ರಿಕ್ಷಾವನ್ನು ಬೆನ್ನತ್ತಿದಾಗ ಅಕ್ರಮ ಕಸಾಯಿಖಾನೆ ಬೆಳಕಿಗೆ ಬಂದಿದ್ದು, ಮಾಂಸ ಸಾಗಾಟ ಮಾಡುತ್ತಿದ್ದ ಒಬ್ಟಾತನಿಗೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂದರ್ಭದಲ್ಲಿ ಉಳಿದವರು ಪರಾರಿಯಾಗಿದ್ದಾರೆ ಎಂದರಿತ ಯುವಕರು ಮಾಂಸವನ್ನು ಅಲ್ಲೇ ಗುಂಡಿ ತೆಗೆದು ಮುಚ್ಚುತ್ತಿದ್ದಾಗ ಮನೆಯ ಬಳಿ ಅಡಗಿದ್ದ ಇಬ್ಬರು ಪತ್ತೆಯಾಗಿದ್ದು ಈ ಸಂದರ್ಭದಲ್ಲಿ ಅವರನ್ನು ಹಿಡಿಯಲು ಮುಂದಾಗಿದ್ದು ಅವರು ತಪ್ಪಿಸಲು ಯತ್ನಿಸಿದಾಗ ಗಾಯಗೊಂಡಿದ್ದು, ಇನ್ನೊಂದೆಡೆ ಯುವಕರು ಹಿಡಿದು ಹಲ್ಲೆಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಇನ್ನಿಬ್ಬರು ಮಲಾರ್ ಬಳಿ ಇನ್ನೊಂದು ಕೋಮಿನ ಯುವಕರಿಗೆ ಮಾಹಿತಿ ನೀಡಿದ್ದು, ಕೆಲಕಾಲ ಪರಿಸರದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸ್ ಬಂದೋಬಸ್ತ್ : ಎರಡು ಕೋಮುಗಳ ಜನರು ಸೇರುತ್ತಿದ್ದಂತೆ ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ನೇತೃತ್ವದ ಪೊಲೀಸರು ತಂಡ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಕೆಎಸ್‌ಆರ್‌ಪಿ ಪೊಲೀಸರನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಯಿತು. ರಾತ್ರಿ ಒಂದು ಗಂಟೆಯಿಂದ ರವಿವಾರ ಬೆಳಗ್ಗೆ 4 ಗಂಟೆಯವರೆಗೆ ಉದ್ರಿಕ್ತ ಜನರು ಸ್ಥಳದಲ್ಲಿ ಸೇರಿದ್ದು, ಪೊಲೀಸರ ಆಗಮನದ ಬಳಿಕ ಪರಿಸ್ಥತಿ ಹತೋಟಿಗೆ ಬಂತು ಸ್ಥಳಕ್ಕೆ ಎಸಿಪಿ ಶ್ರುತಿ, ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್, ಎಸ್‌ಐ ಸುಕುಮಾರ್ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಕೊಣಾಜೆ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದು, 8 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಅಕ್ರಮ ಕಸಾಯಿಖಾನೆ ನಡೆಸಿದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತಂಡಗಳಿಂದ ದೂರು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.