ತೊನ್ನು
Team Udayavani, Jul 2, 2017, 3:45 AM IST
ಹಿಂದಿನ ವಾರದಿಂದ- ಸಣ್ಣ ಭಾಗಗಳ ತೊನ್ನಿಗೆ ಚಿಕಿತ್ಸೆ ನೀಡಲು ಕೈಯಲ್ಲಿ ಹಿಡಿಯುವ ಸಾಧನಗಳು ಹೆಚ್ಚು ಪ್ರಯೋಜನಕಾರಿ.
ಉದ್ದೇಶಿತ (ಟಾರ್ಗೆಟೆಡ್) ಫೋಟೋಗ್ರ ಎಂದರೇನು?
ತೊನ್ನಿನ ಸಣ್ಣ ತೇಪೆಗಳಿಗೆ ಟಾರ್ಗೆಟೆಡ್ ಫೋಟೋಥಿರಪಿ ವಿಧಾನದಲ್ಲಿ ಚಿಕಿತ್ಸೆ ನೀಡುತ್ತಾರೆ. ಇಲ್ಲಿ ಕೇವಲ ತೊನ್ನಿನಿಂದ ಬಾಧಿತವಾದ ಜಾಗಕ್ಕೆ ಮಾತ್ರವೇ ಚಿಕಿತ್ಸೆ ನೀಡುತ್ತಾರೆ ಟಾರ್ಗೆಟೆಡ್ ಫೋಟೋ ಥಿರಪಿ ವಿಧಾನದಲ್ಲಿ ಪಿಗೆ¾ಂಟೇಷನ್ ಪ್ರಕ್ರಿಯೆಯು ಬಹಳ ಕ್ಷಿಪ್ರವಾಗಿ ನಡೆ ಯುತ್ತದೆ. ಒಳಗೊಂಡಿರುವ ಶಸ್ತ್ರ ಚಿಕಿತ್ಸಾ
ವಿಧಾನಗಳು:
ಮಿನಿ ಪಂಚ್‌ಗ್ರಾrಗ್: ಇಲ್ಲಿ ವ್ಯಕ್ತಿಯ ಸ್ವಂತ ಅಂಗಾಂಶಗಳ ಚರ್ಮವನ್ನು ಕಸಿ ಮಾಡಲಾಗುವುದು.
ಬಣ್ಣಗೆಟ್ಟಿರುವ ಭಾಗದಲ್ಲಿ ಸಣ್ಣ ಪಂಚ್‌ಗಳನ್ನು ಉಪಯೋಗಿಸಿಕೊಂಡು ರಂಧ್ರಗಳನ್ನು ಕೊರೆಯುತ್ತಾರೆ. ತೊಡೆ ಅಥವಾ ಪೃಷ್ಠದ ಭಾಗದಿಂದ ಬೇಕಾಗಿರುವ ಪ್ರಮಾಣದ ಸಹಜ ಚರ್ಮವನ್ನು ತೆಗೆದು ರಂಧ್ರಗಳನ್ನು ಮಾಡಿರುವ ಚರ್ಮದ ಮೇಲೆ ಇರಿಸಿ ಡ್ರೆಸಿಂಗ್ ಮಾಡುತ್ತಾರೆ. 7 ದಿನಗಳವರೆಗೆ ಡ್ರೆಸಿಂಗ್ ಅನ್ನು ಹಾಗೆಯೇ ಇರಗೊಡಬೇಕು.
ಕೆಲವು ದಿನಗಳ ನಂತರ ಗ್ರಾಫ್ಟ್ ಮಾಡಲಾದ ಜಾಗಕ್ಕೆ ಲೈಟ್ ಚಿಕಿತ್ಸೆಯನ್ನು ನೀಡಲಾಗುವುದು. ಅನಂತರ ಕಸಿ ಮಾಡಲಾದ ಚರ್ಮದ ಬಣ್ಣಗಳು ಹೊರ ಅಂಚಿಗೆ ಹರಡಿಕೊಳ್ಳುತ್ತವೆ ಮತ್ತು ತೇಪೆಯು ಸಹಜ ಬಣ್ಣವನ್ನು ಪಡೆದುಕೊಳ್ಳುತ್ತದೆ. ಈ ವಿಧಾನವನ್ನು ಕೆಲವು ಬಾರಿ ಸಣ್ಣ ತೊನ್ನಿನ ತೇಪೆ ಇರುವ ಜನರ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ.
ಮೆಲೆನೋಸೈಟ್ ಟ್ರಾನ್ಸ್ ಪ್ಲಾಂಟೇಷನ್ ಎಂದರೇನು?
ಈ ವಿಧಾನದಲ್ಲಿ, ರೋಗಿಯ ಸಹಜ ಬಣ್ಣದ ಚರ್ಮವನ್ನು ಸಂಗ್ರಹಿಸುತ್ತಾರೆ ಮತ್ತು ಮೆಲನೋಸೈಟ್‌ಯುಕ್ತ ಸಸ್ಪೆನÒನ್ ಅನ್ನು ತಯಾರಿಸಲು ಇದನ್ನು ಪ್ರಯೋಗಾಲಯದಲ್ಲಿ ಸಂಸ್ಕರಿಸುತ್ತಾರೆ. ಆನಂತರ ರೋಗಿಯ ಬಿಳಿಯ ತೇಪೆಗಳಿಗೆ ಇದನ್ನು ಕಸಿಮಾಡಲಾಗುತ್ತದೆ. ಆ ಬಳಿಕ ಲೈಟ್ ಚಿಕಿತ್ಸೆಗೆ ಒಳಗಾಗುವಂತೆ ರೋಗಿಗೆ ಸೂಚನೆಯನ್ನು ನೀಡಲಾಗುತ್ತದೆ.
ಮೆಲೆನೋಸೈಟ್ ಟ್ರಾನ್ಸ್ ಪ್ಲಾಂಟೇಷನ್ ಪ್ರಯೋಜನಗಳು ಯಾವುವು?
ಮೆಲೆನೋಸೈಟ್ ಟ್ರಾನ್ಸ್ ಪ್ಲಾಂಟೇಷನ್ ಪ್ರಯೋಜನಗಳು
– ಒಂದೇ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ದೊಡ್ಡ ಭಾಗಕ್ಕೆ ಚಿಕಿತ್ಸೆ ಸಾಧ್ಯವಿರುವುದು
– ಒಂದು ಸಣ್ಣ ತುಂಡು ಸಹಜ ಚರ್ಮದಿಂದಲೇ ದೊಡ್ಡ ಬಾಧಿತ ಭಾಗಕ್ಕೆ ಚಿಕಿತ್ಸೆ ಸಾಧ್ಯವಾಗುವುದು ಬಹಳ ಕಡಿಮೆ ಅಥವಾ ಅಡ್ಡ ಪರಿಣಾಮವೇ ಇಲ್ಲದೆ ರೂಪವನ್ನುಸರಿಪಡಿಸುವ ಉತ್ತಮ ಚಿಕಿತ್ಸಾ ಫಲಿತಾಂಶ ಸಾಧ್ಯವಾಗುವುದು
– 2 ತಿಂಗಳಲ್ಲಿ ರಿ-ಪಿಗೆ¾ಂಟೇಷನ್, ಸುಮಾರು 4 ರಿಂದ 6 ತಿಂಗಳ ಸಮಯದಲ್ಲಿ ಗರಿಷ್ಠ ಸುಧಾರಣೆ ಮತ್ತು ಸರಿಯಾದ ಬಣ್ಣ ಹೊಂದಾಣಿಕೆಗೆ ಸಾಧ್ಯವಾಗುವುದು.
ತೊನ್ನಿನ ಜೊತೆಗೆ
ಸಹಬಾಳ್ವೆ ಹೇಗೆ ಸಾಧ್ಯ?
ತೊನ್ನಿನ ಕಾರಣದಿಂದಾಗಿ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆಯು ನಮ್ಮ ಭಾವನಾತ್ಮಕ ಮತ್ತು ಮಾನಸಿಕ ಸಂವೇದನೆಯ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟು ಮಾಡುತ್ತದೆ. ರೋಗಿಗೆ ಮುಜುಗರ, ನಾಚಿಕೆ, ಖನ್ನತೆ ಅಥವಾ ಆತಂಕದ ಭಾವವನ್ನು ಉಂಟು ಮಾಡುತ್ತದೆ. ತನ್ನ ಬಗ್ಗೆ ಬೇರೆಯವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಅನ್ನುವ ಆತಂಕವನ್ನು ಉಂಟು ಮಾಡುತ್ತದೆ. ತಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು
ಕಾಳಜಿ ಇರುವ ಯುವವಯಸ್ಕರಲ್ಲಿ, ವ್ಯಾಪಕ ತೊನ್ನು ಕಾಣಿಸಿಕೊಂಡರೆ ಅವರು ಹತಾಶರಾಗುವ ಸಾಧ್ಯತೆಯೂ ಇದೆ.
ತೊನ್ನಿನ ಜೊತೆಗೆ ಹೊಂದಿಕೊಂಡು ಹೋಗಲು ಮುಂದೆ ಹೇಳುವ ಕೆಲವು ಅಂಶಗಳು ನಿಮಗೆ ಸಹಾಯ ಮಾಡಬಹುದು. ಈ ಸಲಹೆಗಳನ್ನು ಪರಿಗಣಿಸಿ:
1.ಉತ್ತಮ ಸಂಪರ್ಕವನ್ನು ಸಾಧಿಸಿ. ತೊನ್ನಿನ ಬಗ್ಗೆ ಉತ್ತಮ ತಿಳಿವಳಿಕೆ ಇರುವ ಒಳ್ಳೆಯ ವೈದ್ಯರನ್ನು ಕಾಣಿರಿ. ಚರ್ಮದ ತಜ್ಞರುಗಳು ಅಂದರೆ ಚರ್ಮದ ಆರೈಕೆಯ ಬಗ್ಗೆ ತಜ್ಞರಾಗಿರುವ ವೈದ್ಯರುಇದಕ್ಕೆ ಸೂಕ್ತರಾಗಿರುತ್ತಾರೆ.
2. ಇದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ: ತೊನ್ನಿನ ಬಗ್ಗೆ ಮತ್ತು ಅದರ ಚಿಕಿತ್ಸಾ ಆಯ್ಕೆಗಳ ಎಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ ಇದೆಯೋ ಅಷ್ಟು ವಿಚಾರಗಳನ್ನು ತಿಳಿದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಆರೈಕೆಯ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯವಾಗುತ್ತದೆ.
3.ಬೇರೆಯವರ ಜೊತೆಗೆ ಮಾತನಾಡಿ: ನಿಮ್ಮ ಪ್ರದೇಶದಲ್ಲಿ ತೊನ್ನು ಕಾಯಿಲೆ ಇರುವ ಜನರ ಬಗ್ಗೆ, ಬೆಂಬಲಿಸುವ ತಂಡಗಳ ಬಗ್ಗೆ ನಿಮ್ಮ ವೈದ್ಯರಲ್ಲಿ ವಿಚಾರಿಸಿ, ವಿಟಿಲಿಗೋ ಆರ್ಗನೈಸೇಷನ್‌ಗಳನ್ನೂ ಸಹ ನೀವು ಸಂಪರ್ಕಿಸಬಹುದು.
4.ನಿಮ್ಮನ್ನು ಪ್ರೀತಿಸುವವರಲ್ಲಿ ಮನಸ್ಸನ್ನು ತೆರೆದಿಡಿ: ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಅರ್ಥಮಾಡಿಕೊಳ್ಳಿ ಮತ್ತು ಆಧಾರವನ್ನು ಪಡೆಯಿರಿ.
ತೊನ್ನಿನ ಬಗ್ಗೆ ಇರುವ ಕಲ್ಪನೆ ಮತ್ತು ವಾಸ್ತವಗಳು
ಕಲ್ಪನೆ: ತೊನ್ನು ಎಂಬುದು ಸಾಂಕ್ರಾಮಿಕ ಮತ್ತು ಅದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ
ವಾಸ್ತವ : ಇಲ್ಲ! ಯಾವುದೇ ರೀತಿಯ ಸಂಪರ್ಕದಿಂದ ತೊನ್ನು ಹರಡುವುದಿಲ್ಲ
ಕಲ್ಪನೆ: ತೊನ್ನು ಕುಷ್ಠರೋಗಕ್ಕೆ ಸಂಬಂಧಿಸಿದ್ದು
ವಾಸ್ತವ: ಇಲ್ಲ! ಇದು ಒಂದು ಸೋಂಕು ಅಲ್ಲ. ತೊನ್ನು ಅಂದರೆ ಚರ್ಮದಿಂದ ಬಣ್ಣ ಮರೆಯಾಗಿರುವುದು ಅಷ್ಟೇ.
ಕಲ್ಪನೆ: ತೊನ್ನು ಎನ್ನುವುದು ಯಾವಾಗಲೂ ಆನುವಂಶಿಕವಾಗಿರುತ್ತದೆ
ವಾಸ್ತವ: ಇಲ್ಲ! ಹೆಚ್ಚಿನವುಗಳಿಗೆ ಆನುವಂಶಿಕ ಸಂಬಂಧ ಇರುವುದಿಲ್ಲ. ಕೇವಲ20% ಕ್ಕೆ ಮಾತ್ರ.
ಕಲ್ಪನೆ: ತೊನ್ನು ಇರುವ ರೋಗಿಯನ್ನು ಮದುವೆ ಆಗಬಾರದು
ವಾಸ್ತವ: ಹಾಗೇನೂ ಇಲ್ಲ! ಇದು ಕೇವಲ ಒಂದು ತೋರಿಕೆಯ ಸಮಸ್ಯೆಯೇ ಹೊರತು, ಒಂದು ಒಳಗಿನ ಕಾಯಿಲೆ ಅಲ್ಲ. ಹಾಗಾಗಿ ಇಂತಹ ವ್ಯಕ್ತಿಗಳ ಜೊತೆಗೆ ಸಂತೋಷಯುತ ವೈವಾಹಿಕ ಜೀವನ ಸಾಧ್ಯವಿದೆ.
ಕಲ್ಪನೆ: ತೊನ್ನಿಗೆ ಚಿಕಿತ್ಸೆ ಸಾಧ್ಯವಿಲ್ಲ
ವಾಸ್ತವ: ಹಾಗೇನೂ ಇಲ್ಲ! ಔಷಧಿ, ಫೋಟೋತೆರಪಿ, ಗ್ರಾrಂಗ್ ಅಥವಾ ಮೆಲೆನೋಸೈಟ್ ಟ್ರಾನ್ಸ್ ಪ್ಲಾಂಟೇಷನ್‌ನಿಂದ ಹೆಚ್ಚಿನ ಜನರಿಗೆ ಚಿಕಿತ್ಸೆ ಸಾಧ್ಯವಿದೆ.
ಕಲ್ಪನೆ: ತೊನ್ನು ಯಾವಾಗಲೂ ಇಡೀ ದೇಹಕ್ಕೆ ಹರಡುತ್ತದೆ
ವಾಸ್ತವ: ಇಲ್ಲ! ಹೆಚ್ಚಿನವರಲ್ಲಿ ಇದು ಸ್ಥಳೀಯವಾಗಿ ಒಂದೇ ಜಾಗದಲ್ಲಿ ಇರುವುದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.