ಸುಳ್ಯ ನ.ಪಂ.: ಎರಡು ವಾರ್ಡ್ ಹೆಚ್ಚಳವಾಗಿ ಪುರಸಭೆಯಾಗಲಿದೆಯೇ?
Team Udayavani, Jul 1, 2017, 3:50 AM IST
ಸುಳ್ಯ: ರಾಜ್ಯ ಸರಕಾರವು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಪುನಃ ವಿಂಗಡಣೆ ಮಾಡಲು ನಿರ್ಧರಿಸಿದ್ದು, ಅದರಂತೆ ಸುಳ್ಯ ನ.ಪಂ.ನಲ್ಲಿ 2 ವಾರ್ಡ್‌ಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಇದುವರೆಗೆ ಇದ್ದ 18 ವಾರ್ಡ್ ಗಳ ಸಂಖ್ಯೆ 20ಕ್ಕೇರಲಿದೆ. ಪ್ರಸ್ತುತ ದುಗಲಡ್ಕ, ಕೊಯಿಕುಳಿ, ಜಯನಗರ, ಶಾಂತಿನಗರ, ಹಳೆಗೇಟು, ಬೀರಮಂಗಲ, ರಥಬೀದಿ (ಬಿಡಿಒ), ಅಂಬಟೆಡ್ಕ, ಕೇರ್ಪಳ, ಕುರುಂಜಿಗುಡ್ಡೆ, ಭಸ್ಮಡ್ಕ, ಕೆರೆಮೂಲೆ, ಬೂಡು, ಕಲ್ಲುಮುಟ್ಲು, ನಾವೂರು, ಕಾಯರ್ತೋಡಿ, ಬೋರು ಗುಡ್ಡೆ, ಜಟ್ಟಿಪಳ್ಳ ಹೀಗೆ 18 ವಾರ್ಡ್‌ಗಳಿದ್ದು,ಇದೀಗ ಜಯ ನಗರ ಹಳೆಗೇಟು ವ್ಯಾಪ್ತಿಯಲ್ಲಿ 19ನೇ ಮತ್ತು ಮೊಗರ್ಪಣೆ ಕೊಡಿಯಾಲಬೈಲು ರಸ್ತೆ ಬ್ರಹ್ಮನಗರದ ವ್ಯಾಪ್ತಿಯಲ್ಲಿ 20ನೇ ವಾರ್ಡ್ ರಚನೆಯಾಗಲಿದೆ.
ಪುರಸಭೆಯಾಗಲಿದೆಯೇ?
ಸುಳ್ಯ ನ.ಪಂ.ನ ಜನಸಂಖ್ಯೆ 2011ರ ಜನಗಣತಿ ಪ್ರಕಾರ 19,958 ಆಗಿದ್ದು, ಇದು ಪುರಸಭೆಯನ್ನಾಗಿ ಮಾಡಲು ಅಡ್ಡಿಯಾಗಿತ್ತು. ಪುರಸಭೆ ಮಾಡಲು 20,000ಕ್ಕಿಂತ ಹೆಚ್ಚು ಜನಸಂಖ್ಯೆ ಅಗತ್ಯ ವಿದೆ. ಹಾಗಾಗಿ ಸಮೀಪದ ಆಲೆಟ್ಟಿ ಗ್ರಾಮದ ಅರಂಬೂರು ಹಾಗೂ ಜಾಲ್ಸೂರು ಗ್ರಾಮದ ಕುಕ್ಕಂದೂರನ್ನು ನಗರ ವ್ಯಾಪ್ತಿಗೆ ಸೇರಿಸಿ ಇದನ್ನು ಪುರಸಭೆಯನ್ನಾಗಿ ಮಾಡಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರಕಾರ ಪರಿಶೀಲನೆ ನಡೆಸಿದ್ದು, ಮುಂದಿನ ವರ್ಷ ಸುಳ್ಯವನ್ನು ಪುರಸಭೆ ಎಂದು ಘೋಷಿಸುವ ಸಾಧ್ಯತೆಯೂ ಇದೆ. 2018 ಮಾರ್ಚ್‌ನಲ್ಲಿ ಈಗಿನ ನ.ಪಂ.ಆಡಳಿತದ ಅವಧಿ ಮುಗಿಯಲಿದ್ದು, ಆ ವೇಳೆಗೆ ಸುಳ್ಯ ಪುರಸಭೆಯಾಗಲಿದೆಯೇ ಅಥವಾ 20 ವಾರ್ಡ್‌ಗಳ ನ.ಪಂ. ಆಗಿಯೇ ಮುಂದುವರಿಯಲಿದೆಯೇ ಎನ್ನುವುದು ರಾಜ್ಯ ಸರಕಾರ ನಿರ್ಧಾರದ ಮೇಲಿದೆ. ಪುರಸಭೆಯಾದರೆ ಸುಳ್ಯಕ್ಕೆ ಹೆಚ್ಚಿನ ಅನುದಾನ ಸಿಗಲಿದೆ.
ಮತ್ತೆ ನಿರ್ಣಯ
ಪುರಸಭೆ ಮಾಡಲು ಹಿಂದೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರಕಾರವು ಪರಿಶೀಲನೆ ನಡೆಸಿತ್ತು. ಆ ಬಳಿಕ ಪ್ರಕ್ರಿಯೆ ಮುಂದುವರಿಯದ ಕಾರಣ ಜುಲೈ ತಿಂಗಳಲ್ಲಿ ವಿಶೇಷ ಸಭೆ ನಡೆಸಿ ನ.ಪಂ.ನ್ನು ಪುರಸಭೆಯನ್ನಾಗಿ ಮಾಡಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಿದ್ದೇವೆ. ನ.ಪಂ.ವ್ಯಾಪ್ತಿಗೆ ಸೇರಿಸುವ ಹತ್ತಿರದ ಯಾವ ಊರು ಸೂಕ್ತ ಎನ್ನುವ ಬಗ್ಗೆ ಸರ್ವೆ ನಡೆಸಬೇಕಾಗಿದೆ.
– ಶೀಲಾವತಿ ಮಾಧವ, ಅಧ್ಯಕ್ಷೆ , ನಗರ ಪಂಚಾಯತ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.