ಸಾಧನೆಯ ಹಾದಿಯಲ್ಲಿ ಮಲ್ಪೆ ಮೀನುಗಾರರ ಸಂಘ
Team Udayavani, Jul 2, 2017, 3:45 AM IST
ಮಲ್ಪೆ: ಮೂರುವರೆ ದಶಕಗಳಿಂದ ಮೀನುಗಾರರ ಯಶೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಲ್ಪೆ ಮೀನುಗಾರರ ಸಂಘವು ಇದೀಗ ತನ್ನ 34ನೇ ವರ್ಷದ ವಾರ್ಷಿಕ ಮಹಾಸಭೆಗೆ ಸಜ್ಜಾಗಿದೆ. ಸಂಘದ ಸಭೆಯು ಜು. 2 ರಂದು 9.30ಕ್ಕೆ ಸಮುದಾಯ ಭವನದಲ್ಲಿ ನಡೆಯಲಿದೆ.
ಪ್ರಸುತ್ತ ಸಾಲಿನಲ್ಲಿ ಸಂಘವು ಒಟ್ಟು 17 ಬಾರಿ ಆಡಳಿತ ಮಂಡಳಿ ಮತ್ತು ಮಲ್ಪೆ ಮೀನುಗಾರಿಕಾ ಬಂದರಿನ ಇನ್ನಿತರ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಂಟಿ ಸಭೆ ನಡೆಸಿ ಮೀನುಗಾರರ, ಮೀನುಗಾರಿಕೆಯ, ಮೀನುಗಾರಿಕಾ ಬಂದರಿನ ಅಭಿವೃದ್ಧಿಯ ಸಾಕಷ್ಟು ಚರ್ಚೆ ಮಾಡಲಾಗಿತ್ತು.
ಜನಪ್ರತಿನಿಧಿಗಳ ಭೇಟಿ:
ಬಂದರಿನಲ್ಲಿ ಬೋಟ್‌ಗಳು ತಂಗಲು ಸ್ಥಳಾವಕಾಶದ ಕೊರತೆ ನೀಗಿಸಲು 4ನೇ ಹಂತಕ್ಕೆ ವಿಸ್ತರಣೆ, 3ನೇ ಹಂತದಲ್ಲಿ ನಿರ್ಮಾಣಗೊಂಡ ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರಿಕಾ ದೋಣಿಗಳಿಗೆ ಅತೀ ಕಡಿಮೆ ದರ ಮತ್ತು ಹೆಚ್ಚಿನ ಸೌಲಭ್ಯ ಸಿಗುವಂತಾಗಲು ಮೀನುಗಾರ ಸಂಘಕ್ಕೆ 10 ವರ್ಷಗಳ ಅವಧಿಗೆ ನೀಡುವುದು, ಬಂದರಿನ 1 ಮತ್ತು 2ನೇ ಹಂತದ ಬೇಸಿನ್‌ನಲ್ಲಿ ಡ್ರಜ್ಜಿಂಗ್ ನಡೆಸುವುದು, ಕೃಷಿಗೆ ಸಿಗುವ ಸವಲತ್ತುಗಳನ್ನು ಮೀನುಗಾರಿಕೆಗೂ ನೀಡುವುದು ಮೊದಲಾದ ಹಲವಾರು ಬೇಡಿಕೆಗಳನ್ನು ಮೀನುಗಾರಿಕಾ ಸಂಘದ ನೇತೃತ್ವದಲ್ಲಿ ಬಂದರಿನ ವಿವಿಧ ಸಂಘಟನೆಗಳ ಮೂಲಕ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಮುಖ್ಯಮಂತ್ರಿಗಳು, ಸಂಸದರು ಹಾಗೂ ವಿವಿಧ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗಿದೆ. ಮೀನುಗಾರ ಸಂಘದ ಬಹುದಿನದ ಬೇಡಿಕೆಯಾದ ಮಲ್ಪೆಯಲ್ಲಿ ನೂತನ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಕನಸು ನನಸಾಗಿದೆ.
ಪಡುಕರೆಯಲ್ಲಿ ಬೋಟ್‌ಗಳ ತಂಗುದಾಣಕ್ಕೆ ಜಟ್ಟಿ ನಿರ್ಮಾಣಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸಲ್ಲಿಸಿದ ಮನವಿಗೆ 500 ಮೀ. ಪ್ರಸ್ತಾವನೆಯಲ್ಲಿ 250 ಮೀ. ಈಗಾಗಲೇ ನಬಾರ್ಡ್ ಯೋಜನೆಯಲ್ಲಿ ಮಂಜೂರಾತಿಯಾಗಿದೆ.
ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ
ಸಂಘವು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಮೀನುಗಾರಿಕೆಗೆ ತೆರಳಿದ್ದಾಗ ನಡೆದ ಅವಘಡದಲ್ಲಿ ಮೃತರಾದ ಕುಟಂಬಕ್ಕೆ ದುರಂತ ಪರಿಹಾರ ನಿಧಿ ನೀಡುತ್ತಿದೆ.
ಧಾರ್ಮಿಕ ಕಾರ್ಯಕ್ಕೆ ನೆರವು
ಉಡುಪಿ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರಿಗೆ ಬ್ರಹ್ಮರಥೋತ್ಸವ ಸೇವೆ ಸಮರ್ಪಣೆ, ಮೀನುಗಾರರ ಕುಲದೇವರಾದ ಬೆಣ್ಣೆಕುದ್ರು ಶ್ರೀ ಕುಲಮಾಸ್ತಿಯಮ್ಮನವರ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ರಥೋತ್ಸವದ ಅನ್ನಸಂತರ್ಪಣೆಗೆ ದೇಣಿಗೆಯನ್ನು ನೀಡಲಾಗುತ್ತಿದೆ. ಮೀನುಗಾರರ ಶ್ರೇಯೋಭಿವೃದ್ದಿಗಾಗಿ ಋತು ಆರಂಭದಲ್ಲಿ ಬಂದರಿನಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ ಮತ್ತು ಗಣಪತಿಹೋಮವನ್ನು ನಡೆಸಲಾಗುತ್ತಿದೆ.
ಸಂಘವು ಕಳೆದ ಹಲವಾರು ವರ್ಷಗಳಿಂದ ಮೀನುಗಾರಿಕೆ ಮತ್ತು ಮೀನುಗಾರರ ಸಮಸ್ಯೆಗಳನ್ನು ಸರಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಬಂದರಿನ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಬಲವಾದ ಸಂಘಟನೆಯ ಮುಖೇನ ಹೋರಾಡಿದ್ದರಿಂದ ಇಂದು ಹಲವಾರು ಬೇಡಿಕೆಗಳು ಈಡೇರಲು ಸಹಕಾರಿಯಾಗಿವೆ. ಮಲ್ಪೆ ಮೀನುಗಾರ ಸಂಘದ ಈ ಒಂದು ಹೋರಾಟದಿಂದಾಗಿ ರಾಜ್ಯದ ಎಲ್ಲ ಬಂದರುಗಳ ಮೀನುಗಾರರಿಗೂ ಅನುಕೂಲವಾಗಿದೆ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.