ಶುದ್ದಿಗೆ 100ರ ಸಂಭ್ರಮ
Team Udayavani, Jun 27, 2017, 10:28 AM IST
ಹೊಸ ಪ್ರಯೋಗದ ಚಿತ್ರವಾಗಿ ಸುದ್ದಿಯಾದ “ಶುದ್ಧಿ’ ಚಿತ್ರ 100 ದಿನ ಪೂರೈಸಿದೆ. ಅದು ಮಲ್ಟಿಪ್ಲೆಕ್ಸ್ನಲ್ಲಿ. ಚಿತ್ರ ನೂರು ದಿನ ಪೂರೈಸಿದ ಖುಷಿಯನ್ನು ಚಿತ್ರತಂಡ ಜೊತೆಯಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿತು. ಈ ಚಿತ್ರವನ್ನು ಆದರ್ಶ್ ಈಶ್ವರಪ್ಪ ನಿರ್ದೇಶಿಸಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರ ನೂರು ದಿನ ಪೂರೈಸಿದ ಖುಷಿ ಅವರಲ್ಲಿತ್ತು.
ಸಿನಿಮಾಕ್ಕೆ ಬೆಂಬಲಿಸಿದ ಎಲ್ಲರನ್ನು 100 ದಿನ ಸಂಭ್ರಮದಲ್ಲಿ ನೆನಪಿಸಿಕೊಂಡರು ಆದರ್ಶ್. ಈ ಚಿತ್ರವನ್ನು ಮಾದೇಶ ಭಾಸ್ಕರ್ ನಿರ್ಮಿಸಿದ್ದಾರೆ. ಅವರಿಗೆ ಒಳ್ಳೆಯ ಸಿನಿಮಾ ನಿರ್ಮಿಸಿದ ಖುಷಿ ಇದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರಂತೆ. ಚಿತ್ರವೇನೋ ನೂರು ದಿನ ಓಡಿದೆ.
ಹಾಕಿದ ಬಂಡವಾಳ ವಾಪಾಸ್ ಬಂತಾ ಎಂಬ ಪ್ರಶ್ನೆ ಬರಬಹುದು. “ಇಲ್ಲ’ ಎಂಬ ಉತ್ತರ ಬರುತ್ತದೆ ಅವರಿಂದ. “ಕೋಟಿಗಟ್ಟಲೇ ಹಾಕಿ ಕೆಟ್ಟ ಸಿನಿಮಾ ಮಾಡುವ ಬದಲು ಮೀಡಿಯಂ ಬಜೆಟ್ನಲ್ಲಿ ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಚಿತ್ರದ ಡಬ್ಬಿಂಗ್, ಸ್ಯಾಟ್ಲೆçಟ್, ರೀಮೇಕ್ ರೈಟ್ಸ್ ಮಾರಾಟವಾದರೆ ಹಾಕಿದ ಬಂಡವಾಳ ವಾಪಾಸ್ ಬರುತ್ತದೆ.
ಏಕೆಂದರೆ ನಾವು ಈ ಸಿನಿಮಾನಾ ಕಡಿಮೆ ಬಜೆಟ್ನಲ್ಲಿ ಮಾಡಿಲ್ಲ. ಕಥೆ ಏನು ಬೇಡುತ್ತೋ ಅದನ್ನು ಕೊಟ್ಟಿದ್ದೇವೆ’ ಎನ್ನುವುದು ಮಾದೇಶ ಅವರ ಮಾತು. ಅದೇನೇ ಆದರೂ ಅವರಿಗೆ ಒಳ್ಳೆಯ ಸಿನಿಮಾ ಮಾಡಿದ ಖುಷಿಯಂತೂ ಇದೆ. ಚಿತ್ರದಲ್ಲಿ ನಟಿಸಿದ ನಿವೇದಿತಾ ಸೇರಿದಂತೆ ಇಡೀ ಚಿತ್ರತಂಡ “ಶುದ್ಧಿ’ಯ 100ರ ಸಂಭ್ರಮ ಆಚರಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.