‘ಸ್ವಚ್ಛ ಭಾರತ’ ಮರೆತ ಸಚಿವ!
Team Udayavani, Jun 30, 2017, 3:15 AM IST
ಪಟ್ನಾ: ‘ಸ್ವಚ್ಛ ಭಾರತ’ ಕೇಂದ್ರ ಸರಕಾರದ ಅಭಿಯಾನ. ಆದರೆ, ಕೇಂದ್ರ ಸಚಿವರೇ ಇದನ್ನು ಮರೆತು ಸಾರ್ವಜನಿಕ ವಾಗಿಯೇ ಮೂತ್ರ ಮಾಡಿದರೆ..? ಇಂಥದ್ದೊಂದು ಅನಪೇಕ್ಷಿತ ನಡವಳಿಕೆ ಪ್ರದರ್ಶಿಸಿ, ಕೃಷಿ ಸಚಿವ ರಾಧಾಮೋಹನ್ ಸಿಂಗ್ ಸರ್ವತ್ರ ಟೀಕೆಗೆ ಗುರಿಯಾಗಿದ್ದಾರೆ. ರಾಧಾ ಮೋಹನ್ ಸಿಂಗ್ ಅವರು ಕಾರು ನಿಲ್ಲಿಸಿ, ಗೋಡೆಯೊಂದರ ಮೇಲೆ ಉಚ್ಚೆ ಹೊಯ್ಯುತ್ತಿರುವ, ಬದಿಯಲ್ಲೇ ಅವರ ಭದ್ರತಾ ಸಿಬ್ಬಂದಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಚಿವರು ಇತ್ತೀಚೆಗೆ ತಮ್ಮ ಲೋಕಸಭಾ ಕ್ಷೇತ್ರ, ಬಿಹಾರದ ಪೂರ್ವ ಚಂಪಾರಣ್‌ನ ಮೋತಿಹಾರ್‌ಗೆ ಭೇಟಿ ನೀಡಿದ್ದು, ವೇಳೆ ಸಾರ್ವಜನಿಕವಾಗಿ ದೇಹಬಾಧೆ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿ ಟೀಕೆಗಳು ಕೇಳಿಬರುತ್ತಿದ್ದಂತೆ ಸಚಿವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹತ್ತಿರದಲ್ಲಿ ಶೌಚಾಲಯ ಇರಲಿಲ್ಲ. ಪರಿಣಾಮ ಹೀಗೆ ಮಾಡಬೇಕಾಯಿತು ಎಂದಿದ್ದಾರೆ. ಅಲ್ಲದೇ ಈ ಚಿತ್ರ ಒಂದು ವರ್ಷ ಅಥವಾ ಆರು ತಿಂಗಳು ಹಳತು ಎಂದೂ ಹೇಳಿದ್ದಾರೆ. ಸಚಿವರ ಈ ಫೋಟೋವನ್ನು ಆರ್‌ಜೆಡಿ ಟ್ವೀಟರ್‌ನಲ್ಲಿ ಪ್ರಕಟಿಸಿದ್ದು, ಲೇವಡಿ ಮಾಡಿದೆ.
‘ಸರಕಾರ ನಮ್ಮಿಂದ ಸ್ವಚ್ಛ ಭಾರತ ಸೆಸ್ ಪಡೆಯುತ್ತಿದ್ದರೆ, ಕೇಂದ್ರದ ಸಚಿವರೇ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದು ಸರಿಯೇ,’ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
MUST WATCH
ಹೊಸ ಸೇರ್ಪಡೆ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.