ಕೊನೆಗೂ ಏರಿಂಡಿಯಾ ಮಾರಾಟಕ್ಕೆ ಕೇಂದ್ರ ಸಂಪುಟದ ತಾತ್ವಿಕ ಒಪ್ಪಿಗೆ
Team Udayavani, Jun 28, 2017, 7:32 PM IST
ಹೊಸದಿಲ್ಲಿ : ಭಾರತ ಸರಕಾರದ ‘ಮಹಾರಾಜ’ ಎಂದೇ ಖ್ಯಾತಿವೆತ್ತ, ಅತ್ಯಂತ ಪ್ರತಿಷ್ಠೆಯ ವಾಯುಯಾನ ಸಂಸ್ಥೆಯಾಗಿರುವ ಏರಿಂಡಿಯಾ ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ತಾತ್ವಿಕ ಒಪ್ಪಿಗೆ ನೀಡಿದೆ.
ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಂದು ಮಾತನಾಡುತ್ತಾ, “ಏರಿಂಡಿಯಾದಂತೆ ಇನ್ನು ಕೆಲವು ಸಂಸ್ಥೆಗಳು ಖಾಸಗೀಕರಣದ ಮಾರ್ಗವನ್ನು ಹಿಡಿಯಲಿವೆ; ಅಂತಹವುಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.
2012ರಲ್ಲಿ ಮನಮೋಹನ್ ಸಿಂಗ್ ಸರಕಾರವು 10 ವರ್ಷಗಳ ಅವಧಿಗೆ ಹರಡಿಸಿ ಕೊಟ್ಟ 30,000 ಕೋಟಿ ರೂ.ಗಳ ಪ್ಯಾಕೇಜ್ ಆಧಾರದಲ್ಲಿ ಏರಿಂಡಿಯಾ ಈ ವರೆಗೆ ಬದುಕುಳಿದಿದ್ದು ತನ್ನ ಹಣಕಾಸು ಸ್ಥಿತಿಯನ್ನು ಸುಧಾರಿಸುವ ದಿಶೆಯಲ್ಲಿ ಅದು ಯತ್ನಿಸುತ್ತಲೇ ಬಂದಿದೆ.
ಕಡಿಮೆ ಮಟ್ಟದ ಕಚ್ಚಾ ತೈಲ ಬೆಲೆ ಹಾಗೂ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಏರಿದ ಕಾರಣ 2015-16ರಲ್ಲಿ ಏರಿಂಡಿಯಾ 105 ಕೋಟಿ ರೂ. ನಿರ್ವಹಣಾ ಲಾಭವನ್ನು ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.