ಯುವಕರು ಬದಲಾವಣೆ ಹರಿಕಾರರಾಗಲಿ: ಡಾ| ಗುರುರಾಜ


Team Udayavani, Jul 1, 2017, 3:16 PM IST

hub3.jpg

ಹುಬ್ಬಳ್ಳಿ: ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದು, ಉತ್ತರ ಕರ್ನಾಟಕದ ಯುವಕರಿಗೆ ಕೌಶಲ ಅಭಿವೃದ್ಧಿಗೆ ಅತ್ಯುತ್ತಮ ಅವಕಾಶವನ್ನು ಇದು ಒದಗಿಸಿಕೊಡಲಿದೆ ಎಂದು ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅಭಿಪ್ರಾಯಪಟ್ಟರು. 

ದೇಶಪಾಂಡೆ ಪ್ರತಿಷ್ಠಾನ ಇಲ್ಲಿನ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ನಿರ್ಮಿಸಿರುವ ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರದ ಪೂಜಾ ಕಾರ್ಯಕ್ರಮದ ಅನಂತರ ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಕೇವಲ ಇಟ್ಟಿಗೆ, ಕಬ್ಬಿಣ, ಸಿಮೆಂಟ್‌ನಿಂದ ನಿರ್ಮಾಗೊಂಡಿದ್ದಲ್ಲ, ಇದರ ಹಿಂದೆ ಅನೇಕರ ಚಿಂತನೆ, ಶ್ರಮ ಇದೆ. 

ಇಲ್ಲಿ ಕೌಶಲ ಅಭಿವೃದ್ಧಿ ಪಡೆಯುವವರು ಉತ್ತಮ ಸಾಧನೆ ತೋರುವುದೇ ಪರಿಶ್ರಮಕ್ಕೆ ಸಲ್ಲಿಸುವ ಗೌರವವಾಗಿದೆ ಎಂದರು. ಸಮಾಜದಲ್ಲಿ ಕೆಲವರು ಕೇವಲ ಸಮಸ್ಯೆಗಳನ್ನು ಹೇಳುವವರಿದ್ದಾರೆ. ಇನ್ನು ಕೆಲವರು ತಮ್ಮದೇ ವಿಚಾರಗಳನ್ನು ಹೇಳುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳಿಗೆ ಪರಿಹಾರ ರೂಪಿಸುವ, ಬದಲಾವಣೆ ತರುವ ಕಾರ್ಯ ಮಾಡುತ್ತಾರೆ. 

ಯುವಕರು ಪರಿಹಾರ ಹಾಗೂ ಬದಲಾವಣೆ ಹರಿಕಾರರಾಗಬೇಕು. ಕೌಶಲ ಅಭಿವೃದ್ಧಿ ಕೇಂದ್ರ ಕೌಶಲ ತರಬೇತಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಪರಿಶ್ರಮ, ಶ್ರದ್ಧೆಯೊಂದಿಗೆ ತರಬೇತಿ ಹೊಂದುವ ಮೂಲ ಅತ್ಯುತ್ತಮ ಮಾನವಸಂಪನ್ಮೂಲವಾಗಿ ಹೊರಹೊಮ್ಮಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಮಹಾಪೌರ ಡಿ.ಕೆ.ಚವ್ಹಾಣ ಮಾತನಾಡಿ, ಅನೇಕ ಪದವೀಧರರು, ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ, ವಾಸ್ತವಿಕತೆ ಅರಿವಿರುವುದಿಲ್ಲ. ಇಲ್ಲಿನ ಶಿಬಿರಾರ್ಥಿಗಳು ಅನುಭವದ ಜತೆಗೆ ವಾಸ್ತವಿಕತೆ ಮಾಹಿತಿ ಪಡೆಯಬೇಕು. ದೇಶಪಾಂಡೆ ಪ್ರತಿಷ್ಠಾನದ ಈ ಕೌಶಲ ಅಭಿವೃದ್ಧಿ ಕೇಂದ್ರದ ಆಶಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ತಂದೆ- ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದರು. 

ದೇಶಪಾಂಡೆ ಪ್ರತಿಷ್ಠಾನದ ಸ್ಥಾಪನೆಗೆ ಪ್ರೇರಕರಾದ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ನಮ್ಮ ಭಾಗದ ಯುವಕರು ಸಂದರ್ಶನಕ್ಕೆ ಹಾಜರಾದರೆ ಅದನ್ನು ಎದುರಿಸುವ ಸಾಮರ್ಥ್ಯದ ಕೊರತೆ ಮಾತುಗಳು ಕೇಳಿ ಬರುತ್ತಿದ್ದವು. ಕೌಶಲ ಅಭಿವೃದ್ಧಿ ತರಬೇತಿ ಇದಕ್ಕೆ ಮಹತ್ವದ ಸಹಕಾರಿ ಆಗಲಿದೆ.

ಕೇಂದ್ರ ಸರಕಾರ ಸಹ ಕೌಶಲ ಅಭಿವೃದ್ದಿಗೆ ಒತ್ತು ನೀಡಿದ್ದು, ಯುವಕರು ತರಬೇತಿಯಲ್ಲಿ ಶ್ರದ್ಧೆ ವಹಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಕೆನ್‌ ಅಗ್ರೋಟೆಕ್‌ ಸಂಸ್ಥಾಪಕ ವಿವೇಕ ನಾಯಕ ಮಾತನಾಡಿ, ಇಂದಿನ ಯುವಕರ ಕಣ್ಣಲ್ಲಿ ಚೈತನ್ಯವಿದೆ, ಅವಕಾಶಗಳಿವೆ ಆದರೆ ಅವುಗಳ ಸದುಪಯೋಗದ ಚಿಂತನೆಯ ಅಗತ್ಯವಿದೆ. 

ಈ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ಕೌಶಲ ಅಭಿವೃದ್ಧಿ ಕೇಂದ್ರ ಯುವಕರ ನೆರವಿಗೆ ಧಾವಿಸಿದೆ  ಎಂದರು. ಕೃಷಿ ಕುಟುಂಬದಲ್ಲಿ ಜನಿಸಿದ ತಾವು ಪದವಿ ಪಡೆದು ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದು, ಸ್ವಂತ ಉದ್ಯಮ ಸ್ಥಾಪನೆಗೆ ಮುಂದಾಗಿ ಹುಬ್ಬಳ್ಳಿಗೆ ಬಂದಾಗ ಸಣ್ಣ ಶೆಡ್‌ನ‌ಲ್ಲಿ ಮಿಡಿ ಸೌತೇಕಾಯಿ ರಫ್ತು ವಹಿವಾಟು ಆರಂಭಿಸಿದ್ದೆ. ಇಂದು ಸುಮಾರು 15ಸಾವಿರ ಟನ್‌ನಷ್ಟು ಮಿಡಿ ಸೌತೇಕಾಯಿ ರಫ್ತು ಆಗುತ್ತಿದೆ.

ಯುವಕರು ಮೊದಲು ಕೀಳರಿಮೆ ತೊರೆದು ಇದ್ದ ಅವಕಾಶಕಗಳನ್ನು ಸಾಧನೆಯಾಗಿ ಪರಿವರ್ತನೆಗೆ ಮುಂದಾಗಬೇಕು ಎಂದರು. ನ್ಯಾನೋμಕ್ಸ್‌ನ ಸುಚಿತ್ರಾ ಮಾತನಾಡಿ, 24/7 ಸೇಫ್ಹ್ಯಾಂಡ್‌ನ‌ ಶ್ರಾವಣಿ, ದೇಶಪಾಂಡೆ ಪ್ರತಿಷ್ಠಾನದ ಸಿಇಒ ನವೀನ ಝಾ, ನವೋದ್ಯಮಿಯ ಡಾ| ನೀಲಂ ಮಹೇಶ್ವರಿ, ಗುರನಗೌಡ, ರವಿ ಮಾತನಾಡಿದರು. 

ಟಾಪ್ ನ್ಯೂಸ್

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

Prajwal Revanna Case: High Court dismisses PIL against Rahul Gandhi

Prajwal Revanna Case: ರಾಹುಲ್‌‌ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

accident

Dharwad; ಲಾರಿ-ಆಟೋ ಢಿಕ್ಕಿ: ಮೂವರು ದಾರುಣ ಸಾ*ವು

ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ: ಬೆಲ್ಲದ್

By election: ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ: ಬೆಲ್ಲದ್

ಅರವಿಂದ ಬೆಲ್ಲದ

Aravind Bellad: ತುಮುಕೂರಿನಲ್ಲಿ ವಿಮಾನ ನಿಲ್ದಾಣವಾಗಬೇಕು: ಅರವಿಂದ ಬೆಲ್ಲದ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

14

Holehonnuru: ರಣಭೀಕರ ಮಳೆ; ಕೋಳಿ ಫಾರಂಗೆ ನುಗ್ಗಿದ ನೀರು; 3500 ಕೋಳಿ ಬಲಿ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

13

Dandeli: ಬೀದಿ ನಾಯಿಗಳ ನಿಯಂತ್ರಣಕ್ಕೆ ವಿಳಂಬ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.