ಸಿಜಿಕೆ ರಂಗಭೂಮಿಯ ದೈತ್ಯ ಪ್ರತಿಭೆ: ಡಾ| ಲಕ್ಷ್ಮಣದಾಸ್
Team Udayavani, Jun 28, 2017, 12:47 PM IST
ದಾವಣಗೆರೆ: ಹವ್ಯಾಸಿ ರಂಗಭೂಮಿಯಲ್ಲಿ ಹಲವಾರು ದಾಖಲೆ ಸೃಷ್ಟಿಸಿದ ಡಾ| ಸಿ.ಜಿ. ಕೃಷ್ಣಸ್ವಾಮಿ ನಾಡಿನ ರಂಗಭೂಮಿ ಕ್ಷೇತ್ರದ ಅತ್ಯದ್ಭುತ ದೈತ್ಯ ಪ್ರತಿಭೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ತುಮಕೂರಿನ ಡಾ| ಲಕ್ಷ್ಮಣದಾಸ್ ಬಣ್ಣಿಸಿದ್ದಾರೆ. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸಿ.ಜಿ.ಕೆ. ಬೀದಿರಂಗ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚಳ್ಳಕೆರೆ ಗೋವಿಂದಪ್ಪ ಕೃಷ್ಣಸ್ವಾಮಿ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಅನನ್ಯ, ಅನುಪಮ ಸೇವೆ ಸಲ್ಲಿಸಿದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಒಳಗೊಂಡಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದವರು ಎಂದರು. ಉತ್ತಮ ಶಿಕ್ಷಣ ಸಿಕ್ಕಾಗ ಸಾಧನೆಯ ಹಾದಿಯಲ್ಲಿ ಅತ್ಯುನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂಬುದಕ್ಕೆ ಸಿ.ಜಿ. ಕೃಷ್ಣಸ್ವಾಮಿ ಸಾಕ್ಷಿ.
ಅವರು ರಂಗಭೂಮಿಯ ಬಗ್ಗೆ ಹೊಂದಿದ್ದ ಅಪಾರ ಒಲವು, ಆಸಕ್ತಿ, ಪೀತಿ, ಭಕ್ತಿ ಮತ್ತು ಶ್ರದ್ಧೆಯ ಕಾರಣದಿಂದಲೇ ಮಾಂತ್ರಿಕಶಕ್ತಿ, ಅದಮ್ಯ ಹಾಗೂ ಶಾಶ್ವತ ಶಕ್ತಿಯಾಗಿ ಬೆಳೆದು, ಉಳಿಯಲಿಕ್ಕೆ ಸಾಧ್ಯವಾಯಿತು ಎಂದು ತಿಳಿಸಿದರು. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಹೆಚ್ಚಿನ ಅಧ್ಯಯನಕ್ಕೆ ಬೆಂಗಳೂರಿಗೆ ತೆರಳಿದ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಕೀರ್ತಿ ಸಂಪಾದಿಸಿದವರು.
ಅಂಗವಿಕಲ ತೆಯ ಸಮಸ್ಯೆಯನ್ನೂ ಮೆಟ್ಟಿ ನಿಂತು ಅಭೂತಪೂರ್ವ ಕೆಲಸ ಮಾಡಿದರು ಎಂದು ಸ್ಮರಿಸಿದರು. 1999- 2002ರ ವರೆಗೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು ಆವರೆಗೆ ಬೆಳಕಿಗೆ ಬರದೇ ಇದ್ದಂತ ಗ್ರಾಮೀಣ ಭಾಗದ ಅನೇಕ ರಂಗಭೂಮಿ ನಟರನ್ನು ಗುರುತಿಸಿ, ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಿದರು. ಅವರು ಈಗಿನವರಂತೆ ಡಾಂಭಿಕ ಕಲಾವಿದರಾಗಿರಲಿಲ್ಲ ಎಂದು ತಿಳಿಸಿದರು.
ಎಡಪಂಥೀಯ ವಿಚಾರಧಾರೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಸಿಜಿಕೆ ಮಠದ ಸಂಸ್ಕೃತಿ ವಿರೋಧಿಸುತ್ತಿದ್ದವರು. ಅಂಥವರು ಸಾಣೇಹಳ್ಳಿಯ ಮಠಕ್ಕೆ ಬಂದು ಶಿವಸಂಚಾರದ ನಿರ್ದೇಶಕರಾಗಿ ಕೆಲಸ ಮಾಡಿದ್ದು ಅಚ್ಚರಿ. ಇಂದಿಗೂ ಸಾಣೇಹಳ್ಳಿಯ ಶ್ರೀಮಠದಲ್ಲಿ ಅವರ ಪ್ರತಿಮೆಯನ್ನಿಟ್ಟಿರುವುದು ಒಬ್ಬ ಕಲಾತಪಸ್ವಿಗೆ ನೀಡಿರುವ ಅತ್ಯುನ್ನತ ಗೌರವ ಎಂದು ಬಣ್ಣಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಟಿ.ಪಿ. ಕೈಲಾಸಂ ನೆನಪಿನ ರಂಗಮಂದಿರದಲ್ಲಿ ನಿರಂತರವಾಗಿ 150 ದಿನಗಳ ಕಾಲ ನಾಟಕ ಪ್ರದರ್ಶನ ನೀಡಿದ ಕೀರ್ತಿ ಸಿಜಿಕೆಗೆ ಸಲ್ಲುತ್ತದೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಅದೊಂದು ಅಪೂರ್ವವಾದ ದಾಖಲೆ. ವೃತ್ತಿ ರಂಗಭೂಮಿಯಲ್ಲಿ 100, 150 ದಿನ ಮಾತ್ರವಲ್ಲ 1 ವರ್ಷದವರೆಗೆ ನಿರಂತರ ನಾಟಕ ಪ್ರದರ್ಶಿಸಿರುವ ನೂರಾರು ಉದಾಹರಣೆ ಇವೆ.
ಆದರೆ, ಅವು ಯಾವುವು ದಾಖಲೆ ಆಗುವುದೇ ಇಲ್ಲ ಎಂದು ವಿಷಾದಿಸಿದರು. ತಮ್ಮ ಸ್ವಂತ ಶಕ್ತಿಯಿಂದ ಬೆಳೆದ ಸಿಜಿಕೆ ರಂಗಭೂಮಿ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಹೊಂದಿದ್ದರು. ಸಮಯಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತಿದ್ದರು. ನಾಟಕ ನೋಡುವುದಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದ ನನಗೆ ನಾಟಕ ನೋಡಲಿಕ್ಕೆ ಅವಕಾಶ ನೀಡರಲಿಲ್ಲ ಎಂದು ಸ್ಮರಿಸಿದರು.
ಸಿಜಿಕೆ ಕನ್ನಡ ನಾಡಿನಲ್ಲಿ ಬೀದಿನಾಟಕಗಳ ಇತಿಹಾಸಕ್ಕೆ ಮುನ್ನುಡಿ ಬರೆದವರು. ಅವರ ಬೆಲ್ಜಿ… ಬೀದಿನಾಟಕ ಪ್ರದರ್ಶನವಾಗದೇ ಇರುವ ಸ್ಥಳವೇ ಇಲ್ಲ. ಅಂತಹ ಮಹಾನ್ ಕಲಾವಿದನ ಸ್ಮರಣೆ ಮಾಡುವ ಜೊತೆಗೆಗ್ರಾಮೀಣ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರು ಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಕರ್ಮಿ ಬಸವರಾಜ ಐರಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ್, ಕೆ.ಎನ್. ಹನುಮಂತಪ್ಪ ಇತರರು ಇದ್ದರು. ಎ. ಸೂರೇಗೌಡರಿಗೆ ಸಿ.ಜಿ.ಕೆ., ಕೆ.ಎಂ. ಕೊಟ್ರಯ್ಯ ಅವರಿಗೆ ಗ್ರಾಮೀಣ ರಂಗಚೇತನ, ಕತ್ತಿಗೆ ಬಸಮ್ಮ ಅವರಿಗೆ ಜಾನಪದ ಹಿರಿಯಜ್ಜಿ, ಸ್ಫೂರ್ತಿ ಸಂಘದ ಎಂ. ಬಸವರಾಜ್‌ಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಬಾನ್ ಎಚ್. ದಾಫ್, ಸದಾನಂದ್, ಎನ್. ಸೋಮಣ್ಣರನ್ನು ಸನ್ಮಾನಿಸಲಾಯಿತು. ಎನ್.ಎಸ್. ರಾಜು ಸ್ವಾಗತಿಸಿದರು. ಸಾರಥಿಯ ಬಿ. ಹನುಮಂತಾಚಾರಿ ಮತ್ತು ಸಂಗಡಿಗರು. ಕರಿಬಂಟನ ಕಾಳಗ… ಬಯಲಾಟ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.