ಸಿದ್ಧ ವಿದೆ ವಿವಿಧ ಜಾತಿಯ ಸಾವಿರಾರು ಗಿಡಗಳು


Team Udayavani, Jun 29, 2017, 3:35 AM IST

28-KRK-16.jpg

ಬಂಟ್ವಾಳ: ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 2017-18ನೇ ಸಾಲಿಗೆ 48 ಸಾವಿರ ವಿವಿಧ ಜಾತಿಯ ಗಿಡಗಳು  ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ರೈತರಿಗೆ ವಿತರಣೆಗೆ ದೊರೆಯಲಿವೆ.

ಸಾಗುವಾನಿ-19,920, ದಾಲಿcನಿ-462, ಪುನರ್ಪುಳಿ-168, ಬೆತ್ತ-250,  ಮಹಾಗನಿ- 2,870, ಸಿಲ್ವರ್‌-6,641, ಹುಣಸೆ-580, ನೆಲ್ಲಿ-1,800,  ಬೇಂಗ-2,951, ಬೀಟೆ- 3,208, ಹೆಬ್ಬಲಸು-553, ಕಾಯಿಧೂಪ- 914,  ಹಲಸು-250, ಹೊಳೆಮತ್ತಿ-350, ಸೀತಾ ಅಶೋಕ-46, ಮಾವು-177, ಶಾಂತಿ-582, ರೆಂಜ-568, ಕಂಬ ಅಶೋಕ-
1,000, ಕಹಿಬೇವು-608, ಬಿಲ್ವಪತ್ರೆ- 2,000, ಬಾದಾಮಿ-300, ನೇರಳೆ-500, ಹೊನ್ನೆ-74, ಸಿಮರೊಬ-210, ಉಂಡೆ ಹುಳಿ-28, ಸಂಪಿಗೆ-49, ಚೆರ್ರಿ- 42, ಹಿಪ್ಪೆ-350, ರಕ್ತಚಂದನ-500 ಗಿಡಗಳು ಶಂಭೂರು ನರ್ಸರಿಯಲ್ಲಿ ಲಭ್ಯವಿವೆ.

ಪ್ರತೀ ಗಿಡಕ್ಕೆ ನೂರು ರೂ.
ಅರಣ್ಯ ಇಲಾಖೆಯು 2017-18ನೇ ಸಾಲಿನಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಯಲ್ಲಿ ಇಲಾಖೆಯಲ್ಲಿ ನೋಂದಾ
ಯಿಸಿಕೊಂಡು ನೆಟ್ಟು ಉಳಿಸಿಕೊಂಡ  ಪ್ರತಿ ಗಿಡಕ್ಕೆ ಮೊದಲ ವರ್ಷಾಂತ್ಯದಲ್ಲಿ 30 ರೂ. ಎರಡನೇ ವರ್ಷಾಂತ್ಯದಲ್ಲಿ 30 ರೂ., ಮೂರನೇ ವರ್ಷಾಂತ್ಯದಲ್ಲಿ 40 ರೂ. ನಂತೆ ಒಟ್ಟು 100 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ಒಬ್ಬ ರೈತನಿಗೆ ಗರಿಷ್ಠ 500 ಗಿಡಗಳನ್ನು ನೆಟ್ಟು ಸಂರಕ್ಷಿ ಸುವುದಕ್ಕೆ ಮಿತಿಯನ್ನು ಮಾಡಲಾಗಿದೆ. ಇದರಲ್ಲಿ ರೈತ ಸ್ವಂತದ್ದಾಗಿರುವ ಜಮೀನು ಹೊಂದಿರಬೇಕು. ನೆಟ್ಟ ಗಿಡವು ಸಾಯದಂತೆ ಬದುಕಿಸುವಲ್ಲಿ  ಪ್ರಯತ್ನಗಳು ಇರಬೇಕು.
2011-12ನೇ ಸಾಲಿನಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಆಗ 10  ರೂ.,  15, 20ರಂತೆ ಒಟ್ಟು 45 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು ಅದರಂತೆ ಬಂಟ್ವಾಳ ತಾಲೂಕಿನಲ್ಲಿ 25 ಮಂದಿ ರೈತರು 90,000 ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಇಲಾಖೆ ಅಂಕಿಅಂಶ ತಿಳಿಸಿದೆ.

ವಲಯ ಅರಣ್ಯ ಇಲಾಖೆ ನೀಡುವ ಚಿಕ್ಕ ಗಾತ್ರದ ತೊಟ್ಟೆಯ ಗಿಡಕ್ಕೆ 1ರೂ. ಮತ್ತು ದೊಡ್ಡ ಗಾತ್ರದ ತೊಟ್ಟೆಯ ಗಿಡಕ್ಕೆ 3 ರೂ. ದರವನ್ನು ವಿಧಿಸಲಾಗುತ್ತಿದ್ದು ನೋಂದಾಯಿಸಿಕೊಂಡು ನೀಡಲಾಗುತ್ತದೆ. ಸಾಮಾಜಿಕ ಅರಣ್ಯದಲ್ಲಿ 88 ,000 ಗಿಡ
ಸಾಮಾಜಿಕ ಅರಣ್ಯದಿಂದಲೂ ಸಾರ್ವಜನಿಕ ವಿತರಣೆಗೆ ಗಿಡಗಳನ್ನು ನೀಡುತ್ತಿದ್ದು 88,000  ಗಿಡಗಳು ವಿತರಣೆಗೆ ಲಭ್ಯವಿದ್ದು ಈಗಾಗಲೇ ಗಿಡಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ನರೇಶ್‌ ತಿಳಿಸಿದ್ದಾರೆ.

ಸಾಮಾಜಿಕ ಅರಣ್ಯ ಇಲಾಖೆಯು ವಲಯ ಅರಣ್ಯ ಇಲಾಖೆಯಿಂದ ನೀಡುವ ಜಾತಿವಾರು ಗಿಡಗಳ ಹೊರತಾದ ಗಿಡ
ಗಳನ್ನು ಸಹ ಪಡೆಯಬಹುದು ಎಂದವರು ತಿಳಿಸಿದ್ದಾರೆ. ರೈತರು ಉದ್ಯೋಗ ಖಾತರಿ ಯೋಜನೆಯಡಿ ಹೊಂಡ – ಗುಂಡಿಗಳನ್ನು ಮಾಡಿ ಗಿಡಗಳನ್ನು ನೆಡುವುದಾದರೆ ಅವರಿಗೆ ಖರ್ಚು ವೆಚ್ಚ ಗ್ರಾ.ಪಂ. ಮೂಲಕ ಲಭ್ಯವಾಗಲಿದೆ.
ಸಂಘಸಂಸ್ಥೆಗಳಿಗೆ ಗಿಡಗಳ ಸರಬರಾಜು ವ್ಯವಸ್ಥೆಗೆ ಕೂಡ ಇಲಾಖೆಯಿಂದ ಸೂಕ್ತ ವೆಚ್ಚವು ಲಭ್ಯವಾಗುತ್ತದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ತುಂಬೆ ನರ್ಸರಿಯಲ್ಲಿ ಗಿಡಗಳು ದೊರೆಯುತ್ತವೆ. ಬಿ.ಸಿ.ರೋಡ್‌ ತಾ.ಪಂ. ಹಳೆಯ ಕಟ್ಟಡದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ ಸೂಕ್ತ ಅರ್ಜಿ ನೀಡಿ ಗಿಡಗಳನ್ನು ಪಡೆಯಲು ಅವಕಾಶವಿದೆ ಎಂದವರು ತಿಳಿಸಿದ್ದಾರೆ.

ಪ್ರತಿ ಗಿಡಕ್ಕೆ ಪ್ರೋತ್ಸಾಹಧನ
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಅನೇಕ ಕಡೆಗಳಲ್ಲಿ ಗಿಡಗಳನ್ನು ನೆಡುವ ಪ್ರಕ್ರಿಯೆ ಜಾರಿಯಲ್ಲಿದೆ. ಸರಕಾರದ ಹೊಸ ಸುತ್ತೋಲೆಯಂತೆ ಪ್ರತೀ ಗಿಡಕ್ಕೆ ಪ್ರೋತ್ಸಾಹ ಧನವನ್ನು ಮೂರು ಹಂತದಲ್ಲಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆಯುವಂತಾಗಬೇಕು.
ಸುರೇಶ್‌, ಅರಣ್ಯಾಧಿಕಾರಿ, ಬಂಟ್ವಾಳ ವಲಯ

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.