ಒಂಟಿ ಮಹಿಳೆ ಅಂತ ರೂಂ ಕೊಡ್ತಿಲ್ಲ!
Team Udayavani, Jun 26, 2017, 11:25 AM IST
ಹೈದರಾಬಾದ್: ಆಕೆ ಬೆಂಗಳೂರು ಮೂಲದ ಒಂಟಿ ಮಹಿಳೆ. ಹೈದರಾಬಾದ್ಗೆ ಹೋದವರು ಇದೀಗ ಹೋಟೆಲ್ ಹೊರಗೆ ನಿಲ್ಲುವಂತಾಗಿದೆ. ಕಾರಣ ಒಂಟಿ ಮಹಿಳೆಗೆ ರೂಂ ಕೊಡಲ್ಲ ಎನ್ನುವ ಹೋಟೆಲಿನವರ ದರ್ಪ! ಇಂಥದ್ದೊಂದು ವಿಚಿತ್ರ ಪರಿಸ್ಥಿತಿಯನ್ನು ಎಂಜಿನಿಯರ್ ನೂಪುರ್ ಸಾರಸ್ವತ್ ಎದುರಿಸಿದ್ದು, ಫೇಸ್ಬುಕ್ ಮೂಲಕ ಹಂಚಿಕೊಂಡಿದ್ದಾರೆ.
“ಆನ್ಲೈನ್ನಲ್ಲಿ ಈ ಮೊದಲೇ ಬುಕ್ಕಿಂಗ್ ಮಾಡಿ, ಒಂಟಿ ಮಹಿಳೆ ಎಂದು ಬರೆದಿದ್ದರೂ, ಹೋಟೆಲ್ನಲ್ಲಿ ನನಗೆ ರೂಂ ಕೊಡ್ತಿಲ್ಲ. ಹೋಟೆಲ್ಗೆ ಬಂದಿದ್ದು, ರೂಂ ನೀಡದೇ ಇರುವುದರಿಂದ ಹೊರಗಡೆ ಲಗೇಜ್ ಹಿಡಿದು ನಿಲ್ಲುವಂತಾಗಿದೆ. ಹೋಟೆಲ್ಗಿಂತ ರಸ್ತೆಯಲ್ಲಿ ನಾನು ನಿಲ್ಲುವುದೇ ಸುರಕ್ಷಿತ ಎಂದು ಅವರು ಭಾವಿಸಿದಂತಿದೆ’ ಎಂದು ಹೇಳಿದ್ದಾರೆ. ನೂಪುರ್ ಅವರ ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ.
ಜೊತೆಗೆ ಹೋಟೆಲ್ನವರ ನೀತಿ ಬಗ್ಗೆಯೂ ಅವರು ಹೇಳಿದ್ದು, ಅವಿವಾಹಿತರು, ಒಂಟಿ ಮಹಿಳೆ, ಅವಿವಾಹಿತ ಜೋಡಿಗಳಿಗೆ ರೂಂ ಕೊಡಲ್ಲ ಎಂದಿದ್ದಾರಂತೆ. ಆದರೆ ತಾವು ಗೋಐಬಿಬೋ ಆ್ಯಪ್ ಮೂಲಕ ರೂಂ ಬುಕ್ ಮಾಡಿದ್ದು, ಒಂಟಿ ಮಹಿಳೆ ಎಂದು ನಮೂದಿಸಿದ್ದರು ರೂಂ ಬುಕ್ಕಿಂಗ್ ಅನ್ನು ಖಾತರಿ ಪಡಿಸಿದ್ದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಗೋಐಬಿಬೋ ನೂಪುರ್ ಅವರ ಬಳಿ ಕ್ಷಮೆ ಕೋರಿದೆ.
ಅಲ್ಲದೇ ಅವರಿಗೆ ಹಣ ವಾಪಸ್ಸು ಮಾಡಿ, ಹೈದ್ರಾಬಾದ್ನಲ್ಲಿ ಬೇರೆಯ ಹೋಟೆಲ್ನಲ್ಲಿ ಉಚಿತವಾಗಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಇದೇ ವೇಳೆ ಹೋಟೆಲ್ ಕೂಡ ಪ್ರತಿಕ್ರಿಯಿಸಿದ್ದು, ಈ ಪ್ರದೇಶದಲ್ಲಿ ಒಂಟಿ ಮಹಿಳೆಯರ ವಾಸ್ತವ್ಯ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.