ವಚನ ಸಾಹಿತ್ಯ ಓದಿನೊಂದಿಗೆ ಪಾಲಿಸಿ: ಡಾ|ಪಟ್ಟಣಶೆಟ್ಟಿ
Team Udayavani, Jun 27, 2017, 11:59 AM IST
ಧಾರವಾಡ: ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಚಿಂತನೆ ಕೊಡಬಲ್ಲ ವಚನ ಸಾಹಿತ್ಯವನ್ನು ಓದುವುದಷ್ಟೇ ಅಲ್ಲದೇ ಅಳವಡಿಕೆಗೂ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಮುರುಘಾಮಠದಲ್ಲಿ ಸೋಮವಾರ ನಡೆದ ಲಿಂ| ತ್ರಿವಿಧ ದಾಸೋಹ ಮೂರ್ತಿ ಶ್ರೀ ಮಹಾಂತಪ್ಪಗಳ 24ನೇ ಸ್ಮರಣೋತ್ಸವದಲ್ಲಿ ಐದು ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮೊಳಗೆ ನಾವು ಬೆಳಕು ಕಂಡಾಗ ಮಾತ್ರ ನಮ್ಮೆದುರಿಗೆ ಬೆಳಗು ಕಂಡು ಬರುತ್ತದೆ. ಅಂತಹ ಸಾತ್ವಿಕ ಚಿಂತನೆಗಳ ಸಾಹಿತ್ಯದ ಮೂಲಕ ಹೊರಗಣ ಬೆಳಕನ್ನು ಕಾಣುವಂತಾಗಬೇಕು. ವಚನಕಾರರು ತಮ್ಮ ಅನುಭವದ ಮೇಲೆ ಬರೆದ ವಚನಗಳನ್ನು ವಿಶೇಷವಾಗಿ ವಿವರಿಸಿ ಅವುಗಳ ಮೌಲ್ಯಗಳನ್ನು ಹೆಚ್ಚಿಸಿದ ಕಾರಣ ಅವು ಷಟಸ್ಥಲ ರೂಪಗಳನ್ನು ಪಡೆದುಕೊಂಡವು.
ಮೌಲ್ಯಯುತ ಅನುಭಾವದ ವಿಷಯಗಳು ವಚನ ಸಾಹಿತ್ಯದ ಮೂಲಕ ಜನಮನ ತಲುಪಿ ಪ್ರಸಾರವಾದವು. ನಾವು ಕೂಡ ವಚನಗಳನ್ನು ಓದಿ ಅವುಗಳನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ವಚನ ಸಾಹಿತ್ಯ ರಚನೆ ಮಾಡುವಂತಹ ಶಕ್ತಿ ಯುವ ಜನರಿಗೆ ಬರಬೇಕು ಎಂದರು. ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮಹಾಂತಪ್ಪಗಳು ಈ ನಾಡು ಕಂಡ ಮಹಾನ್ ಚೇತನರು.
ಶ್ರೀ ಮೃತ್ಯುಂಜಯಪ್ಪಗಳ ಕಾರುಣ್ಯದ ಶಿಶುವಾಗಿ ಪರಮ ಶಿಷ್ಯರಾಗಿ ಸಾತ್ವಿಕ ಬದುಕನ್ನು ಸಾಗಿಸಿ ಸ್ವಾಮಿತ್ವಕ್ಕೆ ಒಂದು ಅಪೂರ್ವ ಮಾದರಿಯಾಗಿದ್ದರು. ಅವರ ಆಶಯದಂತೆ ಇಂದು ಕೂಡ ಶ್ರೀ ಮಠವು ಅದೇ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದೆ. ಮುಂಬರುವ ಜನೇವರಿಯಲ್ಲಿ ಶ್ರೀಮಠವು ಶತಮಾನ ಆಚರಿಸಿಕೊಳ್ಳುತ್ತಿದ್ದು, ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರ ಮಾರ್ಗದರ್ಶನಲ್ಲಿ ಮಹತ್ವದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಯಾವುದೇ ಸೌಲಭ್ಯ ಹೊಂದಿರದ ಈ ನಾಡಿನಲ್ಲಿ ಶ್ರೀ ಮೃತ್ಯುಂಜಯಪ್ಪಗಳು ಮುರುಘಾಮಠದಲ್ಲಿ ಜ್ಞಾನ ಹಾಗೂ ಅನ್ನ ದಾಸೋಹ ನೆರವೇರಿಸಿ ಅನೇಕರಿಗೆ ಶಿಕ್ಷಣ ನೀಡುವುದಲ್ಲದೇ ಜ್ಞಾನದ ಹಸಿವನ್ನು ನೀಗಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಕಾಯಕ ದಾಸೋಹದ ಮಹತ್ವದ ಅರಿವನ್ನು ನಾಡಿಗೂ ಪರಿಚಯಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಸಂಸ್ಥಾನ ಮಠದ ಫಕೀರಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಹಾಂತಪ್ಪಗಳು ಮಾತೃ ಹೃದಯಿಯಾಗಿದ್ದರು. ಗುರುಭಕ್ತಿ, ಲಿಂಗನಿಷ್ಠೆ, ಜಂಗಮ ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ಮೃತ್ಯುಂಜಯಪ್ಪಗಳದ್ದು ಅಲ್ಲಮಪ್ರಭುವಿನ ಗಾಂಭಿರ್ಯದ ನಿಲುವು. ಆದರೆ ಮಹಾಂತಪ್ಪಗಳದ್ದು ಬಸವಣ್ಣನವರಂತೆ ಸದುವಿನಯ ತುಂಬಿದ ಭಕ್ತಿ ಪಾರಮ್ಯದ ನಿಲುವಾಗಿತ್ತು ಎಂದರು.
ಮಲ್ಲಿಕಾರ್ಜುನ ಸ್ವಾಮೀಜಿ, ಗುದೆಶ್ವರ ಸ್ವಾಮೀಜಿ, ಡಾ| ಶಂಭುಲಿಂಗ ಹೆಗಡಾಳ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ನಾಗರಾಜ ದ್ಯಾಮನಕೊಪ್ಪ, ಡಾ| ವೀರಣ್ಣ ರಾಜೂರ, ನಾಗರಾಜ ಪಟ್ಟಣಶೆಟ್ಟಿ ಇದ್ದರು. ಡಾ| ಮಲ್ಲು ಗಾಣಗೇರ ನಿರೂಪಿಸಿ, ಸ್ವಾಗತಿಸಿದರು. ಸಮಾರಂಭದಲ್ಲಿ ದಾಸೋಹಿಗಳನ್ನು ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.