ಪೊಲೀಸರಿಗೆ ಪಿಗ್ಗಿ ಬ್ಯಾಂಕ್ ಲಂಚ!
Team Udayavani, Jun 30, 2017, 3:10 AM IST
ಮೇರಠ್: ಲಂಚ ಕೊಡದಿದ್ರೆ ಪೊಲೀಸರು ಕೆಲಸ ಮಾಡಲ್ಲ ಅನ್ನೋದು ಸಾಮಾನ್ಯ ಆರೋಪ. ಇದಕ್ಕೆ ಪೂರಕವಾಗಿ, 5ರ ಬಾಲಕಿಯೊಬ್ಬಳು ತನ್ನ ತಾಯಿಯ ಕೊಲೆ ಪ್ರಕರಣವನ್ನು ಶೀಘ್ರ ತನಿಖೆ ಮಾಡುವಂತೆ ಪೊಲೀಸರಿಗೆ ನಾಣ್ಯದ ಹುಂಡಿಯನ್ನೇ ನೀಡಲು ಮುಂದಾಗಿದ್ದು, ಪೊಲೀಸರು ತಲೆತಗ್ಗಿಸುವಂತೆ ಮಾಡಿದೆ! ಬಾಲಕಿ ಮಾನ್ವಿ ಮಂಗಳವಾರ ಅಜ್ಜನೊಂದಿಗೆ ಪೊಲೀಸ್ ಐಜಿಯನ್ನು ಭೇಟಿಯಾಗಿ, ಲಂಚವಾಗಿ ತನ್ನ ಪಿಗ್ಗಿ ಬ್ಯಾಂಕ್ ನೀಡಿ, ತಾಯಿಯ ಸಾವನ್ನು ಬೇಗ ತನಿಖೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಲಂಚ ನೀಡದ ಹೊರತು, ಕೇಸು ಪರಿಹಾರವಾಗಲ್ಲ ಎಂದು ಹೇಳಿದ್ದರಿಂದ ಆಕೆ ಈ ರೀತಿ ಮಾಡಿದ್ದಾಳೆ. ಬಾಲಕಿ ಮಾತಿಂದ ಪೋಲೀಸರು ಅವಕ್ಕಾಗಿದ್ದಾರೆ!
ಮಾನ್ವಿ ತಾಯಿ ಸೀಮಾ ಕೌಶಿಕ್ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಆಕೆ ವಿರುದ್ಧ 2 ಸುಳ್ಳು ಕೇಸುಗಳನ್ನು ಪತಿ ಮನೆಯವರು ದಾಖಲಿಸಿದ್ದರು. ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಸಮಸ್ಯೆ ಪರಿಹಾರವಾಗದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಪೊಲೀಸರು ಆರೋಪಪಟ್ಟಿ ದಾಖಲಿಸದೇ, ಲಂಚ ನೀಡುವಂತೆ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿ ಐಜಿಯನ್ನು ಭೇಟಿಯಾಗಿದ್ದಾಳೆ. ಕಚೇರಿಯಿಂದ ಹೊರಬರುತ್ತಲೇ, ನಾಣ್ಯದ ಹುಂಡಿಯನ್ನು ಆಕೆ ಬೀಳಿಸಿಕೊಂಡಿದ್ದು, ಬಳಿಕ ಅತ್ತಿದ್ದು, ಎಂಥವರ ಮನವನ್ನೂ ಕಲಕುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.