ಹೊಸದುರ್ಗ ಜನತೆಯ ಅಭಿನಂದನೆ, ಪಾದಪೂಜೆ, ಭಿಕ್ಷಾವಂದನೆ
Team Udayavani, Jun 29, 2017, 3:35 AM IST
ಹೊಸದುರ್ಗ: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಕಾಂಞಂಗಾಡ್ ವಿಜಯ ಯಾತ್ರೆ ಯಶಸ್ವಿಯಾಗಿ ನಡೆಯಿತು.
ಶ್ರೀ ಶೃಂಗೇರಿ ಜಗದ್ಗುರು ಅಭಿ ನಂದನಾ ಸಮಿತಿಯ ವತಿಯಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾಂಗಳವರ ಹಾಗೂ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ಮಾದೋತ್ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ವಾಹನ ಮೆರವಣಿಗೆ ಮೂಲಕ ಹೊಸದುರ್ಗ ಶ್ರೀ ಮಾರಿಯಮ್ಮ ಕ್ಷೇತ್ರ ಪರಿಸರ ತಲುಪಿ ಅನಂತರ ಪೂರ್ಣಕುಂಭ ಸ್ವಾಗತ ನೀಡಿ ಶ್ರೀ ವಿಷ್ಣುಧೂಮಾವತಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ಶ್ರೀ ಕ್ಷೇತ್ರದಲ್ಲಿ ಧೂಳೀ ಪಾದಪೂಜೆ, ಅಭಿನಂದನಾ ಸಭೆ ಹಾಗೂ ಪೌರ ಸಮ್ಮಾನ, ವೇದ ಘೋಷ ಮತ್ತು ಪ್ರಾರ್ಥನೆ ನಡೆÀತು. ವೇದಮೂರ್ತಿ ಬ್ರಹ್ಮಶ್ರೀ ಹಿರಣ್ಯ ವೆಂಕಟೇಶ ಭಟ್ ಅವರು ಅಭಿನಂದನಾ ಭಾಷಣ ಮಾಡಿದರು.
ಕಾಂಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಅವರು ಅಭಿನಂದನಾ ಪತ್ರ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರು ಆಶೀರ್ವಚನ ನೀಡಿದರು. ಆ ಬಳಿಕ ಶ್ರೀ ಜಗದ್ಗುರು ಗಳವರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ಜರಗಿತು. ಜೂ.28ರಂದು ಪೂರ್ವಾಹ್ನ ವೇದ ಪಾರಾಯಣ, ಶ್ರೀ ಜಗದ್ಗುರುಗಳಿಗೆ ಪಾದಪೂಜೆ ಹಾಗೂ ಭಿಕ್ಷಾ ವಂದನೆ ಜರಗಿತು. ಶ್ರೀ ಜಗದ್ಗುರುಗಳವರು ಮಂತ್ರಾಕ್ಷತೆ ನೀಡಿದರು. ಅಪರಾಹ್ನ ಸಂತರ್ಪಣೆ ನಡೆಯಿತು.
ಆ ಬಳಿಕ ಶ್ರೀ ಜಗದ್ಗುರುಗಳು ಶ್ರೀ ವಿಷ್ಣುಧೂಮಾವತಿ ಕ್ಷೇತ್ರದಿಂದ ನಿರ್ಗಮಿಸಿ ಕಾಸರಗೋಡು ಮೊಕ್ಕಾಂಗೆ ಪ್ರಯಾಣ ಬೆಳೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.