ಕಾರ್ಯಕರ್ತರ ಒಮ್ಮತದ ಶ್ರಮ ಪಕ್ಷಕ್ಕೆ ಒಳಿತು: ಪಂಜ
Team Udayavani, Jul 3, 2017, 3:45 AM IST
ಮೂಲ್ಕಿ: ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಪಕ್ಷಭೇದರಹಿತವಾಗಿ ಎಲ್ಲರಿಗೂ ಮುಟ್ಟಿಸುವ ಕೆಲಸದಲ್ಲಿ ಪಕ್ಷದ ಕಾರ್ಯಕರ್ತರು ಒಮ್ಮತದಿಂದ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾ ಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದ ಕಾರ್ಯಕ್ರಮದ ಅಂಗವಾಗಿ ಮೂಲ್ಕಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಜರಗಿದ ಪಕ್ಷದ ವಿಸ್ತಾರಕರ ಕಾರ್ಯಾಗಾರದಲ್ಲಿ ಮಾತನಾಡಿದರು.
ಪಕ್ಷದ ಗ್ರಾಮ ಮಟ್ಟದ ಕಾರ್ಯ ಕರ್ತರನ್ನು ಸದೃಢಗೊಳಿಸುವಲ್ಲಿ ಪಕ್ಷವು ಕೆಳ ಹಂತದಿಂದಲೇ ಶ್ರಮಿಸಿದಾಗ ಪಕ್ಷ ಮತ್ತು ಜನತೆಗೆ ಒಳಿತಾಗುವುದು ಎಂದು ಮೂಲ್ಕಿ-ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ ಕಟೀಲ್ ಹೇಳಿದರು.
ಮೂಲ್ಕಿ ನಗರ ಪಂಚಾಯತ್ವ್ಯಾಪ್ತಿಯ ನಾಲ್ಕು ಗ್ರಾಮ ಮಟ್ಟದ ಕಾರ್ನಾಡು, ಬಪ್ಪನಾಡು, ಚಿತ್ರಾಪು ಮತ್ತು ಮಾನಂಪಾಡಿಯ 17 ವಾರ್ಡುಗಳ ಪಕ್ಷದ ಪ್ರಮುಖರು ಮತ್ತು 7 ವಿಸ್ತಾರಕರು, ಶಕ್ತಿ ಕೇಂದ್ರದ ಕಾರ್ಯದರ್ಶಿ ನರಸಿಂಹ ಪೂಜಾರಿ ಹಾಗೂ ವಿವಿಧ ವಾರ್ಡುಗಳ ಸದಸ್ಯರಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿದರು. ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಸ್ವಾಗತಿಸಿದರು.
ನಗರ ಪಂಚಾಯತ್ ಸದಸ್ಯ ಶೈಲೇಶ್ ಕುಮಾರ್ ವಂದಿಸಿದರು. ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.