ಪ್ರಚಲಿತ ಬೌದ್ಧ ದರ್ಶನ: ಪೇಜಾವರ ಶ್ರೀಗೆ ತಿಳಿಯುವಾಸೆ…
Team Udayavani, Jul 1, 2017, 3:45 AM IST
ಉಡುಪಿ: ಬೌದ್ಧ ದರ್ಶನಗಳಲ್ಲಿ ನಾಲ್ಕು ವಿಭಾಗಗಳಿವೆ. ಎರಡರಲ್ಲಿ ಜಗತ್ತನ್ನು ಸತ್ಯ, ಆದರೆ ಕ್ಷಣಿಕ (ಕ್ಷಣಕ್ಷಣಕ್ಕೆ ಬದಲಾಗುತ್ತದೆ) ಎಂದೂ ಇನ್ನೆರಡರಲ್ಲಿ ಶೂನ್ಯ (ಭ್ರಮೆ) ಎಂದೂ ಇದೆ. ಜಗತ್ತಿನಲ್ಲಿ ಈಗಿರುವ ಬೌದ್ಧ ಧರ್ಮದವರು ಇವುಗಳಲ್ಲಿ ಯಾವ ದರ್ಶನವನ್ನು ಅನುಸರಿಸುತ್ತಿದ್ದಾರೆ? – ಇದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ತಿಳಿಯುವಾಸೆ…
ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಮಂದಿರ ಮತ್ತು ಕಲ ಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಕನಕಮಂಟಪದಲ್ಲಿ ಶುಕ್ರ ವಾರ ಆರಂಭಗೊಂಡ “ಬೌದ್ಧ ದರ್ಶನದ ವಿವಿಧ ಆಯಾಮಗಳು’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ವಿಶ್ವೇಶತೀರ್ಥರು ಬೌದ್ಧಧರ್ಮ ನೀಡಿದ ಮಾನವೀಯ ಸಂದೇಶ, ನೈತಿಕ ಸಂದೇಶ ದೊಡ್ಡದು. ದಾರ್ಶನಿಕ ಸ್ವರೂಪದಲ್ಲಿ ಗೊಂದಲಗಳಿವೆ ಎಂದರು.
ಬುದ್ಧನ ಕಾಲಘಟ್ಟದಲ್ಲಿ ಬೌದ್ಧರು, ಜೈನರು, ಮೀಮಾಂಸಕರು, ಶಂಕರಾ ಚಾರ್ಯರ (ವೈದಿಕರು) ನಡುವೆ ದೊಡ್ಡ ಮಟ್ಟದ ತಾತ್ವಿಕ ಸಂಘರ್ಷ ನಡೆದಿತ್ತು. ಇವರೆಲ್ಲರ ಮೇಲೆ ಬೌದ್ಧಧರ್ಮದ ಪ್ರಭಾವ ಬೀರಿರುವುದು ಕಂಡುಬರುತ್ತದೆ. ತಾತ್ವಿಕ ಗೊಂದಲಗಳು ಸರ್ವದರ್ಶನ ಸಂಗ್ರಹ, ಶಂಕರ, ಮಧ್ವರಿಂದ ತಿಳಿಯುತ್ತದೆ. ಬೌದ್ಧಧರ್ಮ ಸ್ವೀಕರಿಸಿದವರಿಗೂ ದಾರ್ಶನಿಕ ಮುಖ ಗೊತ್ತಿಲ್ಲ. ಇದನ್ನು ತಿಳಿಯ ಬೇಕೆಂದಿರುವೆ. ಮೂರು ದಿನಗಳ ಸಂಕಿರಣದಲ್ಲಿ ಈ ವಿಚಾರಗಳು ಹೊರ ಹೊಮ್ಮಲಿ ಎಂದು ಆಶಿಸಿದರು. ಮಂದಿರದಿಂದ ಹೊರತಂದ ವಿವಿಧ ಶಾಸ್ತ್ರಗ್ರಂಥಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಶ್ರೀ ಪೇಜಾವರ ಮಠದ ಕಿರಿಯ ಶ್ರೀಗಳು, ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಪಾಲಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ರಾಹುಲ್ ಖರ್ಗೆ ಉಪಸ್ಥಿತರಿದ್ದರು. ಪಾಲಿ ಸಂಸ್ಥೆ ಗೌರವ ನಿರ್ದೇಶಕ ಪ್ರೊ| ಮಲ್ಲೇಪುರಂ ವೆಂಕಟೇಶ್ ದಿಕ್ಸೂಚಿ ಭಾಷಣ ನೀಡಿದರು. ಮಂದಿರದ ನಿರ್ದೇಶಕ ಡಾ| ಎ.ವಿ. ನಾಗಸಂಪಿಗೆ ಸ್ವಾಗತಿಸಿ, ಉಪನಿರ್ದೇಶಕ ಡಾ| ರಂಗನಾಥ ಕಟ್ಟಿ ವಂದಿಸಿದರು. ಡಾ| ಶಂಕರನಾರಾಯಣ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.
ವಿಶಿಷ್ಟ ವ್ಯಕ್ತಿತ್ವದ “ಸೈಲೆಂಟ್ ಖರ್ಗೆ’
ಉಡುಪಿ: ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಮುಂದಾಳು ಮಲ್ಲಿಕಾರ್ಜುನ ಖರ್ಗೆ ಅವರ ಹಿರಿಯ ಪುತ್ರ ರಾಹುಲ್ ಖರ್ಗೆ ವಿಶಿಷ್ಟ ವ್ಯಕ್ತಿತ್ವದವರು. ಇವರು ಎಷ್ಟು ಸೈಲೆಂಟ್ ಎಂದರೆ ಹೆಚ್ಚು ಮಾತನಾಡಲೂ ಇಷ್ಟಪಡುವುದಿಲ್ಲ.
ಶುಕ್ರವಾರ ಶ್ರೀಕೃಷ್ಣ ಮಠದಲ್ಲಿ ನಡೆದ “ಬೌದ್ಧ ದರ್ಶನದ ವಿವಿಧ ಆಯಾಮಗಳು’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಇನ್‌ಸ್ಟಿಟ್ಯೂಟ್ ಅಧ್ಯಕ್ಷರೂ ಆದ ರಾಹುಲ್ ಖರ್ಗೆ ಅವರು ಅತ್ಯಂತ ಸರಳ ವ್ಯಕ್ತಿತ್ವದವರೆನ್ನುವುದು ತೋರಿಬಂತು.
ಇವರು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯಾಗಿ 2004ರಲ್ಲಿ ಆಯ್ಕೆಗೊಂಡರೂ ನಾಗ್ಪುರದಲ್ಲಿ ಒಂದು ವರ್ಷ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿದರು. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ರಾಹುಲ್ ಖರ್ಗೆ ಅವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪೆನಿ ನಡೆಸುತ್ತಿದ್ದಾರೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸಂಯೋಜನೆಯಲ್ಲಿ ಆರಂಭಗೊಂಡ ಕಲಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.