ನಾಳೆ ರಾತ್ರಿಯಿಂದ ಜಿಎಸ್‌ಟಿ ಅಧ್ಯಾಯ
Team Udayavani, Jun 29, 2017, 3:45 AM IST
ನವದೆಹಲಿ: ದೇಶದ ತೆರಿಗೆ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಪ್ರಕ್ರಿಯೆಗೆ ವೇದಿಕೆಯೂ ಸಿದ್ಧವಾಗಿದೆ.
ಇದರ ಜತೆಗೆ ಜಿಎಸ್‌ಟಿ ಜಾರಿಗಾಗಿ ಜೂ.30ರ ಮಧ್ಯರಾತ್ರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿಚಾರದಲ್ಲಿ ಪ್ರತಿಪಕ್ಷಗಳು ಮೀನಾಮೇಷ ಮಾಡುತ್ತಿವೆ. ತೃಣಮೂಲ ಕಾಂಗ್ರೆಸ್ ಭಾಗಿಯಾಗಲ್ಲ ಎಂದು ಹೇಳಿದರೆ,ಕಾಂಗ್ರೆಸ್ ಇನ್ನೂ ನಿರ್ಧರಿಸಿಲ್ಲ. ಎಡಪಕ್ಷಗಳು ಕೂಡ ಗೈರಾಗುವುದು ಸೂಕ್ತವಲ್ಲ, ಆದರೆ ನಮ್ಮ ಪಕ್ಷದ ಸಂಸದರಿಗೆ ವಿಪ್ ನೀಡಲ್ಲ ಎಂದಿವೆ. ಬಿಹಾರದ ಜೆಡಿಯು ಕೂಡ ಸದ್ಯದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿgsದೆ.
ಇದರ ಪ್ರಕಾರ, ಜಿಎಸ್‌ಟಿಯಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ ಬರುವುದರಿಂದ ಗೈರಾಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಹೊಂದಿದೆ ಎಂದು ಹೇಳಲಾಗಿದೆ.
ಈ ನಡುವೆ ಪ್ರತಿಪಕ್ಷ ಕಾಂಗ್ರೆಸ್ ಭಾಗಿಯಾಗುವ ಅಥವಾ ಗೈರಾಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಅಭಿಪ್ರಾಯಗಳು ಹುಟ್ಟಿಕೊಂಡಿವೆ. ಇದು ಕಾಂಗ್ರೆಸ್‌ನ ಕನಸಿನ ಕೂಸು ಆಗಿರುವುದರಿಂದ ಪಾಲ್ಗೊಳ್ಳುವುದು ಸೂಕ್ತ ಎಂದು ಒಂದು ಗುಂಪು ಹೇಳಿದರೆ, ಇನ್ನೊಂದು ಗುಂಪು ಜಿಎಸ್‌ಟಿಯನ್ನು ತರಾತುರಿಯಲ್ಲಿ ಜಾರಿ ಮಾಡುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ಕಷ್ಟವಾಗುತ್ತಿದೆ.
ಹೀಗಾಗಿ ಗೈರಾಗುವುದೇ ಸೂಕ್ತ ಎಂಬ ಅಭಿಪ್ರಾಯ ಮಂಡಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜತೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ಹೇಳಿವೆ.
ಜತೆಗೆ ಜಿಎಸ್‌ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೇ ಉದ್ಘಾಟಿಸಬೇಕು
ಎಂದು ಪಟ್ಟುಹಿಡಿದಿದೆ. ಆಹ್ವಾನ ನೀಡಲು ಹೋದ ಕೇಂದ್ರ ಸಚಿವ ಅನಂತಕುಮಾರ್ ಬಳಿ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಈ ಅಂಶ ಪ್ರಸ್ತಾಪಿಸಿದ್ದಾರೆ. ಪ್ರಣಬ್ ಅವರು ಹಣಕಾಸು ಸಚಿವರಾಗಿದ್ದಾಗಲೇ ಇದನ್ನು ಮಂಡಿಸಿದ್ದರಿಂದ ಅವರೇ ಉದ್ಘಾಟಿಸಲಿ ಎಂಬುದು ಕಾಂಗ್ರೆಸ್‌ನ ತಂತ್ರವಾಗಿದೆ.
ಮಮತಾ ಗೈರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಿಎಸ್‌ಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಯಾವ ಪ್ರತಿನಿಧಿಯೂ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ನೋಟು ಅಮಾನ್ಯದ ಬಳಿಕ ಜಿಎಸ್‌ಟಿ ಕೇಂದ್ರ ಸರ್ಕಾರದ ಇನ್ನೊಂದು “ದುರಂತ ಅಧ್ಯಾಯ’ ಎಂದು ಹೇಳಿರುವ ಮಮತಾ ಬ್ಯಾನರ್ಜಿ, ಈ ಮೂಲಕ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ಜಿಎಸ್‌ಟಿ ಜಾರಿಗೊಳಿಸದಿರಲು ನಿರ್ಧರಿಸಿದೆ.
ಮಧ್ಯರಾತ್ರಿ ಚಾಲನೆ: ಜೂನ್ 30ರ ಮಧ್ಯರಾತ್ರಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿಗೆ ಚಾಲನೆ ನೀಡಲಿದ್ದು, ಮಹತ್ವದ ಬದಲಾವಣೆಗೂ ನಾಂದಿ ಹಾಡಲಿದೆ. ಜಿಎಸ್‌ಟಿ ಬಗ್ಗೆ ಜನತೆಯಲ್ಲಿ ಇರುವ ಗೊಂದಲವನ್ನು ಸರಳವಾಗಿ ಬಗೆಹರಿಸಬೇಕೆನ್ನುವ ಉದ್ದೇಶದೊಂದಿಗೆ ತಾಲೀಮು ಸಾಗಿದೆ.
ಗುಜರಾತ್ ಬಟ್ಟೆ
ಮಾರುಕಟ್ಟೆಗೆ ಬೀಗ!
ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಗುಜರಾತ್‌ನ ಬಟ್ಟೆ ಮಾರುಕಟ್ಟೆ ಕಳೆದೆರಡು ದಿನಗಳಿಂದ ಬಂದ್ ಆಗಿದೆ. ಜಿಎಸ್‌ಟಿ ಜಾರಿಯಿಂದ ಶೇ.5ರಷ್ಟು ತೆರಿಗೆ ಹೊರೆಯಾಗಲಿದೆ ಎಂದು ವಿರೋಧಿಸಿ ವ್ಯಾಪಾರಿಗಳು ಪ್ರತಿಭಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಜೂನ್ 30ರಂದು ನಡೆಯಲಿರುವ ಟೆಕ್ಸ್‌ಟೈಲ್ ಮೇಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟಿಸಲಾಗುತ್ತಿದೆ. ಗುಜರಾತ್ ಸಿಟಿ, ಸೂರತ್, ಅಹಮದಾಬಾದ್, ಭಾವ್‌ನಗರ ಹಾಗೂ ರಾಜ್‌ಕೋಟ್‌ಗಳಲ್ಲಿರುವ ಬಟ್ಟೆ ಮಾರುಕಟ್ಟೆ ವ್ಯಾಪಾರಿಗಳೆಲ್ಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜೂನ್ 30ರ ಬಳಿಕ ಮತ್ತೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಜಿಎಸ್‌ಟಿ ಸಂಘರ್ಷ ಸಮಿತಿ ಅಧ್ಯಕ್ಷ ಚಂಪಲಾಲ್ ಬೋಧಾÅ ತಿಳಿಸಿದ್ದಾರೆ.
ಸಭೆ ಮಾಹಿತಿ ನೀಡಲು ನಕಾರ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತಾಗಿ ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಸಭೆಯ ಮಾಹಿತಿಗಳನ್ನು ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ. ಮಾಹಿತಿ ಬಹಿರಂಗದಿಂದ ದೇಶದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆರ್‌ಟಿಐ ಸೆಕ್ಷನ್ 8(1)ರ ಪ್ರಕಾರ ಮಾಹಿತಿ ಬಹಿರಂಗ ಸಾಧ್ಯವಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಿದ ಅರ್ಜಿದಾರರಿಗೆ ಉತ್ತರಿಸಿದೆ. ಜೂನ್ 5ರಂದು ನಡೆದ ಸಭೆಯ ಮಾಹಿತಿ ನೀಡುವಂತೆ ಪಿಟಿಐ ಸುದ್ದಿ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಉಡುಗೊರೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.