ಪಾಠದಷ್ಟೇ ಪಠ್ಯೇತರವೂ ಮುಖ್ಯ


Team Udayavani, Jun 30, 2017, 3:45 AM IST

co-curricular.jpg

ರ್‍ಯಾಂಕ್‌, ರ್‍ಯಾಂಕ್‌, ರ್‍ಯಾಂಕ್‌! ಈಗೀನ ಯಾವುದೇ ವಿದ್ಯಾರ್ಥಿಯನ್ನು ನೋಡಿದರೂ ಆತ ರ್‍ಯಾಂಕ್‌ನ ಹಿಂದೆಯೇ ಓಡುತ್ತ ಇರುತ್ತಾನೆ. ಕೇವಲ ವಿದ್ಯಾರ್ಥಿಗಳು ಓಡಿದರೆ ಪರವಾಗಿಲ್ಲ, ಅವರ ಜೊತೆ ಅವರ ಪೋಷಕರು ಕೂಡ ಓಡುತ್ತಿದ್ದಾರೆ. ನಿಜವಾಗಿಯೂ ಹೇಳಬೇಕಾದರೆ ತಂದೆತಾಯಿಗಳೇ ಮಕ್ಕಳನ್ನು ಓಡಿಸಿಕೊಂಡು ಹೋಗುತ್ತಿದ್ದಾರೇನೋ ಅನಿಸುತ್ತದೆ! ಯಾವುದೇ ಮಗುವನ್ನು ಮುಂದೆ ಏನಾಗಬೇಕು ಎಂದು ಪ್ರಶ್ನಿಸಿದರೆ ಬರುವ ಉತ್ತರ ಒಳ್ಳೆಯ ರ್‍ಯಾಂಕ್‌ ತೆಗೆದು, ಒಂದು ಉತ್ತಮ ಕೆಲಸವನ್ನು ಪಡೆದು, ಜೀವನದಲ್ಲಿ ಸೆಟ್ಲ ಆಗಬೇಕು. ಯಾವ ಮಗುವಿನ ಬಾಯಿಯಿಂದಲೂ ನಾನೊಬ್ಬ ಉತ್ತಮ ನೃತ್ಯಗಾರ/ಗಾರ್ತಿಯಾಗಬೇಕು ಅಥವಾ ಚಿತ್ರಕಲೆಗಾರ, ಉತ್ತಮ ಸಂಗೀತಗಾರ, ಉತ್ತಮ ಆಟಗಾರ, ಸಾಹಿತಿ, ಬರಹಗಾರ ಆಗಬೇಕು ಅನ್ನೋ ಉತ್ತರ ಬಹುಶ‌ಃ ಬಂದಿರಲಿಕ್ಕಿಲ್ಲ. ಎಲ್ಲೋ ಕೇವಲ 100ರಲ್ಲಿ 10 ಅಷ್ಟೆ. ಇದಕ್ಕೆ ಈಗಿನ ಶಿಕ್ಷಣ ವ್ಯವಸ್ಥೆಯನ್ನು ದೂರಬೇಕೋ ಅಥವಾ ಪೋಷಕರನ್ನು ದೂಷಿಸಬೇಕೋ ತಿಳಿಯದು. 

ಇಂದಿನ ಶಿಕ್ಷಣದಿಂದ ಒಬ್ಬ ವಿದ್ಯಾರ್ಥಿಗೆ ಅವನ ನಿಜವಾದ ಜ್ಞಾನ ಮತ್ತು ಶಕ್ತಿಯನ್ನು ತೋರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಕೇವಲ ಒಂದು ಚೌಕಟ್ಟಿನಲ್ಲಿ ಅವನನ್ನು ಅನಿವಾರ್ಯವಾಗಿ ಕಲಿಯುವಂತೆ ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದಂತಹ ಪ್ರತಿಭೆ ಇರುತ್ತದೆ. ಆದರೆ ಈಗಿನ ಸಮಯದಲ್ಲಿ ಆ ವಿದ್ಯಾರ್ಥಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ ಹಾಗೂ ಪ್ರೋತ್ಸಾಹವೂ ಸಿಗುತ್ತಿಲ್ಲ. ಇಲ್ಲಿ ಕೇವಲ ಶಿಕ್ಷಣ ವ್ಯವಸ್ಥೆಯ ತಪ್ಪಲ್ಲ, ಕೆಲವು ತಂದೆತಾಯಿಯರ ತಪ್ಪು ಕೂಡ ಇದೆ. ತಮ್ಮ ಮಕ್ಕಳ ಪ್ರತಿಭೆಗಳನ್ನು ಅವರು ಗುರುತಿಸಿ ಪ್ರೋತ್ಸಾಹಿಸುವುದಿಲ್ಲ. ಈ ತರಹದ ವ್ಯವಸ್ಥೆಯಿಂದ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸಲೂ ಮನೆಬಿಟ್ಟು ಹೋಗುವ ಕಾಲ ಬಂದಿದೆ. 

ಶಿಕ್ಷಣ ಎಲ್ಲರಿಗೂ ಮುಖ್ಯ. ಅದರ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕೆಲಸವೂ ಆಗಬೇಕು. ಒಬ್ಬ ವಿದ್ಯಾರ್ಥಿ ಉದಾಹರಣೆಗೆ ಚಿತ್ರಕಲೆಯಲ್ಲಿ ಆಸಕ್ತಿ ಇದ್ದರೆ ಅವನಿಗೆ ಪ್ರೋತ್ಸಾಹ ನೀಡಿದರೆ ಮುಂದೆ ಒಬ್ಬ ದೊಡ್ಡ ಚಿತ್ರಕಾರ ಆಗಬಹುದು. ಪ್ರೋತ್ಸಾಹ ನೀಡದೇ ಇದ್ದರೆ ಆ ಮಗುವಿನ ಪ್ರತಿಭೆಯನ್ನು ಬೆಳೆಯುವ ಮೊದಲೇ ಸಾಯಿಸಿ ದಂತಾಗುತ್ತದೆ. 

ತಮ್ಮ ತಮ್ಮ ಜೀವನವನ್ನು ಶಿಕ್ಷಣದಿಂದಲೇ ರೂಪಿಸಿಕೊಳ್ಳುವವರು ತುಂಬಾ ಜನ. ಕಲೆಯಿಂದ ಕೆರಿಯರ್‌ ರೂಪಿಸಿಕೊಳ್ಳುವವರು ತುಂಬಾ ಕಡಿಮೆ. ಬಹುಶಃ ಇದಕ್ಕೆ ಮುಖ್ಯವಾದ ಕಾರಣ ಹಣ. ಒಳ್ಳೆಯ ವಿದ್ಯಾಭ್ಯಾಸ ಇದ್ದರೆ ಉತ್ತಮ ಕೆಲಸವನ್ನು ಪಡೆದು ಜೀವನದಲ್ಲಿ ಸೆಟ್ಲ ಆಗಬಹುದು ಅಂತ. ಆದರೆ ಪಠ್ಯೇತರ ಕಲಿಕೆಯಿಂದ ತಮ್ಮ ಜೀವನವನ್ನು ಚೆನ್ನಾಗಿ ಸಾಗಿಸಬಹುದು ಅಂತ ತೋರಿಸಿಕೊಟ್ಟಂತಹ ಉದಾಹರಣೆಗಳು ತುಂಬಾ ಸಿಗುತ್ತವೆ. 

ಸಾಂಪ್ರದಾಯಿಕ ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ರೂಪಿಸಿಕೊಂಡ ಉದಾಹರಣೆಗಳನ್ನು ನಾವು ನೋಡಬಹುದು. ಸಾಂಪ್ರದಾಯಿಕ ಶಿಕ್ಷಣದಿಂದ ಉತ್ತಮ ಕೆಲಸವನ್ನು ಪಡೆದು ಅನಂತರ ಅದನ್ನು ಬಿಟ್ಟು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಜೀವನ ನಡೆಸುವವರೂ ಇದ್ದಾರೆ. 

ರಘು ದೀಕ್ಷಿತ್‌
ಕೆಲವರು ಸಾಂಪ್ರದಾಯಿಕ ಪಠ್ಯವನ್ನು ಬಿಟ್ಟು ಪಠ್ಯೇತರದಿಂದ ತಮ್ಮ  ಕೆರಿಯರ್‌ ರೂಪಿಸಿಕೊಂಡವರ ಉದಾಹರಣೆ ಕೊಡ ಬಹುದಾದರೆ ನಮ್ಮ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರು ಹಾಗೂ ಹಾಡುಗಾರರಾದಂತಹ ರಘುದೀಕ್ಷೀತ್‌ರವರು. ಇವತ್ತು ಇವರು ಇಡೀ ದೇಶಕ್ಕೆ ಸಂಗೀತ ಕ್ಷೇತ್ರದಲ್ಲಿ ಪರಿಚಿತರು. ಆದರೆ, ಇವರು ಈ ಕ್ಷೇತ್ರಕ್ಕೆ ಬರುವ ಮೊದಲು ಒಬ್ಬ ಮೈಕ್ರೋಬಯೋಲಾಜಿಸ್ಟ್‌ ಹಾಗೂ ವಿಜ್ಞಾನಿ. ಅನಂತರ ಅದನ್ನು ಬಿಟ್ಟು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು ಇಂದು ಒಳ್ಳೆಯ ಜೀವನವನ್ನು ನಡೆಸುತ್ತಿ¨ªಾರೆ. ಇನ್ನು ಇವರ ಪತ್ನಿ ಮಯೂರಿ ಉಪಾಧ್ಯ ನೃತ್ಯದಲ್ಲಿ ಆಸಕ್ತಿಯುಳ್ಳವರು, ಇಂದು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿದೇಶಗಳಲ್ಲಿ ಪ್ರದರ್ಶನ ತೋರಿಸಿ ಸೈ ಎನಿಸಿಕೊಂಡವರು.

ವಿಲಾಸ್‌ ನಾಯಕ್‌
ಚಿತ್ರಕಲೆ ಕ್ಷೇತ್ರವನ್ನು ತೆಗೆದುಕೊಂಡರೆ ಇಂದು ದೇಶ-ವಿದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ನಮ್ಮ ಕರ್ನಾಟಕದ ಪ್ರತಿಭೆ ವಿಲಾಸ್‌ ನಾಯಕ್‌. ಇಂದು ಇವರು ಇಡೀ ಪ್ರಪಂಚಕ್ಕೆ ಒಬ್ಬ ಅತೀ ವೇಗದ ಚಿತ್ರಕಾರನಾಗಿ ಪರಿಚಿತರು. ತಮ್ಮ ಆಸಕ್ತಿಯುಳ್ಳ ಈ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಇವರು ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗವನ್ನು ಬಿಟ್ಟು ಬಂದವರು.

ಗಂಗಾವತಿ ಪ್ರಾಣೇಶ್‌
ಯಾರಾದರೂ ತುಂಬಾ ಮಾತಾಡ್ತಾ ಇದ್ದರೆ ನಾವು ಹೇಳ್ತೀವಿ, ಏನಪ್ಪ ಎಷ್ಟೊಂದು ಮಾತಾಡ್ತಾರೆ ಇವರು ಅಂತ. ಆದರೆ ನಮಗೆ ಗೊತ್ತಿರಲ್ಲಾ ಮಾತು ಸಹ ಒಂದು ಕಲೆಯಂತೆ ಮಾತನ್ನೇ ತಮ್ಮ ಬಂಡವಾಳವಾಗಿಟ್ಟುಕೊಂಡು ಜನರ ಮನವನ್ನ ಗೆದ್ದವರನ್ನು ನಾವು ನೋಡಬಹುದು. ಉದಾಹರಣೆಗೆ ಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ್‌ರವರು, ಖ್ಯಾತ ನಿರೂಪಕಿಯಾದ ಅನುಶ್ರೀ ಹಾಗೂ ಉತ್ತಮ ಮಾತುಗಾರ ಚಕ್ರವರ್ತಿ ಸೂಲಿಬೆಲೆಯವರು.

ಮಾತು ಹೇಗೆ ಒಂದು ಕಲೆಯೋ ಬರವಣಿಗೆಯೂ ಕೂಡ ಒಂದು ಕಲೆ. ಇವತ್ತು ಪ್ರತಿಯೊಂದು ಪತ್ರಿಕೆಗಳಲ್ಲಿ ನಾವು ಎಷ್ಟೋ ಬರಹಗಾರರ ಲೇಖನಗಳನ್ನು ಕಾಣಬಹುದು. ಪ್ರತಿದಿನ ತುಂಬಾ ಲೇಖಕರ, ಸಾಹಿತಿಗಳ ಪುಸ್ತಕಗಳು ಬಿಡುಗಡೆಯಾಗುತ್ತವೆ. ಉತ್ತಮ ಬರಹಗಳು ಇಂದು ಬರಲಿಕ್ಕೆ ಕಾರಣ ಬರವಣಿಗೆಯನ್ನೇ ತಮ್ಮ ಶಕ್ತಿಯನ್ನಾಗಿಟ್ಟುಕೊಂಡ ಬರಹಗಾರರು, ಸಾಹಿತಿಗಳಿಂದ ಸಾಧ್ಯವಾದುದು. 

ನಟನೆಯನ್ನೇ ತಮ್ಮ ಪ್ರತಿಭೆಯಾಗಿಟ್ಟುಕೊಂಡು ಇಂದು ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಮಿಂಚುತ್ತಿರುವವರು ತುಂಬಾ ಜನ ಇದ್ದಾರೆ.
 
ಸಾನಿಯಾ ಮಿರ್ಜಾ
ಇನ್ನು ಕ್ರೀಡೆಯ ಕ್ಷೇತ್ರವನ್ನು ತೆಗೆದುಕೊಂಡರೆ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿ, ಒಲಂಪಿಕ್‌ನಂತಹ ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದವರು ಉದಾಹರಣೆಗಳನ್ನು ಕಾಣಸಿಗುತ್ತವೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧೂ, ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್‌, ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌, ಎಂ.ಎಸ್‌. ಧೋನಿ, ಕುಸ್ತಿಯಲ್ಲಿ ಮೇರಿ ಕೋಮ್‌, ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಹೀಗೆ ತುಂಬಾ ಜನ.     ಪಠ್ಯೇತರ ಚಟುವಟಿಕೆಗಳಲ್ಲಿ ಕೇವಲ ಇಷ್ಟು ಕ್ಷೇತ್ರಗಳಲ್ಲ, ತುಂಬಾ ಪ್ರಕಾರಗಳಿವೆ. ಆ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಹೊಂದಿ ಜೀವನ ನಡೆಸುತ್ತಿರುವವರ ಬಗ್ಗೆ ಹೇಳುತ್ತ ಹೋದರೆ ಒಂದು ದೊಡ್ಡ ಪಟ್ಟಿಯೇ ಆಗುತ್ತದೆ. ಬಹುಶ‌ಃ ಒಂದು ಪುಸ್ತಕವೇ ಆಗಬಹುದು. ಇವರೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಬಡತನದಲ್ಲಿ ಬೆಳೆದು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಪ್ರೋತ್ಸಾಹವನ್ನು ಪಡೆದು ಇಂದು ತಮ್ಮ ಕಾಲಿನ ಮೇಲೆ ತಾವೇ ನಿಂತವರು.

ಪಠ್ಯದ ಶಿಕ್ಷಣ ವಿದ್ಯಾರ್ಥಿಗೆ ಜ್ಞಾನವನ್ನು ನೀಡುತ್ತದೆ ಹಾಗೂ, ತರಗತಿಗಳಲ್ಲಿ ಪಠ್ಯದ ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಪಠ್ಯೇತರ ಶಿಕ್ಷಣವನ್ನು ನೀಡಿದರೆ ಶಿಕ್ಷಣದ ಶಕ್ತಿ ಹೆಚ್ಚುತ್ತದೆ. ಆದರೆ ಶಿಕ್ಷಣದ ಅರ್ಥ ವಿದ್ಯಾರ್ಥಿಗೆ ಪಠ್ಯ ಹಾಗೂ ಪಠ್ಯೇತರ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಯನ್ನು ಬೌದ್ಧಿಕ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಮುಂದಿನ ಭವಿಷ್ಯದ ಜೀವನವನ್ನು ಎದುರಿಸಲು ತಯಾರಿಸುವುದು. ಪಠ್ಯೇತರ ಚಟುವಟಿಕೆಗಳು ಒಬ್ಬ ವಿದ್ಯಾರ್ಥಿಯ ಸಂಪೂರ್ಣವಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಚಟುವಟಿಕೆಗಳು ವಿದ್ಯಾರ್ಥಿ ಯ ವ್ಯಕ್ತಿತ್ವದ ಬೆಳವಣಿಗೆ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಸಾಮಾಜಿಕವಾಗಿ ಬೆಳವಣಿಗೆ ಹೊಂದಲು ಅನುಕೂಲ ಮಾಡಿಕೊಡುವುದಲ್ಲದೇ ವಿದ್ಯಾರ್ಥಿಯಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ ಹಾಗೂ ಸೌಂದರ್ಯದ ಬೆಳವಣಿಗೆಯು ಆಗುತ್ತದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯಲ್ಲಿ ಸೃಜನಶೀಲತೆ, ಉತ್ಸಾಹ, ಶಕ್ತಿ ಹಾಗೂ ಧನಾತ್ಮಕ ಯೋಚನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. 

– ವಿಧಾತ್ರಿ ಭಟ್‌ ಉಪ್ಪುಂದ
ಪತ್ರಿಕೋದ್ಯಮ ವಿಭಾಗ ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.