ಸುಳ್ಯ ನಗರದಲ್ಲಿ ಮ್ಯಾನ್ಹೋಲ್ ದುರಸ್ಥಿ ಕಾರ್ಯ
Team Udayavani, Jul 2, 2017, 3:45 AM IST
ಸುಳ್ಯ : ಸುಳ್ಯ ನಗರದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ್ಗೆ ಬ್ಲಾಕ್ ಆಗುತ್ತಿರುವ ಒಳಚರಂಡಿ ದುರಸ್ತಿ ಕಾರ್ಯಕ್ಕಾಗಿ ಮುಖ್ಯರಸ್ತೆಯ ಡಾಮರಿನಡಿ ಮುಚ್ಚಿಹೋಗಿರುವ ಮ್ಯಾನ್ಹೋಲ್ಗಳನ್ನು ತೆರೆಯುವ ಕಾರ್ಯ ನಡೆಯುತ್ತಿದೆ.
ಶನಿವಾರ ನಗರದ ಮುಖ್ಯ ರಸ್ತೆಯಲ್ಲಿರುವ ಮ್ಯಾನ್ ಹೋಲ್ಗಳನ್ನು ತೆರೆಯುವ ಕಾರ್ಯ ನಗರ ಪಂಚಾಯತ್ ಕೈಗೊಂಡಿದೆ. ಒಟ್ಟು 9 ಮ್ಯಾನ್ಹೋಲ್ಗಳ ಪೈಕಿ ಮುಖ್ಯರಸ್ತೆಯಲ್ಲಿ 5 ಮ್ಯಾನ್ಹೋಲ್ಗಳಿವೆ. ಕೆ.ಆರ್.ಡಿ.ಸಿ.ಎಲ್.ನವರು ಡಾಮರೀಕರಣ ಸಂದರ್ಭ ಈ ಹೋಲ್ಗಳ ಮೇಲೆ ಡಾಮರು ಹಾಕಿರುವುದರಿಂದ ಮುಚ್ಚುಗಡೆಯಾಗಿದೆ. ಆಗಾಗ್ಗೆ ಬ್ಲಾಕ್ ಆಗುವ ಸಂದರ್ಭ ನಾಲ್ಕು ಹೋಲ್ಗಳನ್ನು ಸುಲಭವಾಗಿ ತೆರೆದು ತ್ಯಾಜ್ಯ ಸರಿಪಡಿಸಲಾಗುತ್ತಿತ್ತು.
ಕಳೆದೊಂದು ತಿಂಗಳಿನಿಂದ ಒಳಚರಂಡಿ ಬ್ಲಾಕ್ ದುರಸ್ತಿಪಡಿಸಿದ್ದರೂ ಸರಿಯಾಗಿರಲಿಲ್ಲ. ಹೀಗಾಗಿ ನಗರ ಪಂಚಾಯತ್ ಡಾಮರೀನಡಿ ಮುಚ್ಚಿಹೋಗಿರುವ ಹೋಲ್ಗಳ ಸಹಿತ ಎಲ್ಲಾ ಹೋಲ್ಗಳನ್ನು ತೆರೆದು ಮಂಗಳೂರಿನಿಂದ ಸಕ್ಕಿಂಗ್ ಯಂತ್ರ ತರಿಸಿ ಪೂರ್ತಿ ಸರಿಪಡಿಸಲು ನಿರ್ಧರಿಸಿದ್ದು, ಅದರಂತೆ ಈ ಕಾರ್ಯ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.