“110 ಕೆ.ವಿ. ವಿದ್ಯುತ್ ಮಾರ್ಗ: ಅರಣ್ಯ ಇಲಾಖೆ ಅನುಮತಿಯೊಂದೇ ಬಾಕಿ’
Team Udayavani, Jul 2, 2017, 3:45 AM IST
ಸುಳ್ಯ : ತಾಲೂಕಿನ ಬಹುಬೇಡಿಕೆಯ 110 ಕೆ.ವಿ ವಿದ್ಯುತ್ ಮಾರ್ಗಕ್ಕೆ ಇದ್ದ ಕಾನೂನು ಅಡೆತಡೆ ಗಳು ದ.ಕ. ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ನಿವಾರಣೆ ಯಾಗಿದ್ದು, ಅರಣ್ಯ ಇಲಾಖಾ ಅನುಮತಿಯೊಂದೇ ಬಾಕಿಯುಳಿದಿರುವುದಾಗಿ ಶಾಸಕ ಎಸ್. ಅಂಗಾರ ಅವರು ಹೇಳಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರಗಿದ ಸುಳ್ಯ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಗ್ಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅವರು, 110 ಕೆ.ವಿ. ವಿದ್ಯುತ್ ಸಂಪರ್ಕ ಮಾರ್ಗ ದಿಂದಾಗಿ ಕೃಷಿಕರಿಗೆ ಸಾಕಷ್ಟು ತೊಂದರೆ ಯುಂಟಾಗಲಿದೆ. ಮಡಿಕೇರಿ ಭಾಗಗಳಲ್ಲಿ 33 ಕೆವಿ ವಿದ್ಯುತ್ ಮಾರ್ಗವನ್ನು ಎತ್ತರಕ್ಕೇರಿಸಿ 110 ಕೆವಿ ಲೈನ್‌ನ್ನು ಜೋಡಿಸಿದಂತೆ ಇಲ್ಲೇಕೆ ಕಾರ್ಯಪ್ರವೃತ್ತವಾಗಲು ಇಲಾಖೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು 33 ಕೆವಿ ಲೈನ್‌ನಲ್ಲಿ 110 ಕೆವಿ ವಿದ್ಯುತ್ ಸಂಪರ್ಕ ತರಿಸುವುದು ಅಸಾಧ್ಯ. ಈ ಬಗ್ಗೆ ಸಾಧ್ಯತೆ ಕುರಿತಾಗಿ ಅಧಿಕಾರಿಗಳ ಜತೆ ಮಾತನಾಡುವುದಾಗಿ ತಿಳಿಸಿದರು.
ಮಳೆ ನೀರು ರಸ್ತೆಯಲ್ಲಿ
ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ಮಾತನಾಡಿ, ಪೆರ್ನಾಜೆಯಿಂದ ಸಂಪಾಜೆ ವರೆಗಿನ ಹೆದ್ದಾರಿ ಸೂಕ್ತ ಚರಂಡಿಯಿಲ್ಲದೇ ರಸ್ತೆಯಲ್ಲಿ ಮಳೆ ನೀರು ಹರಿಯುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಪ್ರತಿಕ್ರಿಯಿ ಸಿದ ಶಾಸಕರು ರಸ್ತೆ ಬದಿಯ ಮನೆಗಳವರು ಮೋರಿ ನಿರ್ಮಿಸದೇ ಮನೆಗೆ ತೆರಳುವ ರಸ್ತೆ ನಿರ್ಮಿಸಿರುವುದರಿಂದ ಹೀಗಾಗುತ್ತಿದೆ. ಈ ಕುರಿತು ಪಿಡಬ್ಲ್ಯುಡಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗಿದ್ದು ಕೆಆರ್‌ಡಿಸಿಎಲ್ ಮತ್ತು ಪಿಡಬ್ಲ್ಯುಡಿ ಇಲಾಖಾಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಿದರು.
ಮಂಡೆಕೋಲು ಗ್ರಾ.ಪಂ.ನಲ್ಲಿ ಸಾರ್ವ ಜನಿಕ ಉದ್ದೇಶ ಕ್ಕಾಗಿ ಕಾಯ್ದಿರಿಸಿದ 2.30 ಎಕ್ರೆ ಜಮೀನಿನಲ್ಲಿ ಖಾಸಾಗಿ ಒತ್ತುವರಿಯಾಗಿದ್ದು ತೆರವಿಗೆ ಸರ್ವೇ ನಡೆಸುವಂತೆ ದೇರಣ್ಣ ಗೌಡ ಅಡ್ಡಂತಡ್ಕ ಸಭೆಯಲ್ಲಿ ಆಗ್ರಹಿಸಿದರು.
ಮರ್ಕಂಜ ಗ್ರಾ.ಪಂ. ಮೀಸಲಿರಿಸಿದ ಶ್ಮಶಾನ, ನಿವೇಶ ನವನ್ನು ಖಾಸಾಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ ಎಂದು ಪಂ. ಅಧ್ಯಕ್ಷರು ಪ್ರಸ್ತಾಪಿಸಿದಾಗ ಶಾಸಕರು ಅರಣ್ಯ ಇಲಾಖೆ ತನ್ನದೆಂದು ವಾದಿಸುವ ಇಲಾಖೆಯ ಜಾಗವನ್ನು ಸರ್ವೆ ನಡೆಸಲು ಆದೇಶಿಸಿದರು.
ಇದೇ ಗ್ರಾಮದ ಪನ್ನೇ ಎಂಬಲ್ಲಿ ಎಸ್‌ಸಿ ಕಾಲನಿ ಜನತೆಗೆ ತಮ್ಮ ಜಾಗದ ದಾಖಲೆ ಮಾಡಿಕೊಳ್ಳಲು ಆರ್ಥಿಕ ಅಡಚಣೆಯಿರುವುದರಿಂದ ಪಂಚಾಯತ್ ಅನುದಾನದಲ್ಲಿ ಪಹಣಿ ಪತ್ರ ಮಾಡಿಸಿಕೊಳ್ಳಲು ಮುಂದಾಗುವಂತೆ ಶಾಸಕರು ಸೂಚಿಸಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ತಹಶೀಲ್ದಾರ್ ಎಂ.ಎಂ.ಗಣೇಶ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ನ.ಪಂ. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಮತ್ತಿತರರಿದ್ದರು. ಈ ಸಂದರ್ಭ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಅಂಗಾರ ವಿತರಿಸಿದರು.
ಕಾಟಾಚಾರಕ್ಕೆ ನಡೆದ ಜನಸಂಪರ್ಕ ಸಭೆ : ಶಾಸಕರಿಂದ ಎಚ್ಚರಿಕೆ
ಜನರ ಸಮಸ್ಯೆ, ಅಹವಾಲುಗಳನ್ನು ಸ್ಥಳದಲ್ಲೇ ಪರಿಹಾರ ಕಾಣಿಸುವುದರೊಂದಿಗೆ ಸರಕಾರದ ಯೋಜನೆಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಬೇಕು ಎಂದು ಹೋಬಳಿ ಮಟ್ಟದ ಸಭೆ ಆಯೋಜಿಸಲಾಗುತ್ತಿದೆ. ಆದರೆ ಶನಿವಾರದ ಸಭೆಯನ್ನು ಲೆಕ್ಕಭರ್ತಿಗಷ್ಟೇ ಆಯೋಜಿಸಲಾಗಿತ್ತು. ಕೆಲವು ಮಂದಿ ಫಲಾನುಭವಿಗಳು, ಜನಪ್ರತಿನಿಧಿಗಳು ಮತ್ತು ಕೆಲವು ಅಧಿಕಾರಿಗಳಷ್ಟೇ ಸಭೆಯಲ್ಲಿದ್ದರು. ಪೂರ್ವಸಿದ್ಧತೆಯೊಂದಿಗೆ ಸಭೆ ನಡೆಯಬೇಕಿತ್ತಾದರೂ ಉದ್ದೇಶಪೂರ್ವಕವಾಗಿ ಪ್ರಚಾರ ನೀಡದೆ ಗೌಪ್ಯವಾಗಿಟ್ಟು ಆಯೋಜಿಸಿದಂತಿತ್ತು. ಸಭೆ ಬಗ್ಗೆ ಮಾಧ್ಯಮಗಳಿಗೂ ಮಾಹಿತಿ ನೀಡಿರಲಿಲ್ಲ. ಈ ಕುರಿತು ಮಾಧ್ಯಮ ಮಂದಿ ಮಾಹಿತಿ ಬಯಸಿದಾಗ ನಿಮಗೆ ಮುಂಚಿತವಾಗಿ ತಿಳಿಸಿದ್ದೇವೆ ಎಂದು ನಿಮ್ಮ ಸಹಿ ಕೂಡ ಪತ್ರದಲ್ಲಿದೆ ಮಾಧ್ಯಮದವರನ್ನೇ ಯಾಮಾರಿಸುವ ಘಟನೆಯೂ ನಡೆಯಿತು.
ಇದೇ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಶಾಸಕ ಅಂಗಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜನತೆಯ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಸರಕಾರ ವಿವಿಧ ಇಲಾಖೆಗಳ ಜನಸಂಪರ್ಕ ಸಭೆಯನ್ನು ನಡೆಸುತ್ತಿದೆ. ಕೇವಲ ಕಾಟಾಚಾರಕ್ಕಾಗಿ ಆಯೋಜಿಸಬೇಡಿ. ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಮತ್ತು ಎಲ್ಲ ಇಲಾಖಾಧಿಕಾರಿಗಳು ಪಾಲ್ಗೊಳ್ಳಬೇಕು. ಮುಂದೆ ಇದೇ ರೀತಿ ಜರಗಿದರೆ ಸಚಿವರು ಮತ್ತು ಸರಕಾರದ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.