ಹಾಕಿ: ಭಾರತ ಗತ ವೈಭವ ಕಳೆದುಕೊಳ್ಳುತ್ತಿದೆಯೆ?


Team Udayavani, Jul 1, 2017, 12:42 PM IST

6.jpg

ಒಂದು ಕಾಲದಲ್ಲಿ ವಿಶ್ವ ಹಾಕಿಯಲ್ಲಿ ಸಾಮ್ರಾಟನಾಗಿ ಮೆರೆದಾಡಿದ ಭಾರತೀಯ ಹಾಕಿ ತಂಡ ಇಂದು ಗತವೈಭವವನ್ನು ಕಳೆದುಕೊಂಡಿದೆಯೇ? ಇಂತಹದೊಂದು ಅನುಮಾನ ಮೂಡತೊಡಗಿದೆ. ಇದಕ್ಕೆ ಕಾರಣ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ನಲ್ಲಿ ಭಾರತ ತನಗಿಂತ ಕೆಳ ಶ್ರೇಯಾಂಕದ ತಂಡಗಳ ಎದುರು ಸೋಲು ಕಂಡಿರುವುದು. 

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಕಿ ತಂಡವನ್ನು ಬಗ್ಗು ಬಡಿದ ವಿಶ್ವದ 6ನೇ ಶ್ರೇಯಾಂಕಿತ ಭಾರತೀಯ ತಂಡ ನಂತರ ನಡೆದ 14ನೇ ಸ್ಥಾನದಲ್ಲಿರುವ ಮಲೇಷ್ಯಾ, 11ನೇ ಶ್ರೇಯಾಂಕದ ಕೆನಡಾ ಹಾಗೂ ನೆದರ್‌ಲ್ಯಾಂಡ್‌ ವಿರುದ್ಧ ತನ್ನ ನೈಜ ಆಟ ಪ್ರದರ್ಶನ ಮಾಡುವಲ್ಲಿ ವಿಫ‌ಲವಾಗಿದೆ. ಇಂತಹ ಪರಿಸ್ಥಿತಿ ಇದೊಂದೆ ಟೂರ್ನಿಗೆ ಸೀಮಿತವಾಗಿಲ್ಲ. ಕಳೆದ ಹಲವು ಮಹತ್ವದ ಟೂರ್ನಿಗಳಲ್ಲಿ ಹೇಳಿಕೊಳ್ಳುವಂ ತ  ಸ್ಥಾನಕ್ಕೆ‌ ನೂ ಏರಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಪ್ರಯೋಗಾತ್ಮಕ ಆಟಕ್ಕೆ ಮುಂದಾಗುತ್ತಿದೆಯೇ ಹೊರತು ತಂತ್ರಗಾರಿಕೆಯ ಗೋಲು ಹೂಡೆವಲ್ಲಿ ವಿಫ‌ಲವಾಗುತ್ತಿದೆ. 

ಕಾಡೀತೆ ಸ್ಟಾರ್‌ ಆಟಗಾರರ ಅನುಪಸ್ಥಿತಿ?
ಹಾಕಿಯೇ ಉಸಿರು ಎನಿಸಿಕೊಂಡಿರುವ ಭಾರತೀಯ ಹಾಕಿ ತಂಡದಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಲೀಗ್‌ ಟೂರ್ನಿಗೆ ಭಾರತೀಯ ಸ್ಟಾರ್‌ ಆಟಗಾರರ ಅನುಪಸ್ಥಿತಿ ಕಾಡೀತೆ? ಹೌದು, ಇದೇ ಸಾಲಿನಲ್ಲಿ ನಡೆದಿದ್ದ ಸುಲ್ತಾನ್‌ ಆಜಾÉನ್‌ ಷಾ ಕಪ್‌ನಲ್ಲಿ ಭಾರತ ತಂಡ ಸೆಮಿ ಫೈನಲ್‌ವರೆಗೂ ತಲುಪಿ ಕಂಚಿ ನ ಪದಕ ಪಡೆದುಕೊಂಡಿತ್ತು. ಅದೇ ತಂಡವನ್ನು ವಿಶ್ವ ಲೀಗ್‌ಗೂ ಉಳಿಸಿಕೊಂಡಿದ್ದರೆ ಟೂರ್ನಿಯಲ್ಲಿ ಇನ್ನೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂದಿನ ವರ್ಷ ನಡೆಯುವ ವಿಶ್ವ ಕಪ್‌ ಹಾಕಿಗೆ ನೇರ ಪ್ರವೇಶ ಪಡೆಯಬಹುದಿತ್ತೆಂಬುವುದು ಕ್ರೀಡಾ ಪಂಡಿತರ ಮಾತು. 

ವಿಫ‌ಲವಾಯಿತೆ ಓಲ್ಟಮನ್ಸ್‌ ತರಬೇತಿ?
ಯಾ ವಾ ಗಲೂ ಪ್ರಯೋಗಗಳಿಗೆ ಒತ್ತು ನೀಡುವ ಭಾರತೀಯ ಹಾಕಿ ತಂಡದ ತರಬೇತುದಾರ ಡ ಚ್‌ ಮೂಲದ ರೊಲಂಟ್‌ ಓಲ್ಟಮನ್ಸ್‌ ತಂತ್ರಗಾರಿಕೆ ಹೆಣೆಯುವಲ್ಲಿ ವಿಫ‌ಲವಾಗುತ್ತಿದ್ದಾರೆ ಎಂಬ ಮಾತುಗಳು ಸೋಲಿನ ಬಳಿಕ ಕೇಳಿ ಬರುತ್ತಿದೆ. 

ಇವರ ತರಬೇತಿಯಲ್ಲಿ ಭಾರತ ಹೇಳಿಕೊಳ್ಳು ವಂತೆ ಸಾಧನೆ ಮಾಡದಿದ್ದರೂ ಕಳೆದ ಸಾಲಿನಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ ನಲ್ಲಿ 36 ವರ್ಷಗಳ ಬಳಿಕ ಕ್ವಾಟರ್‌ ಫೈನಲ್‌ಗೇರಿದ ತಂಡ ಎಂಬ ಹೆಗ್ಗಳಿಕೆ ಪಡೆಯಿತು. ಅಲ್ಲದೆ, ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಡಿದೆ. ಉಳಿದಂತೆ ಸಾಮಾನ್ಯ ಆಟ ಪ್ರದರ್ಶನಗೊಂಡಿದೆ. ಆದರೆ, ಈ ಹಿಂದೆ 2013-14ರವರೆಗೆ ಭಾರತೀಯ ತಂಡಕ್ಕೆ ಕೋಚ್‌ ಆಗಿದ್ದ ಜಪಾನ್‌ನ ಟೆರ್ರಿ ವಾಲ್‌Ò ಅವಧಿಯಲ್ಲಿ ಭಾರತ ಹಾಕಿ ಉತ್ತಮ ಸ್ಥಿತಿಯಲ್ಲಿತ್ತು ಎಂದು ಅನೇಕರು ವಿಶ್ಲೇಷಣೆ ಮಾಡಿದ್ದಾರೆ. 

ಅವರ ಬಳಿಕ ಬಂದ ಕೋಚ್‌ ಅವಧಿಯಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಹಾಕಿ ತಂಡ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫ‌ಲವಾಗುತ್ತಿರುವುದು ಬೇಸರದ ಸಂಗತಿ.  

2014ರಿಂದ 2017ರವೆರೆಗಿನ ತಂಡದ ಸಾಧನೆ
ವರ್ಷ    ಟೂರ್ನಿ    ಸ್ಥಾನ
2014     ಕಾಮನ್‌ವೆಲ್ತ್‌      2
2014     ಏಷ್ಯನ್‌ ಗೇಮ್ಸ್‌    ಚಿನ್ನ
2014     ವಿಶ್ವಕಪ್‌    9
2014-15     ವಿಶ್ವಕಪ್‌ ಲೀಗ್‌    3
2014     ಚಾಂಪಿಯನ್‌ ಟ್ರೋಫಿ    4
2016     ರಿಯೋ ಒಲಿಂಪಿಕ್ಸ್‌     8
2016     ಏಷ್ಯನ್‌ ಚಾಂಪಿಯನ್‌ ಟ್ರೋಫಿ    ಚಿನ್ನ
2017     ಆಜ್ಲಾನ್‌ ಷಾ ಕಪ್‌     ಕಂಚು
2017     ವಿಶ್ವಕಪ್‌ ಲೀಗ್‌     6

250 ಟೂರ್ನಿಯಲ್ಲಿ ಬಳಸಲಾಗುವ ಬಾಲ್‌ ಬಾಯ್ಸ , ಗರ್ಲ್ಸ್‌ ಸಂಖ್ಯೆ
14,979  ವಿಂಬಲ್ಡನ್‌ ಸೆಂಟರ್‌ಕೋರ್ಟ್‌ನಲ್ಲಿರುವ  ಸೀಟ್‌ಗಳು
39,000  ಆಲ್‌ಇಂಗ್ಲೆಂಡ್‌ ಕ್ಲಬ್‌ನ ಒಟ್ಟಾರೆ ಸೀಟಿಂಗ್‌ ಸಾಮರ್ಥ್ಯ
54,250  2016ರ ಚಾಂಪಿಯನ್‌ಶಿಪ್‌ನಲ್ಲಿ ಬಳಸಿದ‌ ಒಟ್ಟು ಟೆನಿಸ್‌ ಚೆಂಡುಗಳ ಲೆಕ್ಕ
1,40,000  ಕಳೆದ ಬಾರಿ ಮಾರಾಟ ಮಾಡಲಾದ‌ ಸ್ಟ್ರಾಬೆರಿಗಳ ಸಂಖ್ಯೆ
3,20,000  ವಿಂಬಲ್ಡನ್‌ನಲ್ಲಿ ಹಿಂದಿನ ವರ್ಷ ಮಾರಾಟವಾದ ಪಿಮ್‌ ಡ್ರಿಂಕ್‌ ಗ್ಲಾಸ್‌ಗಳ ಸಂಖ್ಯೆ. ಪಿಮ್‌ ಎಂಬುದು ಹಣ್ಣು ಹಾಗೂ ಐಸ್‌ ಬೆರೆತ ಒಂದು ಆಲ್ಕೋಹಾಲಿಕ್‌ ಪೇಯ!
3,16,00,000  2017ರ ವಿಂಬಲ್ಡನ್‌ ಬಹುಮಾನದ ಮೊತ್ತ, ಪೌಂಡ್‌ನ‌ಲ್ಲಿ

ದೇವಲಾಪುರ ಮಹದೇವಸ್ವಾಮಿ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.