ಸಂಘಟನೆಯಿಂದ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳೋಣ
Team Udayavani, Jul 3, 2017, 3:45 AM IST
ಕುಂದಾಪುರ: ನಮ್ಮ ದೇಶದ ರಾಜಕೀಯ ಒಂದು ಬಲಪಂಥ ವಾದದತ್ತ ದಾಪುಗಾಲು ಹಾಕುತ್ತಿದೆ. ಆ ಬಲ ಪಂಥಕ್ಕೆ ಸವಾಲು ಹಾಕಲು ಸಾಧ್ಯ ಇರುವುದಾದರೆ ಅದು ಎಡ ಶಕ್ತಿಗಳಿಂದ ಮಾತ್ರ ಸಾಧ್ಯ. ಇಂದು ಕರ್ನಾಟಕದಲ್ಲಿ ಎಡಪಂಥೀಯ ಶಕ್ತಿ ಕಡಿಮೆ ಇರುವ ಸಂದರ್ಭದಲ್ಲಿ ವಿವಿಧ ಸಂಘಟನೆಯ ಕಾರ್ಮಿಕರು ಒಂದಾಗಿ ಯೋಜನೆಗಳನ್ನು ರೂಪಿಸಿ ರಾಜ್ಯದ 29 ಸಾವಿರ ಹಳ್ಳಿಗಳಲ್ಲಿ ಸಂಘಟನೆ ತಲುಪಲು ಸಾಧ್ಯವಾದರೆ ನಾವು ಕೂಡಾ ಕರ್ನಾಟಕದ ರಾಜಕೀಯದಲ್ಲಿ ಒಂದು ಎಡ ಚಳುವಳಿಯನ್ನು ಬಲಿಷ್ಠಗೊಳಿಸಲು ಅವಕಾಶ ಇದೆ ಎಂದು ನವದೆಹಲಿಯ ಸಿಡಬುÉÂ ಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಬಂಜನ್ ಚಕ್ರವರ್ತಿ ಹೇಳಿದರು.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ಇವರ ಆಶ್ರಯದಲ್ಲಿ ನಡೆದ ಕಟ್ಟಡ ಕಾರ್ಮಿಕರ ಮೂರನೇ ರಾಜ್ಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಇಂದು ಯುವ ಜನರಲ್ಲಿ ಧಾರ್ಮಿಕವಾದ ಹಾಗೂ ಭಾವನಾತ್ಮಕವಾದ ಪ್ರಚೋದನೆಯನ್ನು ಹುಟ್ಟು ಹಾಕುವುದನ್ನು ನೋಡುತ್ತಿದ್ದೇವೆ. ನಮ್ಮ ಸಂವಿಧಾನ ದೇಶದಲ್ಲಿರುವ ಎಲ್ಲ ಧರ್ಮದವರ ಅವರವರ ಆಚರಣೆಗಳನ್ನು ಹಾಗೂ ಧಾರ್ಮಿಕ ಹಕ್ಕುಗಳನ್ನು ರಕ್ಷಣೆ ಮಾಡಲು ಅವಕಾಶವನ್ನು ಕೊಟ್ಟಿದೆ. ಆದರೆ ಕೇಂದ್ರ ಸರಕಾರ ಧರ್ಮದ ಹೆಸರಿನಲ್ಲಿ ಯುವಜನರನ್ನು ಹಾಗೂ ಜನರನ್ನು ಒಡೆಯುವ ಪ್ರಯತ್ನವನ್ನು ನಡೆಸುತ್ತಾ ಇದೆ. ಆದ್ದರಿಂದ ಇದು ಎಲ್ಲ ಧರ್ಮಗಳ ದುಡಿಯುವ ಜನರಿಗೆ ಒಂದು ಸವಾಲಿನ ಕೆಲಸವಾಗಿದೆ. ಇದನ್ನು ಸೈದ್ಧಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಮುಂದಿನ ದಿನದಲ್ಲಿ ಎದುರಿಸಬೇಕಾದ ಅಗತ್ಯ ಇದೆ ಎಂದರು.
ಕರ್ನಾಟಕದಲ್ಲಿ ಇಂದು ಜನಾಂಗವನ್ನು ವಿಂಗಡನೆ ಮಾಡುವ ಕೆಲಸ ಮಾಡುತ್ತಾ ಅವರವರ ನಡುವೆ ಜಗಳವನ್ನು ತಂದು ಹಾಕುವ ಕೆಲಸವನ್ನು ಮಾಡುತ್ತಾ ಇದೆ. ನಾವು ದುಡಿಯುವ ಜನಾಂಗವಾಗಿ ಇದನ್ನೆಲ್ಲವನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇಂದು ಮಹಿಳೆಯರ ಮೇಲೆ ಬೀದಿಗಳಲ್ಲಿ ಹಾಗೂ ಅವರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದಾಳಿ , ದೌರ್ಜನ್ಯ ಹೆಚ್ಚುತ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಗಳು ಇಂತಹ ಘಟನೆಯನ್ನು ಖಂಡಿಸಿ ಹೋರಾಟ ಮಾಡಬೇಕಾದ ಅಗತ್ಯ ಇದೆ. ರಾಜ್ಯದ 20 ಸಾವಿರ ಹಳ್ಳಿಗಳಿಗೆ , 30 ಜಿಲ್ಲೆಗಳಿಗೆ ನಮ್ಮ ಕಾರ್ಮಿಕ ಸಂಘಟನೆಯನ್ನು ವಿಸ್ತರಣೆಮಾಡುವ ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು.
ಸಿಡಬ್ಲೂé ಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ವೀರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಿಡಬ್ಲೂé ಎಫ್‌ಐ ರಾಷ್ಟ್ರ ಅಧ್ಯಕ್ಷ ಬಂಗಾರವೇಲು, ಕೇರಳ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಚೇರ್‌ಮ್ಯಾನ್ ಸಿ.ಎ. ಜೋಸೆಫ್, ತೆಲಂಗಾಣ ರಾಜ್ಯದ ಸಿಡಬ್ಲೂéಎಫ್‌ಐ ಮುಖಂಡ ಕೊಟ್ಟಂ ರಾಜು, ಸಿಐಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ಮಹಾಂತೇಶ್, ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ವಿಶ್ವನಾಥ ರೈ, ಸಿಡಬ್ಲೂé ಎಫ್‌ಐ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್, ಸಿಐಟಿಯು ಕುಂದಾಪುರ ಅಧ್ಯಕ್ಷ ಎಚ್. ನರಸಿಂಹ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ತಾಲೂಕು ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿ ಶೇಖರ ಬಂಗೇರ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ಇದರ ಅಧ್ಯಕ್ಷ ಯು. ದಾಸ ಭಂಡಾರಿ ಸ್ವಾಗತಿಸಿದರು.
ಇಂದು ದೇಶದಲ್ಲಿ ಜಿಎಸ್‌ಟಿ ಏಕರೂಪದ ತೆರಿಗೆ ಜಾರಿಗೆ ತರಲಾಗಿದೆ. ಈ ಜಿಎಸ್‌ಟಿ ಒಳಗಡೆ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರಿಗೆ ಸಂದಾಯಮಾಡಬೇಕಾದ ಸೆಸ್‌ನ್ನು ವಿಲೀನಮಾಡದೇ ಇದ್ದರೂ 1971 ರಿಂದ ನಮ್ಮ ದೆಶದಲ್ಲಿ 29 ರಾಜ್ಯಗಳಲ್ಲಿ ಜಾರಿಯಲ್ಲಿದ್ದ ಬೀಡಿ ಕಾರ್ಮಿಕರ ನಿಧಿಯನ್ನು ಇದರಲ್ಲಿ ವಿಲೀನ ಮಾಡಲಾಗಿದೆ. ಇದರಿಂದ ಬೀಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಿನ್ನು ಅವರಿಗೆ ಸಿಗದೇ ರೀತಿಯಲ್ಲಿ ಅಪಾಯಕ್ಕೆ ಸಿಲುಕಿಸಲಾಗಿದೆ. ಮುಂದೆ ಒಳ್ಳೆಯ ದಿನಗಳು ಬರುತ್ತಿದೆ ಎಂದು ಮೋದಿ ಹೇಳಿದರು ಆದರೆ ಇಂದು ಎಲ್ಲಾ ದಿನ ಬಳಕೆಯ ವಸ್ತುಗಳ ದರ ಗಗನಕ್ಕೇರುತ್ತಿದೆ. ಕಾರ್ಮಿಕರು ಈ ಸುಧಾರಣೆಗಳ ವಿರುದ್ಧ ಐಕ್ಯ ಹೋರಾಟ ನಡೆಸಬೇಕಾಗಿದೆ.
– ದಿಬಂಜನ್ ಚಕ್ರವರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.