ಮನೋಲೋಕದೊಳಗಿನ ಅಂತರ್ಜಾಲ


Team Udayavani, Jun 30, 2017, 3:45 AM IST

couples.jpg

ಅವನು ಬೆಂಗಳೂರಿನ ಹುಡುಗ. ಹೆಸರು ಸೂರ್ಯ ಅಂತ. ಹೆಸರಿಗೆ ತಕ್ಕಂತೆ ತೀಕ್ಷ್ಣವಾದ, ಮುದ್ದಾದ ಹುಡುಗ. ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತ ಇದ್ದ. ಎಲ್ಲರ ನೆಚ್ಚಿನ ಹುಡುಗನಾಗಿ ಕೂಲ್‌ ಡೂಡ್‌ ಎನಿಸಿಕೊಂಡಿದ್ದ. ಬಾಲ್ಯದಿಂದಲೂ ಅವರದ್ದು ಮೂರು ಜನರ ತಂಡ. ಸೂರ್ಯ, ಅವನ ನೆಚ್ಚಿನ ಗೆಳೆಯ ಹೇಮಂತ್‌ ಮತ್ತು ಅವನ ಹುಡುಗಿ ಆರಾಧ್ಯ. ಆರಾಧ್ಯಳನ್ನು ಸಣ್ಣ ವಯಸ್ಸಿನಿಂದಲೂ ಪ್ರೀತಿಸುತ್ತಿದ್ದ. ಅವಳಿಗೂ ಅಷ್ಟೇ ಅವನಂದ್ರೆ ಪ್ರಾಣ. 
  
ಆವತ್ತು ಸೂರ್ಯನಿಗೆ ಕ್ಲಾಸ್‌ ಫ್ರೀ ಇತ್ತು. ಆರಾಧ್ಯನಿಗೆ ಸಪ್ರೈìಸ್‌ ಕೊಡೋಣ ಅಂತ ಹೇಳದೇ ಅವಳಿದ್ದ ಕ್ಲಾಸಿಗೆ ಹೋದವನಿಗೆ ಆಘಾತವೊಂದು ಕಾದಿತ್ತು. ಆರಾಧ್ಯ ಮತ್ತು ಅವನ ಗೆಳೆಯ ಹೇಮಂತ್‌ ಜೊತೆಯಾಗಿ ಕುಳಿತು ಹರಟುತ್ತಿದ್ದರು. ಅದನ್ನು ನೋಡಿದ ಸೂರ್ಯನಿಗೆ ಕಾಲಕೆಳಗಿನಿಂದ ಭೂಮಿಯನ್ನೇ ಸರಿಸಿದ ಹಾಗೆ ಆಗಿತ್ತು. 

“ಇದೇನು ನಡೀತಾ ಇದೆ ನನ್ನ ಬೆನ್ನ ಹಿಂದೆ?’ ಅಂತ ಬೈದು ಕೇಳಿದಾಗ ಆರಾಧ್ಯ ಸರ್ವೇಸಾಮಾನ್ಯವಾಗಿ “ಮೀಟ್‌ ಮೈ ಬಾಯ್‌ಫ್ರೆಂಡ್‌ ಹೇಮಂತ್‌’ ಅಂದೇಬಿಟ್ಟಳು. ತನ್ನ ಪ್ರಿಯತಮೆಯ ಉತ್ತರ ಕೇಳಿದವನೇ ದಂಗುಬಡಿದಂತಾಗಿ, “ಮತ್ತೆ ನಾನು?’ ಅಂತ ಕೇಳಿದಾಗ, “ಯೂ ಆರ್‌ ಮೈ ಎಕ್ಸ್‌’ ಎಂದು ಹೇಳಿ ಮತ್ತೆ ಪ್ರತ್ಯುತ್ತರಕ್ಕೂ ಕಾಯದೇ ಹೇಮಂತನ ಕೈ ಹಿಡಿದು ಹೊರಟು ಹೋದಳು. 

ಆ ದಿನ ಸೂರ್ಯನಿಗೆ ಗೆಳೆತನ, ಪ್ರೀತಿ ಎಲ್ಲದರ ಮೇಲೂ ನಂಬಿಕೆ ಹೋಗಿತ್ತು. ಬರೀ ಕಾಲೇಜು ಮಾತ್ರ ಅಲ್ಲ, ಇಡೀ ಊರನ್ನೇ ಬಿಟ್ಟು ಮಂಗಳೂರಿಗೆ ಬಂದು ಹೊಸ ಕಾಲೇಜಿಗೆ ಸೇರಿಕೊಂಡ. ಅಲ್ಲಿ ಅವನು ಕೂಲ್‌ ಡೂಡ್‌ ಆಗಿರಲಿಲ್ಲ. ತುಂಬ ಒಂಟಿಯಾಗಿರತೊಡಗಿದ. ಯಾರೊಂದಿಗೂ ಸ್ನೇಹವನ್ನೇ ಮಾಡಿರಲಿಲ್ಲ. ಇದೆಲ್ಲವೂ ಕಾಲೇಜಿನ ಎಲ್ಲರಿಗೂ ವಿಚಿತ್ರವಾಗಿಯೇ ಕಾಣುತಿತ್ತು. ಆದರೆ ಇದೆಲ್ಲದುದರ ಬಗೆಗೆ ತಲೆಕೆಡಿಸಿಕೊಳ್ಳದೆ ಸೂರ್ಯ ತನ್ನ ಪಾಡಿಗೆ ತಾನು ಇರುತ್ತಿದ್ದ. 

ಇವೆಲ್ಲದರ ಜೊತೆಗೆ ಅವನು ಹೊಸ ಗೀಳೊಂದನ್ನು ಹಿಡಿಸಿಕೊಂಡಿದ್ದ. ಅದೇ ಇಂಟರ್ನೆಟ….  ಅವನು ಫೇಸ್‌ಬುಕ್‌ನಲ್ಲಿ ಬೇರೆನೆ ಹೆಸರೊಂದನ್ನು ಉಪಯೋಗಿಸಿ ತನ್ನೆಲ್ಲ ಆಲೋಚನೆಗಳನ್ನು ಹೇಳುತ್ತಿದ್ದ. ಅದನ್ನು ಜನ ತುಂಬಾ ಇಷ್ಟಪಡುತ್ತಿದ್ದರು. ಅವನು ಯಾವಾಗಲೂ ಹುಡುಗಿಯರ ವಿರುದ್ಧ ಟ್ವೀಟ್‌ ಮಾಡುತ್ತಿದ್ದ. ಆರಾಧ್ಯನ ಮೇಲಿನ ಕೋಪಗಳನ್ನೆಲ್ಲ ಈ ಇಂಟರ್‌ನೆಟ್‌ ಮೂಲಕ ತೋರಿಸುತ್ತಿದ್ದ. ಜನರ ಜೊತೆ ಚಾಟ್‌ ಮಾಡುತ್ತಿದ್ದ.

ಇದರ ಹೊರತಾಗಿ ಯಾವತ್ತೂ ಯಾರೊಂದಿಗೂ ಮುಖಕೊಟ್ಟು ಮಾತಾಡುತ್ತಿರಲಿಲ್ಲ. ಅದೇ ಕಾಲೇಜಿನಲ್ಲಿ ನಿಶಾ ಎಂಬ ಹುಡುಗಿ ಇದ್ದಳು. ಅವಳು ಅವನಿಗೆ ತದ್ವಿರುದ್ಧವಾಗಿದ್ದಳು. ತುಂಟ ಹುಡುಗಿಯಾಗಿದ್ದ ಅವಳಿಗೆ ಎಲ್ಲವನ್ನೂ ಚಾಲೆಂಜ್‌ ಆಗಿ ತೆಗೆದುಕೊಳ್ಳುವ  ಅಭ್ಯಾಸ. ಒಂದು ದಿನ ಅವಳು ಲೈಬ್ರೆರಿಯಿಂದ ಹೊರಗೆ ಬರಬೇಕಾದರೆ ಅಕಸ್ಮಾತ್‌ ಆಗಿ ಅವನಿಗೆ ಡ್ಯಾಷ್‌ ಹೊಡೆಯುತ್ತಾಳೆ. ಆವಳು “ಸೋರಿ’ ಎಂದೊಡನೆ ಚಂದ್ರ “ಇಟ್ಸ… ಓಕೆ’ ಎಂದು ತಲೆತಗ್ಗಿಸಿ ಹೋಗುತ್ತಾನೆ. 

ಹಿಂದಿನಿಂದ ಬರುತ್ತಿರುವ ಗೆಳೆಯರಲ್ಲಿ, “ಅವನು ಕ್ಯೂಟ್‌ ಆಲ್ವಾ?’ ಅಂತ ನಗುತ್ತ ಕೇಳುತ್ತಾಳೆ. “ಹಾಗಾದ್ರೆ ಅವನನ್ನು ಫ್ರೆಂಡ್‌ ಮಾಡ್ಕೊà. ಆಗ ನಾವು ನೀನು ಹೇಳಿದ ಹಾಗೆ ಮಾಡ್ತೇವೆ’ ಅಂತ ಹೇಳುತ್ತಾರೆ. ಅವಳು ಅದಕ್ಕೆ ಒಪ್ಪುತ್ತಾಳೆ. ಅವಳಿಗೆ ಅದೊಂದು ಚಾಲೆಂಜ್‌ ಆಗಿತ್ತು.

ಮರುದಿನದಿಂದ ಅವಳು ಅವನನ್ನು ಬೇಕಂತಲೇ ಎದುರಾಗುವುದು, ಮಾತಾಡಲು ಬಯಸುವುದು ಎಲ್ಲಾ ಮಾಡುತ್ತಿರುತ್ತಾಳೆ. ಆದರೆ, ಅವನಿಗೆ ಮಾತ್ರ ಅದೆಲ್ಲಾ ಬೇಡವಾಗಿತ್ತು. ಅವನಿಗೆ ಅವಳು ತನ್ನ ಸ್ನೇಹ ಬಯಸುತ್ತಿದ್ದಾಳೆ ಅಂತ ಗೊತ್ತಾಗಿಯೂ ಗೊತ್ತಿಲ್ಲದಂತೆ ಇರುತ್ತಿದ್ದ. ಇದರ ನಡುವೆ ಅವಳು ಅವನು ಇಂಟರ್ನೆಟ್ಟಿಗೆ ಎಡಿಕ್ಟ್ ಆಗಿರುವುದು ತಿಳಿದುಕೊಳ್ಳುತ್ತಾಳೆ. ಅವನ ಬಗ್ಗೆ ತಿಳಿದುಕೊಳ್ಳುವ ಭರದಲ್ಲಿ ಯಾವಾಗ ಅವನ ಮೇಲೆ ಅವಳಿಗೆ ಪ್ರೀತಿ ಮೂಡಿತ್ತೋ ಅವಳಿಗೇ ತಿಳಿಯಲಿಲ್ಲ. ಅವನನ್ನು ಈ ಗೀಳಿನಿಂದ ಹೊರಗೆ ತರಬೇಕಾದರೆ ಅವಳು ಕೂಡ ಅವನಂತೆ ಇರುವ ಅದೇ ಯೋಚನೆಗಳನ್ನು ಹೊಂದಿರುವ ಇನ್ನೊಂದು ಪ್ರೊಫೈಲ್‌ ರೆಡಿ ಮಾಡಿದಳು. ಅದನ್ನು ಉಪಯೋಗಿಸಿ ಅವನಿಗೆ ತಾನೂ ಅವನಂತೆ ಇಂಟರ್‌ನೆಟ್‌ ಅಡಿಕ್ಟ್ ಅಂತ ಬಿಂಬಿಸುತ್ತಿರುತ್ತಾಳೆ. ಹೀಗೆ ದಿನಬರುತ್ತ ಅವರು ತುಂಬಾ ಕ್ಲೋಸ್‌ ಆಗುತ್ತಾರೆ. ಈ ನಡುವೆ ಒಂದುದಿನ ಮುಖತಃ ಭೇಟಿ ಆದಾಗ ಅವಳು ಅವನ ಎದುರು ನಿಂತು ಹೇಳಿಯೇ ಬಿಡುತ್ತಾಳೆ. “ನೋಡು, ಇಂಟರ್‌ನೆಟ್‌ ಒಳ್ಳೆದಲ್ಲ, ಪ್ಲೀಸ್‌ ಅದನ್ನೆಲ್ಲಾ ಬಿಟ್ಟು ಬಿಡು’ ಅಂತ. ಅವನಿಗೆ ಕೋಪ ಬಂದು, “ನಿಶಾ, ಮೈಂಡ್‌ ಯುವರ್‌ ಓನ್‌ ಬ್ಯುಸಿನೆಸ್‌’ ಅಂತ ಹೇಳಿ ಹೊರಟು ಹೋಗುತ್ತಾನೆ. ಇಲ್ಲಿಯವರೆಗೂ ಯಾವತ್ತೂ ಅವನಿಗೆ ಈ ರೀತಿ ಎಚ್ಚರಿಸಿದವರು ಇರಲಿಲ್ಲ. ಒಂದೇ ಸಮನೆ ಅವಳು ಹೀಗೆ ಹೇಳಿದ್ದು ಸೂರ್ಯ ನಿಶಾನನ್ನು ದ್ವೇಷಿಸುವಂತೆ ಮಾಡಿತ್ತು. ಆಮೇಲೆ ಅವಳ ಮುಖವನ್ನು ನೋಡುವುದನ್ನೂ ಅವನು ಇಷ್ಟಪಟ್ಟಿರಲಿಲ್ಲ.

ಒಂದು ದಿನ ಅವನು ಅವಳ ಬಳಿ ಮೀಟ್‌ ಆಗುವಂತೆ ಕೇಳುತ್ತಾನೆ. ಅದನ್ನು ಕೇಳಿ ಅವಳು ತುಂಬ ಭಯಪಡುತ್ತಾಳೆ. ಆದರೂ ಯಾವತ್ತಾದರೂ ಒಮ್ಮೆ ಇದು ಆಗಲೇಬೇಕಿತ್ತು. ಇವತ್ತೇ ಆಗಲಿ ಎಂದು ಇದ್ದ ಧೈರ್ಯವನ್ನೆಲ್ಲ ಒಂದುಗೂಡಿಸಿ ಪಾರ್ಕ್‌ ಒಂದರಲ್ಲಿ ಮೀಟ್‌ ಆಗುವುದಾಗಿ ನಿರ್ಧರಿಸಿದರು.

ಮರುದಿನ ಅವಳಿಗಾಗಿ ಅವನು ಸ್ವಲ್ಪ ಬೇಗಬಂದು ಕಾಯುತ್ತಿದ್ದ. ಅವಳು ಬಂದಳು. ತಾನು ಇಷ್ಟಪಟ್ಟ ಹುಡುಗಿಯ ಸ್ಥಳದಲ್ಲಿ ನಿಶಾಳನ್ನು ನೋಡಿ ಕೋಪ ಬಂತು. ಅವಳೇ ಆ ಹುಡುಗಿ ಅಂತ ಗೊತ್ತಾಗಿ ಇನ್ನೂ ನೊಂದು ಹೋದ. ನೀನು ನನಗೆ ಮೋಸ ಮಾಡಿಬಿಟ್ಟೆ ನಿಶಾ. “ಇನ್ನು ಯಾವತ್ತೂ ನನಗೆ ನಿನ್ನ ಮುಖ ತೋರಿಸಬೇಡ’ ಎಂದು ಹೇಳಿ ಅಲ್ಲಿಂದ ಸರಸರನೇ ಹೊರಟು ಹೋದ. ಅವಳ ಕಣ್ಣೀರು ನಿಲ್ಲುತ್ತಿರಲಿಲ್ಲ.

ಮನೆಗೆ ಹೋಗಿ ನೋಡಿದಾಗ ಅವನು ಅವಳನ್ನು ಬ್ಲಾಕ್‌ ಮಾಡಿದ್ದ. ಮಾತನಾಡುವುದು ಹೇಗೆ ಎಂದು ಗೊತ್ತಾಗದೇ ಅವಳು ಕಂಗೆಟ್ಟು ಹೋದಳು. ಮರುದಿನ ಅವನು  ಕಾಲೇಜಿಗೂ ಬಂದಿರಲಿಲ್ಲ. ತಿಳಿದುಕೊಳ್ಳೋಣವೆಂದರೆ ಅವನಿಗೆ ಯಾರೂ ಗೆಳೆಯರಿರಲ್ಲಿಲ್ಲ. ಒಂದು ವಾರದ ನಂತರ ಕಾಲೇಜಿನಲ್ಲಿ ಗೆಳೆಯರೆಲ್ಲರೂ ಸೇರಿ ಒಂದು ಈವೆಂಟ್‌ ಮಾಡಿದ್ದರು ಅಲ್ಲಿಗೆ ಜೋಡಿಯಾಗಿ ಬರಬೇಕು ಎಂಬ ನಿಯಮವೂ ಇತ್ತು. 

ಅವನ ಬಗ್ಗೆ ಕಂಡುಹಿಡಿಯಲೇಬೇಕು ಎಂದು ನಿರ್ಧರಿಸಿ ಹೇಗೋ ಅವನ ಆ ಕಾಲೇಜಿನ ಫ್ರೆಂಡ್ಸ್‌ನ್ನು ಮಾತನಾಡಿಸಿ ಕೇಳಿಯಾದ ಮೇಲೆ ಅವರು ವಿಚಾರವನ್ನೆಲ್ಲಾ ತಿಳಿಸಿದರು. ಅದನ್ನು ತಿಳಿದು ಅವಳಿಗೆ ಅವನ ಮೇಲೆ ಇನ್ನೂ ಪ್ರೀತಿ ಹೆಚ್ಚಾಯಿತು. ಕೊನೆಗೆ ಅವನ ನಂಬರ್‌ಕೂಡ ಸಿಕ್ಕಿತು. ಅದಕ್ಕೆ ಫೋನ್‌ ಮಾಡಿದಾಗ ಸೂರ್ಯ ಉತ್ತರಿಸಿದ್ದ. ಅವಳ ಸ್ವರ ಕೇಳಿದೊಡನೆ ಕೋಪಗೊಂಡವನಲ್ಲಿ ಅವಳು ಹೇಳುತ್ತಾಳೆ, “ಪ್ಲೀಸ್‌ ಸೂರ್ಯ ಫೋನ್‌ ಕಟ್‌ ಮಾಡಬೇಡ. ನನಗೆ ಆರಾಧ್ಯಳ ಬಗ್ಗೆ ಗೊತ್ತಾಯಿತು. ಎಲ್ಲರೂ ಅವಳಂತೆ ಚೀಟ್‌ ಆಗಿರಲ್ಲ ಕಣೋ. ನಾನು ನಿನ್ನನ್ನ ಮನಸಾರೆ ಇಷ್ಟಪಟ್ಟಿದ್ದೀನಿ. ಮೊದಮೊದಲು ನೀನು ನನಗೆ ಬರೀ ಒಂದು ಚಾಲೆಂಜ್‌ ಆಗಿದ್ದೆ. ಆದ್ರೆ ನಿನ್ನನ್ನ ಯಾವಾಗ ಪ್ರೀತಿಸಲು ಶುರು ಮಾಡಿದೆ ಅಂತಾನೇ ಗೊತ್ತಿಲ್ಲ. ನೀನು ನನ್ನನ್ನ ಬೆಸ್ಟ್‌  ಫ್ರೆಂಡ್‌ ಅಂದಿ ಅಲ್ವಾ? ಆ ಅಧಿಕಾರದಿಂದ ಆದ್ರೂ ನನಗೆ ಒಂದು ಅವಕಾಶ ಕೊಡೊ. ನೋಡು ನಾಳೆ ಈವೆಂಟ್‌ ಇದೆ. ಅಲ್ಲಿ ಕಪಲ್ಸ… ಬರಬೇಕು. ನಾನು ನಿಂಗೋಸ್ಕರ ಹೊರಗೆ ಕಾಯ್ತಾ ಇತೇìನೆ. ನಿಂಗೆ ನನ್ನ ಬಗ್ಗೆ ಸ್ವಲ್ಪ ಆದ್ರೂ ನಂಬಿಕೆ ಇದ್ರೆ ನಂಗೊಂದು ಅವಕಾಶ ಕೊಡು. ನೀನು ಬಾ. ಪ್ಲೀಸ್‌ ಕಣೋ. ಐ ಲವ್‌ ಯೂ’ ಎಂದು ಅವಳೇ ಫೋನ್‌ ಕಟ್‌ ಮಾಡುತ್ತಾಳೆ. 

ಮರುದಿನ ಅವಳು ಹೇಳಿದಂತೆ ಅವನಿಗಾಗಿ ಹೊರಗೆ ಕಾಯ್ತಾ¤ ಇರುತ್ತಾಳೆ. ಎಷ್ಟು ಹೊತ್ತಾದ್ರೂ ಅವನು ಬರುವುದೇ ಇಲ್ಲ. ಸೋತು ಅಳುತ್ತ ಕೂತಿರಬೇಕಾದರೆ ಯಾರಲ್ಲೋ ನೆರಳು ಎದುರು ನಿಂತಂತೆ ಕಾಣುತ್ತಿರುತ್ತದೆ. ತಲೆ ಎತ್ತಿದರೆ ಸೂರ್ಯ ನಿಂತಿದಾನೆ. ಅವಳಿಗಾದ ಖುಷಿಗೆ ಪಾರವೇ ಇಲ್ಲ. “ಕೊನೆಗೂ ನೀನು ಬಂದಿ ಅಲ್ವೋ? ನನಗೆ ಗೊತ್ತಿತ್ತು ಕಣೋ. ನಾನು ನಿನ್ನ ಕೈಬಿಡಲ್ಲ’ ಅಂತ ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾಳೆ. ಅವನೂ ತುಂಬಿದ ಕಣ್ಣಲ್ಲಿ “ಐ ಲವ್‌ ಯೂ’ ಅನ್ನುತ್ತಾನೆ. ಇಬ್ಬರೂ ನಗುತ್ತ ಒಳಗೆ ಹೋಗುತ್ತಾರೆ.

ಹೀಗೆ ಆರು ತಿಂಗಳು ಕಳೆಯುತ್ತದೆ. ಸೂರ್ಯ ಬದಲಾಗಿದ್ದ. ಜನರೊಡನೆ ಮತ್ತೆ ಬೆರೆಯತೊಡಗಿದ್ದ. ನಗುವುದನ್ನು ಕಲಿತ. ಇಂಟರ್‌ನೆಟ್‌ನ್ನು ಅತಿಯಾಗಿ ಅನುಸರಿಸುವುದು ಬಿಟ್ಟಿದ್ದ. ಇದಕ್ಕೆಲ್ಲ ಕಾರಣಳಾಗಿದ್ದ ನಿಶಾಳ ಮನಸ್ಸಿನಲ್ಲಿ ನೆಮ್ಮದಿಯಿತ್ತು. ಅವನ ಬದಲಾವಣೆಯ ಬಗ್ಗೆ ಹೆಮ್ಮೆ ಪಡುತ್ತ ಕೂತಿದ್ದಾಗ ಸೂರ್ಯ ಅವಳ ಕೈ ಹಿಡಿದು ಎಳೆದು, “ನಿಶಾ ಏನು ಯೋಚನೆ ಮಾಡ್ತಾ ಕೂತಿದ್ದಿಯಾ? ಬಾ ಲಾಂಗ್‌ ರೈಡ್‌ಗೆ ಹೋಗೋಣ’ ಎಂದಾಗ ನಗುತ್ತ ಅವನೊಡನೆ ಹೊರಟಳು.

– ಅಕ್ಷತಾ ಬನ್ನಂಜೆ
ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.