ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ ಪ್ರಕಟ
Team Udayavani, Jun 27, 2017, 3:45 AM IST
ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾವು ತಂಡವನ್ನು ಪ್ರಕಟಿಸಿದೆ.ಆರಂಭಿಕ ಆಟಗಾರ ಹೈನೊ ಕುನ್ ಸಹಿತ ತಂಡದಲ್ಲಿ ಮೂವರು ಹೊಸ ಆಟಗಾರರಿದ್ದಾರೆ. ಆ್ಯಂಡಿಲ್ ಪೆಹ್ಲುಕ್ವಾಯೊ ಮತ್ತು ಐಡೆನ್ ಮಾರ್ಕ್‌ರಾಮ್ ಇನ್ನಿಬ್ಬರು. ಸ್ಟೀಫನ್ ಕುಕ್ ಮತ್ತು ವೇನ್ ಪಾರ್ನೆಲ್ ಅವರನ್ನು ಕೈಬಿಡಲಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ವೇಳೆ ತಂಡದಲ್ಲಿದ್ದ ಡ್ಯಾನ್ ಪೀಡ್¤ ಅವರು ಕೂಡ ತಂಡದಲ್ಲಿ ಕಾಣಿಸಿಲ್ಲ. ಕೇಶವ್ ಮಹರಾಜ್ ಒಬ್ಬರೇ ನುರಿತ ಸ್ಪಿನ್ನರ್ ಆಗಿದ್ದಾರೆ.
ವಿಕೆಟ್‌ಕೀಪರ್ ಕೂಡ ಆಗಿರುವ ಕುನ್ ಲಂಡನ್‌ನಲ್ಲಿ ಟೆಸ್ಟ್‌ಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ. ಫಾ ಡು ಪ್ಲೆಸಿಸ್ ಬದಲಿಗೆ ಮಾರ್ಕ್‌ರಾಮ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ಟೆಸ್ಟ್ ನಾಯಕ ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ. ಒಂದು ವೇಳೆ ಪ್ಲೆಸಿಸ್ ಪಂದ್ಯ ಆರಂಭವಾಗುವ ಸಮಯದೊಳಗೆ ಇಂಗ್ಲೆಂಡಿಗೆ ಮರಳದಿದ್ದರೆ ಅವರ ಅನುಪಸ್ಥಿತಿಯಲ್ಲಿ ಡೀನ್ ಎಲ್ಗರ್ ತಂಡವನ್ನು ಮುನ್ನಡೆಸಲಿದ್ದಾರೆ.
ಜೂ. 29ರಿಂದ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುವ ಅಭ್ಯಾಸ ಪಂದ್ಯದಲ್ಲಿ ಎಲ್ಗರ್ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಜುಲೈ 6ರಿಂದ 10ರ ವರೆಗೆ ನಡೆಯಲಿದೆ.
ತಂಡಕ್ಕೆ ಆಯ್ಕೆಯಾಗಿರುವ ಪೆಹ್ಲುಕ್ವಾಯೊ ಕೇವಲ 24 ಪ್ರಥಮ ದರ್ಜೆ ಪಂದ್ಯವನ್ನಾಡಿದ್ದಾರೆ. ಅವುರ ಪಾರ್ನೆಲ್ ಬದಲಿಗೆ ಎರಡನೇ ಆಲ್‌ರೌಂಡರ್ ಆಗಿ ತಂಡವನ್ನು ಸೇರಿದ್ದಾರೆ. ಹಾಶಿಮ್ ಆಮ್ಲ, ತೆಂಬ ಬವುಮ ಮತ್ತು ಡ್ಯುಮಿನಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್ (ನಾಯಕ), ಹಾಶಿಮ್ ಆಮ್ಲ, ತೆಂಬ ಬವುಮ, ತ್ಯುನಿಸ್ ಡಿ ಬ್ರುನ್, ಕ್ವಿಂಟನ್ ಡಿ ಕಾಕ್, ಜೀನ್‌ಪಾಲ್ ಡ್ಯುಮಿನಿ, ಡೀನ್ ಎಲ್ಗರ್, ಹೈನೊ ಕುನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್‌ರಾಮ್, ಮಾರ್ನೆ ಮಾರ್ಕೆಲ್, ಕ್ರಿಸ್ ಮೊರಿಸ್, ಡುವಾನೆ ಆಲಿವರ್, ಆ್ಯಂಡಿಲ್ ಪೆಹ್ಲುಕ್ವಾಯೊ, ವೆರ್ನನ್ ಪಿಲಾಂಡರ್, ಕಾಗಿಸೊ ರಬಾಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.