ಶಾಂತಿ ಕದಡುವವರಿಗೆ ತಕ್ಕ ಪಾಠ :ಐಜಿಪಿ ಎಚ್ಚರಿಕೆ
Team Udayavani, Jul 2, 2017, 3:45 AM IST
ಬಂಟ್ವಾಳ: ಜಿಲ್ಲೆಯಾದ್ಯಂತ ಶಾಂತಿ ಕದಡುವ ಕ್ರಿಮಿನಲ್ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಲಿದೆ. ಶಾಂತಿ ಕಾಪಾಡಲು, ಜನರ ನೆಮ್ಮದಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇಲಾಖೆ ಬದ್ದವಾಗಿದೆ. ರೌಡಿಶೀಟರ್‌ಗಳು, ಕ್ರಿಮಿನಲ್ ಕೃತ್ಯ ನಡೆಸಿ ಪರಾರಿಯಾದವರ ಪಟ್ಟಿಯ ಪರಿಶೀಲನೆ ನಡೆಯುತ್ತಿದೆ. ಬಂಟ್ವಾಳದಲ್ಲಿ ಹೆಚ್ಚುವರಿ ಎಸ್‌ಪಿ ಕಚೇರಿಯನ್ನು ತೆರೆಯಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.
ಅವರು ಜು. 1ರಂದು ಬಂಟವಾಳದ ಬಂಟರ ಭವನದಲ್ಲಿ ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ಮಾತನಾಡಿ, ಸಿಸಿ ಕೆಮರಾ ಆಧರಿಸಿ ಆರೋಪಿಗಳನ್ನು ಬಂಧಿಸುವ ಕ್ರಮ ಮಾಡಿದ್ದೇವೆ. ಒಬ್ಟಾತ ಕಲ್ಲು ಎಸೆದಿದ್ದಾನೆ ಎಂಬುದಕ್ಕೆ ಇನ್ನೊಬ್ಬನು ಕಲ್ಲೆಸೆದರೆ ಅದು ಸರಿಯಲ್ಲ; ಅದು ಸರಿ ಆಗುವುದಾದರೆ ಪೊಲೀಸ್, ಕಾನೂನು ವ್ಯವಸ್ಥೆಯ ಔಚಿತ್ಯವೇನು ಎಂದು ಪ್ರಶ್ನಿಸಿದರು.
ರಸ್ತೆಯಲ್ಲಿ ಹೋಗುವ ಅಮಾಯಕರು, ಅವರ ವಾಹನಕ್ಕೆ, ವ್ಯವಹಾರಕ್ಕೆ ಬಂದ ಮಂದಿಯ ಮೇಲೆ ದಾಂಧಲೆ ನಡೆಸುವ ಹಕ್ಕು ಯಾರಿಗೂ ಇಲ್ಲ. ಸಿಸಿ ಕೆಮರಾ ಕಳವು ಮಾಡುವಷ್ಟರ ಮಟ್ಟಿಗೆ ಇಲ್ಲಿನ ಸ್ಥಿತಿ ಬಂದಿದೆ. ಹಾಗಾಗಿ ಕಾನೂನಿನ ಹೆದರಿಕೆ ಬೇಕಾಗಿದೆ ಎಂದರು.
ಯುವಕರು ದಾರಿತಪ್ಪಿಸಬೇಡಿ
ನಮ್ಮ ಸಮಾಜದಲ್ಲಿ ಯುವಕರನ್ನು ದಾರಿತಪ್ಪಿಸುವ ಕೆಲಸ ಆಗುತ್ತಿದೆ. ಅವರ ತಲೆಗೆ ಬೇಡದ್ದು ತುಂಬಿಸುವ ಕೃತ್ಯಗಳಿಂದ ಒಳ್ಳೆಯದು ಆಗುವುದಿಲ್ಲ. ಹೆತ್ತವರು ಇಂತಹ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅನ್ಯ ದೇಶ, ಇನ್ನೊಂದು ರಾಜ್ಯದಲ್ಲಿ ನಡೆದ ವಿಚಾರಕ್ಕೆ ಸ್ಥಳೀಯವಾಗಿ ಪ್ರತಿಕ್ರಿಯಿಸಿ ಪ್ರತಿಭಟಿಸಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ ಎಂದು ಎಸ್‌ಪಿ ಹೇಳಿದರು.
ಎರಡೂ ಕಡೆಯಿಂದ ತಪ್ಪು
“ಎರಡೂ ಸಮುದಾಯಗಳಿಂದ ತಪ್ಪಾಗಿದೆ ಎಂಬುದು ಗಮನದಲ್ಲಿ ಇರಲಿ. ಜಮೀನು ಸಂಬಂಧಿತ ಸಮಸ್ಯೆಗೆ ರೆವಿನ್ಯೂ ಇಲಾಖೆ ಇರುವಂತೆ, ಶಾಂತಿ ಸಂಬಂಧಿತ ಸಮಸ್ಯೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಪೊಲೀಸ್ ಅಧಿಕಾರಿಯನ್ನು ಬದಲಿಸಿದಾಕ್ಷಣ ಎಲ್ಲವೂ ಸರಿ ಹೋಗುತ್ತದೆ ಎಂಬ ಧೋರಣೆ ಬೇಡ. ಪೊಲೀಸರು ದುಷ್ಕರ್ಮಿಗಳನ್ನು ಹಿಡಿಯುವುದಕ್ಕೆ ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಇಲಾಖೆಯ ವರಿಷ್ಠರು ಕಾನೂನು ತಿಳಿಯದವರಲ್ಲ’ ಎಂದು ಸುಧೀರ್ ಕುಮಾರ್ ಹೇಳಿದರು.
ಶಾಶ್ವತ ಶಾಂತಿ ಸಮಿತಿ ರಚಿಸಿ
ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಈ ಹಿಂದೆ ಪೊಲೀಸ್ ಇಲಾಖೆಯು ಒಂದು ಶಾಂತಿ ಸಮಿತಿ ರಚಿಸುತ್ತಿತ್ತು. ಚೌತಿ, ರಮ್ಜಾನ್, ಕ್ರಿಸ್ಮಸ್, ಜಾತ್ರೆ ಇದ್ದಾಗ ಮಾತ್ರ ಸಮಿತಿ ಕೆಲಸ ಮಾಡುವುದಲ್ಲ. ಮುಂದಕ್ಕೆ ಶಾಶ್ವತ ಶಾಂತಿ ಸಮಿತಿ ರಚನೆಯಾಗಲಿ. ಅದು ಕಾಟಾಚಾರಕ್ಕೆ ಆಗುವ ಬದಲು ಸಕ್ರಿಯ ಜನರನ್ನು ಸೇರಿಸಿ ರಚನೆ ಮಾಡಬೇಕು. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಸಮಿತಿ ಇರಬೇಕು ಎಂದರು.
ಗಾಂಜಾಕ್ಕೆ ಬಲಿ
ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಮಾತನಾಡಿ ಜಿಲ್ಲೆಯಲ್ಲಿ ಗಾಂಜಾ ಸೇವನೆಗೆ ಯುವ ಸಮಾಜ ಬಲಿಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿಯೇ ತಂಡ ರಚಿಸಬೇಕು. ನಾವು ಮಾಹಿತಿ ನೀಡಿದರೆ ಅದನ್ನು ಸೋರಿಕೆ ಮಾಡಿ ದುಷ್ಕರ್ಮಿಗಳನ್ನು ರಕ್ಷಿಸುವ ಕೆಲಸ ಆಗುತ್ತದೆ ಎಂದು ಗಮನ ಸೆಳೆದರು.
ಕೈಕಂಬ ನಿವಾಸಿ, ಸಂಘಟನೆಯ ಪ್ರಮುಖ ಶಾಹುಲ್ ಹಮೀದ್ ಮಾತನಾಡಿ ಕಲ್ಲಡ್ಕದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಹಲ್ಲೆ ಘಟನೆ ಸಂದರ್ಭ ಪೊಲೀಸ್ ಪಡೆಯೇ ಇದ್ದರೂ ಅವರು ಸುಮ್ಮನೆ ನೋಡುತ್ತಿದ್ದರು. ಪೊಲೀಸರಿಂದ ತಪ್ಪಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ “ನಮ್ಮಲ್ಲಿ ಸಿಸಿ ಕೆಮರಾ ದೃಶ್ಯಗಳಿವೆ. ಆ ದಾಖಲೆ ನೋಡಿಯೇ ಕ್ರಮ ಕೈಗೊಂಡಿದ್ದೇವೆ’ ಎಂದರು.
ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ ಮಾತನಾಡಿ, “ಗಲಾಟೆ ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ಭಯ ಉಂಟಾಗುವಂತೆ ಪೊಲೀಸರು ಮಾಡಬೇಕು’ ಎಂದು ಆಗ್ರಹಿಸಿದರು.
ಕಾನೂನುಸ್ನೇಹಿ ಪೊಲೀಸ್ ಬೇಕು
“ನಮಗೆ ಕಾನೂನುಸ್ನೇಹಿ ಪೊಲೀಸ್ ಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಆಗಬೇಕು. ಬಂಟ್ವಾಳ ವೃತ್ತದಲ್ಲಿ ಗುಣಮಟ್ಟದ ಸಿಸಿ ಕೆಮರಾ ಅಳವಡಿಸಲು 1.20 ಲ.ರೂ. ಅನುದಾನ ಒದಗಿಸಿದ್ದೇನೆ. ಪೊಲೀಸ್ ಇಲಾಖೆ ಗುಣಮಟ್ಟದ ಸಿಸಿ ಕೆಮರಾ ಅಳವಡಿಸಬೇಕು. ಕೆಮರಾದಲ್ಲಿ ಇರುವ ಚಿತ್ರದಿಂದ ಗುರುತು ಪರಿಚಯ ಸಿಗದಿದ್ದರೆ ಪ್ರಯೋಜನವೇನು’ ಎಂದು ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಅವರು ಹೇಳಿದರು. ಎಪಿಎಂಸಿ ಸದಸ್ಯ ಕೆ. ಪದ್ಮನಾಭ ರೈ ಮಾತನಾಡಿ ಕಲ್ಲಡ್ಕದ ಗಲಾಟೆಯಲ್ಲಿ ಇಲ್ಲದವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದೂರಿದರು.
ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ಮಾತನಾಡಿ ರಾಜಕೀಯ ಹಸ್ತಕ್ಷೇಪ ನಡೆಯದೇ ಇದ್ದರೆ ಸ್ಥಳೀಯರೇ ಸಮಸ್ಯೆಯನ್ನು ನಿಭಾಯಿಸುತ್ತಾರೆ. ಕೈಕಂಬದಲ್ಲಿ ಅನೇಕ ಸಂದರ್ಭ ಅಪಘಾತ ಆದಾಗ ಸ್ಥಳೀಯರು ಇತ್ಯರ್ಥಪಡಿಸಿದ್ದಾರೆ. ಗಲಭೆ ಆಗದಂತೆ ನೋಡಿಕೊಂಡಿದ್ದಾರೆ. ರಾಜಕೀಯದವರು ಜನರನ್ನು ಮೂರ್ಖರನ್ನಾಗಿಸುತ್ತಾರೆ ಎಂದರು.
ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಡಾ| ಜಗದೀಶ್ ಮಾತನಾಡಿದರು. ವೇದಿಕೆಯಲ್ಲಿ ಎಡಿಷನಲ್ ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು. ಡಿವೈಎಸ್‌ಪಿ ರವೀಶ್ ಸಿ.ಆರ್. ಸ್ವಾಗತಿಸಿ, ಬಂಟ್ವಾಳ ವೃತ್ತ ನಿರೀಕ್ಷಕ ಬಿ. ಕೆ.ಮಂಜಯ್ಯ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
ಸತ್ಯವೇನೆಂದು
ತಿಳಿಯಿರಿ: ಐಜಿಪಿ
ಪುರಸಭಾ ಸದಸ್ಯ ಮೋನಿಶ್ ಅಲಿ ಮಾತನಾಡಿ ಪೊಲೀಸ್ ವೈಫಲ್ಯವೇ ಕಲ್ಲಡ್ಕ ಗಲಾಟೆಗೆ, ಅನಂತರ ನಡೆದ ಅಹಿತಕರ ಘಟನೆಗಳಿಗೆ ಕಾರಣ ಎಂದರು. ಇದೇ ಸಂದರ್ಭ ಮಧ್ಯಪ್ರವೇಶಿಸಿದ ಐಜಿಪಿ “ನೀವು ನಾಳೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಬಂದು ಅಲ್ಲಿ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಕಣ್ಣಾರೆ ನೋಡಿ, ಸತ್ಯವೇನೆಂದು ತಿಳಿಯುತ್ತದೆ. ತಾರತಮ್ಯ ಮಾಡುವುದಿಲ್ಲ ಎಲ್ಲದಕ್ಕೂ ಸಾಕ್ಷಿ ಇದೆ’ ಎಂದು ಹೇಳಿದರು.
ಸಿಸಿ ಕೆಮರಾ ದೃಶ್ಯ ಪ್ರದರ್ಶನ
ಶಾಂತಿ ಸಭೆಯ ಆರಂಭದಲ್ಲಿ ಕಲ್ಲಡ್ಕದಲ್ಲಿ ನಡೆದ ಗಲಭೆಯ ಸಿಸಿ ಕೆಮರಾದಲ್ಲಿ ದಾಖಲಾದ ಚಿತ್ರಣದ ತುಣುಕನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ಸಭೆಯಲ್ಲಿ ಕೆಲವರು “ಇಂತಹ ಚಿತ್ರಣ ಪ್ರದರ್ಶಿಸಿ ಅಶಾಂತಿ ಸೃಷ್ಟಿಸುವುದು ಬೇಡ’ ಎಂದರು. ಐಜಿಪಿಯವರು ಸಂಜ್ಞೆಯ ಮೂಲಕವೇ ಜನರಲ್ಲಿ “ಕಾದು ನೋಡಿ’ ಎಂದು ಹೇಳಿದರು. ಬಳಿಕ ಚಿತ್ರಗಳನ್ನು ತೋರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!
Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.