ಹೆಂಡದಂಗಡಿ ಎತ್ತಂಗಡಿ
Team Udayavani, Jun 30, 2017, 4:19 PM IST
ಹುಬ್ಬಳ್ಳಿ: ಹೆದ್ದಾರಿಗಳಲ್ಲಿ ಅಪಘಾತ ತಡೆ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಂಚಿನಲ್ಲಿ 500 ಮೀ. ಒಳಗಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳ ಸ್ಥಳಾಂತರಕ್ಕೆ ಸೂಚಿಸಿದ್ದು, ಅದರಂತೆ ಜು. 1ರಿಂದ ಅವಳಿನಗರ ಸೇರಿದಂತೆ ಜಿಲ್ಲೆಯ 130ಕ್ಕೂ ಅಧಿಕ ಬಾರ್‌ಗಳು ಸ್ಥಳಾಂತರಗೊಳ್ಳಲಿವೆ ಅಥವಾ ಬಂದ್ ಆಗಲಿವೆ.
ಜಿಲ್ಲೆಯಲ್ಲಿ ಧಾರವಾಡ ಸೇರಿದಂತೆ ಹುಬ್ಬಳ್ಳಿ, ಕಲಘಟಗಿ, ನವಲಗುಂದ ಹಾಗೂ ಕುಂದಗೋಳದಾದ್ಯಂತ ಒಟ್ಟು 257 ಮದ್ಯದಂಗಡಿಗಳಿದ್ದು, 130ಕ್ಕೂ ಹೆಚ್ಚು ಬಂದ್ ಅಥವಾ ಸ್ಥಳಾಂತರಗೊಳಲಿವೆ. ಹುಬ್ಬಳ್ಳಿಯಲ್ಲಿ 70 ಹಾಗೂ ಧಾರವಾಡದಲ್ಲಿ 50ಕ್ಕೂ ಹೆಚ್ಚು ಮದ್ಯದಂಗಡಿಗಳು ಯಥಾಸ್ಥಿತಿ ಕಾಯ್ದುಕೊಳ್ಳಲಿವೆ.
ಆರಂಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ ಮದ್ಯದಂಗಡಿಯ ಸ್ಥಳಾಂತರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದು, ಇದರಿಂದ ಜಿಲ್ಲೆಯ ಮದ್ಯದ ವ್ಯಾಪಾರಿಗಳು ಮತ್ತು ಮದ್ಯ ಪ್ರಿಯರಲ್ಲಿ ಆತಂಕ ಮೂಡಿದೆ. ಇದಲ್ಲದೆ ಈ ಆದೇಶದಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ನಷ್ಟವಾಗುವ ಎಲ್ಲ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ 4 ರಾಷ್ಟ್ರೀಯ ಹೆದ್ದಾರಿ, 13 ರಾಜ್ಯ ಹೆದ್ದಾರಿಗಳಿದ್ದು ಕ್ರಮವಾಗಿ 180 ಹಾಗೂ 484 ಕಿ.ಮೀ. ವ್ಯಾಪ್ತಿ ಹೊಂದಿದೆ. ಅದರಲ್ಲಿ 255 ಮದ್ಯದಂಗಡಿಗೆ ಪರವಾನಗಿ ನೀಡಲಾಗಿದೆ. ಈ ಪೈಕಿ ಹುಬ್ಬಳ್ಳಿ- ಧಾರವಾಡ ತಾಲೂಕಿನಲ್ಲಿಯೇ 222 ಬಾರ್ ಗಳಿವೆ. ಹು-ಧಾ ರಸ್ತೆಯ ಆಸುಪಾಸಿನಲ್ಲಿ 100ಕ್ಕೂ ಹೆಚ್ಚು ಬಾರ್‌ಗಳು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.
ಉಳಿದಂತೆ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕಿನ 35 ವೈನ್ ಶಾಪ್ ಮತ್ತು ರೆಸ್ಟೋರೆಂಟ್, ಎಂಎಸ್‌ಐಎಲ ಮಳಿಗೆಗಳಲ್ಲಿ 28 ಮದ್ಯದಂಗಡಿಗಳು ಸ್ಥಳಾಂತರಗೊಳ್ಳಲಿವೆ.
ಇನ್ನು ನಗರದ ಹಳೇ ಬಸ್ ನಿಲ್ದಾಣ ಸುತ್ತಲಿನ ಹಾಗೂ ಜನತಾ ಬಜಾರ್‌ನ ಕೆಲವೊಂದು ಬಾರ್‌ಗಳಿಗೆ ಬೀಗ ಬೀಳಲಿದೆ. ಹುಬ್ಬಳ್ಳಿಯ 141ರಲ್ಲಿ 71, ಧಾರವಾಡದ 81ರಲ್ಲಿ 31, ಕಲಘಟಗಿಯ ಎಲ್ಲ 8, ಕುಂದಗೋಳದ 12ರಲ್ಲಿ 8, ನವಲಗುಂದದ 15ರಲ್ಲಿ 12 ಬಾರ್‌ಗಳು ಸ್ಥಳಾಂತರಗೊಳ್ಳಲಿವೆ ಅಥವಾ ಬಂದ್ ಆಗಲಿವೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.