ಟಿವಿ ನೋಡೋರ ಬಾಯಲ್ಲಿ ಜನಪದ


Team Udayavani, Jul 1, 2017, 4:23 PM IST

8.jpg

ದೇಶ,ವಿದೇಶಗಳಲ್ಲಿ ಜಾನಪದ ಹಾಡುಗಳ ಪ್ರದರ್ಶನ ಮತ್ತು ತರಬೇತಿ ನೀಡುತ್ತಲೇ ಪ್ರಸಿದ್ಧರಾಗಿರುವ ಉತ್ತರ ಕರ್ನಾಟಕದ ಜಾನಪದ ಜಂಗಮ ಬಸವಲಿಂಗಯ್ಯ ಹಿರೇಮಠರು 25 ವರ್ಷಗಳ ಹಿಂದೆ ಬಿ.ವಿ.ಕಾರಂತರೊಂದಿಗೆ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅದೇ ಅನುಭವವನ್ನು ಇದೀಗ ಜಾನಪದ ಕಲೆಗೆ ಧಾರೆ ಎರೆಯುತ್ತಿದ್ದು, ಬಯಲಾಟ ಪರಂಪರೆಯ ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾದಂತಹ ಆಟಗಳನ್ನು ಜನಮಾನಸಕ್ಕೆ ತಂದು ನಿಲ್ಲಿಸಿದ್ದಾರೆ. ಈಗ ಅವ್ವಂದಿರು ಹಾಡುವ ಸಂಪ್ರದಾಯದ ಹಾಡುಗಳನ್ನು ಸಹಸ್ರ ಕಂಠದಲ್ಲಿ ಹಾಡಿಸಲು ಸಜ್ಜಾಗಿ, ನಗರಗಳಲ್ಲಿ ಟಿ.ವಿ.ರೋಗಕ್ಕೆ ಅಂಟಿರುವ ಗೃಹಿಣಿಯರಿಗೆ ಜಾನಪದ ಹಾಡುಗಳನ್ನು ಕಲಿಸುತ್ತಿದ್ದಾರೆ. ಅದರ ಒಂದು ಝಲಕ್‌ ಇಲ್ಲಿದೆ. 

ಅವರಿದ್ದಾರಲ್ಲ, 75 ವರ್ಷದ ಡಾ|ಪ್ರಭಾ ನೀರಲಗಿ ಮೇಡಂಗೆ ಅದೇನು ಜೀವನೋತ್ಸಾಹ ಅಂತೀರಾ ? ತಾವು 20 ವರ್ಷದವರಿದ್ದಾಗ ಗಂಡ ಮಾಡಿಸಿಕೊಟ್ಟ ಉತ್ತರ ಕರ್ನಾಟಕ ಶೈಲಿಯ ಎಲ್ಲಾ ಆಭರಣಗಳು ಇಷ್ಟು ವರ್ಷ ಮನೆಯಲ್ಲಿನ ಸಂದೂಕದಲ್ಲಿ ಭದ್ರವಾಗಿದ್ದವು. ಅವರ ಮೂಗುತಿಯೋ. ಈಗಲೂ ಮೂಗಿಗಿಂತಲೂ ಭಾರವಾಗಿದೆ. ವಂಕಿ,ಡೋಲು, ವಡ್ಯಾಣ, ಕಾಸಿನಸರ,ಗೋರಮಾಳ ಗುಂಡಿನ ಸರ, ಟೀಕೀ, ಪಾಟಿÉ,ಬಿಲ್‌ವಾರ್‌, ಬೆರಳುಂಗುರ,ಕಾಲಲ್ಲಿ ಪೈಜಾನಾ,ಕಡಗ ಅಷ್ಟೇ ಅಲ್ಲ ಬಂಗಾರದ ನೂಲಿನ ಸೆರಗು ಹೊಂದಿದ ಅಪ್ಪಟ ರೇಷ್ಮೆ ಸೀರೆ, ತಲೆಗೆ ಮಲ್ಲಿಗೆ ಹೂವು, ಜಡೆಗೆ ಕೇದಿಗೆ ಲೇಪನ. “ಅಬ್ಭಾ…ಏನು ಖಡಕ್‌ ಮಾತಗಳು..ಏನ್‌ ಅವರ ಮುಖದ ಕಾಂತಿ, ಅಷ್ಟೇ ಅಲ್ಲ ತನ್ನನ್ನ ಮದುವೆಯಾಗಲು ತಮ್ಮ ಯಜಮಾನರೂ ಮೊದಲ ಬಾರಿ ನೋಡಲು ಬಂದಾಗ ಹಾಡಿದ ಹಾಡಿನ ಸ್ವರವಾದರೂ ಕುಗ್ಗಬಾರದೇ…, ಸ್ವಲ್ಪವೂ ಇಲ್ಲ…,ವಯಸ್ಸು ದೇಹಕ್ಕಾಗಿದ್ದು ಗೊತ್ತಾದರೂ, ಮನಸ್ಸು ಮಾತ್ರ ಇನ್ನೂ 20ರ ಹರೆಯದ್ದೇ.   

ಜೀವನದುದ್ದಕ್ಕೂ ಕಾಲೇಜಿನ ವಿದ್ಯಾರ್ಥಿಗಳಿಗೆ ಅಂಕಗಣಿತ,ಬೀಜಗಣಿತ,ರೇಖಾ ಗಣಿತ ಕಲಿಸಿ..ಕಲಿಸಿ… ಅವರ ತಲೆಯಲ್ಲಿ ಬರೀ ಲೆಕ್ಕಾಚಾರವೇ ತುಂಬಿಕೊಂಡಿತ್ತಂತೆ. 
ಆದ್ರೆ, ನಿವೃತ್ತಿ ಜೀವನದಲ್ಲಿ ಒಲವೇ ಜೀವನ ಲೆಕ್ಕಾಚಾರ ಅನ್ನೋದು ತಿಳಿದು, ಈಗ ಹಾಡು,ಹರಟೆ, ಜಾನಪದ ಕಲಿಕೆಯತ್ತ ಹೊರಳಿ, ಈ ಟಿ.ವಿ.ಸಂಸ್ಕೃತಿಯಿಂದ ದೂರ ಸರಿಯುವ ಯತ್ನ ಮಾಡುತ್ತಿದ್ದಾರೆ. 

ಇನ್ನು ದೀಪಾ ಪಾಟೀಲ್‌ರಿಗೆ 30 ವರ್ಷ ಇರಬಹುದು. ಅವರು ಮದುವೆಗಳಲ್ಲಿ ಬರೀ ಡಿ.ಜಿ.ಡಾನ್ಸ್‌ ಇದ್ದರೇನೆ ಚೆನ್ನಾ ಅನ್ನೋರಾಗಿದ್ದರು. ಅವರದ್ದೂ ಅದೇ ಜೀವನ ಪ್ರೀತಿ. 
ಯಾವುದೇ ಕಾಸೆ¾ಟಿಕ್ಸ್‌ನ್ನು ಬಳಸದೇ ನೈಜ ಸೌಂದರ್ಯದೊಂದಿಗೆ ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ಗೌಡತಿಯಂತೆ ಸಿಂಗಾರಗೊಂಡು ಪಂಚಮಿ ಹಬ್ಬದ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಕಣ್ಣಗಲಿಸಿಕೊಂಡು ನೋಡುತ್ತಲೇ ಕುಳಿತಿದ್ದ ಅವರ ಜಯಮಾನರಿಗೆ, “ಅಯ್ಯೋ.., ನನ್ನ ಹೆಂಡ್ತಿ ಇಷ್ಟು ಚೆನ್ನಾಗಿ ಡ್ಯಾನ್ಸ್‌ ಮಾಡ್ತಾಳಲ್ಲ. ಅವಳೊಂದಿಗೆ ನಾನೂ ಕುಣಿಯಲು ಅವಕಾಶವಿಲ್ಲವೇ ?’  ಎಂದು ಮಮ್ಮಲ ಮರುಗುವಂತಾಗಿತ್ತು. ಹೀಗೆ ಎಲ್ಲರದೂ ಒಂದೊಂದು ಕಥೆಯಾಗಿದ್ದರೂ, ಕೊನೆಗೆ ಎಲ್ಲರಿಗೂ ಖುಷಿ ಸಿಕ್ಕಿದ್ದು, ಜಾನಪದ ಸಂಸ್ಕೃತಿಯ ಹಾಡುಗಳನ್ನು ಕಲಿತು ಹಾಡುವುದರಲ್ಲಿ ಎಂದರೆ ನೀವು ನಂಬಲೇಬೇಕು. 

ಯಾವ ಮದುವೆಗಳು ಡಿ.ಜೆ.ಸಂಗೀತ, ಸಿ.ಡಿ ಸಂಸ್ಕೃತಿಯ ಹಾಡುಗಳಲ್ಲಿಯೇ ಮುಗಿದು ಹೋಗುತ್ತಿವೆಯೋ, ಅಂತಹ ಮದುವೆ, ಸೀಮಂತದ ಸೋಬಾನೆ ಸಂದರ್ಭಗಳಲ್ಲಿ ದೇಸಿ ಸೊಗಡಿನ, ಈ ನೆಲದ ಜಾನಪದ ಹಾಡುಗಳನ್ನು ಮತ್ತೆ ಜನರು ಮೆಲಕು ಹಾಕುವುದಕ್ಕೆ ಮಹಿಳೆಯರ ದೊಡ್ಡ ಪಡೆಯೇ ಈಗ ಹುಟ್ಟಿಕೊಳ್ಳಲು ಸಜ್ಜಾಗಿದೆ. 

ನೀವೇ ಲೆಕ್ಕಹಾಕಿ, ಪ್ರಭಾ, ದೀಪಾರಂಥ 125 ಜನ ಅಪ್ಪಟ ದೇಶಿ ಸಂಸ್ಕೃತಿ ಪ್ರಿಯರು, ಅದರಲ್ಲೂ ಜಾನಪದದ ಬಗ್ಗೆ ಒಲವು ಇರೋರು ಒಂದೇ ಕಡೆ ಸೇರಿಕೊಂಡರೆ ಏನಾಗಬೇಡ? ಏನೂ ಆಗಲಿಲ್ಲ. ಆಗಿದ್ದು ದೊಡ್ಡ ಜಾನಪದ ಸಂಭ್ರಮ. ಒಂದೇ ಸ್ವರದಲ್ಲಿ ಹಳ್ಳಿಯ ಅವ್ವಂದಿರು ಹಾಡುವ ಅಪ್ಪಟ  ಜಾನಪದ ಗೀತೆಗಳನ್ನ ಕಲಿತು ಅವುಗಳನ್ನು ಹಾಡಿ ಆನಂದಿಸುವುದೇ ಸದ್ಯಕ್ಕೆ ಇವರಿಗೆ ಒಂದು ಕೋರ್ಸ್‌ ಇದ್ದಂತೆ. ಅಡುಗೆ ಕೋರ್ಸ್‌, ಹೊಲಿಗೆ ಕ್ಲಾಸು, ಪೀಕೋ ಪಾಲ್ಸು, ಕಿಟೀ ಪಾರ್ಟಿ, ಬರ್ತಡೇ ಸಂಭ್ರಮಗಳು ಈಗ ಇವರಿಗೆಲ್ಲ ಕೃತಕ ಅನ್ನಿಸತೊಡಗಿದ್ದು, ಇವರೆಲ್ಲರೂ ಜಾನಪದ ಸಂಸ್ಕೃತಿಯತ್ತ ತಮ್ಮನ್ನು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 

ವಯಸ್ಸಿನ ತಾರತಮ್ಯವಿಲ್ಲ, 70 ವರ್ಷ ತುಂಬಿದವರೇ ಈ ತಂಡದಲ್ಲಿ 20 ಮಹಿಳೆಯರಿದ್ದಾರೆ. ಅಂತಸ್ತಿನ ಕಂದಕವಿಲ್ಲ, ಎಲ್ಲ ಒತ್ತಡಗಳನ್ನೂ ಬಿಟ್ಟು ಕೇವಲ ಐದು ದಿನಗಳ ಕಾಲ ಜಾನಪದ ಸಂಗೀತ ಕಲಿತು ಅದನ್ನು ಪ್ರದರ್ಶಿಸುವುದಕ್ಕೆ ಅವರು ಪಟ್ಟ ಶ್ರಮ ದೊಡ್ಡದಿದ್ದರೂ, ತಾವು ಕಲಿತ ಜಾನಪದ ಹಾಡುಗಳನ್ನು ಪ್ರದರ್ಶಿಸಲು ಅವರು ಸಿದ್ಧಗೊಂಡ ಬಗೆ ಮತ್ತು ಪ್ರದರ್ಶಿಸುವಾಗ ಸಂಭ್ರಮಿಸಿದ ಪರಿ ಅದ್ಭುತವಾಗಿತ್ತು. ಐದು ದಿನಗಳ ಜಾನಪದ ಹಾಡು ಕಲಿಕೆ ಶಿಬಿರ, ನಗರೀಕರಣದ ನಡುವೆ ಟಿ.ವಿ.ಸೀರಿಯಲ್‌ ಸುಳಿಗೆ ಸಿಲುಕಿ ಬಿ.ಪಿ.ಶುಗರ್‌ ಹೆಚ್ಚಿಸಿಕೊಂಡವರಿಗೆ  ಸ್ವಸ್ಥ ಆರೋಗ್ಯ ಒದಗಿಸುವ ಉಚಿತ ಆರೋಗ್ಯ ಸುಧಾರಣಾ ಶಿಬಿರದಂತಾಗಿತ್ತು. 

 ಶಿಬಿರದ ಉದ್ದೇಶ ಏನು?
ಉತ್ತರ ಕರ್ನಾಟಕದ  “ಜಾನಪದ ಜಂಗಮ’ ಎಂದೇ ಕರೆಯಲ್ಪಡುವ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠರು, ಸುಮ್ಮನೆ ಕೂರುವ ಜಾಯಮಾನದವರಲ್ಲ. ಈ ಭಾಗದ ಎಲ್ಲಾ ಜಾನಪದ ಕಲೆಗಳ ಮೇಲೂ ಹಿಡಿತ ಸಾಧಿಸಿರುವ ಈ ದಂಪತಿಗಳನ್ನ ಅಮೇರಿಕದಲ್ಲಿನ ಕನ್ನಡಿಗರು ಕರೆಯಿಸಿಕೊಂಡು ಅವರಿಂದ ಹಾಡು, ನಾಟಕ, ಶ್ರೀಕೃಷ್ಣ ಪಾರಿಜಾತ ಕಲಿತದ್ದು ಉಂಟು. ಅಮೇರಿಕಾ ಅಷ್ಟೇ ಅಲ್ಲ, ದುಬೈ, ಬರ್ಲಿನ್‌, ಲಂಡನ್‌, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಿಗೆ ಹೋಗಿ ಜಾನಪದ ಕಲೆಯನ್ನ ಪ್ರದರ್ಶಿಸಿ ಬಂದ ಕೀರ್ತಿ ಇವರದು. 

ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ವಿದೇಶಿಗರು ಕನ್ನಡ ಜಾನಪದದತ್ತ ವಾಲುತ್ತಿದ್ದಾರೆ.  ಆದರೆ ನಮ್ಮೂರಿನ ಗೃಹಿಣಿಯರು ಏಕೆ ಟಿ.ವಿ.ಧಾರಾವಾಹಿಗಳ ವ್ಯಸನಿಗಳಾಗಿದ್ದಾರೆ ಎನ್ನುವ ಪ್ರಶ್ನೆ ಇವರಲ್ಲಿ ಮೂಡಿದ್ದೇ ತಡ, ಜಾನಪದ ಹಾಡುಗಳನ್ನು ಗೃಹಿಣಿಯರಿಗೆ ಕಲಿಸಬೇಕು ಎನ್ನುವ ವಿಚಾರ ಮೊಳಕೆಯೊಡೆಯಿತು. ಹೀಗೆ ಧಾರಾವಾಹಿಗಳಿಗೆ ಅಂಟಿಕೊಂಡ ವಿವಿಧ ಮಹಿಳಾ ಮಂಡಳಗಳ 125 ಟಿ.ವಿ.ರೋಗಿಗಳಿಗೆ ಈ ಜಾನಪದ ಹಾಡುಗಾರಿಕೆ ಉಚಿತ ಚಿಕಿತ್ಸೆ ಆರಂಭಿಸಲು ಸಜ್ಜಾದರು. ನಗರೀಕರಣದ ಒತ್ತಡದಲ್ಲಿ ಮನರಂಜನೆ ಎಂದರೆ ಟಿ.ವಿ.ಧಾರಾವಾಹಿಗಳೇ ಎನ್ನುವ ಈ ಕಾಲದಲ್ಲಿ, ದಿನದಲ್ಲಿ ಕನಿಷ್ಠ ಐದಾರು ತಾಸುಗಳ ಕಾಲ ಧಾರಾವಾಹಿಗೆ ಗೃಹಿಣಿಯರು ಅಂಟಿಕೊಂಡು ಕುಳಿತುಕೊಳ್ಳುತ್ತಾರೆ. ಇಂತಹವರನ್ನೇ ಆಯ್ಕೆ ಮಾಡಿಕೊಂಡು ಜಾನಪದ ಕಲೆಯತ್ತ ಸೆಳೆದು, ಟಿ.ವಿ.ನೋಡುವ ಕಣ್ಣುಗಳಿಗೆ ಜಾನಪದ ಕಲೆಯ ಸೌಂದರ್ಯವನ್ನ, ಧಾರಾವಾಹಿ ಟೈಟಲ್‌ ಸಾಂಗ್‌ಗಳನ್ನು ಮೆಲಕು ಹಾಕುವ ಬಾಯಲ್ಲಿ ಅವ್ವಂದಿರ ಸಂಪ್ರದಾಯದ ಹಾಡುಗಳನ್ನು ಗುನಗುಣಿಸುವಂತೆ ಮಾಡಿದ್ದಾರೆ ಈ ದಂಪತಿ. 

ಬಸವಲಿಂಗಯ್ಯ ದಂಪತಿಗೆ ಜಾನಪದದ ಪ್ರೀತಿ ಎಷ್ಟೆಂದರೆ, ಯುವಕರಷ್ಟೇ ಅಲ್ಲ, ಮುದುಕರೂ ಜಾನಪದ ಹಾಡುಗಳನ್ನು ಕಲಿತು ವೇದಿಕೆಯ ಮೇಲೆ ಪ್ರದರ್ಶನ ಮಾಡಲು ಸಿದ್ಧರಾಗುವಷ್ಟು ಅವರಲ್ಲಿ ಉತ್ಸಾಹ ತುಂಬವ ಶಕ್ತಿ ಇದೆ. ಇವರು ಮಾಡಿದ್ದು ಇಷ್ಟೇ, ಜೂನ್‌ ಎರಡನೇ ವಾರದಲ್ಲಿ ಬರೀ ಐದು ದಿನಗಳ ಕಾಲ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಹಿಳಾ ಮಂಡಳಗಳ ಸದಸ್ಯರಿಗೆ ಜಾನಪದ ಹಾಡುಗಳನ್ನು ಕಲಿಸಿದ್ದು. ಹಾಡುಗಳನ್ನು ಇವರಿಂದ ಕಲಿತ ಹೆಣ್ಣು ಮಕ್ಕಳೆಲ್ಲ ಈಗ ನಾವು ಜಾನಪದ ಕಲಾವಿದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಜಾನಪದ ಶಿಬಿರ ಮಾಡುತ್ತಾರೆ ಎಂದು ಗೊತ್ತಾದ ತಕ್ಷಣ ಬರೀ ಧಾರವಾಡ ಜಿಲ್ಲೆ ಮಾತ್ರವಲ್ಲ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ಸಾಲುಗಟ್ಟಿ ನಿಂತರು. ಆದರೆ ಬರೀ 125 ಮಹಿಳೆಯರನ್ನು ಮಾತ್ರ ಆಯ್ಕೆ ಮಾಡಿಕೊಂಡ ಬಸವಲಿಂಗಯ್ಯ ದಂಪತಿ, ಅವರಿಗೆ ಉತ್ತರ ಕರ್ನಾಟಕ ಶೈಲಿಯ ಅಪ್ಪಟ ಜಾನಪದ ಹಾಡುಗಳಾದ, ಬೀಸುವ ಕಲ್ಲಿನ ಪದ, ಸೋಬಾನೆ ಹಾಡುಗಳು, ತತ್ವಪದಗಳನ್ನು ಕಲಿಸಿದರು. 

ಅಂತೂ ಜಾನಪದ ಹಾಡುಗಳನ್ನು ಕಲಿತ 125 ಗೃಹಿಣಿಯರ ಕಲಾ ಪ್ರದರ್ಶನಕ್ಕೆ ವೇದಿಕೆ ಸಜ್ಜಾಯಿತು. ಆ ದಿನ ಮಹಿಳೆಯರು ಮಾಡಿಕೊಂಡ ಶೃಂಗಾರಕ್ಕೆ ಪಾರವೇ ಇರಲಿಲ್ಲ. ಉತ್ತರ ಕರ್ನಾಟಕ ಶೈಲಿಯ ಆಭರಣಗಳನ್ನು ತೊಟ್ಟ ಎಲ್ಲ ಗೃಹಿಣಿಯರು ವಯಸ್ಸು, ಜಾತಿ, ಪ್ರಾದೇಶಿಕತೆ ಎಲ್ಲವನ್ನೂ ಮೀರಿ ಸಂಭ್ರಮಿಸಿದರು. ತಾವು ಧಾರಾವಾಹಿ ಮತ್ತು ಮೊಬೈಲ್‌ ಜಾಡ್ಯದಿಂದ ಹೊರ ಬಂದಿದ್ದೇವೆ. ಅಷ್ಟೇ ಅಲ್ಲ, ಜಾನಪದ ಕಲೆಗಳಿಗೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವ ಶಕ್ತಿ ಇದೆ ಎಂಬುದು ಗೊತ್ತಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಕನಿಷ್ಠ ತಿಂಗಳಿಗೆ ಎರಡು ದಿನಗಳನ್ನ ಜಾನಪದ ಹಾಡುಗಳ ಕಲಿಕೆ ಮತ್ತು ಪ್ರದರ್ಶನಕ್ಕೆ ಮೀಸಲಿಡುತ್ತೇವೆ ಎನ್ನುವ ಶಪಥದೊಂದಿಗೆ ಮರಳಿದ್ದಾರೆ. 

ಇನ್ನು ಸೋಬಾನೆ ಹಾಡುಗಳನ್ನ (ಉತ್ತರ ಕರ್ನಾಟಕದ ಸಂಭ್ರಮದ ಸಂದರ್ಭದ ಹಾಡುಗಳು, ದಕ್ಷಿಣ ಕರ್ನಾಟಕದ ಮೊದಲ ರಾತ್ರಿಯ ಹಾಡುಗಳು ಅಲ್ಲ ) ಹಾಡುವುದಕ್ಕೆ ಅವರೇ ವೇಷತೊಟ್ಟು, ಗಂಡ ಹೆಂಡತಿಯಾಗಿ, ಮದುವೆ ಮಾಡುವ ಸಂದರ್ಭದ ದೃಶ್ಯವನ್ನೆ ಹಾಡಿಗೆ ತಕ್ಕಂತೆ ಮರಳಿ ಕಟ್ಟಿಕೊಟ್ಟಿದ್ದು, 70ರ ದಶಕದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ವಿವಾಹವನ್ನು ನೆನಪಿಸುವಂತಿತ್ತು. ಆರತಿ ಬೆಳಗುವುದು, ಗಂಡನ ಹೆಸರು ಹೇಳುವುದು, ಕಿಚಾಯಿಸುವುದು, ಟಾಂಗ್‌ ಕೊಡುವುದು ಒಂದೇ,ಎರಡೆ ಅದನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಸೊಬಗು. ಇಂತಹ ಜಾನಪದ ಸಂಭ್ರಮವನ್ನು ಧಾರವಾಡಿಗರು  ಕಣ್ಣು ತುಂಬಿಕೊಂಡರು ಕೂಡ. 

ಗಂಡ ತೀರಿದ ಎಷ್ಟೋ ವಿಧವೆಯರು ಸಮಾಜದ ಅಂಕು ಕೊಂಕಿನ ನುಡಿಗಳಿಗೆ ಅಂಜಿಯೋ, ಜಿಗುಪ್ಸೆಗಾಗಿಯೋ ತಮ್ಮ ಸುಂದರ ಬದುಕಿನಲ್ಲಿ ಮುಚ್ಚಿಟ್ಟ ವಡವೆ,ವಸ್ತ್ರಗಳನ್ನು ಈ ಕಾರ್ಯಕ್ರಮ ಮತ್ತೆ ಹೊರ ತೆಗೆಯುವಂತೆ ಮಾಡಿತು.ಪತಿದೇವರು ತೋರಿದ ಪ್ರೀತಿಯ ದ್ಯೋತಕದ ಅಂದರೆ ಅವರು ಇಚ್ಛೆ ಪಟ್ಟು ಕೊಡಿಸಿದ್ದ ಎಷ್ಟೋ ವಸ್ತ್ರ,ವಡೆಗಳನ್ನು ಈ ಜಾನಪದ ಕಲಾ ಪ್ರದರ್ಶನಕ್ಕೆ ಧರಿಸಿ, ತಮ್ಮ ಖುಷಿಯನ್ನ ಹಂಚಿಕೊಂಡಾಗ ಅವರ ಕಣ್ಣಂಚುಗಳು ವದ್ದೆಯಾಗಿದ್ದವು.

ಇನ್ನು ಕಾಲೇಜು ಓದುವ ಹುಡುಗಿಯರು ಹಠ ಹಿಡಿದು ಈ ಶಿಬಿರದಲ್ಲಿ ಪಾಲ್ಗೊಂಡು ಜಾನಪದ ಹಾಡುಗಳನ್ನು ಕಲಿತಿದ್ದು ಇನ್ನೊಂದು ವಿಶೇಷ. ಜಾನಪದ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಬೇರೆ ಕಡೆಯಿಂದ ಬಂದ ವಿದ್ಯಾರ್ಥಿನಿಯರು ನಾಗರ ಪಂಚಮಿ ಹಾಡುಗಳಿಗೆ ನೃತ್ಯ ಮಾಡಿದ್ದು, ಜಾನಪದ ಮುಂದಿನ ಪೀಳಿಗೆಗೆ ಪಸರಿಸಿತು ಎನ್ನುವ ಆಶಾವಾದವನ್ನು ಹೆಚ್ಚಿಸುವಂತ್ತಿತ್ತು. 

ಸಾಮಾಜಿಕ,ಸಾಂಸ್ಕೃತಿಕ ಆಗು ಹೋಗುಗಳಲ್ಲಿ ಏನೇ ಪ್ರಾರಂಭಗೊಂಡರೂ, ಅದು ಧಾರವಾಡದಲ್ಲಿಯೇ ಆರಂಭಗೊಳ್ಳುತ್ತದೆ ಎನ್ನುವ ಮಾತಿದೆ. ಇದೀಗ ಅಪ್ಪಟ ಜಾನಪದ ತಾಯಂದಿರು ಹಾಡುವ ಹಾಡುಗಳನ್ನ ನಗರೀಕರಣದ ಸುಳಿಯಲ್ಲಿ ಸಿಲುಕಿ ಸುಸ್ತಾಗಿರುವ ತಾಯಂದಿರು ಕಲಿಯಬೇಕು ಎನ್ನುವ ಮಹದಾಸೆಯನ್ನ ಜಾನಪದ ಜಂಗಮ ಬಸವಲಿಂಗಯ್ಯ ಹಿರೇಮಠ ದಂಪತಿ ಹೊಂದಿದ್ದಾರೆ. ಅದರ ಮೊದಲ ಪ್ರಯೋಗಕ್ಕೆ ಧಾರವಾಡವೇ ಸಜ್ಜಾಗಿದ್ದು, ಮುಂದಿನ ಪ್ರಯೋಗವನ್ನು ಅವರು ಬೆಂಗಳೂರಿನಲ್ಲಿ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. 

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.