ಕರಾವಳಿಯ ಬಹುತೇಕ ಕಡೆ ಸಂಭ್ರಮದ ಈದುಲ್ ಫಿತ್ರ ಆಚರಣೆ
Team Udayavani, Jun 26, 2017, 3:45 AM IST
ಮಂಗಳೂರು/ಉಡುಪಿ/ಕಾಸರಗೋಡು: ದಕ್ಷಿಣ ಕನ್ನಡ, ಉಡುಪಿ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ರವಿವಾರ ಮುಸ್ಲಿಮರು ಈದುಲ್ ಫಿತ್ರ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ಈದ್ಗಾ ಮತ್ತು ಮಸೀದಿಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಹಬ್ಬದ ವಿಶೇಷ ನಮಾಝ್ ಮತ್ತು ಪ್ರವಚನ ನಡೆಯಿತು. ಬಳಿಕ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿಶೇಷ ಭಕ್ಷ ಭೋಜನಗಳ ವ್ಯವಸ್ಥೆ ಮಾಡಲಾಗಿತ್ತು.
ಭಟ್ಕಳದಲ್ಲಿ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಖಾಝಿಯವರು ಪರಸ್ಪರ ಸಮಾಲೋಚನೆ ನಡೆಸಿ ರವಿವಾರ ಪೆರ್ನಾಳ್ ಆಚರಿಸಲು ಕರೆ ನೀಡಿದ್ದರು.
ಅದರಂತೆ ದ.ಕ., ಉಡುಪಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ತಕಿªàರ್ (ಈದ್ ಪ್ರಯುಕ್ತ) ಮೊಳಗಿಸಲಾಗಿತ್ತು.
ಆದರೆ ಉಳ್ಳಾಲ ಖಾಝಿ ಕೂರತ್ ತಂšಳ್ ಅವರ ಕೆಲವು ಬೆಂಬಲಿಗರು ಕೂರತ್ ತಂšಳ್ ಅವರು ಪೆರ್ನಾಳ್ ಆಚರಣೆಗೆ ಸಂಬಂಧಿಸಿ ಯಾವುದೇ ಘೋಷಣೆ ಹೊರಡಿಸದ ಕಾರಣ ಅವರ ಅಧೀನವಿರುವ ಜಮಾತ್‌ಗಳಲ್ಲಿ ಈದ್ ಹಬ್ಬ ರವಿವಾರ ಆಚರಿಸಲಾಗಿಲ್ಲ. ಈ ಜಮಾತ್‌ಗಳ ಮುಸ್ಲಿಮರು ರವಿವಾರವೂ ಉಪವಾಸ ಆಚರಿಸಿದರು.
ಉಳಿದಂತೆ ಭಟ್ಕಳದ ಖಾಝಿ ಅಬ್ದುಲ್ ರಹಿಮಾನ್, ಉಡುಪಿ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಕೃಷ್ಣಾಪುರ ಖಾಝಿ ಇಬ್ರಾಹಿಂ ಮುಸ್ಲಿಯಾರ್, ಕಾಸರಗೋಡು ಖಾಝಿ ಅಲಿ ಕುಂಞಿ ಮುಸ್ಲಿಯಾರ್, ಕಾಂಞಂಗಾಡ್ ಖಾಝಿ ಜಿಫ್ರಿ ತಂಗಳ್ ಮುತ್ತುಕೋಯ ಅವರ ಆಡಳಿತ ವ್ಯಾಪ್ತಿಯ ಜಮಾತ್‌ಗಳಲ್ಲಿ ರವಿವಾರ ಈದ್ ಹಬ್ಬ ಆಚರಿಸಲಾಯಿತು.
ಮಂಗಳೂರಿನಲ್ಲಿ ನಮಾಝ್
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಈದ್ ನಮಾಜ್ ಜರಗಿತು. ಅವರು ಪ್ರವಚನ ಮತ್ತು ಹಬ್ಬದ ಸಂದೇಶದ ಜತೆಗೆ ಶುಭಾಶಯ ತಿಳಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಝೀನತ್ ಭಕ್Ò ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಯೇನಪೊಯ ಅಬ್ದುಲ್ಲ ಕುಂಞಿ ಮುಂತಾದ ಗಣ್ಯರು ಭಾಗವಹಿಸಿ ಮುಸ್ಲಿಮರಿಗೆ ಹಬ್ಬದ ಶುಭಾಶಯ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಮರು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಯೇನಪೊಯ ಅಬ್ದುಲ್ಲ ಕುಂಞಿ ಅವರು ಮಾತನಾಡಿ ಒಂದು ತಿಂಗಳ ಉಪವಾಸ ವ್ರತ, ಆರಾಧನೆಗಳು ಹಾಗೂ ಸಂತೋಷದಿಂದ ಹಬ್ಬ ಆಚರಿಸಲು ಅನುಗ್ರಹಿಸಿದ ಅಲ್ಲಾಹು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ ಸಹನೆ ಮತ್ತು ಸಂಯಮ ಕಾಯ್ದುಕೊಳ್ಳುವುವುದೇ ಉಪವಾಸ ಮತ್ತು ಹಬ್ಬದ ಸಾರ. ಹಬ್ಬ ಆಚರಣೆಯ ಬಳಿಕದ ಹನ್ನೊಂದು ತಿಂಗಳಲ್ಲೂ ಇದೇ ರೀತಿಯ ಶಿಸ್ತನ್ನು ಕಾಯ್ದುಕೊಂಡು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳ ಬೇಕು. ಎಲ್ಲೆಡೆ ಪ್ರೀತಿ, ವಿಶ್ವಾಸ ಮೂಡಿಸಲು ಹಬ್ಬದ ಆಚರಣೆ ಪ್ರೇರೇಪಣೆ ನೀಡ ಬೇಕು ಎಂದರು.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಶಿಸ್ತು ಬದ್ಧವಾಗಿ ಉಪವಾಸ, ಹಬ್ಬ ಆಚರಿಸಿದ ಮುಸ್ಲಿಮರಿಗೆ ಶುಭಾಶಯ ಹಾಗೂ ಕೃತಜ್ಞತೆ ಸಲ್ಲಿಸಿದರು.
ಸಾಕ್ಷ éಪಡೆದೇ ಈದ್ ಘೋಷಣೆ
ಶವ್ವಾಲ್ ತಿಂಗಳ ಪ್ರಥಮ ಚಂದ್ರನನ್ನು ನೋಡಿದವರಿಂದ ಸಾಕ್ಷ é ಪಡೆದ ಬಳಿಕವೇ ನಾವು ಈದ್ ಘೋಷಿಸಿದೆವು ಎಂದು ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸ್ಪಷ್ಟಪಡಿಸಿದ್ದಾರೆ.
ನಮ್ಮಲ್ಲಿ ಯಾರೂ ಚಂದ್ರನನ್ನು ಕಂಡಿರಲಿಲ್ಲ. ಆದರೆ ಭಟ್ಕಳದಲ್ಲಿ ಚಂದ್ರನನ್ನು ನೋಡಿದ ಬಗ್ಗೆ ಮಾಹಿತಿ ಬಂತು. ಪತ್ರಕರ್ತರೂ ಖಚಿತ ಪಡಿಸಿದರು. ಈ ಬಗ್ಗೆ ತುರ್ತು ಸಭೆ ನಡೆಸಿ ಚರ್ಚಿದೆವು. ಬಳಿಕ ನಾನೇ ಭಟ್ಕಳದ ಖಾಝಿ ಅಬ್ದುಲ್ ರಹಿಮಾನ್ ಜತೆ ಮಾತನಾಡಿ ಚಂದ್ರ ದರ್ಶನದ ಶಹಾದತ್ (ಸಾಕ್ಷ é) ಪಡೆದೆ. ನಮಗೆ ಖಚಿತಗೊಂಡ ಬಳಿಕವೂ ಹಬ್ಬದ ದಿನ ಉಪವಾಸ ಆಚರಿಸುವುದು ಹರಾಂ (ನಿಷಿದ್ಧ) ಆಗಿರುವುದರಿಂದ ಈದ್ ಘೋಷಿಸಿದೆವು ಎಂದು ಅವರು ವಿವರಿಸಿದ್ದಾರೆ.
ಉಳ್ಳಾಲದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಈದ್ ನಮಾಝ್
ಉಳ್ಳಾಲ ಹಾಗೂ ಸುತ್ತಮುತ್ತಲಿನ ಕೆಲವೆಡೆ ರವಿವಾರ “ಈದುಲ್ ಫಿತ್ರ’ ಆಚರಣೆಗೆ ಸಂಬಂಧಿಸಿ ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಉಳ್ಳಾಲ ದರ್ಗಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದ್ ನಮಾಝ್ ನೆರವೇರಿಸಲಾಯಿತು.
ಉಳ್ಳಾಲದ ಅಳೇಕಲ, ಮುಕ್ಕಚ್ಚೇರಿ, ಸುಂದರಿಬಾಗ್, ಮಾರ್ಗತಲೆ, ಕಡಪುರ, ಮಂಚಿಲ, ಮಾಸ್ತಿಕಟ್ಟೆ ಹೊರತುಪಡಿಸಿ ಬಹುತೇಕ ಎಲ್ಲ ಮಸೀದಿಗಳಲ್ಲಿ ಪೆರ್ನಾಳ್ ಪ್ರಯುಕ್ತ ಈದ್ ನಮಾಝ್ ನೆರವೇರಿಸಲಾಗಿದ್ದು, ಪೊಲೀಸರು ಭದ್ರತೆಯನ್ನು ಒದಗಿಸಿದ್ದರು.
ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿದ್ದ ಸಮಾಜ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.