ನಗರದಲ್ಲಿ ಮದ್ಯಪ್ರಿಯರು ನಿರಾಳ; ಗ್ರಾಮಾಂತರದಲ್ಲಿ 21 ಬಾರ್ ಬಂದ್
Team Udayavani, Jul 2, 2017, 3:45 AM IST
ಪುತ್ತೂರು : ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಪುತ್ತೂರು ತಾಲೂಕಿನ 21 ಬಾರ್‌ಗಳಿಗೆ ಬೀಗ ಜಡಿದಿದೆ. ನಗರದಲ್ಲಿ ನಿಯಮ ಸಡಿಲಿಕೆ ಹಿನ್ನೆಲೆಯಲ್ಲಿ ಬಾರ್ ಬಂದ್‌ನಿಂದ ಹೊರತಾಗಿತ್ತು. ಬಾರ್ ಬಂದ್ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಶನಿವಾರ ಅಬಕಾರಿ ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ರಾಜ್ಯ ಸರಕಾರ ನಗರ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ಧಾರಿಗಳನ್ನು ನಗರ ಸ್ಥಳೀಯ ರಸ್ತೆಗಳಾಗಿ ಪರಿವರ್ತಿಸಿರುವು ದರಿಂದ ಪುತ್ತೂರು ನಗರಸಭೆಯ ಸರಹ ದ್ದಿನೊಳಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಬದಿಗಳಲ್ಲಿನ ಬಾರ್‌ಗಳು ಬಂದ್ ಬಿಸಿಯಿಂದ ಪಾರಾಗಿದ್ದು, ಎಂದಿನಂತೆ ಕಾರ್ಯಾಚರಿಸಿದೆ.
ಗಡಿಗುರುತಿನ ಗೊಂದಲ
ನಗರಸಭೆ ವ್ಯಾಪ್ತಿಯ ಗಡಿ ಗುರುತು ಮಾಡಿ ಅಬಕಾರಿ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ. ಇದು ತಪ್ಪಾಗಿದೆ. ದರ್ಬೆ ದುಗ್ಗಮ್ಮ ದೇರಣ್ಣ ಸಭಾಭವನದವರೆಗೆ ಮಾತ್ರ ನಗರಸಭೆ ವ್ಯಾಪ್ತಿ ಎಂದು ವರದಿ ಯಲ್ಲಿ ನಮೂದಿಸಲಾಗಿರುವ ಕಾರಣ ಅಶ್ವಿನಿ ಮತ್ತು ಹರ್ಷ ವೈನ್ ಸ್ಟೋರ್ ಸ್ಥಳಾಂತರಕ್ಕೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಪರಿಣಾಮ, ನಗರ ರಸ್ತೆಯ ವ್ಯಾಪ್ತಿಯೊಳಗೆ ಸೇರಿದ್ದರೂ ವರದಿಯಲ್ಲಿ ಗೊಂದಲದಿಂದ ಶನಿವಾರ್ ಬಂದ್ ಆಗಿತ್ತು. ಈಗ ಇಲಾಖೆ ಪರಿಷ್ಕೃತ ವರದಿ ಸಲ್ಲಿಸಿದ್ದು, ಸ್ಥಳಾಂತರ ವ್ಯಾಪ್ತಿಯಿಂದ ಈ ಬಾರ್ ಹೊರಗುಳಿಯಲಿದೆ.
ಮಾಣಿ ಮೈಸೂರು ಹೆದ್ದಾರಿ ಈಗಲೂ ಕೆಆರ್‌ಡಿಸಿಎಲ್ ಕೈಯಲ್ಲಿರುವ ಕಾರಣ ನಾವು ಆ ರಸ್ತೆಯ ಬಗ್ಗೆ ವರದಿ ಕೊಟ್ಟಿಲ್ಲ. ಈಗ ಗಡಿ ಗುರುತು ಸರಿಯಾಗಿಲ್ಲ ಎಂದು ಗೊತ್ತಾದ ಬಳಿಕ ಸ್ಪಷ್ಟೀಕರಣ ನೀಡಿದ್ದೇವೆ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗೋಕುಲ್‌ದಾಸ್ ತಿಳಿಸಿದ್ದಾರೆ.
21 ಬಾರ್ ಬಂದ್
ತಾಲೂಕಿನಲ್ಲಿ ಒಟ್ಟು 51 ಬಾರ್‌ಗಳಿವೆ. ಪುತ್ತೂರು ನಗರ ಹೊರತುಪಡಿಸಿ ಗ್ರಾಮೀಣ ಪ್ರದೇಶದ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ 220 ಮೀಟರ್ ವ್ಯಾಪ್ತಿಯೊಳಗಿನ 21 ಬಾರ್‌ಗಳು ಬಂದ್ ಆಗಿವೆ. ಉಪ್ಪಿನಂಗಡಿ, ನೆಲ್ಯಾಡಿ ಸೇರಿದಂತೆ ಮೊದಲಾದೆಡೆ ಬಾರ್ ಬಂದ್ ಆಗಿದೆ. ಇನ್ನುಳಿದ 31 ಬಾರ್‌ಗಳು 220 ಮೀ. ವ್ಯಾಪ್ತಿಯಿಂದ ಹೊರಗುಳಿದಿರುವುದರಿಂದ ಬಂದ್ ವ್ಯಾಪ್ತಿಯಿಂದ ಹೊರಗುಳಿದಿದೆ.
ಯಾವ-ಯಾವ ಬಾರ್
ಸಂಪ್ಯದ ಸ್ವಾತಿ ವೈನ್ಸ್, ಮುರದ ಸಂತೋಷ್ ವೈನ್ಸ್, ಕುಂಬ್ರದ ನರ್ತಕಿ ಬಾರ್, ಉಪ್ಪಿನಂಗಡಿಯ ಅಭಿನವ ವೈನ್ಸ್, ಸ್ವಸ್ತಿಕ್ ವೈನ್ಸ್, ಸಾಥಿ ಬಾರ್, ವಿಕ್ರಂ ಬಾರ್, ಉಲ್ಲಾಸ್ ಬಾರ್, ನಿರಾಳ ಬಾರ್, ನೆಲ್ಯಾಡಿಯ ಚರಣ್ ಬಾರ್, ಸ್ಟಾರ್ ವೈನ್ಸ್, ಉದನೆಯ ಡಯಾನ ವೈನ್ಸ್, ಕಡಬದ ಪ್ರಶಾಂತ್ ವೈನ್ಸ್, ಕೋಡಿಂಬಾಳದ ಪ್ರಶಾಂತ್ ಬಾರ್, ಆಲಂಕಾರಿನ ವಿನ್ಯಾಸ್ ಬಾರ್, ಕಾಣಿಯೂರಿನ ಪ್ರಶಾಂತ್ ಬಾರ್, ಸವಣೂರಿನ ರೈ ಅಸೋಸಿಯೇಟ್ಸ್, ನೆಟ್ಟಣದ ವಿ.ವಿ.ಎಸ್. ಬಾರ್ 220 ಮೀ. ವ್ಯಾಪ್ತಿಯೊಳಗೆ ಸೇರಿದ್ದು, ಶನಿವಾರದಿಂದ ಬಂದ್ ಆಗಿದೆ.
ಸ್ಥಳಾಂತರಕ್ಕೆ ಅವಕಾಶ
ಈಗ 220 ಮೀಟರ್ ಒಳಗೆ ಇದ್ದು ಬಂದ್ ಆಗಿರುವ ಬಾರ್‌ಗಳು ಸ್ಥಳಾಂತರಗೊಂಡು ಕಾರ್ಯ ಆರಂಭಿಸಬಹುದು. ಪುತ್ತೂರಿನ ಅಬಕಾರಿ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಈ ತನಕ ಬಂದ್ ವ್ಯಾಪ್ತಿಗೆ ಒಳಪಟ್ಟಿರುವ ಬಾರ್‌ಗಳು ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಆದರೆ ಇಲ್ಲಿಂದ ಸ್ಥಳಾಂತರಗೊಂಡು 220 ಮೀ. ವ್ಯಾಪ್ತಿಯಿಂದ ಹೊರಗೆ ಪುನಾರರಂಭಕ್ಕೆ ಅವಕಾಶ ಇದೆ.
ಕೇಂದ್ರಕ್ಕೆ ಮನವಿ
ಸುಪ್ರೀಂ ಕೋರ್ಟ್‌ಗೆ ಆದೇಶದ ಬಳಿಕ ರಾಜ್ಯ ಸರಕಾರ ಆದೇಶ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದು, ಜುಲೈ ಮೊದಲ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ರಾಜ್ಯ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನು ಡಿ ನೋಟಿಪೈ ಮಾಡಿ ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳಾಗಿ ಪರಿವರ್ತಿಸಲು ಕೇಂದ್ರಕ್ಕೆ ಮನವಿ ಮಾಡಿದ್ದು, ಕೇಂದ್ರ ಸರಕಾರ ಇದನ್ನು ಪುರಸ್ಕರಿಸಿದರೆ, 21 ಬಾರ್‌ಗಳು ಬಂದ್ ಆದೇಶದಿಂದ ಮುಕ್ತಗೊಳ್ಳಲಿದೆ. ಹಾಗಾಗಿ 21 ಬಾರ್‌ಗಳು ನ್ಯಾಯಾಲಯ ತೀಫುì, ಕೇಂದ್ರ ಸರಕಾರದ ನಡೆಯ ನಿರೀಕ್ಷೆಯಲ್ಲಿರುವುದರಿಂದ ಸ್ಥಳಾಂತರಕ್ಕೆ ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಸುಳ್ಯ: 18 ಬಾರ್ ಬಂದ್
ಸುಳ್ಯ : ಸುಪ್ರೀಂಕೋರ್ಟ್ ಆದೇಶದಂತೆ ಸುಳ್ಯ ತಾಲೂಕಿನಲ್ಲೂ ಜೂ. 30ರ ರಾತ್ರಿಯಿಂದಲೇ 18 ಮದ್ಯ ದಂಗಡಿಗಳು ಬಂದ್ ಆಗಿವೆ.
ಸುಳ್ಯ ನಗರದ 6, ಗ್ರಾಮಾಂತರ ಭಾಗದ 12 ಮದ್ಯದಂಗಡಿಗಳು ರಾತ್ರಿಯಿಂದಲೇ ಅಬಕಾರಿ ಇಲಾಖೆ ನೀಡಿದ ನೊಟೀಸ್‌ನಂತೆ ಸ್ವಯಂಪ್ರೇರಿತವಾಗಿ ಮುಚ್ಚುಗಡೆಗೊಂಡಿವೆ.
ಶನಿವಾರ ಮುಂಜಾನೆಯಿಂದ ತಾಲೂಕು ಅಬಕಾರಿ ಇನ್ಸ್‌ಪೆಕ್ಟರ್ ಮಹಾಲಿಂಗ ಅವರ ನೇತೃತ್ವದಲ್ಲಿ ಸಿಬಂದಿ ಮುಚ್ಚುಗಡೆಗೊಂಡ ಲಾಡ್ಜ್ಬಾರ್‌ಗಳು, ಎಂಎಸ್‌ಎಲ್‌ಐಎಲ್, ವೈನ್‌ಶಾಪ್‌ಗ್ಳು ಹಾಗೂ ಬಾರ್‌ಗಳ ಬೀಗ ತೆರೆದು ನಿಯಮದಂತೆ ಪರಿಶೀಲನೆ ಮತ್ತು ಲೆಕ್ಕಾಚಾರ ನಡೆಸಿ ಮಾಲಕರ ಸುಪರ್ದಿಗೆ ಬಿಟ್ಟುಕೊಟ್ಟು ಬೀಗಮುದ್ರೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅಧಿಕಾರಿ ಮಹಾಲಿಂಗ ಅವರು, ಸಮಯಕ್ಕೆ ಮುಂಚಿತವಾಗಿ ಇಲಾಖೆಯಿಂದ ನೊಟೀಸ್ ನೀಡಲಾಗಿತ್ತು. ಅದರಂತೆ ರಾತ್ರಿಯಿಂದಲೇ 18 ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯದಂಗಡಿಗಳನ್ನು ಪರಿಶೀಲಿಸಿ ಅವುಗಳನ್ನು ನಿಯಮಾನುಸಾರ ಮಾಲಕರ ಸುಪರ್ದಿಗೆ ನೀಡುವ ಪ್ರಕ್ರಿಯೆ ನಡೆಯುತ್ತಿರುವುದಾಗಿ ಪ್ರತಿಕ್ರಿಯಿಸಿದರು.
ತಾಲೂಕಿನಲ್ಲಿ ಒಟ್ಟು 28 ಮದ್ಯದಂಗಡಿಗಳಿವೆ. ಈ ಪೈಕಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಸುಳ್ಯದ 6, ಜಾಲೂÕರು, ಅರಂತೋಡು, ಕಲ್ಲುಗುಂಡಿ, ಗುತ್ತಿಗಾರು ಸೇರಿದಂತೆ ಸುಬ್ರಹ್ಮಣ್ಯ ಗ್ರಾಮದ ಒಟ್ಟು 18 ಮದ್ಯಮಾರಾಟ ಕೇಂದ್ರಗಳು ಮುಚ್ಚುಗಡೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.