ಮಿಂಚಿದ ರಹಾನೆ,ಧವನ್,ಕೊಹ್ಲಿ ಭಾರತಕ್ಕೆ ಶರಣಾದ ವೆಸ್ಟ್‌ಇಂಡೀಸ್
Team Udayavani, Jun 27, 2017, 3:45 AM IST
ಪೋರ್ಟ್ ಆಫ್ ಸ್ಪೇನ್: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದ ಭಾರತ ತಂಡವು ಮಳೆಯಿಂದ ತೊಂದರೆಗೊಳಗಾದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡವನ್ನು 105 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಅಜಿಂಕ್ಯ ರಹಾನೆ ಅವರ ಶತಕ ಹಾಗೂ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕದಿಂದಾಗಿ 43 ಓವರ್‌ಗಳಲ್ಲಿ 5 ವಿಕೆಟಿಗೆ 310 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಮಳೆಯಿಂದ ಎರಡು ಗಂಟೆಯ ಆಟ ನಷ್ಟವಾಗಿದ್ದರಿಂದ ಓವರ್‌ಗಳ ಸಂಖ್ಯೆಯನ್ನು 43ಕ್ಕೆ ಇಳಿಸಲಾಗಿತ್ತು.
ಕಠಿನ ಗುರಿ ಪಡೆದ ಆತಿಥೇಯ ತಂಡ ಆರಂಭದಲ್ಲಿಯೇ ಎಡವಿತು. 4 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ಶೈ ಹೋಪ್ ಆಧರಿಸಿದರು. ಮೂರನೇ ವಿಕೆಟಿಗೆ ಎವಿನ್ ಲೆವಿಸ್ ಜತೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಹೋಪ್ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಈ ಜೋಡಿ ಮುರಿಯುತ್ತಲೇ ಮತ್ತೆ ವಿಂಡೀಸ್ ಕುಸಿದ ಕಾರಣ ವಿಂಡೀಸ್ ಒತ್ತಡಕ್ಕೆ ಒಳಗಾಗಿ 43 ಓವರ್‌ಗಳಲ್ಲಿ 205 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನಿಂದ ಟೀಮ್ ಇಂಡಿಯಾ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ಮೂರನೇ ಪಂದ್ಯ ನಾರ್ತ್ ಸೌಂಡ್‌ನಲ್ಲಿ ಜೂನ್ 30ರಂದು ನಡೆಯಲಿದೆ.
ನಾವು ಮತ್ತೆ ಪರಿಪೂರ್ಣ ಆಟ ಆಡಿದೆವು. ರಹಾನೆ ಮತ್ತು ಧವನ್ ನಡುವಣ ಜತೆಯಾಟ ಅತ್ಯದ್ಭುತವಾಗಿತ್ತು. ಮತ್ತು ನಾನು ಸಹಿತ ಯುವಿ, ಎಂಎಸ್ ಮತ್ತು ಕೇದಾರ್ ಕೂಡ ಉತ್ತಮ ಮೊತ್ತ ಗಳಿಸಲು ನೆರವಾದರು ಎಂದು ಪಂದ್ಯದ ಬಳಿಕ ತಿಳಿಸಿದರು.
ಭುವನೇಶ್ವರ್ ಆರಂಭದಲ್ಲಿಯೇ ವಿಕೆಟ್ ಉರುಳಿಸಿದ್ದು ಮತ್ತು ಕುಲದೀಪ್ ಅಮೋಘ ದಾಳಿ ಸಂಘಟಿಸಿದ್ದರಿಂದ ಭಾರತ ಸುಲಭವಾಗಿ ಜಯ ಕಾಣುವಂತಾಯಿತು. ತಂಡದಲ್ಲಿರುವ ಆಟವಾಡದ ಕ್ರಿಕೆಟಿಗರೂ ಉತ್ತಮ ನಿರ್ವಹಣೆ ನೀಡಲು ಸಮರ್ಥರಿದ್ದಾರೆ ಎಂಬುದನ್ನು ರಹಾನೆ ಮತ್ತು ಕುಲದೀಪ್ ಈ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಮೊದಲ ಸಲ ಬೌಲಿಂಗ್ ಮಾಡಿದ ಕುಲದೀಪ್ ಮೂರು ವಿಕೆಟ್ ಕಿತ್ತರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡದ ರಹಾನೆ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಮೂರನೇ ಶತಕವಾಗಿದೆ.
ಆಶ್ಚರ್ಯವೆಂಬಂತೆ ವೆಸ್ಟ್‌ಇಂಡೀಸ್ ಯಾವುದೇ ಕ್ಷಣವೂ ಗೆಲ್ಲುವ ನಿಟ್ಟಿನಲ್ಲಿ ಹೋರಾಟ ನಡೆಸಲಿಲ್ಲ. ಮೂರನೇ ವಿಕೆಟಿಗೆ ಲೆವಿಸ್ ಜತೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಹೋಪ್ ಮಾತ್ರ ಭಾರತ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದರು. 88 ಎಸೆತ ಎದುರಿಸಿದ ಅವರು 81 ರನ್ ಹೊಡೆದರು.
ನಾವು ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಉತ್ತಮ ನಿರ್ವಹಣೆ ನೀಡಿಲ್ಲ. ಗೆಲುವು ದಾಖಲಿಸಲು ಪ್ರಯತ್ನಿಸಿಲ್ಲ. ಚೇಸ್ ಮಾಡುವ ವೇಳೆ ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಒಳಗಾದೆವು ಎಂದು ವೆಸ್ಟ್‌ಇಂಡೀಸ್ ನಾಯಕ ಜಾಸನ್ ಹೋಲ್ಡರ್ ತಿಳಿಸಿದರು.
ಸ್ಕೋರುಪಟ್ಟಿ
ಭಾರತ
ಅಜಿಂಕ್ಯ ರಹಾನೆ ಬಿ ಕಮಿನ್ಸ್ 103
ಶಿಖರ್ ಧವನ್ ಸ್ಟಂಪ್ಡ್ ಹೋಪ್ ಬಿ ನರ್ಸ್ 63
ವಿರಾಟ್ ಕೊಹ್ಲಿ ಸಿ ನರ್ಸ್ ಬಿ ಜೋಸೆಫ್ 87
ಹಾರ್ದಿಕ್ ಪಾಂಡ್ಯ ಸಿ ಕಮಿನ್ಸ್ ಬಿ ಜೋಸೆಫ್ 4
ಯುವರಾಜ್ ಸಿಂಗ್ ಸಿ ಹೋಪ್ ಬಿ ಹೋಲ್ಡರ್ 14
ಎಂಎಸ್ ಧೋನಿ ಔಟಾಗದೆ 13
ಕೇದಾರ್ ಜಾಧವ್ ಔಟಾಗದೆ 13
ಇತರ: 13
ಒಟ್ಟು (43 ಓವರ್‌ಗಳಲ್ಲಿ 5 ವಿಕೆಟಿಗೆ) 310
ವಿಕೆಟ್ ಪತನ: 1-114, 2-211, 3-223, 4-254, 5-285
ಬೌಲಿಂಗ್:
ಅಲ್ಜಾರಿ ಜೋಸೆಫ್ 8-0-73-2
ಜಾಸನ್ ಹೋಲ್ಡರ್ 8.5-0-76-1
ಆ್ಯಶೆÉ ನರ್ಸ್ 9-0-38-1
ದೇವೇಂದ್ರ ಬಿಶೂ 9-0-60-0
ಮಿಗ್ಯುಯೆಲ್ ಕಮಿನ್ಸ್ 8-0-57-1
ಜೊನಾಥನ್ ಕಾರ್ಟರ್ 0.1-0-2-0
ವೆಸ್ಟ್‌ಇಂಡೀಸ್
ಕೈರನ್ ಪೊವೆಲ್ ಸಿ ಧೋನಿ ಬಿ ಕುಮಾರ್ 0
ಶೈ ಹೋಪ್ ಎಲ್‌ಬಿಡಬ್ಲ್ಯು ಬಿ ಕುಲದೀಪ್ 81
ಜೆ. ಮೊಹಮ್ಮದ್ ಸಿ ಪಾಂಡ್ಯ ಬಿ ಕುಮಾರ್ 0
ಎವಿನ್ ಲೆವಿಸ್ ಸ್ಟಂಪ್ಡ್ ಧೋನಿ ಬಿ ಕುಲದೀಪ್ 21
ಜೊನಾಥನ್ ಕಾರ್ಟರ್ ಎಲ್‌ಬಿಡಬ್ಲ್ಯು ಬಿ ಅಶ್ವಿನ್ 13
ಜಾಸನ್ ಹೋಲ್ಡರ್ ಸ್ಟಂಪ್ಡ್ ಧೋನಿ ಬಿ ಕುಲದೀಪ್ 29
ರೋಸ್ಟನ್ ಚೇಸ್ ಔಟಾಗದೆ 33
ಆ್ಯಶೆÉ ನರ್ಸ್ ಔಟಾಗದೆ 19
ಇತರ: 9
ಒಟ್ಟು (43 ಓವರ್‌ಗಳಲ್ಲಿ 6 ವಿಕೆಟಿಗೆ) 205
ವಿಕೆಟ್ ಪತನ: 1-0, 2-4, 3-93, 4-112, 5-132, 6-174
ಬೌಲಿಂಗ್:
ಭುವನೇಶ್ವರ್ ಕುಮಾರ್ 5-1-9-2
ಉಮೇಶ್ ಯಾದವ್ 6-0-36-0
ಹಾರ್ದಿಕ್ ಪಾಂಡ್ಯ 9-0-32-0
ಆರ್. ಅಶ್ವಿನ್ 9-0-47-1
ಕುಲದೀಪ್ ಯಾದವ್ 9-0-50-3
ಯುವರಾಜ್ ಸಿಂಗ್ 5-0-25-0
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.