ಗಿರಿಜನರಿಗೆ ಸರಿಯಾಗಿ ತಲುಪದ ಅಭಿವೃದ್ಧಿ ಯೋಜನೆಗಳು 


Team Udayavani, Jul 2, 2017, 3:45 AM IST

girijana.jpg

ಮಡಿಕೇರಿ: ಅಳಿವಿನಂಚಿನಲ್ಲಿರುವ ಆದಿವಾಸಿಗಳನ್ನು ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನೇರ ನಿರ್ಧಾರಕ್ಕೆ ಬರಲಾಗದೆ ಅಯೋಮಯ ಸ್ಥಿತಿಯಲ್ಲಿರುವ ಆಡಳಿತ ವ್ಯವಸ್ಥೆಗಳು ಗಿರಿಜನ ಉದ್ಧಾರಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಲೇ ಇದೆ. ಆದರೆ ಇದರ ಜೊತೆ ಜತೆಯಲ್ಲೇ ನಮಗೇನು ಸಿಗುತ್ತಿಲ್ಲ ಎನ್ನುವ ಆರೋಪ, ಆಕ್ರೋಶವೂ ಕೇಳಿ ಬರುತ್ತಿದೆ.

ಡಿಜಿಟಲ್‌ ಇಂಡಿಯಾ ಕನಸಿನ ಇಂದಿನ ಸಮಾಜದಲ್ಲಿಯೇ ಮೂಲ ಆದಿವಾಸಿ  ಜನಾಂಗಗಳು ಆದಿಕಾಲದ ನಿಸ್ತೇಜ ಸ್ಥಿತಿ ಯಲ್ಲೇ ಬದುಕು ಸವೆಸುತ್ತಿದ್ದಾರೆ. ಪೌಷ್ಟಿಕ ಆಹಾರದ ಕೊರತೆ ಮತ್ತು ದುಷcಟಗಳಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವ ಅಸಮಾಧಾನವಿದೆ. 

ಆದರೆ ಸರಕಾರಗಳು ಘೋಷಿಸುವ ಯೋಜನೆಗಳು, ನೀಡುವ ಅನುದಾನಗಳನ್ನು ಲೆಕ್ಕ ಹಾಕಿದರೆ ಆದಿವಾಸಿಗಳಿರುವ ಪ್ರದೇಶ ಸ್ವರ್ಗವಾಗಬೇಕಾಗಿತ್ತು ಎನ್ನುವುದು ಆದಿವಾಸಿ ಮುಖಂಡರ ಅಭಿಪ್ರಾಯವಾಗಿದೆ.

ಬೆರಳೆಣಿಕೆಯಷ್ಟು ಮಂದಿ ಗಿರಿಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾ ಗಿಯೂ ಒಂದಷ್ಟು ಬೆಳೆದು ಮಾದರಿ ಎನಿಸಿಕೊಂಡಿದ್ದಾರೆ. ಉಳಿದ ಶೇ. 90ರಷ್ಟು ಮಂದಿ ಸರಕಾರದ ಯೋಜನೆಗಳನ್ನು, ಅನುದಾನ ವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ. ಆದಿವಾಸಿಗಳ ಪರವಾದ ಸಂಘಟನೆಗಳು ಕೂಡ ಸರಕಾರದ ಸೌಲ ಭ್ಯಗಳ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ ಮತ್ತು ಅಸ ಹಾಯಕರಿಗೆ ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪವಿದೆ. 

ಅರಣ್ಯದ ಕಾವಲುಗಾರರಂತೆ ಇರುವ ಆದಿವಾಸಿಗಳನ್ನು ಕಾಯುವವರು ಇಲ್ಲದಾಗಿದ್ದು, ಅನಾಥ ಪ್ರಜ್ಞೆಯಲ್ಲೇ ಹೋರಾಟಗಾರರ ಮಾತಿಗೆ ತಲೆದೂಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಆದಿವಾಸಿಗಳ ಅಭ್ಯುದಯಕ್ಕಾಗಿ ಸರಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.
ಜಿಲ್ಲೆಯಲ್ಲಿ ಮಳೆಗಾಲ ಆರ‌ಂಭವಾಗಿದ್ದು, ಆದಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸರಕಾರ ಪೌಷ್ಟಿಕ ಆಹಾರವನ್ನು ನೀಡುತ್ತಿದೆ ಎಂದು ಜಿಲ್ಲಾ ಗಿರಿಜನ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ತಿಳಿಸಿದ್ದಾರೆ.

ಪೌಷ್ಟಿಕ ಆಹಾರ ಯೋಜನೆ 
ರಾಜ್ಯದ ದಕ್ಷಿಣಕನ್ನಡ, ಉಡುಪಿ, ಮೈಸೂರು, ಕೊಡಗು, ಚಾಮರಾಜನಗರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಮೂಲ ನಿವಾಸಿ ಪಂಗಡವಾದ ಕೊರಗ, ಜೇನು ಕುರುಬ ಹಾಗೂ ಇತರೆ ಪರಿಶಿಷ್ಟ ಪಂಗಡವಾದ ಕಾಡು ಕುರುಬ, ಸೋಲಿಗ, ಯರವ, ಮಲೆಕುಡಿಯ ಮತ್ತು ಸಿದ್ಧಿ ಜನಾಂಗದವರಿಗೆ ಮಳೆಗಾಲದ ಅವಧಿಯಲ್ಲಿ 6 ತಿಂಗಳವರೆಗೆ ಅಂಗನವಾಡಿಗಳ ಮೂಲಕ  ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.

ಆದಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವುದರೊಂದಿಗೆ ಮನೆಗಳು° ನಿರ್ಮಿಸಿ ಕೊಡಲಾಗುತ್ತದೆೆ. ತಟ್ಟೆಕೆರೆ, ಕೊಡಂಗೆ ಪ್ರದೇಶವನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆರೋಗ್ಯ ಸೌಲಭ್ಯಗಳನ್ನು ನೀಡ ಲಾಗುತ್ತಿದ್ದು, ಇಡೀ ಜಿಲ್ಲೆಯಲ್ಲಿ ಆದಿವಾಸಿ ಮಕ್ಕಳಿಗಾಗಿ 11 ಆಶ್ರಮ ಶಾಲೆ ಮತ್ತು 8 ವಸತಿ ನಿಲಯಗಳಿವೆ. ಬಾಳುಗೋಡು ವಿನಲ್ಲಿ ಮೊರಾರ್ಜಿ ವಸತಿ ಶಾಲೆಗಳಿವೆ.

ಆಹಾರ ಪದಾರ್ಥದ ಪ್ರಮಾಣ 
ಮಾಸಿಕ ಅಕ್ಕಿ, ರಾಗಿ, ಗೋಧಿ ತಲಾ 15 ಕೆ.ಜಿ., ತೊಗರಿ ಬೇಳೆ, ಹೆಸರು ಕಾಳು, ಹುರುಳಿಕಾಳು, ಅಲಸಂಡೆಕಾಳು ತಲಾ 5 ಕೆ.ಜಿ., ಅಡುಗೆ ಎಣ್ಣೆ  2ಲೀ, ಸಕ್ಕರೆ, ಬೆಲ್ಲ ತಲಾ 4 ಕೆ.ಜಿ., ಮೊಟ್ಟೆ  ತಿಂಗಳಿಗೆ 45, ನಂದಿನಿ ತುಪ್ಪ 1 ಕೆ.ಜಿ. ನೀಡಲಾಗುತ್ತಿದೆ. ಆದಿವಾಸಿಗಳ ಉಪಯೋಜನೆ ವಿಶೇಷ ಕೇಂದ್ರೀಯ ಸಹಾಯಧನದಡಿಯಲ್ಲಿ ವಿಶೇಷ ಆರ್ಥಿಕ ಸೌಲಭ್ಯಗಳು ಲಭ್ಯವಿದೆ.

ಈ ಯೋಜನೆಯಡಿಯಲ್ಲಿ ಸಂವಿಧಾನ ಅನುಚ್ಛೇದನ 275(1) ಅಡಿಯಲ್ಲಿ ಪರಿಶಿಷ್ಠ ಪಂಗಡದ ಕಾಲನಿಗಳಲ್ಲಿ ಮೂಲ
ಸೌಕರ್ಯಗಳಾದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ, ಕುಡಿ ಯುವ ನೀರು, ಸಮುದಾಯ ಭವನ ಮುಂತಾದವು ಗಳನ್ನು ಒದಗಿಸಲಾಗುತ್ತಿದೆ.

ಮೂಲ ಆದಿವಾಸಿ ಜನಾಂಗದ ಅಭಿವೃದ್ಧಿ ಯೋಜನೆ
ಮೂಲ ನಿವಾಸಿ ಜೇನು ಕುರುಬ ಜನಾಂಗದವರಿಗೆ ಮನೆಗಳ ನಿರ್ಮಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ನೀರಾವರಿ ಸೌಲಭ್ಯ, ಸೋಲಾರ್‌ ಬೀದಿ ದೀಪ ಮುಂತಾದ ಕಾಮಗಾರಿಗಳು ನಡೆಯುತ್ತದೆ.
ಆರ್ಥಿಕೋನ್ನತಿ ಕಾರ್ಯಕ್ರಮಗಳಾದ ಹಸು, ಹಂದಿ ಮರಿ ವಿತರಣೆ ಮತ್ತು ಸಾಕಾಣಿಕೆ ತರಬೇತಿಗಳನ್ನು ನೀಡಲಾಗುವುದು.

ಯರವ, ಸೋಲಿಗ ಜನಾಂಗದ ಅಭಿವೃದ್ಧಿ ಯೋಜನೆ 
ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪರಿಶಿಷ್ಟ ಪಂಗಡಗಳಾದ ಎರವ ಮತ್ತು ಸೋಲಿಗ ಜನಾಂಗದವರಿಗೆ ಮನೆ ನಿರ್ಮಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಆರೋಗ್ಯ ಕಾರ್ಯಕ್ರಮ ಹಾಗೂ ಸ್ವಯಂ ಉದ್ಯೋಗ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ.

ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿವೇಶನ ಒದಗಿಸುವುದು ಹಾಗೂ ವಸತಿ ನಿರ್ಮಾಣ ಮಾಡಿಕೊಡಲಾಗುತ್ತದೆ.

ಅರಣ್ಯ ಹಕ್ಕು ಕಾಯ್ದೆಗಳು 
ಅನುಸೂಚಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006 ಮತ್ತು ನಿಯಮಗಳು 2008 ಹಾಗೂ ತಿದ್ದು ಪಡಿ ನಿಯಮ 2012ರ ಅನ್ವಯ ಅರಣ್ಯದಲ್ಲಿ ವಾಸಿಸುವ ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಪತ್ರ ನೀಡಲಾಗುತ್ತದೆ.

ಹಲವು ಮೂಲ ಸೌಲಭ್ಯ 
ಅರಣ್ಯ ಹಕ್ಕು ಪತ್ರ ಪಡೆದ ಹಾಗೂ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಅಗತ್ಯ ಮೂಲಭೂತ  ಸೌಕರ್ಯಗಳಾದ ಮನೆಗಳ ನಿರ್ಮಾಣ, ಮನೆಗಳ ದುರಸ್ಥಿ, ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ, ಕುಡಿಯುವ ನೀರು, ಸಾಮುದಾಯ ಭವನ, ಸೋಲಾರ್‌ ಬೀದಿ ದೀಪ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ ಎಂದು ಅಧಿಕಾರಿ ಪ್ರಕಾಶ್‌ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.