ಜಗತ್ತಿನ 2ನೇ ಅತಿ ದೊಡ್ಡ ನಗರ ಪಾಲಿಕೆ


Team Udayavani, Jun 27, 2017, 3:47 PM IST

kemp8.jpg

ಯಲಹಂಕ ಪ್ರಭು ಕೆಂಪೇಗೌಡರು 1537ರಲ್ಲಿ  ಸಾಕಾರಗೊಳಿಸಿದ್ದ ಬೆಂಗಳೂರು ಎಂಬ ವಿನೂತನ ನಗರ ಐದನೆಯ ಶತಮಾನದತ್ತ ಮುನ್ನುಗ್ಗಿ ಸಾಗುತ್ತಿದೆ. ಬೆಂಗಾವಲೂರು ಅಥವಾ ಬೆಂದಕಾಳೂರಿನ ಇತಿಹಾಸ ಕೇವಲ ಐದು ಶತಮಾನಗಳಿಗೆ ಸೀಮಿತವಾಗಿಲ್ಲ. ಐದು ಸಾವಿರ ವರ್ಷಗಳಿಗೂ ಹಿಂದೆ ಹೋಗುತ್ತದೆ. ಇಂದು ವಿಶ್ವದ ಅಗ್ರಮಾನ್ಯ ಪಟ್ಟಣಗಳಲ್ಲಿ ಒಂದಾಗಿ ಬೆಳೆದಿರುವ ಬೆಂಗಳೂರು ಬೃಹತ್‌ ನಗರವಾಗಿ ಜಗತ್ತಿನ ಎರಡನೇ ಅತಿ ದೊಡ್ಡ ನಗರ ಪಾಲಿಕೆ ಎನಿಸಿದೆ. ಒಂದು ಕಾಲದಲ್ಲಿ ಈ ನಗರಕ್ಕೆ ನಿವೃತ್ತರ ಸ್ವರ್ಗ ಎಂಬ ಹೆಸರು ಕೂಡ ಇತ್ತು.

ಇಂತಹ ಮಹಾನಗರಕ್ಕೆ 1862ರಲ್ಲಿ ಮೊತ್ತ ಮೊದಲ ಮುನ್ಸಿಪಾಲಿಟಿ ಆರಂಭವಾಗಿತ್ತು. ಕಂಟೋನ್ಮೆಂಟ್‌ ಪ್ರದೇಶಕ್ಕೆ ಪ್ರತ್ಯೇಕ ಮಿನ್ಸಿಪಲ್‌ ಬೋರ್ಡ್‌ ರಚನೆಯಾಗಿತ್ತು. 1949ರಲ್ಲಿ ಬೆಂಗಳೂರು ಪಟ್ಟಣ ಮತ್ತು ಕಂಟೋನ್ಮೆಂಟ್‌ ಪ್ರದೇಶಗಳನ್ನು ಸೇರಿಸಿ ಬೆಂಗಳೂರು ಸಿಟಿ ಕಾರ್ಪೋರೇಷನ್‌ ಸ್ಥಾಪನೆಯಾಗಿತ್ತು. 2007ರ ಏಪ್ರಿಲ್‌ನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳು, ಏಳು ಸಿಟಿ ಮುನ್ಸಿಪಾಲಿಟಿ ಕೌನ್ಸಿಲ್‌ಗ‌ಳು, ಒಂದು ಟೌನ್‌ ಮುನ್ಸಿಪಲ್‌ ಕೌನ್ಸಿಲ್‌ ಹಾಗೂ ಸುತ್ತಲಿನ 111 ಹಳ್ಳಿಗಳನ್ನು ಸೇರಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ 198 ವಾರ್ಡ್‌ಗಳು ರಚನೆಯಾದವು.

20ನೇ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಭರದಿಂದ ಬೆಳೆಯಿತು. ಈ ತನಕ ದಕ್ಷಿಣ ಭಾರತದ ವಲಸೆಗಾರರನ್ನು ಮಾತ್ರ ಕಂಡಿದ್ದ ಬೆಂಗಳೂರಿನಲ್ಲಿ ಉತ್ತರ ಭಾರತೀಯರೂ ತುಂಬಿಕೊಂಡರು. ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಮುಗಿಲೆತ್ತರಕ್ಕೆ ಬೆಳೆಯಿತು. ಹಲವಾರು ಸಾಮಾಜಿಕ ಏರುಪೇರುಗಳಿಗೆ ಈ ಬದಲಾವಣೆ ಕಾರಣವಾಯಿತು. 1978ರಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಸ್ಥಾಪನೆಯಾದ ಬಳಿಕ ಅಲ್ಲಿ ಭಾರತದ ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ವೇರ್‌ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಕೇಂದೀÅಕೃತವಾಗಿರುವ ಕಾರಣ ಬೆಂಗಳೂರನ್ನು ಭಾರತದ ಸಿಲಿಕಾನ್‌ ವ್ಯಾಲಿ ಎಂದು ಕರೆಯಲಾಯಿತು. ವಿಭಿನ್ನ ತಂತ್ರಜ್ಞಾನ ಉದ್ಯಮಗಳಿಂದಾಗಿ ನಿರಂತರ ಬೆಳವಣಿಗೆಯಿಂದಾಗಿಯೇ ಬೆಂಗಳೂರು ನಿವೃತ್ತರ ಊರಿನ ಹಳೆಕಾಲದ ತಲೆಪಟ್ಟಿ ಕಳಚಿಕೊಂಡು ಭಾರತದ ಸಿಲಿಕಾನ್‌ ಕಣಿವೆ ಎಂಬ ಹೊಸ ಹೆಸರು ಪಡೆದುಕೊಂಡಿತು.

ನಗರ ಬೆಳೆಯುತ್ತ ಹೋದಂತೆ ಉಲ್ಬಣವಾಗುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುತ್ತಾ 49 ಮಂದಿ ಮಹಾಪೌರರನ್ನು ಕಂಡಿರುವ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತುತ 50ನೇ ಮೇಯರ್‌ ಆಗಿ ಶ್ರೀಮತಿ ಪದ್ಮಾವತಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮುಂದೆಯೂ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯ ಸರ್ಕಾರ ಈ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ ಬಿಬಿಎಂಪಿಗೆ 7300 ಕೋಟಿ ರೂ. ಬಿಡುಗಡೆ ಮಾಡಿದೆ. ಇದುವರೆಗೂ ಯಾವುದೇ ಸರ್ಕಾರ ಇಷ್ಟು ಅನುದಾನ ಬಿಡುಗಡೆ ಮಾಡಿರಲಿಲ್ಲ ಎಂಬುದು ಗಮನಾರ್ಹ.

ಗೊಬ್ಬರ ತಯಾರಿಸುವ ವಿಧಾನ: ನಗರದ ಅಪಾರ್ಟ್‌ಮೆಂಟ್‌ ಸಮುತ್ಛಯಗಳಲ್ಲಿ ಉತ್ಪತ್ತಿಯಾಗುತ್ತಿರುವ ಕಸದಿಂದ ಸಾವಯವ ಗೊಬ್ಬರ ತಯಾರಿಸಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಬೇರೆಡೆ ಸಾಗಿಸುವಂತಿಲ್ಲ. ಅಲ್ಲೇ ಗೊಬ್ಬರ ತಯಾರಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಗರದಲ್ಲಿ ಪ್ರತಿದಿನ 3,500 ಟನ್‌ ಕಸ ಉತ್ಪತ್ತಿಯಾಗುತ್ತಿದೆ.

ಈಗ ಅದರ ಅರ್ಧದಷ್ಟು ಕಸ ವಿಂಗಡಣೆಯಾಗುತ್ತಿದೆ. ನಗರದಲ್ಲಿ ಕುಡಿಯುವ ನೀರಿಗಾಗಿಯೇ 86 ಕೋಟಿ ರೂ. ಮೀಸಲಿಸಲಾಗಿದೆ. 110 ಹಳ್ಳಿಗಳ ವ್ಯಾಪ್ತಿಯ ಪಾಲಿಕೆ ಸದಸ್ಯರಿಗೂ ಅನುದಾನ ಲಭ್ಯವಿದೆ. ಕೊಳವೆಬಾವಿ ಅಥವಾ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ, ಪ್ರದೇಶವಾರು ಅಗತ್ಯವಿರುವ ಕ್ರಮಗಳನ್ನು ಸದಸ್ಯರು ಕೈಗೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಅವರು ಹೇಳಿದ್ದಾರೆ. 

ಬದಲಾಗಲಿದೆ ನಗರ, ಪೌರ ಸಂಸ್ಥೆಗಳ ವಾರ್ಡ್‌ ನಕ್ಷೆ
ಸದ್ಯದಲ್ಲೇ ನಗರಪಾಲಿಕೆ, ನಗರಸಭೆ, ಪುರಸಭೆಗಳ ಕ್ಷೇತ್ರ ಮರುವಿಂಗಡಣೆಗೆ ಜೊತೆಯಲ್ಲಿ ಮೀಸಲು ಕೂಡ ಬದಲಾಗಲಿದೆ. ವಾರ್ಡ್‌ಗಳು ಶೇ.10 ರಷ್ಟು ಹೆಚ್ಚುವ ಸಾಧ್ಯತೆ ಇದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಸರ್ಕಾರ ನಿರ್ಧರಿಸಿದ್ದು, ಸದ್ಯದಲ್ಲೇ ಪಾಲಿಕೆ, ನಗರಸಭೆ, ಪುರಸಭೆಗಳ ಸ್ವರೂಪ ಬದಲಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್‌) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ.

ಮುಂದಿನ ವರ್ಷ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ 209 ಸ್ಥಳೀಯ ಸಂಸ್ಥೆಗಳನ್ನು 2011ರ ಜನಗಣತಿ ಆಧರಿಸಿ ಪುನರ್‌ ವಿಂಗಡಣೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಚುನಾವಣೆ ಆಯೋಗದ ಅಧಿಕಾರಿಗಳು ಎರಡು ಸಭೆಗಳನ್ನೂ ನಡೆಸಿದ್ದು, ಪುನರ್‌ ವಿಂಗಡಣೆ ಮಾಡುವುದಕ್ಕೆ ತೀರ್ಮಾನವನ್ನೂ ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರ ಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದ್ದು, ಅನಂತರದಲ್ಲಿ ಪ್ರಕ್ರಿಯೆ ಆರಂಭವಾಗಲಿದೆ.

ಇದರೊಂದಿಗೆ ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್‌) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ. ಇದರ ಪರಿಣಾಮ ನಗರ, ಸ್ಥಳೀಯ ಸಂಸ್ಥೆಗಳ ರಚನೆ, ಸ್ವರೂಪ ಮತ್ತು ಮೀಸಲಾತಿ ಎಲ್ಲವೂ ಬದಲಾಗಲಿದೆ. ಅಂದರೆ, ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ 5 ರಿಂದ 8 ಕ್ಷೇತ್ರಗಳು ಹೆಚ್ಚುವರಿ ರಚನೆಯಾಗಲಿದ್ದು, ಸದ್ಯ ಇರುವ ರಾಜ್ಯದ ಎಲ್ಲ ಸಂಸ್ಥೆಗಳ ಕ್ಷೇತ್ರಗಳ (ವಾರ್ಡ್‌) ಸಂಖ್ಯೆ 4,976ರ ಬದಲು 5,500ಕ್ಕೆ ಹೆಚ್ಚಾದರೂ ಅಚ್ಚರಿ ಇಲ್ಲ.

* ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳು, ಏಳು ಸಿಟಿ ಮುನ್ಸಿಪಾಲಿಟಿ ಕೌನ್ಸಿಲ್‌ಗ‌ಳು, ಒಂದು ಟೌನ್‌ ಮುನ್ಸಿಪಲ್‌ ಕೌನ್ಸಿಲ್‌ ಹಾಗೂ ಸುತ್ತಲಿನ 111 ಹಳ್ಳಿಗಳನ್ನು ಸೇರಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ 198 ವಾರ್ಡ್‌ಗಳು ರಚನೆಯಾದವು.

* ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್‌) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ. 

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.