![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 2, 2017, 3:45 AM IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರಿಯಡ್ಕ ಎಂಬಲ್ಲಿ ಸ್ಥಳೀಯ ನಿವಾಸಿಯೋರ್ವರು ಮನೆಗೆ ತಾಗಿಕೊಂಡ ನಿವೇಶನವನ್ನು ಜೇಸಿಬಿ ಮೂಲಕ ಸಮತಟ್ಟು ಮಾಡಿದ್ದು, ಇದರಿಂದಾಗಿ ನಮ್ಮ ಮನೆ ಕುಸಿತದ ಸಾಧ್ಯತೆ ಇದ್ದು, ಮನೆಯಲ್ಲಿ ವಾಸ ಮಾಡುವುದಕ್ಕೂ ಭೀತಿ ಎದುರಾಗಿದೆ ಎಂದು ಯು.ಕೆ. ಖಾಲಿದ್ ಮತ್ತು ಯು.ಪಿ. ಖಾಸಿಂ ಎಂಬವರು ಉಪ್ಪಿನಂಗಡಿ ಕಂದಾಯ ಇಲಾಖೆಗೆ ಮತ್ತು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಪ್ರತ್ಯೇಕ ದೂರು ನೀಡಿದ್ದಾರೆ.
ದೂರುದಾರರು ತಾವು ಉಪ್ಪಿನಂಗಡಿ ಗ್ರಾಮದ ಸರ್ವೆ ನಂಬ್ರ 322/1ಎರಲ್ಲಿ ಮನೆ ಹೊಂದಿದ್ದು, ತಮ್ಮ ಮನೆಯ ಕೆಳ ಭಾಗದಲ್ಲಿ ವಸಂತ ಎಂಬವರು ಕೆಲ ದಿನಗಳ ಹಿಂದೆ ಜೇಸಿಬಿ ಮೂಲಕ ನೆಲವನ್ನು ಸಮತಟ್ಟು ಮಾಡಿದ್ದರಿಂದ ದರೆ ಕುಸಿಯುವ ಭೀತಿ ಎದುರಾಗಿದೆ.
ಇದರ ಅಪಾಯದ ಸಾಧ್ಯತೆ ಬಗ್ಗೆ ಉಪ್ಪಿನಂಗಡಿ ಕಂದಾಯ ನಿರೀಕ್ಷರಿಗೆ ದೂರು ನೀಡಿದ್ದು, ಕಂದಾಯ ನಿರೀಕ್ಷಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಮತ್ತು ವಸಂತ ಅವರಿಗೆ ಅಪಾಯದ ಬಗ್ಗೆ ತಿಳಿಸಿದಾಗ ವಸಂತ ಅವರು ಇಲ್ಲಿ ತಡೆಗೋಡೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಇದೀಗ ಮಳೆ ಸುರಿಯುತ್ತಿದ್ದಂತೆ ಧರೆಯ ಮಣ್ಣು ಕುಸಿತವಾಗುತ್ತಿದ್ದು, ಮನೆಗೆ ಅಪಾಯ ಉಂಟಾಗುವ ಸಾಧ್ಯತೆಗಳು ಎದುರಾಗಿದೆ. ಆದ್ದರಿಂದ ಕಾರಣ ಅಪಾಯ ಎದುರಾಗುವ ಮುನ್ನ ತಡೆಗೋಡೆ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.