ಶಿವಾಜಿನಗರ ಮಹಿಳಾ ಠಾಣೆ ಅವ್ಯವಸ್ಥೆ ಕಂಡ ನಾಗಲಕ್ಷ್ಮೀ ಬಾಯಿ
Team Udayavani, Jun 30, 2017, 11:14 AM IST
ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಗುರುವಾರ ಶಿವಾಜಿನಗರ ಮಹಿಳಾ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳಾ ಠಾಣೆಯ ಕಟ್ಟಡ ಪರಿಶೀಲನೆ ನಡೆಸಿದ ಅವರು ಅಲ್ಲಿನ ಸಿಬ್ಬಂದಿ ಜತೆ ಸುಮಾರು ಒಂದು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.
ಈ ವೇಳೆ ಠಾಣೆಯಲ್ಲಿರುವ ಇನ್ಸ್ಪೆಕ್ಟರ್ ಸೇರಿದಂತೆ 18 ಮಂದಿ ಮಹಿಳಾ ಸಿಬ್ಬಂದಿ ಮೂಲಸೌಕರ್ಯ, ಶಿಥಿಲಗೊಂಡ ಕಟ್ಟಡ ಹಾಗೂ ಉತ್ತಮ ಶೌಚಾಲಯ ಇಲ್ಲದಿರುವುದನ್ನು ನಾಗಲಕ್ಷ್ಮೀ ಬಾಯಿ ಗಮನಿಸಿದರು. ಇರುವ ಒಂದೇ ಶೌಚಾಲಯವನ್ನೆ ಸಿಬ್ಬಂದಿ ಹಾಗೂ ದೂರು ನೀಡಲು ಬರುವ ಮಹಿಳೆಯರು ಬಳಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ನಾಗಲಕ್ಷ್ಮೀಬಾಯಿ ಅವರು, ಮಹಿಳಾ ಠಾಣೆಯಲ್ಲಿರುವ ಅವ್ಯವಸ್ಥೆ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು. ನಗರದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 10 ಮಹಿಳಾ ಠಾಣೆ ಸ್ಥಾಪಿಸಬೇಕು.
ಖಾಯಂ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಬೇಕು ಹಾಗೂ ಸದ್ಯ ಶಿವಾಜಿನಗರ ಮಹಿಳಾ ಠಾಣೆಗೆ ಇನ್ನು 17 ಮಂದಿ ಸಿಬ್ಬಂದಿ ಅಗತ್ಯವಿದ್ದು, ಕೂಡಲೇ ನಿಯೋಜಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಜುಮಾಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.