ಜುಲೈ 7ಕ್ಕೆ ರಾಜಕುಮಾರ ಶತದಿನ ಸಂಭ್ರಮ
Team Udayavani, Jul 3, 2017, 11:59 AM IST
ಪುನೀತ್ ರಾಜಕುಮಾರ್ ಅವರ “ರಾಜ್‌ಕುಮಾರ’ ಚಿತ್ರ ಶತದಿನ ಪೂರೈಸಿದೆ. ಭರ್ಜರಿ ಯಶಸ್ಸಿನೊಂದಿಗೆ ಶತದಿನ ಪೂರೈಸಿದ ಸಂಭ್ರಮವನ್ನು ಆಚರಿಸಲು ಈಗ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ತುಂಬಾ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಅದ್ಧೂರಿ ಶತದಿನೋತ್ಸವ ಕಾರ್ಯಕ್ರಮ ಇದಾಗಲಿದ್ದು, ಈ ಸಂಭ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಸಾಕ್ಷಿಯಾಗಲಿದೆ. ಜುಲೈ 7 ರಂದು “ರಾಜ್‌ಕುಮಾರ’ ಚಿತ್ರದ ಶತದಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ.
ಸಾಮಾನ್ಯವಾಗಿ ಚಿತ್ರಗಳ ಶತದಿನ ಕಾರ್ಯಕ್ರಮವೆಂದರೆ ಚಿತ್ರತಂಡ ಹಾಗೂ ಕೆಲವೇ ಕೆಲವು ಆಪೆ¤ಷ್ಟರನ್ನಷ್ಟೇ ಕರೆಯಲಾಗುತ್ತದೆ. ಆದರೆ, “ರಾಜ್‌ಕುಮಾರ’ ಚಿತ್ರದ ಶತದಿನ ಕಾರ್ಯಕ್ರಮದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿಯಾಗುವ ಸಾಧ್ಯತೆ ಇದೆ. ಕನ್ನಡ ಚಿತ್ರರಂಗದಲ್ಲಿನ ಎಲ್ಲಾ ನಟರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರೆಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೇವಲ ನಟ-ನಟಿಯರಷ್ಟೇ ಅಲ್ಲದೇ, ಚಿತ್ರರಂಗದ ತಾಂತ್ರಿಕ ವರ್ಗ ಕೂಡಾ “ರಾಜ್‌ಕುಮಾರ’ ಸಂಭ್ರಮದಲ್ಲಿ ಭಾಗಿಯಾಗಲಿದೆ. ಸುಮಾರು ಎರಡು ಸಾವಿರ ಮಂದಿಯನ್ನು ಆಹ್ವಾನಿಸಲಾಗಿದ್ದು, ಇದಲ್ಲದೇ ಅಭಿಮಾನಿಗಳು, ಚಿತ್ರಪ್ರೇಮಿಗಳು ಸೇರುವ ಮೂಲಕ “ರಾಜ್‌ಕುಮಾರ’ ಶತದಿನ ಬೃಹತ್ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ.
ಜುಲೈ 7 ರಂದ ಸಂಜೆ 5 ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಮನರಂಜನೆಯ ಜೊತೆಗೆ ಚಿತ್ರಕ್ಕೆ ದುಡಿದ ಕಾರ್ಮಿಕ ವರ್ಗ, ತಾಂತ್ರಿಕ ವರ್ಗ ಸೇರಿದಂತೆ ಎಲ್ಲರಿಗೂ ಸೂಕ್ತ ಗೌರವ ನೀಡಿ ಸನ್ಮಾನಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಸುಮಾರು 60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಈ ಶತದಿನ ಕಾರ್ಯಕ್ರಮ ಆಯೋಜಿಸುತ್ತಿದೆನ್ನಲಾಗಿದೆ.
“ರಾಜ್‌ಕುಮಾರ ಎಂಬ ಹೆಸರಿನಲ್ಲೇ ಇಡೀ ಕನ್ನಡ ಚಿತ್ರರಂಗ ಇದೆ. ಜೊತೆಗೆ ನಮ್ಮ ಚಿತ್ರದ ಕಾನ್ಸೆಪ್ಟ್ ಕೂಡಾ ಎಲ್ಲರನ್ನು ಒಟ್ಟಾಗಿಸೋದು. ಹಾಗಾಗಿ, ಚಿತ್ರದ ಶತದಿನ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಭಾಗವಹಿಸಲಿದ್ದಾರೆ. ಕೆಲಸ ಮಾಡಿದ ಎಲ್ಲರಿಗೂ ಇಲ್ಲಿ ಸೂಕ್ತ ಗೌರವ ಸಲ್ಲಿಸುವ ಉದ್ದೇಶವಿದೆ. ಇದೊಂದು ಫ್ಯಾಮಿಲಿ ಫಂಕ್ಷನ್ ಆಗಲಿದ್ದು, ಚಿತ್ರರಂಗದ ಎಲ್ಲರೂ ಒಟ್ಟಾಗಿ ಇಲ್ಲಿ ಸಂಭ್ರಮಿ ಸಲಿದ್ದಾರೆ’ ಎನ್ನುತ್ತಾರೆ ನಿರ್ದೇ ಶಕ ಸಂತೋಷ್ ಆನಂದರಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.