ಕೊಳವೆ ಬಾವಿಗಳ ಮರುಪೂರಣ: ಗ್ರಾ.ಪಂ.ಗಳ ನಿರ್ಲಕ್ಷ್ಯ
Team Udayavani, Jun 30, 2017, 3:45 AM IST
ಬೆಳ್ತಂಗಡಿ: 48 ಗ್ರಾಮ ಪಂಚಾಯತ್‌ಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಜಲ ಮರುಪೂರಣ ವ್ಯವಸ್ಥೆ ಕುಂಠಿತವಾಗಿದೆ. ಹೆಚ್ಚಿನ ಗ್ರಾ.ಪಂ.ಗಳಲ್ಲಿ ಯಥೇತ್ಛ ಕೊಳವೆ ಬಾವಿ ಕೊರೆಯಲಾಗಿದ್ದು ಕನಿಷ್ಠ ಜಲ ಮರುಪೂರಣದ ವ್ಯವಸ್ಥೆ ಮಾಡಿವೆ. ತಾಲೂಕಿನ ಒಟ್ಟು 48 ಗ್ರಾ.ಪಂ.ಗಳಲ್ಲಿ 458 ಸರಕಾರಿ ಕೊಳವೆ ಬಾವಿ ಕಾರ್ಯಚರಿಸುತ್ತಿದ್ದು 106 ಕೊಳವೆ ಬಾವಿಗಳಿಗೆ ಮಾತ್ರ ಜಲ ಮರುಪೂರಣ ಘಟಕ ನಿರ್ಮಿಸಲಾಗಿದೆ.
ಸರಕಾರದ ಮಟ್ಟದಲ್ಲೇ ಯಶಸ್ಸು ದಕ್ಕಿಲ್ಲ ಜಲ ಮರುಪೂರಣ ಮಾಡಿ ಅಂತರ್ಜಲ ವೃದ್ಧಿಸಿ ಎಂದು ಅರಿವು ಮೂಡಿಸುವ ಕಾರ್ಯ ಸರಕಾರ, ಆಡಳಿತ ವರ್ಗಗಳು ಮಾಡುತ್ತಿವೆಯಾದರೂ ಗ್ರಾ.ಪಂ.ಗಳಲ್ಲಿ ಜಲ ಮರುಪೂರಣ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಿಸಲು ಇನ್ನೂ ಸಾಧ್ಯವಾಗಿಲ್ಲ. ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಜಲ ಮರುಪೂರಣದ ಕಾರ್ಯ ಇನ್ನೂ ಪ್ರಾರಂಭವೇ ಆಗಿಲ್ಲ. ಹತ್ತಿಪ್ಪತ್ತು ಸಾರ್ವಜನಿಕ ಕೊಳವೆ ಬಾವಿ ಹೊಂದಿರುವ ಕೆಲವು ಗ್ರಾ.ಪಂ.ಗಳಲ್ಲಿ ಕೇವಲ ಒಂದೆರಡು ಕೊಳವೆ ಬಾವಿಗಳು ಮಾತ್ರ ಜಲ ಮರುಪೂರಣದ ಭಾಗ್ಯ ಕಂಡಿವೆ.
ಶೂನ್ಯ ಸಂಪಾದಿಸಿದ 9 ಗ್ರಾ.ಪಂ.ಗಳು
ಅರಸಿನಮಕ್ಕಿ, ಬಳಂಜ, ಇಂದಬೆಟ್ಟು, ಮಾಲಾಡಿ, ನಾವುರ, ಮಲವಂತಿಗೆ, ಸುಲ್ಕೇರಿ, ಶಿಶಿಲ, ಶಿಬಾಜೆ ಹೀಗೆ ತಾಲೂಕಿನ ಒಟ್ಟು ಒಂಭತ್ತು ಗ್ರಾ.ಪಂ.ಗಳಲ್ಲಿ ಜಲ ಮರುಪೂರಣದ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಲ್ಲ. ಹತ್ತಾರು ಕೊಳವೆಬಾವಿ ಹೊಂದಿವೆಯಾದರೂ ಕನಿಷ್ಠ ಒಂದು ಜಲ ಮರುಪೂರಣ ಘಟಕ ಸ್ಥಾಪಿಸಿಲ್ಲ. ಹೆಚ್ಚಿನ ಗ್ರಾ.ಪಂ.ಗಳು ಮುಂದಿನ ಯೋಜನೆಯಾಗಿ ಜಲ ಮರುಪೂರಣ ವ್ಯವಸ್ಥೆಯನ್ನು ಕಾಯ್ದಿರಿಸಿವೆ.
ಅರಿವಿನ ಕೊರತೆ
ಎಲ್ಲೆಲ್ಲೂ ನೀರಿನ ಅಭಾವದಿಂದ ವರುಷದಿಂದ ವರುಷಕ್ಕೆ ಕೊಳವೆ ಬಾವಿಗಳನ್ನು ಹೆಚ್ಚೆಚ್ಚು ಕೊರೆಸಲಾಗುತ್ತಿದೆ ಎಂದು ಪಂಚಾಯತ್‌ಗಳು ತಿಳಿಸುತ್ತವೆ. ಆದರೆ ಜಲ ಮರುಪೂರಣದ ಅರಿವು ಇನ್ನಷ್ಟೇ ಮೂಡಬೇಕಿದೆ. ತುರ್ತಾಗಿ ಆಗ
ಬೇಕಾದ ಕಾರ್ಯ ಎಂಬ ನಿಯಮಕ್ಕೆ ಯಾವ ಗ್ರಾ.ಪಂ.ಗಳೂ ಒಗ್ಗಿಕೊಂಡಂತೆ ಕಾಣುತ್ತಿಲ್ಲ. ಮುಂದೆ ಮಾಡಿದರೆ ಆಯಿತು ಎಂಬ ಧೋರಣೆ ಎದ್ದು ಕಾಣುತ್ತದೆ. ಸರಕಾರದ ಮಟ್ಟದಲ್ಲಿ ಅವಗಣನೆಗೆ ಒಳಪಟ್ಟಿರುವುದರಿಂದ ಖಾಸಗಿಯಾಗಿ ಜಲ ಮರುಪೂರಣದ ವ್ಯವಸ್ಥೆ ತೀರ ವಿರಳವಾಗಿದೆ.
ಪ್ರತಿ ಗ್ರಾ.ಪಂ.ನಲ್ಲಿ ಅಂದಾಜು ಮೇರೆಗೆ 100-200 ಖಾಸಗಿ ಕೊಳವೆ ಬಾವಿಗಳಿವೆ. ಆದರೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡಿರುವವರು ವಿರಳ.
ಕಟ್ಟುನಿಟ್ಟಿನ ಕ್ರಮ ಅಗತ್ಯ
ಪ್ರಸ್ತುತ ಉದ್ಯೋಗ ಖಾತರಿ ಯೋಜನೆಯಲ್ಲಿ ಜಲ ಮರುಪೂರಣ ಘಟಕ ನಿರ್ಮಾಣ ಕಾರ್ಯವಾಗುತ್ತಿದೆ. ಗ್ರಾ.ಪಂ.ಗಳು ಸ್ವಯಂಪ್ರೇರಿತವಾಗಿ ಘಟಕ ನಿರ್ಮಾಣ ಮಾಡುತ್ತಿವೆ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂಬ ಕಾನೂನಿನಂತೆ ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ಇಂಗುಗುಂಡಿ ರಚನೆ ಮಾಡಬೇಕು ಎಂಬ ಕಾನೂನು ತರುವುದು ಅಗತ್ಯವಾಗಿದೆ.
– ಚಂದ್ರಶೇಖರ್ ಎಸ್. ಅಂತರ
ಜಲ ಮರುಪೂರಣ
ಅಂಕಿ ಅಂಶ
ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 7 ಕೊಳವೆ ಬಾವಿಗಳಿವೆ. 1 ಕೊಳವೆ ಬಾವಿಗೆ ಮಾತ್ರ ಜಲ ಮರು
ಪೂರಣ ಅಳವಡಿಸಲಾಗಿದೆ. ಚಾರ್ಮಾಡಿಯಲ್ಲಿ 24 ಇದ್ದು 2 ಕಡೆ ಮಾತ್ರ ಇದರ ಅನುಷ್ಠಾನ ಆಗಿದೆ. ಬಳಂಜದಲ್ಲಿ 5 ಮತ್ತು ಇಂದಬೆಟ್ಟುವಿನಲ್ಲಿ 12 ಇದೆ. ಆದರೆ ಒಂದೇ ಒಂದು ಕಡೆಯೂ ಮರುಪೂರಣ ಆಗಿಲ್ಲ. ಮಿತ್ತಬಾಗಿಲಿನಲ್ಲಿ 30 ಕೊಳವೆ ಬಾವಿಗಳ ಪೈಕಿ 12ಕ್ಕೆ ಜಲಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಲಾೖಲದಲ್ಲಿ 11ರಲ್ಲಿ 1 ಕೊಳವೆಬಾವಿಗೆ ಮಾತ್ರ ಇದರ ಅನುಷ್ಠಾನ ಆಗಿದೆ.
ಪೇಟೆಯಲ್ಲಿ
ಇಂಗುಗುಂಡಿ ಸಮಸ್ಯೆ
ಗ್ರಾ.ಪಂ. ವ್ಯಾಪ್ತಿಯ ಪ್ರಮುಖ ಪೇಟೆಗಳಲ್ಲಿ ಕೆಲವು ಕೊಳವೆ ಬಾವಿಗಳಿದ್ದು ಅದಕ್ಕೆ ಮರುಪೂರಣ ಘಟಕ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಪೇಟೆ ಪ್ರದೇಶ ಹೊರತುಪಡಿಸಿ ಹೊರವಲಯದಲ್ಲಿರುವ ಕೊಳವೆಬಾವಿಗಳಿಗೆ ಇಂಗುಗುಂಡಿ ರಚಿಸುವ ಕಾರ್ಯ ಹಂತಹಂತವಾಗಿ ಮಾಡಲಾಗುವುದು.
– ಗ್ರಾ.ಪಂ.ಗಳ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.