ಚೀನದ ಹೊಸ ತಲೆಮಾರಿನ ಬೃಹತ್ ನೌಕಾ ವಿನಾಶಕ ಸಮರ ನೌಕೆಗೆ ಚಾಲನೆ
Team Udayavani, Jun 28, 2017, 11:48 AM IST
ಬೀಜಿಂಗ್ : ಜಗತ್ತಿನ ಬೃಹತ್ ನೌಕಾಶಕ್ತಿಯಾಗುವ ಮಹತ್ವಾಕಾಂಕ್ಷೆಯೊಂದಿಗೆ ತನ್ನ ನೌಕಾಪಡೆಯ ವ್ಯಾಪಕ ವಿಸ್ತರಣೆಯನ್ನು ಕೈಗೊಂಡಿರುವ ಚೀನ ಈ ಯೋಜನೆಯ ಅಂಗವಾಗಿ ರೂಪಿಸಿರುವ 10,000 ಟನ್ ಸಾಮರ್ಥ್ಯದ ಹೊಸ ತಲೆಮಾರಿನ “ನೌಕಾ ವಿನಾಶಕ’ ಸಮರ ನೌಕೆಯನ್ನು ಇಂದು ಚಾಲನೆಗೊಳಿಸಿದೆ.
ಚೀನದಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ನೌಕಾ ವಿನಾಶಕ ಸಮರ ನೌಕೆಯನ್ನು ಶಾಂಘೈನಲ್ಲಿನ ಜಿಯಾಂಗ್‌ನನ್ ಹಡಗುಕಟ್ಟೆಯಲ್ಲಿ ಇಂದು ಚಾಲನೆಗೊಳಿಸಲಾಯಿತು.
ಚೀನ ದೇಶೀಯವಾಗಿ ನಿರ್ಮಿಸಿರುವ ಮೊತ್ತ ಮೊದಲ ಹೊಸ ತಲೆಮಾರಿನ ನೌಕಾ ವಿನಾಶಕ ವಾಗಿರುವ ಈ ಸಮರ ನೌಕೆಯು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ, ಕ್ಷಿಪಣಿ ವಿರೋಧಿ ವ್ಯವಸ್ಥೆ ಹಾಗೂ ನೌಕೆ ಮತ್ತು ಜಲಾಂತರ್ಗಾಮಿಯನ್ನು ಹೊಡೆದು ಹಾಕುವ ವಿನಾಶಕ ವ್ಯವಸ್ಥೆಯನ್ನು ಹೊಂದಿದೆ ಎಂದು ಚೀನದ ಸರಕಾರದ ಒಡೆತನದ ಸುದ್ದಿ ಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿದೆ.
ಚೀನವು ಈ ಬೃಹತ್ ವಿನಾಶಕ ನೌಕೆಯನ್ನು ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಭಾರತದ ನೌಕಾ ಶಕ್ತಿಗೆ ಸಡ್ಡು ಹೊಡೆಯಲು ನಿಯೋಜಿಸುವುದೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.