ಹಳೆ ಕಲಾ ವೈಭವ ಮರಳಲಿದೆ ಪುರಭವನ ರಂಗೇರಿ ಹೊಳೆಯಲಿದೆ


Team Udayavani, Jul 1, 2017, 3:40 AM IST

Town-Hall-Mangalore-600.jpg

ಮಹಾನಗರ: ಜಿಲ್ಲೆಯ ಎಲ್ಲ ರೀತಿಯ ಕಲಾಚಟುವಟಿಕೆಗಳ ಕೇಂದ್ರಬಿಂದುವಾಗಿರುವ ನಗರದ ಪುರಭವನವು ಕಲಾವಿದರ ಕೈಗೆಟಕುವ ಬಾಡಿಗೆ ದರದಲ್ಲಿ ಲಭ್ಯವಾಗುವ ದಿನ ಬಂದಾಯಿತು. ಒಂದೊಮ್ಮೆ ಪ್ರತಿದಿನ ಕಾರ್ಯಕ್ರಮಗಳ ಮೂಲಕವೇ ಗುರುತಿಸಿದ್ದ ಪುರಭವನವು ನವೀಕರಣಗೊಂಡ ಬಳಿಕ ದುಬಾರಿ ಬಾಡಿಗೆ ಮೂಲಕ  ಬಡ ಕಲಾವಿದರಿಗೆ ಗಗನ ಕುಸುಮವಾಗಿದೆ  ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈಗ ಮೇಯರ್‌ ಕವಿತಾ ಸನಿಲ್‌ ನೇತೃತ್ವದ  ಪಾಲಿಕೆಯು ಬಾಡಿಗೆ ಇಳಿಸುವ ಮೂಲಕ ‘ಕಲಾವಿದರು- ಕಲಾಸಕ್ತರಿಗೆ’ ಭರ್ಜರಿ ಕೊಡುಗೆ ನೀಡಿದೆ.

ನವೀಕರಣಗೊಳ್ಳುವ ಮೊದಲು ಉಚಿತ ನಾಟಕ ಪ್ರದರ್ಶನಕ್ಕೆ 3,000 ರೂ. ಬಾಡಿಗೆ ಹಾಗೂ 1,500 ರೂ. ಮರುಪಾವತಿಯಾಗುವ ಠೇವಣಿಯಿತ್ತು. ನವೀಕರಣದ ಬಳಿಕ ಅದು 10,000 ಬಾಡಿಗೆ ಹಾಗೂ 15,000 ರೂ. ಠೇವಣಿ ಇತ್ತು. ಜತೆಗೆ ಶೇ.14.5 ಸೇವಾ ತೆರಿಗೆ ಪಾವತಿಸಬೇಕಿತ್ತು. ಈಗ ಇದನ್ನು 5,000 ರೂ.ಬಾಡಿಗೆ ಹಾಗೂ 5,000 ಠೇವಣಿ ಎಂದು ನಿಗದಿಪಡಿಸಲಾಗಿದ್ದು, ಇನ್ನು ಕಾರ್ಯಕ್ರಮಗಳ ಸುಗ್ಗಿ ಆರಂಭವಾಗಲಿದೆ. 

1964ರಿಂದ ಇಲ್ಲಿಯವರೆಗೆ…
1964ರಲ್ಲಿ ಮಂಗಳೂರು ಪುರಭವನವನ್ನು ಅಂದಿನ ರಾಜ್ಯಪಾಲ ಜ|ನಾಗೇಶ್‌ ಉದ್ಘಾಟಿಸಿದ್ದರು. 1998ರಲ್ಲಿ ದಾನಿಗಳ ಸಹಕಾರೊಂದಿಗೆ ಹೊರಾಂಗಣ ವಿನ್ಯಾಸಗೊಳಿಸಲಾಗಿತ್ತು. 2014 ಡಿ.29ಕ್ಕೆ  ಕಟ್ಟಡಕ್ಕೆ 50 ವರ್ಷ ತುಂಬಿತ್ತು. ಈ ಹಿನ್ನೆಲೆಯಲ್ಲಿ 2014ರ ಸೆ. 29ರಂದು ಮನಪಾ ಸಾಮಾನ್ಯ ಸಭೆಯಲ್ಲಿ ಪುರಭವನ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಣಯಿಸಲಾಗಿತ್ತು. 2015 ನ.14ರಂದು ನವೀಕೃತಗೊಂಡು ಉದ್ಘಾಟಿಸಲ್ಪಟ್ಟು, ಡಿಸೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಕ್ತವಾಗಿತ್ತು. 

ನವೀಕೃತ ಪುರಭವನದೊಳಗೆ..
ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಒಳಾಂಗಣದಲ್ಲಿ ಉತ್ಕೃಷ್ಟ ಮಟ್ಟದ ಕಲಾ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ನವೀಕೃತ ಪುರಭವನದ ವೆಚ್ಚ ಸುಮಾರು 4.58 ಕೋ.ರೂ. ಆಗಿತ್ತು.  ಒಳಾಂಗಣದಲ್ಲಿ ಅಕಾಸ್ಟಿಕ್‌, ಫಾಲ್ಸಿàಲಿಂಗ್‌, ಧ್ವನಿ ಬೆಳಕು ಮತ್ತು ವೇದಿಕೆ, ಆಸನಗಳ ಅಳವಡಿಕೆ, ಜನರೇಟರ್‌ ಮತ್ತು ವಿದ್ಯು ದೀಕರಣ ಕಾಮಗಾರಿ, ವಿಶಿಷ್ಟ ಹಾಗೂ ಆಧುನಿಕ ತಾಂತ್ರಿಕತೆಗೆ ಪೂರಕವಾದ ಸವಲತ್ತುಗಳನ್ನು ಒದಗಿಸಲಾಗಿದೆ. ವೇದಿಕೆಗೆ ಮರದ ಫ್ಲೋರಿಂಗ್‌ ಅಳವಡಿಸಿ ವಿಸ್ತರಣೆ, ಅತ್ಯಾಧುನಿಕ ಬೆಳಕು, ಧ್ವನಿ ಮತ್ತು ಗ್ರೀನ್‌ರೂಮ್‌ನಲ್ಲಿ ಕಲಾವಿದರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಆಕರ್ಷಕ ಎಲ್‌ಇಡಿ, ನಾಮಫಲಕ, ಗಾರ್ಡನಿಂಗ್‌, ಹಾಗೂ ಹೊರಾಂಗಣದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ. 

ಹಳೆಯ ಮಂಗಳೂರಿಗೆ ನೆನಪುಗಳ ತೋರಣ..!
ವಿಶೇಷವಾಗಿ, ಮಂಗಳೂರಿನ ಹಳೆಯ ದಿನಗಳು ಹೇಗಿದ್ದವು ಎಂಬುದರ ಕುರುಹುಗಳ ಛಾಯಾಚಿತ್ರಗಳನ್ನು ಮಂಗಳೂರಿನ ಬಾಶೆಲ್‌ ಮಿಶನ್‌ ಸಂಸ್ಥೆಯವರು ಜೋಪಾನವಾಗಿ ತೆಗೆದಿರಿಸಿದ್ದರು. ಹಿಂದಿನ ಮಂಗಳೂರಿನ ಸ್ಥಿತಿ-ಗತಿಗಳು ಈ ಚಿತ್ರದಲ್ಲಿ ದಾಖಲಿಸಲ್ಪಟ್ಟಿದೆ. ಇಂತಹ ಅಪರೂಪದ ಸುಮಾರು 20 ಛಾಯಾಚಿತ್ರಗಳನ್ನು ಮಂಗಳೂರು ಪುರಭವನದಲ್ಲಿ ಜೋಡಿಸಲಾಗಿದೆ. ಜತೆಗೆ ವೈಯಕ್ತಿಕವಾಗಿ ಕೆಲವರು ಸಂಗ್ರಹಿಸಿದ್ದ ಮಂಗಳೂರಿನ ಹಳೆಯ ದಿನಗಳನ್ನು ನೆನಪಿಸುವ ಛಾಯಾಚಿತ್ರಗಳು ಇಲ್ಲಿವೆ.

ಭೋಜನ ಶಾಲೆಯೂ/ಸಭಾಂಗಣವೂ..!
ಪುರಭವನದ ಹತ್ತಿರದಲ್ಲಿ ಭೋಜನ ಶಾಲೆಯನ್ನು ಸಭಾಂಗಣವಾಗಿಯೂ ವಿನ್ಯಾಸಗೊಳಿಸಲು ನಿರ್ಧರಿಸಿ, ಫೆ.27ರಂದು ಉದ್ಘಾಟಿಸಲಾಗಿತ್ತು. ಪುರಭವನದಲ್ಲಿ ಭೋಜನ ಗೃಹದ ವ್ಯವಸ್ಥೆಯಿರಲಿಲ್ಲವಾದ್ದರಿಂದ  500 ಜನರ ಸಾಮರ್ಥ್ಯದ ಡೈನಿಂಗ್‌ ಹಾಲ್‌ ಸುಮಾರು 1.65 ಕೋ.ರೂ. ವೆಚ್ಚದಲ್ಲಿ ಹಿಂದಿನ ಮೇಯರ್‌ ಹರಿನಾಥ್‌ ಅವಧಿಯಲ್ಲಿ ನಿರ್ಮಾಣವಾಗಿತ್ತು.  ಬಳಿಕ ಇದೇ ಭೋಜನ ಗೃಹ ಸಭಾಂಗಣವಾಗಲಿದೆ ಎಂದು ಹೇಳಲಾಗಿತ್ತು.

ಆದಾಯಕ್ಕೆ ಹೊಡೆತ ಸಾಧ್ಯತೆ
ನವೀಕರಣ ಆಗುವ ಮೊದಲು, ಬಾಡಿಗೆ ದರ ಕಡಿಮೆ ಇರುವ ಸಂದರ್ಭ 2013 ಎಪ್ರಿಲ್‌ನಿಂದ 2014 ಮಾರ್ಚ್‌ವರೆಗೆ ಪುರಭವನದಿಂದ 12,36,750 ರೂ. ಆದಾಯ ಸಂಗ್ರಹವಾಗಿದೆ. ಬಳಿಕ ನವೀಕರಣ ಆದ ಅನಂತರ 2016 ಎಪ್ರಿಲ್‌ನಿಂದ 2017 ಮಾರ್ಚ್‌ವರೆಗೆ ಅದು 39,65,000 ರೂ.ಗೆ ಏರಿತ್ತು. ಈಗ ಬಾಡಿಗೆ ಇಳಿಸಿರುವುದರಿಂದ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಆದರೆ ಕಾರ್ಯಕ್ರಮಗಳು ಪ್ರತಿ ದಿನವೂ 3 ಸೆಷನ್‌ನಲ್ಲಿ ಇದ್ದರೆ ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಬಳಸಿದರೆ ಆದಾಯ ಬರಬಹುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಬಾಡಿಗೆ ಇಳಿದಿದೆ, ಬೇಡಿಕೆ ಉಳಿದಿದೆ!
ಪುರಭವನದ ಬಾಡಿಗೆ ದರ ಕಡಿಮೆಯಾಗುತ್ತಿದ್ದಂತೆ ಕಲಾವಿದರ ಇನ್ನೂ ಕೆಲವು ಬೇಡಿಕೆಗಳಿಗೆ ಜೀವ ಬಂದಿದೆ. ಮುಖ್ಯವಾಗಿ ಈಗಿನ ಸೀಟಿಂಗ್‌ ವ್ಯವಸ್ಥೆಯನ್ನು ಅನನುಕೂಲ ರೀತಿಯಲ್ಲಿರುವುದರಿಂದ ಕಾರ್ಯಕ್ರಮ ನೋಡುವವರು ಅತ್ತಿಂದಿತ್ತ ಎದ್ದು ಹೋಗಲು ತುಂಬ ಪರದಾಡಬೇಕಾಗಿದೆ. ಸೀಟಿಂಗ್‌ ವ್ಯವಸ್ಥೆ ಸಮರ್ಪಕವಾಗದಿರುವುದರಿಂದಲೇ ಕಾರ್ಯಕ್ರಮ ನೋಡುವವರಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಬೇಕೆಂಬ ಆಗ್ರಹವಿದೆ. ಲೈಟಿಂಗ್‌ ವ್ಯವಸ್ಥೆಯನ್ನು ವೇದಿಕೆಯ ಮುಂಭಾಗದಲ್ಲೇ ಇರಿಸಬೇಕು ಹಾಗೂ ಟಿಕೆಟ್‌ ಕೌಂಟರ್‌  ವ್ಯವಸ್ಥೆ ಮಾಡಬೇಕು. ಬುಕ್ಕಿಂಗ್‌ ಅವಧಿಯನ್ನು ವಿಸ್ತರಿಸಬೇಕು ಎಂಬ ಬೇಡಿಕೆಯೂ ಕಲಾವಿದರಿಂದ ಕೇಳಿ ಬರುತ್ತಿದೆ.

– ದಿನೇಶ್‌ ಇರಾ

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.