ಅಂತರಂಗ ಶುದ್ಧಿಯಿಂದ ಧರ್ಮ ಜಾಗೃತಿ
Team Udayavani, Jun 26, 2017, 4:07 PM IST
ವಾಡಿ: ಬಹಿರಂಗ ಶುದ್ಧಿ ಬಾಹ್ಯ ಸೌಂದರ್ಯವಾಗಿ ಬಹುಬೇಗ ವ್ಯಕ್ತಿಯ ನಿಜಬಣ್ಣ ಕಳಚುತ್ತದೆ. ಅಂತರಂಗದ ಶುದ್ಧಿಯೇ ಧರ್ಮ ಜಾಗೃತಿ ಜೀವಂತವಿಟ್ಟು ಸಮಾಜಮುಖೀಯಾಗಿ ಜಗವ ಬೆಳಗುತ್ತದೆ ಎಂದು ಗುರುಮಠಕಲ ಶಾಖಾ ಮಠದ ಪೀಠಾಧಿಪತಿ ಶ್ರೀ ಶಾಂತಿವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಹಾಗೂ ವರ್ಷದ ಕೊನೆ ತನಾರತಿ ಮಹೋತ್ಸವ ಉದ್ಘಾಟಿಸಿ ಸ್ವಾಮೀಜಿ ಅಶೀರ್ವಚನ ನೀಡಿದರು. ಸಾನ್ನಿಧ್ಯ ವಹಿಸಿದ್ದ ಕೋರಿಸಿದ್ದೇಶ್ವರ ಮಠದ ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ ಮಾತನಾಡಿದರು.
ಭಕ್ತರ ಇಷ್ಟಾರ್ಥ ಈಡೇರಿದೆ ಎಂಬುದಕ್ಕೆ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ತನಾರತಿ ಉತ್ಸವವೇ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು. ಚಿತ್ರಕಲಾವಿದ ಸಂಗಣ್ಣ ದೊರನಳ್ಳಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಸಜ್ಜನ, ಸಂಗಮೇಶ ಸಾಹು ಗೋಗಿ, ಕಾಶೀನಾಥ ಶಾಸ್ತ್ರಿ ಜೇರಟಗಿ, ಮಹೇಶ ಗೌಡ ಸೂಗೂರ, ವೀರಣ್ಣಗೌಡ ಪರಸರೆಡ್ಡಿ, ಮಲ್ಲಿಕಾರ್ಜುನ ಇದ್ದರು. ಶ್ರೀಮಠದ ಗಾಯಕ ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು.
ಡಾ| ಸಿದ್ದರಾಜ ಕರೆಡ್ಡಿ ನಿರೂಪಿಸಿದರು. ಶಂಕರ ಗವಾಯಿ, ಹಿತ್ತಲಶಿರೂರ ಗವಾಯಿ, ಸಾಬಣ್ಣ ಭಜಂತ್ರಿ, ಸಂಗಯ್ಯ ಗವಾಯಿ ಬಳವಡಗಿ, ಈರಣ್ಣ, ಶೇಖರ ಏವೂರ ಮತ್ತಿತರರು ಸಂಗೀತ ಸೇವೆ ನೀಡಿದರು. ರಾಜಶೇಖರ ಗೆಜ್ಜಿ, ನಾರಾಯಣ ಹೊಸೂರ ತಬಲಾ ಸಾಥ್ ನೀಡಿದರು. ಮಹಾಂತೇಶ ಹುಲ್ಲೂರ, ರಾಜಶೇಖರ ಹುಲ್ಲೂರ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP: ಅಶಿಸ್ತಿನ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ: ಡಿವಿಎಸ್
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.