ಚಿತ್ರಮಂದಿರಗಳಲ್ಲಿ ಚಿತ್ರ ನೋಡಿ
Team Udayavani, Jun 27, 2017, 10:28 AM IST
ಬಿ.ಸಿ. ಪಾಟೀಲ್ ಬಹಳ ವರ್ಷಗಳ ನಂತರ ತಮ್ಮ ಬ್ಯಾನರ್‌ನಿಂದ ನಿರ್ಮಿಸಿದ “ಹ್ಯಾಪಿ ನ್ಯೂ ಇಯರ್’ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಆದರೆ, ಚಿತ್ರವು ನಿರೀಕ್ಷೆಯಷ್ಟು ಯಶಸ್ವಿಯಾಗಲಿಲ್ಲ. ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಜನ ಚಿತ್ರಮಂದಿರಕ್ಕೆ ಬಂದು, ಚಿತ್ರ ನೋಡದಿರುವ ಬಗ್ಗೆ ಪಾಟೀಲರಿಗೆ ಬೇಸರವಿದ್ದಂತಿದೆ. ಆ ಬೇಸರವನ್ನು ಇತ್ತೀಚೆಗೆ ಅವರು “ರಾಜ-ಹಂಸ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು.
“ಎಲ್ಲಿಗೆ ಹೋದರೂ ಜನ ಬಂದು ನಿಮ್ಮ ಫೋಟೋನ ಪೇಪರ್‌ನಲ್ಲಿ ನೋಡಿದ್ವಿ, ನಿಮ್ಮ ಕಾರ್ಯಕ್ರಮನ “ಮಜಾ ಟಾಕೀಸ್’ನಲ್ಲಿ ನೋಡಿದ್ವಿ ಅಂತಾರೆ. ನಮ್ಮನ್ನ ಟಿವಿಯಲ್ಲಿ, ಪೇಪರ್‌ನಲ್ಲಿ ನೋಡುತ್ತಿದ್ದಾರೆಯೇ ಹೊರತು, ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಿಲ್ಲ. ಹೀಗಾದರೆ ಆಗುವುದಿಲ್ಲ. ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದರಷ್ಟೇ, ನಿರ್ಮಾಪಕನಿಗೆ ಒಂದಿಷ್ಟು ದುಡ್ಡು ಬರೋಕೆ ಸಾಧ್ಯ.
ನಿರ್ಮಾಪಕರು ಹಾಗೆ ದುಡ್ಡು ನೋಡಿದಾಗಲಷ್ಟೇ ಇನ್ನಷ್ಟು ಸಿನಿಮಾಗಳು ಬರುವುದಕ್ಕೆ ಸಾಧ್ಯ. ಬರೀ ಟಿವಿ, ಪೇಪರ್‌ನಲ್ಲಿ ನೋಡಿದರೆ ಆಗದು, ಚಿತ್ರಮಂದಿರಕ್ಕೂ ಜನ ಬರಬೇಕು’ ಎಂದರು ಬಿ.ಸಿ. ಪಾಟೀಲ್. ಪಾಟೀಲರ ಮನವಿಯನ್ನು ಪುರಸ್ಕರಿಸಿ, ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಾರಾ ಎಂದು ಇನ್ನಾದರೂ ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.