ಕನ್ನಡ್ಕದೊಳಗಿಂದ ಕಾಂತೈತೆ ಆ ಚೆಂದ!


Team Udayavani, Jun 28, 2017, 3:45 AM IST

glass.jpg

ಈವರೆಗೂ ಬಿಳಿ, ಕಂದು ಹಾಗೂ ಕಪ್ಪು ಬಣ್ಣದ ಫ್ರೆಮ್ಗಳನ್ನು ಮಾತ್ರ ಕಾಣಬಹುದಿತ್ತು. ಆದರೆ ಈಗ ವಿವಿಧ ಪ್ರಾಣಿಗಳ ಮೈ ಬಣ್ಣವನ್ನೂ ಫ್ರೆಮ್ನಲ್ಲಿ ಬಳಸಿ ಒಂದು ಹೊಸ ಟ್ರೆಂಡ್‌ ಸೃಷ್ಟಿಸಲಾಗಿದೆ. 

ಹಿಂದೆಲ್ಲ ದಪ್ಪ ಫ್ರೆಮಿನ ಕನ್ನಡಕಗಳು ಫ್ಯಾಷನೇಬಲ್ ಆಗಿದ್ದವು. ನಂತರ ಆ ಜಾಗಕ್ಕೆ ಚಿಕ್ಕ ಫ್ರೆಮ್ ಕನ್ನಡಕಗಳು ಬಂದವು. ತದನಂತರ ದೊಡ್ಡ ಗ್ಲಾಸ್‌ಗಳು ಫ್ಯಾಷನ್‌ಲೋಕಕ್ಕೆ ಪಾದಾರ್ಪಣೆ ಮಾಡಿದವು. ಅದಾದ ಬಳಿಕ ಫ್ರೆಮ್ ಇಲ್ಲದ ಬರೀ ಗ್ಲಾಸ್‌ ಉಳ್ಳ ಕನ್ನಡಕಗಳು ಎಲ್ಲೂ ಕಾಣಿಸಿಕೊಳ್ಳಲು ಶುರುವಾದವು. ಹೀಗೆ ಫ್ಯಾಷನ್‌ ಲೋಕದಲ್ಲಿ ಅದೆಷ್ಟೋ ಪ್ರಕಾರದ ಕನ್ನಡಕಗಳು ಬಂದವು, ಹೋದವು. ಆದರೆ ಬಹು ಕಾಲದಿಂದ ಫ್ಯಾಷನ್‌ ಲೋಕದಲ್ಲಿ ಗಟ್ಟಿಯಾಗಿ ಉಳಿದ ಕನ್ನಡಕ ಎಂದರೆ ಏವಿಯೇಟರ್. ಹಲವು ಬ್ರಾಂಡ್ಗಳು ಏವಿಯೇಟರ್ ತಯಾರಿಸಿದರೂ ರೇಬ್ಯಾನ್‌ ಬ್ರಾಂಡ್‌ನ‌ ಏವಿಯೇಟರ್ ಇಂದಿಗೂ ಜನಪ್ರಿಯ. ಏವಿಯೇಟರ್ ಬಿಟ್ಟರೆ ಬಹುತೇಕ ಜನರು ಬಳಸುವ ಕನ್ನಡಕ ಎಂದರೆ “ವೇಯ್‌ಫೇರರ್’. ಇವೆರಡು ಪ್ರಕಾರದ ಕನ್ನಡಕಗಳು ಫ್ಯಾಷನ್‌ ಪ್ರೇಮಿಗಳ ವಾರ್ಡ್‌ರೋಬ್ನಲ್ಲಿ ಇದ್ದೇ ಇರುತ್ತವೆ. ಯಾಕೆ ಅಂತೀರಾ? ಇವೆರೆಡೂ, ಎಲ್ಲಾ ರೀತಿಯ ಉಡುಪಿನೊಂದಿಗೆ ಮ್ಯಾಚ್‌ ಆಗುತ್ತವೆ. 

ಸಿನಿಮಾ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು, ಅಧಿಕಾರಿಗಳು, ಮಾಡೆಲ್ಗಳು ಸೇರಿದಂತೆ ಎಲ್ಲರೂ ಇವನ್ನು ತೊಟ್ಟಿದ್ದಾರೆ. ಇವುಗಳ ಬಣ್ಣಗಳಲ್ಲಿ ಪ್ರಯೋಗಗಳು ನಡೆದವಷ್ಟೇ ಹೊರತು, ಬೇರೇನೂ ಆವಿಷ್ಕಾರವಾಗಿಲ್ಲ. ಆದರೀಗ ಫ್ಯಾಷನ್‌ ಮಾಂತ್ರಿಕರು, ಏವಿಯೇಟರ್ ಮತ್ತು ವೇಯ್‌ಫೇರರ್ ಅನ್ನು ಹೊರತು ಪಡಿಸಿ, ಹೊಸ- ಹೊಸ ಆಕಾರದ, ವಿನ್ಯಾಸದ ಮತ್ತು ಬಣ್ಣದ ಕನ್ನಡಕಗಳನ್ನು ಪರಿಚಯಿಸಲು ಮುಂದಾಗಿ¨ªಾರೆ. ಹೆಣ್ಣು ಮಕ್ಕಳಷ್ಟೇ ಧರಿಸಬಲ್ಲ ಕ್ಯಾಟ್‌ ಐ ಫ್ರೆಮ್ನ ಕನ್ನಡಕಗಳಲ್ಲಿ ಬಗೆ ಬಗೆಯ ಪ್ರಕಾರಗಳನ್ನು ಹೊರತಂದಿದ್ದಾರೆ. ಫ್ರೆಮ್ಗಳಲ್ಲಿ ಮುತ್ತು, ವಜ್ರದಂಥ ಅಲಂಕಾರಿಕ ಕಲ್ಲುಗಳು, ಗರಿಗಳು ಮತ್ತು ಕ್ಯಾಟ್‌ ಐ ಫ್ರೆಮ್ನಲ್ಲಿ ಅನಿಮಲ… ಪ್ರಿಂಟ್‌ ಬಳಸಿದ್ದಾರೆ. ಚಿರತೆ, ಹುಲಿ, ಹಾವು, ಜೀಬ್ರಾ, ಬೆಕ್ಕು, ಸೇರಿದಂತೆ ಚುಕ್ಕಿ, ಪಟ್ಟೆ ಇರುವ ಪ್ರಾಣಿಗಳ ಮೈಬಣ್ಣವನ್ನು ಕನ್ನಡಕಗಳ ಫ್ರೆಮ್ನಲ್ಲಿ ಬಳಸಿ ಕ್ಯಾಟ್‌ ಐ ಶೈಲಿಗೆ ಹೊಸ ಮೆರುಗು ನೀಡಿದ್ದಾರೆ. 

ಕೇವಲ ಉರುಟು ಆಕಾರ ಅಲ್ಲದೆ ಷಟ್ಕೊàನ, ಪೆಂಟಗನ್‌, ಅಷ್ಟಭುಜ ಆಕಾರದ ಫ್ರೆಮ್ಗಳಲ್ಲೂ ಕನ್ನಡಕಗಳು ಬರತೊಡಗಿವೆ! ಇದರ ಜೊತೆ ನಕ್ಷತ್ರ ಆಕಾರ, ಅರ್ಧ ಚಂದ್ರ, ಸೂರ್ಯ ಹಾಗು ಐಸ್‌ಕ್ರೀಮ… ಕೋನ್‌ ಆಕಾರಗಳಲ್ಲೂ ಕನ್ನಡಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂತಹ ಕನ್ನಡಕ ತೊಟ್ಟು ಮನೆಯಿಂದ ಹೊರಹೋಗಲು ಸಾಧ್ಯವೇ! ಎಂದು ಯೋಚಿಸುವವರಿಗೆ ಆಶ್ಚರ್ಯವಾಗಬಹುದು. ಸದ್ಯದ ಟ್ರೆಂಡ್‌ ಎಂದರೆ ಹೃದಯಾಕಾರದ (ಹಾರ್ಟ್‌ ಶೇಪ್‌) ಕೂಲಿಂಗ್‌ ಗ್ಲಾಸ್‌ಗಳು!

ಖ್ಯಾತ ಲೇಖಕಿ ಜೆ. ಕೆ. ರೌಲಿಂಗ್‌ ಅವರ ಕಾಲ್ಪನಿಕ ಪಾತ್ರ ಹ್ಯಾರಿ ಪಾಟರ್‌ ತೊಡುವ ಕನ್ನಡಕ, ಸುಪ್ರಸಿದ್ಧ ಮ್ಯೂಸಿಕ್‌ಬ್ಯಾಂಡ್‌ “ಬೀಟಲ್ಸ…’ನ ಸಂಗೀತಗಾರ ಜಾನ್‌ ಲೆನನ್‌ ತೊಡುತ್ತಿದ್ದ ಕನ್ನಡಕ, ಮಹಾತ್ಮ ಗಾಂಧಿಯವರು ತೊಡುತ್ತಿದ್ದ ಕನ್ನಡಕ, ಇವೆಲ್ಲವೂ ಹೊಸ ಬಣ್ಣ ಪಡೆದು ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಹ್ಯಾರಿ ಪಾಟರ್‌ ಗ್ಲಾಸಸ್‌, ಜಾನ್‌ ಲೆನನ್‌ ಗ್ಲಾಸಸ್‌, ಗಾಂಧಿ ಗ್ಲಾಸಸ್‌ ಎಂದೇ ಹೆಸರು ಪಡೆದಿರುವ ಇವುಗಳು ಬಹು ಬೇಡಿಕೆಯಲ್ಲಿವೆ. ಇಂಥ ಕನ್ನಡಕಗಳನ್ನು ಪುರುಷರಷ್ಟೇ ಅಲ್ಲದೆ, ಮಹಿಳೆಯರೂ ತೊಡಬಹುದು. ಹ್ಯಾರಿ ಪಾಟರ್‌ ಗ್ಲಾಸಸ್‌ ಮತ್ತು ಜಾನ್‌ ಲೆನನ್‌ ಗ್ಲಾಸಸ್‌ ಯುವಕ- ಯುವತಿಯರಲ್ಲಿ ಜನಪ್ರಿಯ.

ಇನ್ನು ಕೂಲಿಂಗ್‌ ಗ್ಲಾಸ್‌ನ ಜಗತ್ತಿನಲ್ಲಿ ತುಂಬಾ ಸುದ್ದಿ ಮಾಡಿದ ಕನ್ನಡಕ ಎಂದರೆ “ರನ್‌ವೇ ಶೀಲ್ಡ್‌’. ಇತರ ಕನ್ನಡಕಗಳಂತೆ ಬಲಗಣ್ಣಿಗೊಂದು, ಎಡಗಣ್ಣಿಗೊಂದು ಗ್ಲಾಸ್‌ ಅಲ್ಲ. ಬದಲಿಗೆ ಇವು ಒಂದೇ ಗ್ಲಾಸ್‌ನಿಂದ ಮಾಡಲಾಗಿದ್ದು, ಎರಡೂ ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸುತ್ತವೆ. ಕನ್ನಡಕಕ್ಕಿಂತ ಹೆಚ್ಚಾಗಿ ಇದು ಕಣ್ಣಿಗೆ ಲೋಹದ ಪಟ್ಟಿ ತೊಟ್ಟಂತೆ ಕಾಣುತ್ತದೆ. ಅದಕ್ಕೇ ಇದರ ಹೆಸರು ರನ್‌ವೇ ಶೀಲ್ಡ್! ರೋಬೋಕಾಪ್‌, ಸೈಕ್ಲಾಪ್ಸ್, ಐರನ್‌-ಮ್ಯಾನ್‌ರಂಥ ಕಾಮಿಕ್‌ ಪಾತ್ರಗಳು ಈ ರೀತಿಯ ಕನ್ನಡಕಗಳು ಧರಿಸಿರುವುದನ್ನು ನಾವೆಲ್ಲ ನೋಡಿದ್ದೇವೆ. ಸೂಪರ್‌ ಹೀರೋಗಳನ್ನು ಇಷ್ಟ ಪಡುವವರು ಇಂಥ “ರನ್‌ವೇ ಶೀಲ್ಡ್‌’ ತೊಡಲೂ ಇಷ್ಟಪಡುತ್ತಾರೆ. ನಿಮಗೂ ಏವಿಯೇಟರ್ ಅಥವಾ ವೇಯ್‌ಫೇರರ್ ತೊಟ್ಟು, ತೊಟ್ಟು ಬೇಜಾರಾಗಿದ್ದರೆ ಈ ಹೊಸ ಆಯ್ಕೆಗಳಿಂದ ನಿಮಗೊಪ್ಪುವ ಕನ್ನಡಕಗಳನ್ನು ಟ್ರೈ ಮಾಡಿ ನೋಡಬಹುದು.

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.