ಬೇಲಿಕೇರಿಯಲ್ಲಿ ಕಡಲ್ಕೊರೆತ ಮುಂದುವರಿಕೆ
Team Udayavani, Jun 30, 2017, 3:45 AM IST
ಕುಂದಾಪುರ: ಗಂಗೊಳ್ಳಿ ಪರಿಸರದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಈ ವ್ಯಾಪ್ತಿಯ ಬೇಲಿಕೇರಿ, ಸಾಂತಯ್ಯನ ಕೇರಿ, ಬ್ಯಾಲಿ ಕೊಡೇರಿ , ಖಾರ್ವಿಕೇರಿ ಪ್ರದೇಶದಲ್ಲಿ ಅಪಾಯದಲ್ಲಿರುವ ಸುಮಾರು 25 ಮನೆಗಳನ್ನು ಗುರುತಿಸಲಾಗಿದೆ. ಈ ಭಾಗದ ತೆಂಗಿನ ಮರಗಳು, ಬೃಹತ್ ಗಾತ್ರದ ಮರಗಳು ಸಮುದ್ರ ಪಾಲಾಗಿದ್ದು ಕಡಲ್ಕೊರೆತ ಹೀಗೆ ಮುಂದುವರಿದಲ್ಲಿ ಮನೆಗಳಿಗೂ ಅಪಾಯವಿದೆ.
ಕಲ್ಲುಗಳು ಸಮುದ್ರ ಪಾಲು
ಬೇಲಿಕೇರಿ ಪ್ರದೇಶದಲ್ಲಿ ನಿರ್ಮಿಸಲಾಗಿ ರುವ ತಾತ್ಕಾಲಿಕ ತಡೆಗೋಡೆ ಅಪಾಯಕ್ಕೆ ಸಿಲುಕಿದೆ. ಸಮುದ್ರದ ಅಬ್ಬರಕ್ಕೆ , ಅಲೆಗಳ ಹೊಡೆತಕ್ಕೆ ತಡೆಗೋಡೆ ಕುಸಿಯುತ್ತಿದ್ದು, ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.
ತಡೆಗೋಡೆ ರಚನೆಗೆ ಸೂಚನೆ
ಬೇಲಿಕೇರಿ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆ ಸಮುದ್ರದ ಅಬ್ಬರಕ್ಕೆ ಕುಸಿಯುತ್ತಿದ್ದು ಈ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ರಚನೆ ಮಾಡುವ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ನಡೆಯಲಿದೆ.
ಇದಕ್ಕೂ ಮುನ್ನ ಅಪಾಯದ ಸೂಚನೆ ಇರುವ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆಯನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಚಿತ್ರ: ಸುರಭಿ ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.