ಸದಾರಮೆ: ಕಂಪನಿ ನಾಟಕದ ಅನುಭವದ ಸಿಂಚನ
Team Udayavani, Jul 1, 2017, 5:05 PM IST
ಕಾಲದ ಅಗತ್ಯತೆ ಲೆಕ್ಕಾಚಾರಗಳನ್ನು ಹುಟ್ಟುಹಾಕುತ್ತದೆ; ವಿನ್ಯಾಸ ಬದಲಿಸಲು ಒತ್ತಾಯಿಸುತ್ತದೆ. ಕಲೆಯ ಸ್ವರೂಪವನ್ನೂ ಒಳಗೊಂಡಂತೆ ನಾಟಕಗಳೂ ಇದರಿಂದ ಹೊರತಲ್ಲ. ಕಾಣೆR ಮತ್ತು ಅಭಿರುಚಿ ಬದಲಾದಂತೆ ನಮ್ಮ ನೋಟಕ್ರಮವನ್ನೂ ತಿದ್ದುಪಡಿಗೆ ಗುರಿಪಡಿಸುವ ಅನಿವಾರ್ಯ ಸೃಷ್ಟಿಯಾಗುತ್ತದೆ.
ಆದರೆ ಈ ಬಗೆಯ ಮಾರ್ಪಾಡುಗಳಿಗೆ ಸವಾಲಾಗಿ, ಕಾಲದ ಹಂಗಿಲ್ಲದಂತೆ ಕೆಲವು ನಾಟಕಗಳು ಹಠತೊಟ್ಟಂತೆ ಸ್ಥಾಯಿಯಾಗಿ ಉಳಿದುಬಿಡುತ್ತವೆ. ಇದಕ್ಕೆ ಉದಾಹರಣೆ ನರಹರಿ ಶಾಸಿŒಗಳ ರಚನೆಯ “ಸದಾರಮೆ’ ನಾಟಕ.
ಬಹುತೇಕ ಎಲ್ಲ ವೃತ್ತಿಪರ ನಾಟಕ ಕಂಪನಿಗಳೂ ಈ ನಾಟಕವನ್ನು ಪ್ರದರ್ಶಿಸಿವೆ. ಸಂಗೀತ, ಹಾಸ್ಯದ ಅಂಶಗಳು ಮೇಳೈಸಿ ಎಲ್ಲರನ್ನೂ ಮನರಂಜಿಸಿ ಯಶಸ್ವಿಯಾದ ನಾಟಕ ಇದು.
ವೃತ್ತಿನಾಟಕ ಕಂಪನಿಗಳು ಈ ನಾಟಕವನ್ನು ಭೌದ್ಧಿಕ ಕಸರತ್ತಿಗೆ ಒಳಪಡಿಸಿ ಪ್ರಯೋಗಿಸಿ ನೋಡುವ ಸಾಹಸಕ್ಕೆ ಇಳಿಯಲಿಲ್ಲ. ಯಾಕೆಂದರೆ ಪ್ರಯೋಗಗಳಿಗೆ ಅಲ್ಲಿ ಅವಕಾಶಗಳಿಲ್ಲ. ಇಷ್ಟಾಗಿಯೂ ಈ ನಾಟಕವೂ ಕಾಲದ ತುಡಿತಗಳಿಗೆ ಪಕ್ಕಾಗಿ “ಮಿಸ್ ಸದಾರಮೆ’ಯಾಗಿ ಬೇರೆ ರೂಪ ಮತ್ತು ವಿನ್ಯಾಸದಲ್ಲಿ ರೂಪುತಳೆಯಿತು. ಆದರೆ ಯಶಸ್ವಿಯಾದದ್ದು ಮಾತ್ರ ಹಳೆಯ ವಿನ್ಯಾಸದ “ಸದಾರಮೆ’ಯೇ ಹೊರತು ಹೊಸ ಪ್ರಯೋಗದ “ಮಿಸ್ ಸದಾರಮೆ’ ಅಲ್ಲ.
ಈಚೆಗೆ ರಂಗಶಂಕರದಲ್ಲಿ “ಸ್ಪಂದನ’ ತಂಡ ಪ್ರಯೋಗಿಸಿದ “ಸದಾರಮೆ’ ನಾಟಕದಲ್ಲಿ ಈ ಅಂಶ ಮತ್ತೆ ಸಾಬೀತಾಯಿತು. ನಿರ್ದೇಶನ, ಖ್ಯಾತ ರಂಗ ಕಲಾವಿದೆ ಜಯಶ್ರೀ ಅವರದ್ದು. ಪರದೆ ಇಳಿಬಿಡುವ, ಮೇಲಕ್ಕೆ ಸುರುಳಿ ಸುತ್ತಿಕೊಂಡು ಹೋಗುವ ಅದೇ ಹಿಂದಿನ ಶೈಲಿಯನ್ನೇ ಉಳಿಸಿಕೊಂಡು ನಾಟಕದ ವಿನ್ಯಾಸವನ್ನೂ ಹಾಗೇ ಉಳಿಸಿಕೊಂಡಿದ್ದರು ಜಯಶ್ರೀ. ಗುಬ್ಬಿ ಕಂಪನಿಯ ಯಶಸ್ವಿ ನಾಟಕಗಳಲ್ಲಿ ಒಂದಾದ “ಸದಾರಮೆ’ ನಾಟಕದ ರಚನೆಯ ಹಿಂದೆ ಪಕ್ಕಾ ಕಮರ್ಷಿಯಲ್ ಲೆಕ್ಕಾಚಾರಗಳ ವಿಭಾಗಕ್ರಮ ಇದೆ. ಯಾವ ಯಾವ ಅಂಶಗಳು ನೋಡುಗರನ್ನು ಸೆಳೆದು ಹಿಡಿದಿಟ್ಟುಕೊಳ್ಳಬಲ್ಲವು ಎಂಬುದನ್ನು ಅನುಭವದಲ್ಲಿ ತಿಳಿದು ಅದನ್ನು ಏಕಕ್ರಮದಲ್ಲಿ ನೀಡದೆ ಸಂಗೀತ, ಹಾಸ್ಯದ ಮೂಲಕ ಮನರಂಜನೆಯ ರೂಪದಲ್ಲಿ ಗೆದ್ದಿರುವ ನಾಟಕ ಇದು.
ದಶಕಗಳು ಉರುಳಿದರೂ ಈ ನಾಟಕ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಲೇ ಇರುವುದಕ್ಕೆ ಇದೇ ಕಾರಣ. ಇದನ್ನು ಪ್ರಯೋಗಿಸುವುದು ಸವಾಲೂ ಹೌದು. ಯಾಕೆಂದರೆ ಆಯಾ ವಿಭಾಗಕ್ರಮಕ್ಕೆ ತಕ್ಕ ನ್ಯಾಯ ಸಲ್ಲಿಸುವವರು ಬೇಕಾಗುತ್ತದೆ.
ಈ ಪ್ರಯೋಗದಲ್ಲಿ ನ್ಯಾಯ ಸಲ್ಲಿಸುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೂಕದ ಪ್ರಮಾಣ ವ್ಯತ್ಯಯಗೊಂಡಿತು. ತಂಡದ ಹಿರಿಯರು ಹಾಸ್ಯ ಸನ್ನಿವೇಶಗಳಲ್ಲಿ ದೃಶ್ಯಗಳಿಗೆ ಜೀವಂತಿಕೆ ತಂದರು. ಲೋಕೇಶ್ ಆಚಾರ್ ಹಾಗೂ ಶ್ರೀನಿವಾಸ್ ಮೇಷ್ಟ್ರ ಜೋಡಿ ಈ ಕೆಲಸವನ್ನು ಸಮರ್ಥವಾಗಿ ಮಾಡಿತು. ಆದರೆ ಅಮೆಚೂರ್‌ಗಳು ಸಂಗೀತ ಪ್ರಧಾನವಾದ ದೃಶ್ಯ ಭಾಗಗಳನ್ನು ನೀರಸಗೊಳಿಸಿದರು. ಸಂಗೀತದಲ್ಲಿ ತಕ್ಕ ಪರಿಶ್ರಮ ಸಾಧಿಸಿಲ್ಲ ಎಂಬುದನ್ನು ಅದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಆದರೆ ಜಯಶ್ರೀ ಅವರು ಸಂಗೀತ, ನೃತ್ಯ, ಹಾಸ್ಯ ಮತ್ತು ಮನರಂಜನೆ ಎಲ್ಲ ಭಾಗಗಳಲ್ಲೂ ತಮ್ಮ ಎಂದಿನ ಪರಿಣತಿ ಕಾಣಿಸಿದರು. ಕಳ್ಳನ ಪಾತ್ರದಲ್ಲಿ ಅವರ ಆಗಮನ ಮತ್ತು ಅದರ ಪ್ರಭಾವಳಿ ತುಂಬ ಗಾಢ ಹಾಗು ಪರಿಣಾಮಕಾರಿಯಾಗಿತ್ತು. ಅಮೆಚೂರ್‌ಗಳ ಸಮಸ್ತ ತಪ್ಪು$ಗಳೂ ಅವರ ನಟನೆಯ ಪ್ರಭಾವಳಿಯಲ್ಲಿ ಮರೆಯಾಗುವಷ್ಟು ಚೆಂದವಾಗಿ ಅವರು ನಟಿಸಿದರು. ಹಾರ್ಮೋನಿಯಂನಲ್ಲಿ ಪರಮಶಿವನ್‌ರವರು ಅಮೆಚೂರ್‌ಗಳ ತಪ್ಪುಗಳನ್ನು ಮನ್ನಿಸುತ್ತಲೇ ನುಡಿಸುತ್ತಿದ್ದದ್ದು ಚೆಂದವಾಗಿಯೂ ಇತ್ತು, ಆಶ್ಚರ್ಯಕರವಾಗಿಯೂ ಇತ್ತು.
ಎನ್.ಸಿ ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.