ನೂತನ ಸೇತುವೆಗೆ ಕಾಯಬೇಕಿನ್ನೆಷ್ಟು ಕಾಲ?
Team Udayavani, Jul 4, 2017, 3:50 AM IST
ಮಾಡಕ್ಕಲ್ ತೂಗು ಸೇತುವೆ ಕುಸಿದು ನಾಲ್ಕು ವರ್ಷ
ಕಾಸರಗೋಡು: ಮಾಡಕ್ಕಲ್ ತೂಗು ಸೇತುವೆ ಮುರಿದು ಬಿದ್ದು ನಾಲ್ಕು ವರ್ಷ ಸಂದರೂ ಇನ್ನೂ ನೂತನ ಸೇತುವೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದ ಸ್ಥಳೀಯ ನಿವಾಸಿಗಳು ವಿವಿಧ ಸಮಸ್ಯೆಗಳಿಗೆ ತುತ್ತಾಗಿದ್ದು ಹಿನ್ನೀರು ದಾಟಬೇಕಾದರೆ ದೋಣಿ ಸವಾರಿ ಮಾತ್ರವೇ ದಾರಿಯಾಗಿದೆ.
ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದ ಮಾಡಕ್ಕಲ್ ತೂಗುಸೇತುವೆಗೆ ಬದಲಿಯಾಗಿ ನೂತನ ಸೇತುವೆಯ ನಿರೀಕ್ಷೆಯಲ್ಲಿದ್ದ ಸ್ಥಳೀಯರು ಇಂದೂ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ. ಬಹಳಷ್ಟು ಆಳ ಹಾಗೂ ಸುಳಿಯಿರುವ ಕವ್ವಾಯಿ ಹಿನ್ನೀರು ದಾಟಬೇಕಾದರೆ ದೋಣಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನೆಲೆಗೊಂಡಿದೆ. ವಲಿಯಪರಂಬ ನಿವಾಸಿಗಳು ಹಿನ್ನೀರಿನ ಅತ್ತಯಿತ್ತ ಸಾಗಬೇಕಾದರೆ ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ. ದಿನಾ ನೂರಾರು ಮಂದಿ ಹಿನ್ನೀರಿನ ಅಚೆ ತಲುಪಬೇಕಾದರೆ ದೋಣಿಯನ್ನೇ ಬಳಸುತ್ತಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೂ, ಕಾರ್ಮಿಕರೂ ಇದ್ದಾರೆ.
ಮಂಜೇರಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಕ್ಕಳು ಸಾವಿ ಗೀಡಾದ ಹಿನ್ನೆಲೆಯಲ್ಲಿ ಹಿಂದಿನ ವಿ.ಎಸ್. ಅಚ್ಯುತಾನಂದನ್ ನೇತೃತ್ವದ ಎಡರಂಗ ಸರಕಾರ ಮಾಡಕ್ಕಲ್‌ನಲ್ಲಿ ತೂಗು ಸೇತುವೆಯನ್ನು ಮಂಜೂರು ಮಾಡಿತ್ತು. ನಿರ್ಮಾಣ ಪೂರ್ತಿಗೊಳಿಸಿದ ತೂಗು ಸೇತುವೆ 2013ರ ಎಪ್ರಿಲ್ 30ರಂದು ಹಿಂದಿನ ಯುಡಿಎಫ್ ಸರಕಾರದ ಅವಧಿ ಯಲ್ಲಿ ಅಂದಿನ ಕಂದಾಯ ಸಚಿವರು ಉದ್ಘಾಟಿಸಿ ಲೋಕಾರ್ಪಣೆ ಗೈದಿದ್ದರು. ಆದರೆ ಈ ತೂಗು ಸೇತುವೆ ಹೆಚ್ಚು ಕಾಲ ಉಳಿಯದೆ ಸೇತುವೆ ಉದ್ಘಾಟನೆ ಗೊಂಡು ಎರಡು ತಿಂಗಳಿಗೆ ಎರಡು ದಿನಗಳಿರು ವಂತೆ ಮುರಿದುಬಿತ್ತು.
ಕಂದಾಯ ಇಲಾಖೆ ದುರಂತ ನಿವಾರಣೆ ನಿಧಿಯಿಂದ ನಾಲ್ಕು ಕೋ. ರೂ. ವೆಚ್ಚದಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಿತ್ತು. ಈ ತೂಗೆ ಸೇತುವೆ ನಿರ್ಮಾಣಗೊಂಡು ಉದ್ಘಾಟನೆ ಗೊಂಡಿದ್ದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯರ ಹರ್ಷ ಹೆಚ್ಚು ದಿನ ಉಳಿಯಲಿಲ್ಲ. ಕರಾ ವಳಿಯ ಜನರು ಹಲವು ವರ್ಷ ಗಳಿಂದ ಅನುಭವಿ ಸುತ್ತಿದ್ದ ಸಾರಿಗೆ ಸಮಸ್ಯೆ ಪರಿಹಾರ ವಾಯಿತು ಎಂದು ಖುಷಿಪಟ್ಟಿ ದ್ದರು. ಆದರೆ ಈ ತೂಗು ಸೇತುವೆಯ ಆಯುಷ್ಯ ಕೇವಲ 58 ದಿನಗಳಿಗೆ ಸೀಮಿತ ಗೊಂಡಿತು. ತೂಗು ಸೇತುವೆ ಮುರಿದು ಬಿದ್ದುದರಿಂದ ಮತ್ತೆ ಅದೇ ಹಿಂದಿನ ಸಾರಿಗೆ ಸಮಸ್ಯೆ ಸ್ಥಳೀಯರನ್ನು ಕಾಡುತ್ತಲೇ ಇದೆ. ನೂತನ ಸೇತುವೆ ಇಂದು ನಾಳೆ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸœಳೀಯರು ನಾಲ್ಕು ವರ್ಷಗಳಿಂದ ಸೇತುವೆಗಾಗಿ ಕಾಯುತ್ತಿದ್ದಾರೆ.
ಅಧಿಕಾರ ಬಂತು ತನಿಖೆ ಮರೆತುಹೋಯ್ತು
ತೂಗು ಸೇತುವೆ ಕೆಲವೇ ದಿನಗಳಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿವಿಧ ತನಿಖೆ ನಡೆದಿತ್ತು. ಆದರೆ ಇನ್ನೂ ತೂಗು ಸೇತುವೆ ಕುಸಿದು ಬೀಳಲು ಸ್ಪಷ್ಟ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯರು ನೂತನ ಸೇತುವೆಗಾಗಿ ಹಲವು ಮನವಿಗಳನ್ನು ನೀಡಿದ್ದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ. ಯುಡಿಎಫ್ ಸರಕಾರದ ಅವಧಿಯಲ್ಲಿ ಸೇತುವೆಗಾಗಿ ಹೋರಾಟ ನಡೆದಿತ್ತು. ಮನವಿಗಳ ಮಹಾಪೂರವೇ ಹರಿದು ಬಂದಿತ್ತು. ಅಂದು ಮನವಿಗಳನ್ನು ನೀಡಿದವರು, ಹೋರಾಟ ಮಾಡಿದವರು, ಸೇತುವೆ ಮುರಿದು ಬೀಳಲು ಕಾರಣದ ಕುರಿತು ಸಮಗ್ರ ತನಿಖೆಗಾಗಿ ಆಗ್ರಹಿಸಿದವರು ಇಂದು ಅಧಿಕಾರಕ್ಕೆ ತಲುಪಿದ್ದರೂ ಸ್ಥಳೀಯರಿಗೆ ಹಿನ್ನೀರು ದಾಟಲು ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.